ಬೆಳಗಾವಿ: ಜನಪ್ರತಿನಿಧಿಗಳು ಎಂದರೆ ಜನರ ಸಮಸ್ಯೆ ಆಲಿಸಬೇಕು ಅಲ್ಲವೆ. ಅದನ್ನ ಬಿಟ್ಟು ತಾವೂ ನೋಡಲ್ಲ, ಸಮಸ್ಯೆ ಹೇಳಲು ಬಂದವರಿಗೂ ಸರಿಯಾದ ರೆಸ್ಪಾನ್ಸ್ ಮಾಡಲ್ಲ ಅಂದ್ರೆ ಜನಪ್ರತಿನಿಧಿಗಳು ಯಾತಕ್ಕಾಗಿ ಎಂಬ ಪ್ರಶ್ನೆ ಜನರಿಗೆ ಮೂಡಿಯೇ ಮೂಡುತ್ತೆ.ಯಾಕಂದ್ರೆ ಅಂತದ್ದೊಂದು ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಬೆಳಗಾವಿ ಉತ್ತರ ವಿಧನಾಸಭಾ ಕ್ಷೇತ್ರದ ಶಾಸಕ ಅನಿಲ್ ಬೊನಕೆ ಮಹಿಳೆಯೊಬ್ಬರಿಗೆ ಆವಾಜ್ ಹಾಕಿದ್ದಾರೆ. ಶಾಸಕ ಅನಿಲ್ ಗೋವಾ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿದ್ದರಂತೆ. ಆಗ ಬಾಂಧುರ ಗಲ್ಲಿಯ ಮಹಿಳೆಯೊಬ್ಬರು ತಮ್ಮ ಸಮಸ್ಯೆ ಹೇಳಲು ಕರೆ ಮಾಡಿದ್ದಾರೆ.
ಸರ್ ಗಲ್ಲಿಯ ಡ್ರೈನೇಜ್ ಹಾಳಾಗಿ ಮನೆಯೊಳಗೆ ನೀರು ಬರ್ತಿದೆ. ಇದರ ಪರಿಣಾಮ ಜನರು ಆಸ್ಪತ್ರೆಗೆ ಸೇರುತ್ತಿದ್ದಾರೆ. ಆದಷ್ಟು ಬೇಗ ಸರಿ ಮಾಡಿಸಿ ಸರ್ ಎಂದಿದ್ದಷ್ಟೇ, ಆ ಕಡೆಯಿಂದ ಆ ಕೆಲಸ ಆಗಬೇಕು.. ಈ ಕೆಲಸ ಆಗಬೇಕು ಅಂತ ಹೇಳೋಕೆ ನೀವೂ ಯಾರು..? ಗೋವಾ ಚುನಾವಣಾ ಪ್ರಚಾರದಲ್ಲಿದ್ದೇನ ಬರ್ತೀನಿ ಇಡು ಅಂತ ಏಕವಚನದಲ್ಲೇ ಆವಾಜ್ ಹಾಕಿ ಕರೆ ಕಟ್ ಮಾಡಿದ್ದಾರೆ. ಆ ಆಡಿಯೋ ವೈರಲ್ ಆಗಿದ್ದು, ಶಾಸಕರ ನಡತೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…