ಕಲಬುರಗಿ: ನಗರದ ಮಾತೋಶ್ರೀ ನೀಲಗಂಗಮ್ಮ ಗುರಪ್ಪ ಅಂದಾನಿ ಆರ್ಟ್ ಗ್ಯಾಲರಿಯಲ್ಲಿ ಜಿಲ್ಲಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ ೨ ದಿನದ ವಿಶೇಷ ಫೋಟೋಗ್ರಫಿ, ಲೈಟ್ ರೂಮ್ ಮತ್ತು ಪ್ರಿ ವೆಡ್ಡಿಂಗ್ ಕಾರ್ಯಾಗಾರಕ್ಕೆ ಅಂದಾನಿ ಆರ್ಟ್ ಗ್ಯಾಲರಿ ಕಾಲೇಜಿನ ಪ್ರಾಚಾರ್ಯ ಶೇಶರಾವ ಬಿರಾದಾರ ಅವರು ಸಸಿಗೆ ನೀರು ಉಣಿಸುವ ಮುಲಕ ಉದ್ಘಾಟಿಸಿ ಮಾತನಾಡುತ್ತಾ ಇಂದಿನ ಫೋಟೋಗ್ರಫಿ ಬಹಳ ಮೋಹತ್ವ ಇದೆ. ಹಾಗಾಗಿ ಛಾಯಗ್ರಾಹಕರಿಗೆ ಗೌರವಿಸಬೇಕೆಂದು ಹೇಳಿದರು.
ಈ ಕಾರ್ಯಾಗಾರದಲ್ಲಿ ಅಸೋಸಿಯೇಷನ್‌ನ ಕಾರ್ಯದರ್ಶಿಯಾದ ಅನಿಲಕುಮಾರ ಎಸ್. ಹುಮ್ನಾಬಾದ ರವರು ಮನಾತನಾಡುತ್ತಾ ಛಾಯಾಗ್ರಾಹಣ ಉಳಿಸಿ ಬೆಳೆಸುವುದೇ ನಮ್ಮ ಆಡಳಿತ ಮಂಡಳಿಯ ಸದಸ್ಯರ ಒಂದು ದೊಡ್ಡ ಕನಸಾಗಿದೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ಅಸೋಸಿಯೇಷನ್‌ನ ಅಧ್ಯಕ್ಷ ಬಸವರಾಜ ಸಿ. ತೋಟದ್ ವಹಿಸಿದರು. ಬೆಂಗಳೂರಿನ ಹಿರಿಯ ಛಾಯಾಗ್ರಾಹಕಾರಾದ ಕಾಶೀನಾಥ, ದೀಪಕ ಇವರಿಂದ ತರಬೇತಿ ಕಾರ್ಯಾಗಾರ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಅಸೂಸಿಯೇಷನ್ ಸದಸ್ಯರಾದ ಗುರುಪಾದಯ್ಯ ಮಠ, ರಮೇಶ ಎಚ್. ಲಾಲಾಬುಂದ್ರೆ, ರಾಚಾಯ್ಯ ಸಿ. ಪತ್ರೆ, ಅನಿಲಕುಮಾರ, ಅರುಣಕುಮಾರ ಬಿ. ತೆಗನೂರ, ಪ್ರಕಾಶ ಎಮ್. ಶೇರಖಾನೆ, ಮೊಹಮ್ಮದ ಆಫಸರ್ ಪಟೇಲ್, ಶರಣು ಕಟ್ಟಿಮನಿ, ಶಿವಕುಮಾರ ಮಾಲಿಪಾಟೀಲ್ ಹಾಗೂ ಲಿಂಗಸೂರಿನ ಚಿಂಚೋಳಿ, ಆಳಂದ, ಅಫಜಲಪುರ, ಶಾಹಾಬಾದ, ಜೇವರ್ಗಿ, ಬೀದರ, ಬಸವಕಲ್ಯಾಣ, ಹುಮನಾಬಾದ ಮತ್ತು ಕಲಬುರಗಿ ನಗರದ ವೃತ್ತಿಪರ ಛಾಯಾಗ್ರಾಹಕರು ಅತೀ ಆಸಕ್ತಿ ಯಿಂದ ತರಬೇತಿಯಲ್ಲಿ ಪಾಲ್ಗೊಂಡಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…