ಬಿಸಿ ಬಿಸಿ ಸುದ್ದಿ

ರೈತರಿಗೆ ಹಗಲು ಹೊತ್ತಿನಲ್ಲಿ 3 ತ್ರಿ ಫೆಸ್ ವಿದ್ಯುತ್ ಪೂರೈಕೆಗೆ ರೈತ ಸಂಘ ಆಗ್ರಹ

ಕಲಬುರಗಿ: ರಾತ್ರಿ ವೇಳೆಯಲ್ಲಿ ಪಂಪಸೆಟ್ಟಗಳಿಗೆ 3 ತ್ರಿ ಫೆಸ್ ವಿದ್ಯುತ್ ಕೊಡುವ ನಿಯಮ ಕೈ ಬಿಡಬೇಕು. ರಾತ್ರಿ ವೇಳೆಯಲ್ಲಿ ರೈತರ ಬೆಳೆಗಳಿಗೆ ನೀರು ಬಿಡುವ ಸಮಯದಲ್ಲಿ ವಿಷಕಾರಿ ಹುಳು ಹುಪ್ಪಡಿಗಳು ಜೀವಕ್ಕೆ ಹಾನಿಯುಂಟಾಗುವ ಸಂಭವ ವಿರುತ್ತದೆ ರಾತ್ರಿ ವೇಳೆಯಲ್ಲಿ ವಿದ್ಯುತ್ ಕೊಡುವುದು ಕೈ ಬಿಟ್ಟು ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಸಬೇಕೆಂದು ರೈತ ಸಂಘ ಆಗ್ರಹಿಸಿದೆ.

ಕಲ್ಯಾಣ ಕರ್ನಾಟಕ ನಾಡಿನಲ್ಲಿ ರೈತರು ಅತಿವೃಷ್ಟಿ ಮಳೆಯಿಂದ ಹಾನಿಗೆ ಸಂಕಷ್ಟ ಎದುರುಸುತ್ತಿದ್ದಾರೆ. ನೀರಾವರಿ ಬೆಳೆಗಳಿಗೆ ಖಬ್ಬು ಕಟಾವು ಮಾಡುವ ಸಮಯದಲ್ಲಿ ನೀರು ಬಿಡಲಿಲ್ಲ ಅಂದರೆ ಕಬ್ಬು ಬೆಂಡ ಹೋಗುತ್ತದೆ ಹೀಗಾಗಿ ಕಬ್ಬು ಕಾಟ ಬರೊದಿಲ್ಲ ರೈತರಿಗೆ ಮೊಸ ಮಾಡಿದಂತಾಗುತ್ತದೆ ಕೈ ಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ವೆಂಬಂತಾಗಿದೆ ಎಂದು ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪಾ ಮಮಶೆಟ್ಟಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಈ ವರ್ಷ ಮಳೆಗಾಲ ಹೆಚ್ಚಾಗಿ ಭೂಮಿ ತೆಂವಾಂವಷೆ ಹೆಚ್ಚಾಗಿ ಇನ್ನೂ ಅನೇಕ ಜನ ರೈತರ ಜಮೀನುಗಳನ್ನು ಹಸಿ ಒಣಗಿಲ್ಲ ಇತ್ತೀಚಿನ ದಿನಗಳಲ್ಲಿ ರೈತರು ನೀರಾವರಿ ಬೆಳೆಗಳನ್ನು ಹಾಕಿ  ಇದರಲ್ಲಿ ಆದರು  ಬೆಳೆ ಬೆಳೆಯಲು ಪ್ರಯತ್ನಗಳು ನಡೆಸಿದ  ನೀರಾವರಿ ಬೆಳೆಗಳಿಗೆ ಸಮರ್ಪಕವಾದ ವಿದ್ಯುತ್ ಸಿಗುತ್ತಿಲ್ಲ ಹೀಗಾಗಿ ನೀರಾವರಿ ರೈತರು ಕಂಗಾಲಾಗಿದ್ದಾರೆ. ರೈತರಿಗೆ ವಿದ್ಯುತ್ ಕೊಡಲು ನಿಯಮ ಸಮಯ ನಿಗದಿ ಪಡಿಸಿ 6 ತಾಸು ವಿದ್ಯುತ್ ಕೊಡುತ್ತ್ತಿದ್ದೆವೆಂದು ಹೇಳಿ ಅದೆ ಸಮಯದಲ್ಲಿ LC ತೊಗೊಂಡು ಕೆಲಸ ಮಾಡುವ ಪದ್ದತಿ ನಿಲ್ಲಿಸಬೇಕು. ರೈತರಿಗೆ ನಿಗದಿತ ಸಮಯದಲ್ಲಿ ವಿದ್ಯುತ್ ಕೊಟ್ಟು ಮತ್ತೆ ವಿದ್ಯುತ್ 1 ತಾಸು ವಿದ್ಯುತ್ ಕಟ್ಟಾಗುತ್ತೆ. ಹೀಗಾಗಿ ಕೂಡಲೇ ನೀರಾವರಿ ರೈತರಿಗೆ 12 ತಾಸು ವಿದ್ಯುತ್ ಹಗಲು ಹೊತ್ತಿನಲ್ಲಿ 3 ತ್ರಿ ಫೆಸ್ ವಿದ್ಯುತ್ ಕೊಡಲು ರೈತ ಸಂಘ ಒತ್ತಾಯಿಸುತ್ತದೆ

