ಬಿಸಿ ಬಿಸಿ ಸುದ್ದಿ

ಜಂಗ್ಲಿಂಗ್ನಲ್ಲಿ ವಿಶ್ವ ದಾಖಲೆ ಮಾಡಿದ ಹಳ್ಳಿ ಹುಡುಗಿ ಕವಿತಾ ಮೇದಾರ

ಹುಬ್ಬಳ್ಳಿ: ಕೈಯಲ್ಲಿ ಗಿರ ಗಿರಾ ಅಂತ ತಿರುಗೋ ಬಾಟಲ್ ಗಳ ರೊಂಯ್ ಎಂದು ಬಾಟಲ್ ಗಳನ್ನು ತಿರುಗಿಸೋ ಯುವತಿ. ಏಕ ಕಾಲಕ್ಕೆ ಎರಡು, ಮೂರು, ನಾಲ್ಕು ಬಾಟಲ್ ಗಳನ್ನೂ ತಿರುಗಿಸೋ ಚಾಕಚಕ್ಯತೆ. ಇದೇ ಚಾಕಚಕ್ಯತೆಯೊಂದಿಗೆ ವಿಶ್ವಮಟ್ಟದಲ್ಲಿ ಧಾರವಾಡ ಹೆಸರನ್ನು ಬೆಳಗಿದ ಬೆಡಗಿ.

ಧಾರವಾಡ ಜಿಲ್ಲೆ ಬೆಟದೂರು ಗ್ರಾಮದ ಯುವತಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದಾಳೆ . ಜಗ್ಲಿಂಗ್ ನಲ್ಲಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಯುವತಿ ಸಾಧನೆಗೈದಿದ್ದಾಳೆ. ಹೀಗೆ ಸಾಧನೆ ಮಾಡಿದ ಯುವತಿಯ ಹೆಸರು ಕುಂದಗೋಳ ತಾಲೂಕಿನ ಬೆಟದೂರು ಗ್ರಾಮದ ಕವಿತಾ ಮೇದಾರ. ಬಾರ್ ಟೆಂಡರ್ ಗಳು ಬಾಟಲಿ ತಿರುಗಿಸುವುದನ್ನು ನೋಡಿಯೇ ಹೌಹಾರಿರುತ್ತೇವೆ. ಇಂಥದ್ದರಲ್ಲಿಯೇ ಗ್ರಾಮೀಣ ಪ್ರತಿಭೆ ಸಾಧನೆ ಮೆರೆದಿದ್ದಾಳೆ.

ಗಿರ ಗಿರ ಅಂತ ಬಾಟಲಿಗಳನ್ನು ತಿರುಗಿಸುತ್ತ ನೋಡುಗರನ್ನು ಅಚ್ಚರಿಗೆ ಒಳಪಡಿಸುವ ಈ ಕಲೆಗೆ ಜಗ್ಲಿಂಗ್ ಮತ್ತು ಫೇರಿಂಗ್ ಅಂತ ಕರೀತಾರೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಅಥವಾ ದೊಡ್ಡ ದೊಡ್ಡ ಪಬ್, ಬಾರ್ ಗಳಲ್ಲಿ ಈ ರೀತಿಯಾಗಿ ಹುಡುಗರು ತಿರುಗಿಸುವುದನ್ನ ನೀವು ನೋಡಿರ್ತೀರಾ. ಇದನ್ನೆಲ್ಲ ಕಲಿಬೇಕು ಅಂತ ಸುಮ್ಮನೆ ಮಾತಲ್ಲಿ ನೋಡೋಕೆ ಎಷ್ಟು ರೋಮಾಂಚನವಾಗುತ್ತದೆಯೋ ಇದನ್ನು ಕಲಿಯೋದು ಅಷ್ಟೇ ಟಫ್ ಕೂಡ. ಆದ್ರೆ ಹಳ್ಳಿಯಿಂದ ಪಟ್ಟಣಕ್ಕೆ ಹೋಗಿದ್ದ ಈ ಯುವತಿಗೆ ಜಗ್ಲಿಂಗ್, ಫೇರಿಂಗ್ ಆಕರ್ಷಣೆಯಾಗಿ ಕಂಡಿದೆ. ಈ ಯುವತಿ ಕಷ್ಟಪಟ್ಟು ಕಲಿತು,‌ ಇದರಲ್ಲಿಯೇ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಮಾಡಿದ್ದಾರೆ.

ಪುಣೆಯಲ್ಲಿ ಟ್ರೈನಿಂಗ್ ಪಡೆದು ಸಾಧನೆ ಮಾಡೋಕೆ ಕವಿತಾ ಮುಂದಾಗಿದ್ದಾರೆ. ಕವಿತಾಳಿಗೆ ಸೋದರ ಮಾವ ಪ್ರೋತ್ಸಾಹ ನೀಡಿದ್ದಾರೆ. ತರಬೇತಿ ಪಡೆದ ಕವಿತಾ ಪುಣೆಯ ಬಾರ್ ನಲ್ಲಿ ಬಾರ್ ಟೆಂಡರ್ ಆಗಿ ಕೆಲಸ ಮಾಡಿದ್ದಾಳೆ. ಸ್ವಿಟ್ಜರ್ಲ್ಯಾಂಡ್ ನಲ್ಲಿ ನಡೆಯುವ ಸ್ಪರ್ಧೆಗೆ ಈಗಾಗಲೇ ಕವಿತಾ ಆಯ್ಕೆಯಾಗಿದ್ದರು. ಆದ್ರೆ ಹಣದ ತೊಂದರೆ ಆಗಿತ್ತು. ಅದೃಷ್ಟವಶಾತ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ತಂಡ ಭಾರತಕ್ಕೆ ಬಂದು ಸ್ಪರ್ಧೆ ಏರ್ಪಡಿಸಿ ಮಹಿಳೆಯ ದಾಖಲೆಗೆ‌ ಮುನ್ನುಡಿ ಬರೆದಿದ್ದಾರೆ.

ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದಾಳೆ. ಒಂದು ನಿಮಿಷಯದಲ್ಲಿ 122 ಬಾರಿ ಫ್ಲಿಪ್ ಮಾಡೋ ಮೂಲಕ ಈ ಸಾಧನೆಗೆ ಸಾಕ್ಷಿಯಾಗಿದ್ದಾಳೆ. ಭಾರತದಲ್ಲಿಯೇ ಜಗ್ಲಿಂಗ್ ಆಯಂಡ್ ಫೇರಿಂಗ್ ನಲ್ಲಿ ದಾಖಲೆ ಬರೆದ ಮೊದಲ ಮಹಿಳೆ ಎಂಬ ಕೀರ್ತಿ ಕವಿತಾಳದ್ದಾಗಿದೆ. ಮಹಿಳೆ ಅಂದ್ರೇ ಮನೆಯ ಕೆಲಸಕ್ಕೆ ಮಾತ್ರ ಸೀಮಿತವಲ್ಲ ಅನ್ನೋದನ್ನು ಕವಿತಾ ತೋರಿಸಿಕೊಟ್ಟಿದ್ದಾಳೆ. ಇವಳ ಸಾಧನೆ ಭಾರತ ಮಾತ್ರವಲ್ಲದೆ ಜಗತ್ತಿನ ಪ್ರಶಂಸೆಗೆ ಪಾತ್ರವಾಗುವಂತೆ ಮಾಡಿದೆ.

ಒಂದೂವರೆ ಸಾವಿರ ವಾಷಿಂಗ್ ಮಷೀನ್​ನಿಂದ ವಿಶ್ವದಾಖಲೆ: ಏನಾದ್ರೂ ಸಾಧನೆ ಮಾಡಬೇಕಂತ ಅನಿಸಿತು. ಕೊರೋನಾ ಸಂದರ್ಭದಲ್ಲಿ ಬಾರ್ ಗಳು ಮುಚ್ಚಿದ ಸಮಯವನ್ನು ಸದ್ಬಳಕೆ ಮಾಡಿಕೊಡೆ. ಜುಗ್ಲಿಂಗ್ ಮತ್ತು ಫೇರಿಂಗ್ ನ ನಿರಂತರ ಅಭ್ಯಾಸ ಮಾಡಿದೆ. ಕೊನೆಗೂ ಈ ಸಾಧನೆ ಮಾಡಿದೆ. ನನ್ನ ಸಾಧನೆಗೆ ತವರು ಜಿಲ್ಲೆಯ ಜನ ತೋರಿಸಿದ ಅಭಿಮಾನಕ್ಕೆ ಖುಷಿಯಾಗುತ್ತೆ ಎನ್ನುತ್ತಾರೆ ಕವಿತಾ ಮೇದಾರ. ಇನ್ನು ಕವಿತಾ ಸಾಧನೆಗೆ ಧಾರವಾಡ ಜಿಲ್ಲೆಯ ಜನತೆಯೂ ಮೆಚ್ಚುಗೆ ವ್ಯಕ್ತಪಡಿಸಿದೆ.

ಸರ್ಕಾರದಿಂದಲೂ ಈಕೆಗೆ ಪ್ರೋತ್ಸಾಹ ಸಿಗಬೇಕೆಂದು ಅಭಿಪ್ರಾಯಪಟ್ಟಿದೆ. ಮಹಿಳೆ ಅಂದರೆ ಮನೆಯ ಕೆಲಸಕ್ಕೆ ಮಾತ್ರ ಸೀಮಿತವಾಗದೆ ಹೊಸ ಸಾಧನೆ ಮಾಡಬೇಕು ಎಂಬುವುದನ್ನು ‌ಕವಿತಾ ತೋರಿಸಿಕೊಟ್ಟಿದ್ದಾರೆ. ಕವಿತಾಳ ಕೀರ್ತಿ ಇನ್ನಷ್ಟು ವ್ಯಾಪಿಸಲಿ. ಸರ್ಕಾರ ಏನಾದರೂ ಸಹಾಯ ಸೌಲಭ್ಯಗಳನ್ನು ನೀಡಲಿ ಎಂಬುವುದು ನಮ್ಮದೂ ಆಶಯವಾಗಿದೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

10 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago