ಬಿಸಿ ಬಿಸಿ ಸುದ್ದಿ

ವೃತ್ತಿ ರಂಗಭೂಮಿ ಕೇಂದ್ರಕ್ಕೆ ವಿಶೇಷಾಧಿಕಾರಿಯಾಗಿ ಪಿ.ಗಂಗಾಧರಸ್ವಾಮಿ ನೇಮಕ

  • ಮಲ್ಲಿಕಾರ್ಜುನ ಕಡಕೋಳ

ದಾವಣಗೆರೆ: ಜಿಲ್ಲೆ ಕೊಂಡಜ್ಜಿ ಬೆಟ್ಟದ ಪರಿಸರದಲ್ಲಿ ನಿರ್ಮಾಣಗೊಳ್ಳಲಿರುವ ಉದ್ದೇಶಿತ ” ವೃತ್ತಿ ರಂಗಭೂಮಿ ಕೇಂದ್ರಕ್ಕೆ” ವಿಶೇಷಾಧಿಕಾರಿಯನ್ನಾಗಿ ಮೈಸೂರಿನ ಹಿರಿಯ ರಂಗ ನಿರ್ದೇಶಕ ಪಿ.ಗಂಗಾಧರಸ್ವಾಮಿ ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

ಮೈಸೂರು, ಧಾರವಾಡ ರಂಗಾಯಣಗಳ ಹುಟ್ಟು ಬೆಳವಣಿಗೆಯಲ್ಲಿ ಅಪಾರ ಶ್ರಮ ಮತ್ತು ಸೇವೆ ಸಲ್ಲಿಸಿದ ಗಂಗಾಧರಸ್ವಾಮಿ ಬಹುಶೃತ ರಂಗಕರ್ಮಿ. ಅನೇಕ ನಾಟಕ ಕಂಪನಿಗಳಿಗೆ ವೃತ್ತಿ ನಾಟಕಗಳ ನಿರ್ದೇಶನ ಮಾಡಿರುವ ಅವರು ಪ್ರಯೋಗಶೀಲತೆಯ ಆಧುನಿಕ ರಂಗಭೂಮಿ ಸೇರಿದಂತೆ, ಜನಪದ ರಂಗಭೂಮಿಯ  ದೊಡ್ಡಾಟದಲ್ಲೂ ಪರಿಣತಿ ಹೊಂದಿದವರು. ಸಮುದಾಯ ರಂಗ ಸಂಘಟನೆಯ ಸ್ಥಾಪಕರಲ್ಲೊಬ್ಬರಾದ ಗಂಗಾಧರಸ್ವಾಮಿ  ಎಡ ಮತ್ತು ಪ್ರಜಾಸತ್ತಾತ್ಮಕ ವಿಚಾರಧಾರೆ ಯುಳ್ಳವರು. ನಟ, ನಿರ್ದೇಶಕ, ನೇಪಥ್ಯ ರಂಗ ಶಿಕ್ಷಕರಾಗಿ ಮೈಸೂರು ರಂಗಾಯಣದಲ್ಲಿ  ಬಿ.ವಿ.ಕಾರಂತರೊಂದಿಗೆ ಕೆಲಸ ಮಾಡಿದ ಅನನ್ಯತೆ ಅವರದ್ದಾಗಿದೆ.

ಕೊಂಡಜ್ಜಿಯಲ್ಲಿ ಈ ಹಿಂದೆ ಸಮುದಾಯದ ಅನೇಕ ಶಿಬಿರಗಳನ್ನು ನಡೆಸಿ ಕೊಟ್ಟಿರುವ ಅವರು ” ರಂಗ ಶಿಬಿರಗಳ ಚಕ್ರವರ್ತಿ” ಎಂತಲೇ ಹೆಸರಾದವರು. ಕೊಂಡಜ್ಜಿಯ ನೂತನ ವೃತ್ತಿ ರಂಗಭೂಮಿ ಕೇಂದ್ರವನ್ನು,  ಪರಂಪರೆ ಮತ್ತು ಪ್ರಯೋಗಶೀಲ ರಂಗ ಚಿಂತನೆಯ ಕೊಂಡಿಯಂತಿರುವ ಅವರು ತಮ್ಮ ದಶಕಗಳ ಅನುಭವ ಹೊಂದಿದ್ದಾರೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

10 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago