ನನ್ನ ಗೆಳೆಯ ನಾಗೇಂದ್ರ ಮಾಳಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ವಿದ್ಯಾರ್ಥಿ. ಬಲು ಜಾಣ. ಮಾನವೀಯತೆಯ ಸಾಕಾರ ಮೂರ್ತಿ. ಮೊದಲು ಈತ ಹೋರಾಟಗಾರ ಎಸ್.ಆರ್.ಹಿರೇಮಠರ ‘ಎಸ್.ಪಿ.ಎಸ್.’ ಅಂದರೆ ಸಮಾಜ ಪರಿವರ್ತನ ಸಮುದಾಯನಲ್ಲಿ ಸ್ವಯಂ ಸೇವಕನಾಗಿ ಕೆಲಸ ಮಾಡಿದ. ಹತ್ತಾರು ವರ್ಷ ಸ್ವಯಂ ಸೇವಕನಾಗಿ ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ.
ಹೀಗೆಯೇ ತೊಡಗಿಕೊಂಡಿದ್ದವನು ಸ್ಬಲ್ಪು ಸಮಯದಲ್ಲಿ ‘ನೀಡ್ಸ್’ ಎಂಬ ಸ್ವಯಂ ಸೇವಾ ಕಂಪನಿ ತೆರೆದು ಕೆಲ ಕಾಲ ಕೆಲಸ ಮಾಡಿದ.
ನಂತರ ‘ನವ ಚೇತನ’ ಎಂಬ ಸಂಸ್ಥೆ ತೆರೆದು ಕೆಲಸ ಮಾಡಿದ.
ಇದನ್ನೆಲ್ಲ ಏಕೆ ಹೇಳುತ್ತಿದ್ದೇನೆ ಅಂದರೆ ಚಿಕ್ಕ ವಯಸ್ಸಿನಲ್ಲೇ ಈತನಿಗೆ ಸಮಾಜ ಸೇವೆಯ ಕಯಾಲಿ ಬೆಳೆದು ಬಂದಿತ್ತು. ಅದಕ್ಕಾಗಿ ಇದನೆಲ್ಲ ಹೇಳುತ್ತಿದ್ದೇನೆ. ಈತ ಮನಸ್ಸು ಮಾಡಿದ್ದರೆ ಭರ್ಜರಿ ಸಂಬಳದ ಕೆಲಸದಲ್ಲಿ ಇರುತ್ತಿದ್ದ. ಇದನ್ನೆಲ್ಲ ಬಿಟ್ಟು ಈ ಸಯಂ ಸಮಾಜ ಸೇವೆಯ ಕಯಾಲಿ ಬೆಳಸಿಕೊಂಡವನು ಇಂದು ‘ನವ ಚೇತನ’ ಎಂಬ ಸಂಸ್ಥೆ ತೆರೆದು ದೊಡ್ಡ ಮಟ್ಟದ ಹಣಕಾಸು ವಹಿವಾಟು ಅಂದರೆ ಅದೂ ದಿನದ ಕೆಲಸ ಮಾಡುವ ತರಕಾರಿ, ಸಣ್ಣ ಪ್ರಮಾಣದ ವ್ಯಾಪಾರ, ಇತ್ಯಾದಿ ಕೆಲಸ ಮಾಡುವ ಜನರಿಗೆ ನೆರವಾಗುತ್ತಿದ್ದಾನೆ ಈಗ.
ಹೀಗೆಯೇ ಬರು ಬರುತ್ತ ಎನ್.ಎಸ್.ಪಿ.ಎಲ್, ಎನ್.ಎಂ.ಬಿ.ಟಿ, ನವ ಚೇತನ ಎಂಟರ್ ಪ್ರೈಸಸ್, ಲಕ್ಷಿ ಮಲ್ಟಿಸ್ಟೇಟ್ ಹೀಗೆಯೇ ಕೆಲವು ಸಂಸ್ಥೆಗಳನ್ನು ತೆರೆದು ಸಾಮಾಜಿಕ ಅನುಕೂಲಕರ ಅಂದರೆ ಬಡ ಜನರ ಅನುಕೂಲಕರ ಹಣಕಾಸು ವಹಿವಾಟು ಅಂದರೆ ಸಾಲ ಅದೂ ಅತೀ ಚಿಕ್ಕ ಬಡ್ಡಿಯಲ್ಲಿ ಬಡ ಜನರೊಂದಿಗೆ ವಹಿವಾಟು ನಡೆಸುತ್ತಿದ್ದಾನೆ. ಅಲ್ಲದೇ ಇವನ ವ್ಯವಹಾರ ಪಾರದರ್ಶಕವಾಗಿ ನಡೆಸುತ್ತಿದ್ದಾನೆ. ಇವನ ವ್ಯವಹಾರಕ್ಕೆ ರಾಷ್ಟೀಕೃತ ಬ್ಯಾಂಕ್ನವರು ಇವನ ಕೆಲಸ ಮೆಚ್ಚಿ ಸಾಲಗಳನ್ನು ಸಕಾಲಕ್ಕೆ ಕೊಡುತ್ತಾರೆ. ಅದೇ ಹಣವನ್ನು ಈತ ಕಿರುಕುಳ ವ್ಯವಹಾರಕ್ಕೆ ಅಂದರೆ ಬಡವರ ಕೈಕೆಲಸಕ್ಕೆ ಸಹಾಯ ಮಾಡುತ್ತಾನೆ. ಮಾಡುತ್ತಿದ್ದಾನೆ. ಹೀಗೆಯೇ ಈತನ ಸ್ವಯಂ ಸೇವೆ ಮುಂದುವರೆದಿದೆ.
ಅಲ್ಲದೇ ಈತ ‘ಶಿಕ್ಷಣ’ಕ್ಕೂ ಮಹತ್ವ ಕೊಟ್ಟು ಶೈಕ್ಷಣಿಕ ಸಂಸ್ಥೆಗಳನ್ನೂ ತೆರೆದು ಶೈಕ್ಷಣಿಕ ಸಮಾಜ ಸೇವೆಯಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ಇದನ್ನೆಲ್ಲ ಏಕೆ ಹೇಳುತ್ತಿದ್ದೇನೆಂದರೆ ಮನಸ್ಸು ಮಾಡಿದರೆ, ಸಾಮಾಜಿಕ ಸ್ವಯಂ ಸೇವಾ ಗುಣವಿದ್ದರೆ ಎಂಥ ದೊಡ್ಡ ಸಮುದಾಯ ಮನುಷ್ಯನಾಗಬಹುದೆಂದು ಹೇಳಲು ಇದನ್ನೆಲ್ಲ ಹೇಳುತ್ತಿದ್ದೇನೆ. ಅತಿ ಚಿಕ್ಕ ವಯಸ್ಸಿನಲ್ಲಿ ಈತ ಸಾಧಿಸಿದ ಕಾರ್ಯ ಅತಿ ದೊಡ್ಡದು.
ಮುಖ್ಯವಾಗಿ ಈತ ಅಂಗವಿಕಲರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಅಂಗವಿಕಲರನ್ನೂ ತನ್ನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾನೆ.
ಈಗ ಈತನ ಎಲ್ಲ ಸಂಸ್ಥೆಗಳಲ್ಲಿ ಸಾವಿರಾರು ನಿರುದ್ಯೋಗಿಗಳು ಕೆಲಸ ಕಂಡಿದ್ದಾರೆ. ಹೀಗೆಯೇ ಮುಂದುವರೆದಿದೆ ಈತನ ಸಮಾಜ ಸೇವಾ ಕೈಂಕರ್ಯ..!
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…