ಕೊಪ್ಪಳ (ಕುಕನೂರ) : ತಾಲೂಕಿನ ವಿದ್ಯಾನಂದ ಗುರುಕುಲ ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳಿಗೆ ಬುಧವಾರ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.
73 ನೇ ಗಣರಾಜ್ಯೋತ್ಸವ ಅಂಗವಾಗಿ ಮತ್ತು ಮುಂದಿನ ಎಸ್ಎಸ್ಎಲ್ಸಿ ವಾರ್ಷಿಕ ಮುಖ್ಯ ಪರೀಕ್ಷೆಯ ಪೂರ್ವಭಾವಿ ತಯಾರಿಗಾಗಿ ಸಮಾಜವಿಜ್ಞಾನ, ಕನ್ನಡ ಮತ್ತು ವಿಜ್ಞಾನ, ಗಣಿತ ವಿಷಯಗಳ ಕುರಿತು ಶಿಕ್ಷಕರ ಮಾರ್ಗದರ್ಶನದ ಮೇರೆಗೆ ವಿವಿಧ ರೀತಿಯ ವೈವಿಧ್ಯಮಯವಾದ ಬಣ್ಣ ಬಣ್ಣದಿಂದ ಕೂಡಿದ ಅಲಂಕಾರ ಗೊಳಿಸಿದ ರಂಗೋಲಿ ಚಿತ್ರಗಳನ್ನು ವಿದ್ಯಾರ್ಥಿಗಳು ಬಿಡಿಸಿದರು.
ಇದೇ ವೇಳೆ ಶಾಲೆಯ ಉಪ ಪ್ರಾಚಾರ್ಯ ಎಸ್. ಎಲ್. ಲಮಾಣಿ ರಂಗೋಲಿ ಚಿತ್ರಗಳನ್ನು ವೀಕ್ಷಿಸಿ ಮಾತಾನಾಡಿದ ಅವರು, ವಿದ್ಯಾರ್ಥಿಗಳು ರಂಗೋಲಿ ಬಿಡಿಸುವುದರ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ ಎಂದು ಹೇಳಿದ್ದರು.
ವಿಶೇಷವಾಗಿ ಕನ್ನಡ ವಿಷಯದ ಕುರಿತು ಇದ್ದಲ್ಲಿಯಿಂದ ಬಿಡಿಸಿದ ರಂಗೋಲಿ ಬ್ರಹತ್ ಆಕಾರದಾಗಿತ್ತು. ಜೊತೆಗೆ ಎಲ್ಲಾ ವಿಷಯಗಳ ರಂಗೋಲಿ ನೋಡುಗರ ಕಣ್ಮನ ಸೆಳೆಯುವಂತೆ ಮಾಡಿತ್ತು. ಆಸಕ್ತಿಯಿಂದ ಸ್ಪರ್ಧೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಬಿಡಿಸಿದ ರಂಗೋಲಿ ಆಕರ್ಷಣೆಗೊಳಿಸಿತ್ತು. ಅಲ್ಲದೇ ಶಾಲೆಯ ಕೀರ್ತಿ ಹೆಚ್ಚಿಸಲು ಮಕ್ಕಳು ಪಾತ್ರರಾದರು ಎಂದರು.
ಶಿಕ್ಷಕರಾದ ರಾಜು ಪೂಜಾರ, ಶ್ರೀಲತಾ ಕೆ, ಗೀತಾ ಪದಕಿ, ಅರುಂದತಿ ಬಟನೂರ, ಆರ್. ಎಂ. ದೇವರೆಡ್ಡಿ, ಜ್ಯೋತಿ, ಪುಷ್ಪಾ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…