ಜಿಲ್ಲೆಯಾದ್ಯಂತ ಲೈಟಿನ ಕಂಬದ ಸರ್ವಿಸ್‌ ವೈಯರ್  ಮೆನ್ ಕಂಬದ ಸರ್ವಿಸ್ ವೈಯರ್  ರೈತರ ಹೊಲಗಳಲ್ಲಿ  ಜನರ ತಲೆಗೆ ಹತ್ತುವ ರೀತಿಯಲ್ಲಿ ವೈಯರ್ ಕೆಳಕ್ಕೆ ಜೊತಾಡುತ್ತಿವೆ ವೈಯರು ಬಿಗಿಯುವದಿಲ್ಲ ಮತ್ತು ಕಂಬ ಹಳೆಯದಾಗಿದ್ದರು ಕಂಬ ಸಿಳಿ ನಿಂತರು ಮತ್ತು ಕಂಬ ಮುರಿಲಿಕ್ಕೆ ಆದರು ಸಹ ಹೊಸಾ ಕಂಬಾ ಹಾಕಲು ವಿದ್ಯುತ್ ಇಲಾಖೆ ಸಂಪೂರ್ಣ ವಿಫಲವಾಗಿದೆ ರೈತ ವಿರೋಧಿ ಜನ ವಿರೋಧಿ ವಿದ್ಯುತ್ ಇಲಾಖೆಯಾಗಿದೆ ಎಂದು ಜಿಲ್ಲಾ ಕಾರ್ಯದರ್ಶಿ ಪಾಂಡುರಂಗ ಮಾವಿನಕರ ಆರೋಪಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಸುಮಾರು ಜನ ರೈತರು ಅಕ್ರಮ ಮತ್ತು ಗಂಗಾ ಕಲ್ಯಾಣ ಹಾಗೂ ಎಸ್ಸಿಪಿ ಯೋಜನೆಯಲ್ಲಿ ಪಂಪ್ ಸೆಟ್ ನೀರಾವರಿ ರೈತರು ಅರ್ಜಿ ಸಲ್ಲಿಸಿ ಸುಮಾರು ವರ್ಷಗಳ ಕಳೆದರು ಅರ್ಜಿ ಹಾಕಿ ಮಂಜೂರಾತಿ ಪಡೆದರು ಸಹ ಇಲ್ಲಿಯವರೆಗೆ ರೈತರಿಗೆ ವಿದ್ಯುತ್ ಸಂಪರ್ಕ ಸಿಕ್ಕಿರುವದಿಲ್ಲ.

ಗುತ್ತಿಗೆದಾರರು ಮತ್ತು ಇದಕ್ಕೆ ಸಂಬಂಧಪಟ್ಟ ವಿದ್ಯುತ್ ಅಧಿಕಾರಿಗಳು ಮತ್ತು ಸರ್ಕಾರದ ತುಂಬಾ ರೈತರಿಗೆ ಸತಾಯಿಸುವ ನೀತಿ ಮಿತಿಮೀರಿದೆ ರೈತರು ಅವರ ಇಲಾಖೆಗೆ ಅಲೆದಾಡಿ ಬೆಸತ್ತು ಹೋಗಿದ್ದಾರೆ. ಒಬ್ಬ ಒಬ್ಬರು ರೈತರು ಸುಮಾರು 1 .ಕಿಲೋಮೀಟರ್ ದೂರದಿಂದ ಖುಲ್ಲಾ ವೈಯರ್ ಹಾಕಿ ನೀರಾವರಿ ತೋಟಗಳಿಗೆ ಕರೆಂಟ್ ಪಡಿಯುವ ನಿಯಮ ಕೈ ಬಿಟ್ಟು ಅರ್ಜಿ ಹಾಕಿದ ಎಲ್ಲಾ ರೈತರಿಗೆ ಕೂಡಲೇ ನೀರಾವರಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಕಲ್ಪಿಸಿ ಕೊಡುವ ನಿಯಮ ಜಾರಿಗೆ ತರಬೇಕು ಮತ್ತು ಗಂಗಾ ಕಲ್ಯಾಣ ಯೋಜನೆ ಮತ್ತು ಅಕ್ರಮ ಸಕ್ರಮ ರೈತರ ಅರ್ಜಿಗಳನ್ನು ಕೂಡಲೇ ಅದಕ್ಕೆ ಹಣ ಬಿಡುಗಡೆ ಮಾಡಬೇಕು ಎಂದು ಅಲ್ತಾಫ್ ಇನಾಮಂದಾರ ಒತ್ತಾಯಿಸಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

9 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago