ಸುರಪುರ: ನಗರದ ತಹಸೀಲ್ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದಿಂದ ೭೩ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದ ಪೂರ್ವದಲ್ಲಿ ಮಹಾತ್ಮ ಗಾಂಧಿ ಹಾಗು ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ನಂತರ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಧ್ವಜಾರೋಹಣ ನೆರವೇರಿಸಿದರು.
ನಂತರ ನಡೆದ ಕೊರೊನಾ ವಾರಿಯರ್ಸ್‌ಗಳ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ್ದ ಶ್ರೀಪ್ರಭು ಮಹಾವಿದ್ಯಾಲಯದ ಉಪ ಪ್ರಾಚಾರ್ಯ ವೇಣುಗೋಪಾಲ ನಾಯಕ ಜೇವರ್ಗಿ ಮಾತನಾಡಿ,ಗಣರಾಜ್ಯೋತ್ಸವ ಎಂಬುದು ಈ ದೇಶದ ಜನರು ಆಚರಿಸುವ ಎರಡು ರಾಷ್ಟ್ರೀಯ ಹಬ್ಬಗಳಲ್ಲಿ ಪ್ರಮುಖವಾದುದಾಗಿದೆ.ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ರಾಜಶಾಹಿ ಆಡಳಿತ ವ್ಯವಸ್ಥೆಯನ್ನು ಕೊನೆಗಾಣಿಸಿ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೊಳಿಸಲು ಸಂವಿಧಾನವನ್ನು ಜಾರಿಗೊಳಿಸಿದ ದಿನವನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸುತ್ತೇವೆ ಎಂದರು.
ಹಿಂದೆ ಇಡೀ ದೇಶದಲ್ಲಿ ರಾಜರು ಆಳ್ವಿಕೆ ನಡೆಸಿದರೆ ಜನೆವರಿ ೨೬ ೧೯೫೦ರ ನಂತರ ದೇಶವನ್ನು ಸಂವಿಧಾನ ಆಳುತ್ತದೆ.ಜಗತ್ತಿನ ಎಲ್ಲಾ ರಾಷ್ಟ್ರಗಳ ಸಂವಿಧಾನಕ್ಕಿಂತಲು ಭಾರತದ ಸಂವಿಧಾನ ಭಿನ್ನವಾಗಿದೆ.ಜಗತ್ತಿನಲ್ಲಿ ತಿದ್ದುಪಡಿ ಅತ್ಯಂತ ಕಠಿಣವಾಗಿರುವ ಸಂವಿಧಾನ ಅಮೇರಿಕದ್ದಾರೆ,ಸಂವಿಧಾನ ತಿದ್ದುಪಡಿ ಅತ್ಯಂತ ಸರಳವಾಗಿರುವುದು ಬ್ರಿಟನ್ ಸಂವಿಧಾನ,ಇವೆರಡನ್ನು ಒಳಗೊಂಡಿರುವ ಸಂವಿಧಾನ ಭಾರತದ್ದಾಗಿದೆ.ಅಂತಹ ಸಂವಿಧಾನದ ಕರಡು ರಚಿಸಿಕೊಟ್ಟ ಡಾ:ಬಿ.ಆರ್.ಅಂಬೇಡ್ಕರ್ ಅವರನ್ನು ನಾವೆಲ್ಲರು ಸದಾ ಸ್ಮರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ಉಪ ಖಜಾನೆ ಅಧಿಕಾರಿ ಮೋನಪ್ಪ ಶಿರವಾಳ ಮಾತನಾಡಿ,ಭಾರತದಲ್ಲಿದ್ದ ಅರಸೊತ್ತಿಗೆಯನ್ನು ತೆಗೆದು ದೇಶದಲ್ಲಿ ಸಂವಿಧಾನ ಜಾರಿಗೊಳಿಸುವ ಜೊತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೊಳಿಸಿದ ದಿನವನ್ನು ಗಣರಾಜ್ಯೋತ್ಸವವನ್ನಾಗಿ ಆಚರಿಸುತ್ತೇವೆ,ನಮ್ಮ ಸಂವಿಧಾನ ತಿದ್ದುಪಡಿಯ ಹಾದಿ ತುಂಬಾ ಸರಳ ಮತ್ತು ತುಂಬಾ ಕಠಿಣ ವಾಗಿದೆ.ಅದರಂತೆ ಇದುವರೆಗೆ ಸಂವಿಧಾನದಲ್ಲಿ ೧೦೫ ತಿದ್ದುಪಡಿಗಳನ್ನು ಮಾಡಲಾಗಿದೆ ಎಂದರು.
ನಂತರ ಕೊರೊನಾ ಸಂದರ್ಭದಲ್ಲಿ ಅದ್ಭುತವಾಗಿ ಕೆಲಸ ಮಾಡಿದ ವಾರಿಯರ್ಸ್‌ಗಳಾದ ವೈದ್ಯಾಧಿಕಾರಿ ಓಂಪ್ರಕಾಶ ಅಂಬುರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬಸ್ಸಮ್ಮ ಎಮ್ ಬೊಮ್ಮನಹಳ್ಳಿ,ಸಮಾಜಸೇವೆಯಿಂದ ವೆಂಕಟೇಶ ನಾಯಕ ಬೈರಿಮಡ್ಡಿ,ಪೊಲೀಸ್ ಇಲಾಖೆಯಿಂದ ಶಬ್ಬಿರ ಅಲಿ,ರಾಚಪ್ಪ ಕಂದಾಯ ಇಲಾಖೆ,ಶಿವಲಿಂಗಮ್ಮ ಪೌರಕಾರ್ಮಿಕ, ಪತ್ರಕರ್ತರಾದ ಗಿರೀಶ ಶಾಬಾದಿ,ವೀರಣ್ಣ ಕಲಕೇರಿ ಕೆಂಭಾವಿ ಹಾಗು ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಖೃತ ಪತ್ರಕರ್ತ ಅಶೋಕ ಸಾಲವಾಡಗಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ವೇದಿಕೆ ಮೇಲೆ ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ಜೇವರ್ಗಿ,ಉಪಾಧ್ಯಕ್ಷ ಮಹೇಶ ಪಾಟೀಲ್,ನಯೋಪ್ರಾ ಅಧ್ಯಕ್ಷ ಪ್ರಕಾಶ ಸಜ್ಜನ್,ಎಪಿಎಮ್‌ಸಿ ಅಧ್ಯಕ್ಷ ದುರ್ಗಪ್ಪ ಗೋಗಿಕೇರಾ,ತಾ.ಪಂ ಇಒ ಅಮರೇಶ ಮೂಡಲದಿನ್ನಿ,ಪಿಎಸ್‌ಐ ಕೃಷ್ಣಾ ಸುಬೇದಾರ್,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸತ್ಯನಾರಾಯಣ ದರಬಾರಿ ಇದ್ದರು.ಶಿಕ್ಷಕ ಹಣಮಂತ್ರಾಯ ಪೂಜಾರಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…