ಬಿಸಿ ಬಿಸಿ ಸುದ್ದಿ

ಭಕ್ತಿಯ ಪ್ರೇರಕ ಶಕ್ತಿಯಾಗಿದ್ದವರು ಸ್ವಾಮಿ ವಿವೇಕಾನಂದರು: ಅಂಜಲಿ ಕಂಬಾನೂರ

ಶಹಬಾದ : ಪರರ ಹಿತಕ್ಕಾಗಿ ಜೀವಿಸುವುದೇ ಸಾರ್ಥಕ ಜೀವನ. ಪರರ ಹಿತಕ್ಕಾಗಿಯೇ ಜೀವಿಸಿ, ಭಾರತದ ಶ್ರೇ? ಆಧ್ಯಾತ್ಮಿಕ ಚಿಂತನೆಗಳನ್ನು ಪಾಶ್ಚಿಮಾತ್ಯ ರಾ?ಗಳಿಗೆ ಪಸರಿಸಿದ, ರಾ?ಭಕ್ತಿಯ ಪ್ರೇರಕ ಶಕ್ತಿಯಾಗಿದ್ದವರು ಸ್ವಾಮಿ ವಿವೇಕಾನಂದರು ಎಂದು ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಹೇಳಿದರು.

ಅವರು ನಗರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿ.ಬಿ.ಸಂಗೀತಾ ಕಲಾ ಸಂಸ್ಥೆ ವತಿಯಿಂದ ಸ್ವಾಮಿ ವಿವೇಕಾನಂದ ೧೫೦ನೇ ಜನ್ಮದಿನಾಚರಣೆ ಹಾಗೂ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸ್ವಾಮಿ ವಿವೇಕಾನಂದರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಬದುಕು, ಬರಹದ ವಿಚಾರಗಳನ್ನು ಯುವಕರು ಅಧ್ಯಯನ ಮಾಡಬೇಕು. ಭಾರತದ ಶ್ರೇ? ಆದರ್ಶಗಳಾದ ಸೇವೆ ಮತ್ತು ತ್ಯಾಗಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂದರು.ಮಾತೃ ಪ್ರೇಮ ಮತ್ತು ದೇಶಭಕ್ತಿಗಳಿಗೆ ಪರ್ಯಾಯ ಶಕ್ತಿ ಇನ್ನೊಂದಿಲ್ಲ ಎಂದು ಇದನ್ನು ವಿಶ್ವಕ್ಕೆ ಸಾರಿದ ವಿವೇಕಾನಂದರು ಜ್ಞಾನದ ವಿಶ್ವವಿದ್ಯಾಲಯವಿದ್ದಂತೆ. ಯುವಕರು ಇದನ್ನು ಅರ್ಥೈಸಿಕೊಳ್ಳುವ ಮೂಲಕ ದೇಶ ಮುನ್ನಡೆಸುವ ಗುರುತರ ಜವಾಬ್ದಾರಿಯನ್ನು ಪಡೆದುಕೊಳ್ಳಬೇಕಾಗಿದೆ ಎಂದು ಹೇಳಿದರು.

ವರದಿಗಾರ ಮಲ್ಲಿನಾಥ ಪಾಟೀಲ ಮಾತನಾಡಿ, ಭಾರತದ ಪ್ರಜೆಗಳೆಂದರೆ ಕನಿ?ರೆಂದು ಅರ್ಥೈಸಿಕೊಳ್ಳುತ್ತಿದ್ದ ಕಾಲದಲ್ಲಿ ತಮ್ಮ ಚಿಂತನೆಗಳನ್ನು ಹೊರಹಾಕಿದ ವಿವೇಕಾನಂದರು ಭಾರತವೂ ಕೂಡ ಒಂದು ವಿಶಿ? ಪರಂಪರೆ ಮತ್ತು ಸಂಸ್ಕೃತಿ ಹೊಂದಿದ ದೇಶವೆಂದು ಇಡೀ ವಿಶ್ವಕ್ಕೆ ಸಾರುವ ಮೂಲಕ ದೇಶದ ಹಿರಿಮೆಯನ್ನು ಪರಿಚಯಿಸಿದ್ದಾರೆ. ಸತತ ಪರಿಶ್ರಮ ಹಾಗೂ ದೃಢ ಮನಸ್ಸಿನಿಂದ ಮಾಡಿದ ಸತ್ಕಾರ್ಯಗಳೇ ಸಮಾಜಕ್ಕೆ ಮಾರ್ಗದರ್ಶನವಾಗಲಿದೆ.

ಅತಿಥಿಗಳಾಗಿ ಶಿಕ್ಷಕ ಗಿರಿಮಲ್ಲಪ್ಪ ವಳಸಂಗ, ಸಂಚಾಲಕ ಶಾಂತಪ್ಪ ಹಡಪದ ವೇದಿಕೆಯ ಮೇಲಿದ್ದರು. ಜಿ.ಬಿ.ಸಂಗೀತಾ ಕಲಾ ಸಂಸ್ಥೆಯ ಸಂಸ್ಥಾಪಕ ಮೌನೇಶ್ವರ ಸೋನಾರ ಅಧ್ಯಕ್ಷತೆ ವಹಿಸಿದ್ದರು. ಕುಮಾರಿ ಪೂಜಾ ಮೋನಯ್ಯ ದೇಶಭಕ್ತಿ ಗೀತೆ ಹಾಡಿದರೇ, ಲೋಕೇಶ ಪತ್ತಾರ ತಬಲಾ ಹಾಗೂ ಮೌನೇಶ್ವರರಾವ ಸೋನಾರ ಹಾರ್ಮೋನಿಯಂ ಸಾಥ್ ನೀಡಿದರು. ಕಲಬುರಗಿಯ ಕುಮಾರಿ ದೇವಿಕಾ ಇಕ್ಕಳಗಿ ಸಂಗಡಿಗರಿಂದ ನೃತ್ಯ ಪ್ರದರ್ಶಿಸಿದರು.

ಸಾಮಾಜಿಕ ಚಿಂತಕ ಲೋಹಿತ್ ಕಟ್ಟಿ, ಪ್ರಬುದ್ಧ ಚಿಂತನ ವೇದಿಕೆಯ ಅಧ್ಯಕ್ಷ ಭರತ್ ಧನ್ನಾ, ದ.ವಿ.ಒಕ್ಕಟದ ಸಂಚಾಲಕ ಪೂಜಪ್ಪ ಮೇತ್ರೆ,ನಗರಸಭೆಯ ಸದಸ್ಯ ಶರಣು ವಸ್ತ್ರದ್,ರಾಜಶೇಖರ ದೇವರಮನಿ, ವಿಶ್ವನಾಥ ಹಡಪದ, ರಮೇಶ ಜೋಗದನಕರ್,ನಿವೃತ್ತ ಶಿಕ್ಷಕ ಸಿದ್ಧಲಿಂಗಯ್ಯಸ್ವಾಮಿ ಹಿರೇಮಠ,ಬಸವರಾಜ ಕೊಲ್ಲೂರ್ ಸೇರಿದಂತೆ ಅನೇಕರು ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

1 hour ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

11 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

11 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

11 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago