ಬೆಂಗಳೂರು: ಕೆಲವು ವರ್ತಕರು ಸರಕುಗಳ ನಿಜವಾದ ಪೂರೈಕೆ ಮಾಡದೇ ನಕಲಿ ಇ – ವೇ ಬಿಲ್‌ಗಳನ್ನು ಮತ್ತು ಇನ್‌ವಾಯ್ಸ ಗಳನ್ನು ತಯಾರಿಸಿ ಸರ್ಕಾರಕ್ಕೆ ತೆರಿಗೆ ವಂಚಿಸಿ ಹೂಡುವಳಿ ತೆರಿಗೆಯನ್ನು ಫಲಾನುಭವಿಗಳಿಗೆ ರವಾನಿಸುವ ದುರುದ್ದೇಶದಿಂದ ಕೃತಕ ದಾಖಲೆಗಳನ್ನು ನೀಡಿ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯಡಿಯಲ್ಲಿ ನೋಂದಣಿ ಪಡೆದು ತೆರಿಗೆ ವಂಚನೆ ಜಾಲಗಳನ್ನು ಸೃಷ್ಟಿಸಿರುತ್ತಾರೆ ಎಂಬ ಖಚಿತ ಮಾಹಿತಿ ಅನ್ವಯ ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು ಇ – ವೇ ಬಿಲ್ ಮತ್ತು ಜಿಎಸ್‌ಟಿ ಪ್ರೈಮ್ ಪೋರ್ಟಲ್‌ಗಳಲ್ಲಿ ಲಭ್ಯವಿರುವ ದತ್ತಾಂಶವನ್ನು ಆಧರಿಸಿ ಕಾರ್ಯತಂತ್ರವನ್ನು ರೂಪಿಸಿ ಕಳೆದ 3 ತಿಂಗಳಲ್ಲಿ ರಾಜ್ಯಾದ್ಯಂತ ತೀವ್ರ ತರವಾದ ತಪಾಸಣೆ ನಡೆಸಿರುತ್ತಾರೆ.
ಶಂಕಿತ ವರ್ತಕರು ಇತ್ತೀಚೆಗೆ ನೋಂದಣಿ ಹೊಂದಿದ್ದು , ಜಿಎಸ್‌ಟಿ ಪೋರ್ಟಲ್‌ನಲ್ಲಿ ನಕಲಿ / ಕೃತಕ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೂಲಕ ಜಿಎಸ್‌ಟಿ ನೋಂದಣಿಯನ್ನು ಪಡೆದಿರುವುದು ಹಾಗೂ ಘೋಷಿತ ವ್ಯಾಪಾರ ಸ್ಥಳದಲ್ಲಿ ಅಸ್ತಿತ್ವದಲ್ಲಿಲ್ಲದೇ ಇರುವುದು ತಪಾಸಣೆಯ ಸಮಯದಲ್ಲಿ ಬೆಳಕಿಗೆ ಬಂದಿದೆ.
ಕಳೆದ ಮೂರು ತಿಂಗಳಲ್ಲಿ ಇಲಾಖೆಯು 11542 ಇ – ವೇ ಬಿಲ್ಲುಗಳ ಮುಖಾಂತರ ಒಟ್ಟು 755.17 ಕೋಟಿ ಮಾರಾಟ ವಹಿವಾಟು ಹಾಗೂ 147,67 ಕೋಟಿ ನಕಲಿ ಹೂಡುವಳಿ ತೆರಿಗೆ ಕ್ಷೇಮು ಮಾಡಿದ 172 ಅಸ್ತಿತ್ವದಲ್ಲಿ ಇಲ್ಲದೇ ಇರುವ ನಕಲಿ ತರಿಗೆದಾರರನ್ನು ತಪಾಸಣೆ ನಡೆಸಿ ಅವರ ನೋಂದಣಿಯನ್ನು ರದ್ದುಗೊಳಿಸಿದೆ. ಸದರಿ ರದ್ದುಗೊಳಿಸಿದ 172 ನಕಲಿ ಸಂಸ್ಥೆಗಳ ಪೈಕಿ 119 ಪ್ರಕರಣಗಳನ್ನು ಬೆಂಗಳೂರಿನ ದಕ್ಷಿಣ ವಲಯ ಜಾರಿ ತಂಡ, 7 ಪ್ರಕರಣಗಳನ್ನು ಬೆಂಗಳೂರಿನ ಜಾಗೃತಿ ತಂಡ, 13 ಪ್ರಕರಣಗಳನ್ನು ಮಂಗಳೂರಿನ ಜಾರಿ ತಂಡ, 12 ಪ್ರಕರಣಗಳನ್ನು ಮೈಸೂರಿನ ಜಾರಿ ತಂಡ, 8 ಪ್ರಕರಣಗಳನ್ನು ಬಳ್ಳಾರಿ ತಂಡ, 5 ಪ್ರಕರಣಗಳನ್ನು ಬೆಳಗಾವಿ ಜಾರಿ ತಂಡ, 4 ಪ್ರಕರಣಗಳನ್ನು ಹುಬ್ಬಳ್ಳಿ ಜಾರಿ ತಂಡ, 3 ಪ್ರಕರಣಗಳನ್ನು ಶಿವಮೊಗ್ಗ ಜಾರಿ ತಂಡ ಹಾಗೂ 1 ಪ್ರಕರಣವನ್ನು ಕಲಬುರಗಿ ಜಾರಿ ತಂಡಗಳಿಂದ ತಪಾಸಣೆ ಕೈಗೊಳ್ಳಲಾಗಿತ್ತು.
ತಪಾಸಣಾ ಅಧಿಕಾರಿಗಳು ಅಸ್ತಿತ್ವದಲ್ಲಿಲ್ಲದ ವರ್ತಕರ ಜಿಎಸ್‌ಟಿ ನೋಂದಣಿಗಳನ್ನು ತಕ್ಷಣದಿಂದ ರದ್ದುಗೊಳಿಸುವ ಹಾಗೂ ಆದಾಯ ತೆರಿಗೆ ಇಲಾಖೆ, ಬ್ಯಾಂಕ್‌ಗಳು, ಟೆಲಿಕಾಂ ಸೇವಾ ಪೂರೈಕೆದಾರರು ಮುಂತಾದ ಇತರ ಏಜೆನ್ಸಿಗಳಿಂದ ಪುರಾವೆಗಳನ್ನು ಸಂಗ್ರಹಿಸಿ ಅಂತಹವರ ಮೇಲೆ ಕಾನೂನಿನನ್ವಯ ಕಠಿಣ ಕ್ರಮಗಳನ್ನು ಕೈಗೊಳ್ಳುವ ಪ್ರಕ್ರಿಯೆಯಲ್ಲಿದ್ದಾರೆ.
ಎಲ್ಲಾ ನೋಂದಾಯಿತ ತೆರಿಗೆದಾರರ ಜಿಎಸ್‌ಟಿ ನೋಂದಣಿ ಮತ್ತು ಇ – ವೇ ಬಿಲ್ ಡೇಟಾವನ್ನು ಇಲಾಖೆ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂಬುದನ್ನು ತೆರಿಗೆದಾರರು ಗಮನದಲ್ಲಿ ಇಟ್ಟುಕೊಂಡು ಮೋಸದ / ತೆರಿಗೆ ವಂಚನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದೇ ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ / ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯಿದೆಗಳು ಮತ್ತು ನಿಯಮಗಳ ನಿಬಂಧನೆಗಳನ್ನು ಅನುಸರಿಸಲು ಈ ಮೂಲಕ ಸಲಹೆ ನೀಡಲಾಗುತ್ತಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…