ಶಹಾಬಾದ: ಮಿಲಿಯಾಂತರ ಭಾರತೀಯರ ಪರವಾಗಿ ನಿಂತು, ಸ್ವಾತಂತ್ರ್ಯದ ಧ್ಯೇಯಕ್ಕಾಗಿ, ನನ್ನ ಜೀವನವನ್ನು ನೀಡಲು ಸಿದ್ಧನಿದ್ದೇನೆ. ಸತ್ಯಕ್ಕೆ ಏನಾದರೂ ಮಹತ್ವವಿದ್ದಲ್ಲಿ, ದೇಶದ ಜನ ಮುಂದೊಂದು ದಿನ ನನ್ನ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಎಂಬುದು ಸ್ವಾತಂತ್ರ್ಯ ಸಂಗ್ರಾಮದ ಜ್ವಾಲೆಗೆ ತನ್ನ ರಕ್ತ ತರ್ಪಣ ಮಾಡಿದ ಧೀರನೊಬ್ಬನ ನುಡಿಗಳು ಆ ಧೀರನೇ, ನೇತಾಜಿ ಸುಭಾಷ ಚಂದ್ರ ಬೋಸ್ ಎಂದು ಎಐಡಿಎಸ್ ಓ ಜಿಲ್ಲಾ ಕಾರ್ಯದರ್ಶಿ ತುಳಜರಾಮ ಎನ್ ಕೆ ಹೇಳಿದರು.
ಅವರು ಹೊನಗುಂಟ ಗ್ರಾಮದಲ್ಲಿ ಎಐಡಿಎಸ್‌ಓ ಸಮಿತಿ ಯಿಂದ ಹಮ್ಮಿಕೊಂಡಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ೧೨೫ ನೇ ಜನ್ಮವಾರ್ಷಿಕ ಕಾರ್ಯಕ್ರಮದಲ್ಲಿ ಭಾಷಣಕಾರರಾಗಿ ಮಾತನಾಡಿದರು. ಮುಂದುವರೆದು ಅವರು ಭದ್ರವಾಗಿದ್ದ ಬ್ರಿಟೀ? ಸರ್ವಾಧಿಕಾರವನ್ನೇ ಬುಡಮೇಲು ಮಾಡಬಲ್ಲನೀತ ಎಂದು ಆತನ ತಂದೆ-ತಾಯಿಯೂ ಗ್ರಹಿಸಿದ್ದಿರಲಿಲ್ಲವೇನೋ! ಅಂಧಕಾರದಲ್ಲಿ ಹಾಗೂ ಬೆಳಕಿನಲ್ಲಿ, ನೋವಿನಲ್ಲಿ, ಸಂತೋ?ದಲ್ಲಿ, ಯಾತನೆಯಲ್ಲಿ ಹಾಗು ಯಶಸ್ಸಿನಲ್ಲಿ ನಾನು ನಿಮ್ಮೊಂದಿಗೆ ಇರುವೆನು ಎಂಬ ಭರವಸೆಯನ್ನು ನೀಡುತ್ತೇನೆ.
ಆದರೆ ಈಗ, ಕೇವಲ ಬಡತನ, ಹಸಿವು, ಬಾಯಾರಿಕೆ, ಸಾವನ್ನು ಬಿಟ್ಟು ನಿಮಗೆ ಬೇರೇನನ್ನೂ ನೀಡದಾಗಿದ್ದೇನೆ ಎಂಬ ನೇತಾಜಿಯವರ ಮಾತುಗಳು ಜಡನಿದ್ರೆಯಲ್ಲಿದ್ದ ಭಾರತೀಯರನ್ನು ಬಡಿದೆಬ್ಬಿಸಿತ್ತು. ಆದರೆ ಇವತ್ತಿನ ಆಳುವ ಎಲ್ಲಾ ಸರಕಾರಗಳು ನೇತಾಜಿ ಅವರ ನೈಜ ಇತಿಹಾಸವನ್ನ ಪಠ್ಯ ಪುಸ್ತಕಗಳಿಂದ ದೂರವಿಡುತ್ತಿದ್ದಾರೆ. ವಿದ್ಯಾರ್ಥಿ- ಯುವಜನರನ್ನ ಸರಿಯಾದ ಶಿಕ್ಷಣ, ಉದ್ಯೋಗ ಸಿಗದೆ ಬಿದಿ ಬಿದಿ ಅಲೆಯುತ್ತಿದ್ದಾರೆ.
ದೇಶದಲ್ಲಿಂದು ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಹಳ್ಳಿಗಳಲ್ಲಿ ಕೆಲಸವಿಲ್ಲದೆ ಜನರು ಊರು ಬಿಟ್ಟು ಗೂಳೆ ಹೋಗುತ್ತಿದ್ದಾರೆ. ಮಹಿಳೆಯರ ಮೇಲೆ ಅತ್ಯಾಚಾರ ದೌರ್ಜನ್ಯಗಳು ದಿನೆ ದಿನೆ ಹೆಚ್ಚಾಗುತ್ತಿವೆ. ಈ ಎಲ್ಲಾ ಸಮಸ್ಯಗಳಿಗೆ ಮೂಲ ಕಾರಣ ಈ ಬಂಡವಾಳಶಾಹಿ ವ್ಯವಸ್ಥೆ. ಆದ್ದರಿಂದ ನೇತಾಜಿ ರವರ ಉತ್ತರಾಧಿಕಾರಿಗಳಾದ ನಾವುಗಳು ಅವರ ವಿಚಾರಗಳನ್ನ ಮೈಗೂಡಿಸಿಕೊಂಡು ಈ ದೇಶದಲ್ಲಿ ಬಡತನ, ನಿರುದ್ಯೋಗ, ಹಸಿವುಗಳಂತಹ ಸಮಸ್ಯೆಗಳಿಲ್ಲದ, ಮಾನವನಿಂದ ಮಾನವ ಶೋಷಣೆ ಮುಕ್ತ ಸಮಜವಾದಿ ಭಾರತವನ್ನ ಕಟ್ಟಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಎಐಡಿಎಸ್‌ಓ ಶಹಾಬಾದ ಅಧ್ಯಕ್ಷರಾದ ಕಿರಣ ಜಿ ಮಾನೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಯುವಕರಾದ ಶರಣು, ಚಂದ್ರು ಮರಗೊಳ, ಎಐಡಿವೈಓ ಅಧ್ಯಕ್ಷರಾದ ಶ್ರೀಶೈಲ್, ಉಪಾಧ್ಯಕ್ಷರಾದ ಶಂಕರ, ಕಾರ್ಯದರ್ಶಿಗಳಾದ, ಮೌನೇಶ್, ಎಐಡಿಎಸ್‌ಓ ಕಾರ್ಯದರ್ಶಿಗಳಾದ ಮನುಗಿರಿ ಸದಸ್ಯರಾದ ಕೃಷ್ಣ, ರಾಕೇಶ್, ಮೌನೇಶ್, ಸೇರಿ ಹಲವಾರು ವಿದ್ಯಾರ್ಥಿಗಳು ಯುವಕರು ಭಾಗವಹಿಸಿದ್ದರು ಎಐಡಿಎಸ್‌ಓ ಹೊನಗುಂಟ ಅಧ್ಯಕ್ಷರಾದ ದೇವರಾಜ ರವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…