ಬಿಸಿ ಬಿಸಿ ಸುದ್ದಿ

ಅರಿವು, ಆಚಾರ, ಅನುಭವಗಳ ಸಂಗಮವೇ ಹಳಕಟ್ಟಿ ಶರಣರು: ಡಾ. ಈಶ್ವರ ಮಂಟೂರ

ಕಲಬುರಗಿ: ಹಳಕಟ್ಟಿಯವರನ್ನು ಆದರ್ಶವಾಗಿಟ್ಟುಕೊಂಡವರು ತಮ್ಮ ಜೀವನದಲ್ಲಿ ಅಗಾಧವಾದುದನ್ನು ಸಾಧಿಸುತ್ತಾರೆ ಎಂದು ಹುನ್ನೂರ-ಮಧುರಖಂಡಿ ಬಸವ ಜ್ಞಾನ ಗುರುಕುಲದ ಡಾ. ಈಶ್ವರ ಮಂಟೂರ ನುಡಿದರು.

ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಎ.ಕೆ.ಆರ್. ದೇವಿ ಪಿಯುಸಿ ಕಾಲೇಜಿನಲ್ಲಿ ಇಂದು ಬೆಳಗ್ಗೆ ಹಮ್ಮಿಕೊಂಡ ಫ.ಗು. ಹಳಕಟ್ಟಿ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ಇತಿಹಾಸದ ಬೆಳಕಿನ ಸಂಪುಟ, ಬಿದ್ದವರನ್ನು ಮೇಲಕ್ಕೆತ್ತಿದ 12 ಶತಮಾನದ ವಚನಕಾಲ ಕಾಲನ ಗರ್ಭದಲ್ಲಿ ಹೂತು ಹೋಗಿದ್ದ ವಚನ ಸಾಹಿತ್ಯವನ್ನು ಬೆಳಕಿಗೆ ತಂದವರೆ ಫ.ಗು. ಹಳಕಟ್ಟಿಯವರು ವಚನ ವಿನ್ಯಾಸಕಾರ. ವ್ಯಕ್ತಿಯಾಗಿ ಹುಟ್ಟಿ ತತ್ವವಾಗಿ ಲಿಂಗೈಕ್ಯರಾಗುತ್ತಾರೆ ಎಂದು ವಿವರಿಸಿದರು.

ಅರಿವು, ಆಚಾರ, ಅನುಭವಗಳ ಸಂಗಮ, ಬೆಳಕು, ಭರವಸೆ, ಭವಿಷ್ಯದ ಸಂಗಮ ಹಳಕಟ್ಟಿ ಶರಣರು. ಅಧಿಕಾರ, ಅಂತಸ್ತು, ಆಯುಷ್ಯದಿಂದ ದೂರ ಇದ್ದರು.‌ ಏನೆಲ್ಲ ಸಾಧನೆ ಮಾಡಿದ ಇವರನ್ನು ವಚನ ಗುಮ್ಮಟ ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು. ಜಯಶ್ರೀ ಚಟ್ನಳ್ಳಿ ವಿಶೇಷ ಆಹ್ವಾನಿತರಾಗಿ ಆಗಮಿಸಿ ಮಾತನಾಡಿ, ಸಮಾಜಮುಖಿ ಕೆಲಸ ಮಾಡಿದ ವಿಜಯಕುಮಾರ ಅವರು ಸಾಕಷ್ಟು ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬಂದಿದ್ದು, ವಚನ ಸಾಹಿತ್ಯದ ಉಳಿವಿಗೆ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟ ಫಕಿರಪ್ಪ ಗುರುಸಿದ್ದಪ್ಪ ಹಳಕಟ್ಟಿ ಪ್ರಾತಸ್ಮರಣೀಯರಾಗಿದ್ದಾರೆ ಎಂದರು.

ಕಾಲೇಜಿನ ಆಡಳಿತಾಧಿಕಾರಿ ವಿದ್ಯಾಸಾಗರ ದೇಶಮುಖ ಅಧ್ಯಕ್ಷತೆ ವಹಿಸಿದ್ದರು. ಮತ್ತೋರ್ವ ಆಡಳಿತಾಧಿಕಾರಿ ಸುಬ್ರಮಣ್ಯಂ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ, ರಾಜ್ಯ ಕಾರ್ಯ ಕಾರಿ ಸಮಿತಿಯ ದೇವಿಂದ್ರಪ್ಪ ಕಪನೂರ ವೇದಿಕೆಯಲ್ಲಿದ್ದರು.
ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಪ್ರಾಸ್ತಾವಿಕ ಮಾತನಾಡಿದರು. ದೀಪಾಲಿ ಸಂಗಡಿಗರು ಪ್ರಾರ್ಥಿಸಿದರು. ಅಕಾಡೆಮಿ ಕಾರ್ಯಾಧ್ಯಕ್ಷ ಶಿವರಾಜ ಅಂಡಗಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಶೆಟಕಾರ ಸ್ವಾಗತಿಸಿದರು.

ಬಸಣ್ಣ ಎಂ. ಗುಣಾರಿ, ಬಿ.ವಿ. ಚಕ್ರವರ್ತಿ, ಪಿ. ಶಶಿಕಾಂತ, ಬಾಬುರಾವ ಶೇರಿಕಾರ, ಜಗದೇವಿ ಚಟ್ಟಿ, ಶಿವಲಿಂಗಪ್ಪ ಕಿನ್ನೂರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಕಾಡೆಮಿ ಗೌರವಾಧ್ಯಕ್ಷ ಎಸ್.ಎಂ. ಪಟ್ಟಣಕರ, ಪ್ರಸನ್ನ ವಾಂಜರಖೇಡ, ಶ್ರೀಕಾಂತಗೌಡ ಪಾಟೀಲ ತಿಳಗೂಳ, ಸೂರ್ಯಕಾಂತ ಸೊನ್ನದ, ಮಹಾಂತೇಶ ಪಾಟೀಲ, ಬಿ.ಎಂ. ಪಾಟೀಲ ಕಲ್ಲೂರ, ಬಿ.ಎಂ. ರಾವೂರ, ಜಗದೀಶ ಮರಪಳ್ಳಿ, ಸದಾಶಿವ ಮೇತ್ರಿ, ಜಗದೀಶ ಪಾಟೀಲ, ಬಸವರಾಜ ಮೊರಬದ, ಉದಯಕುಮಾರ ಸಾಲಿಮಠ, ಶರಣಗೌಡ ಪಾಟೀಲ ಪಾಳಾ ಇತರರು ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

3 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

13 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

13 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

13 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago