ಬಿಸಿ ಬಿಸಿ ಸುದ್ದಿ

ಕಠಿಣ ಪರಿಶ್ರಮವೇ ಉಜ್ವಲ ಭವಿಷ್ಯದ ಬುನಾದಿ :ಪ್ರೊ.ರಾಜಾಸಾಹಬ

ಕಲಬುರ್ಗಿ: ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮ ಪಟ್ಟು, ಶ್ರದ್ದೆಯಿಂದ ವ್ಯಾಸಂಗ ಮಾಡಿದರೆ ಉಜ್ವಲ ಭವಿಷ್ಯ ಹೊಂದಬಹುದು ಎಂದು ಖಾಜಾ ಬಂದೆನವಾಜ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ರಾಜಾಸಾಹಬ ಹೇಳಿದರು.

ಕೆಬಿನ್ ವಿಶ್ವವಿದ್ಯಾಲಯದ ಕಲಾ ಮತ್ತು ಸಮಾಜ ವಿಜ್ಞಾನಗಳ ವಿಭಾಗದಲ್ಲಿ ಶನಿವಾರ ಏರ್ಪಡಿಸಿದ್ದ ಪರಿಚಯಾತ್ಮಕ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ಕಲಿಯಲು ಇಚ್ಚಿಸುವ ಎಷ್ಟೋ ವಿದ್ಯಾರ್ಥಿಗಳಿಗೆ ಅವಕಾಶಗಳು ಸಿಗುವುದಿಲ್ಲ. ನಿಮಗೆ ಪ್ರತಿಷ್ಠಿತ ಸಂಸ್ಥೆಯಲ್ಲಿ ಕಲಿಯಲು ಸುವರ್ಣವಕಾಶ ದೊರೆತಿದೆ. ಅದರ ಸದುಪಯೋಗ ಪಡೆದುಕೊಳ್ಳಿ ಎಂದರು. ಕೆಬಿನ್ ವಿವಿಯಲ್ಲಿ ಅತ್ಯುನ್ನತ ಅನುಭವಿ ಶಿಕ್ಷಕರಿದ್ದು ಒಳ್ಳೆಯ ಬೋಧನೆ ನೀಡುತ್ತರಲ್ಲದೆ ವೃತ್ತಿ ಜೀವನಕ್ಕೆ ಅವಶ್ಯಕತೆ ಇರುವ ಕೌಶಲ್ಯಗಳ ಬಗ್ಗೆನೂ ತಿಳಿ ಹೇಳು ತ್ತಾರೆ. ಸದ್ಯ 9 ಸ್ನಾತಕೋತ್ತರ ವಿಭಾಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕೆಬಿನ್ ವಿವಿ ಮುಂದಿನ ದಿನಗಳಲ್ಲಿ ಇನ್ನೂ ಅನೇಕ ವಿಭಾಗಳನ್ನು ಪರಿಚಯಿಸಲಿದೆ ಎಂದರು.

ಭಾಷಾ, ಕಲಾ, ಮಾನವೀಯ, ಸಾಮಾಜಿಕ ವಿಜ್ಞಾನ ಮತ್ತು ವಿಜ್ಞಾನ ನಿಕಾಯದ ಡೀನ್, ಡಾ. ನಿಶಾತ್ ಅರೀಫ್ ಹುಸೇನಿ ಇವರು ಖಾಜಾ ಶಿಕ್ಷಣ ಸಂಸ್ಥೆ ಸಾಗಿ ಬಂದ ಹಾದಿಯ ಬಗ್ಗೆ ಮಾತನಾಡಿದರು. ಮಹಿಳಾ ಶಿಕ್ಷಣದಲ್ಲಿ ಖಾಜಾ ಶಿಕ್ಷಣ ಸಂಸ್ಥೆಯ ಕೊಡುಗೆ ಅವಿಸ್ಮರಣೀಯ ಎಂದರು. ಗುಲ್ಬರ್ಗದಲ್ಲಿ ಮಹಿಳಾ ಶಿಕ್ಷಣ ಪರಿಚಯಿಸಿ, ಮಹಿಳಾ ಸಬಲಿಕರಣದಲ್ಲಿ ಕೆಈಎಸ್ ಮುಂಚೂಣಿಯಲ್ಲಿದೆ. ಈ ಭಾಗದ ಜನರಲ್ಲಿ ಶಿಕ್ಷಣ ನೀಡುವುದರಲ್ಲಿ ಕಳೆದ 62 ವರ್ಷಗಳಿಂದ ತನ್ನದೇ ಆದ ಛಾಪು ಮೂಡಿಸಿದೆ.

2019 ರಲ್ಲಿ ಆರಂಭಗೊಂಡ ಕೆಬಿನ್ ವಿವಿ ಕೂಡ ಸ್ನಾತಕೋತ್ತರ ವಿಭಾಗಗಳನ್ನು ಆರಂಭಿಸಿ ಜ್ಞಾನ ದಾನದಲ್ಲಿ ತೊಡಗಿದೆ. ಸಂಶೋಧನೆ ಯಲ್ಲಿ ಆಸಕ್ತರು ಇಲ್ಲಿ ಪಿಎಚ್ ಡಿ ಮಾಡಬಹುದು. ಒಳ್ಳೆಯ, ಸೌಲಭ್ಯಗಳು, ಅತ್ಯಾಧುನಿಕ ಗ್ರಂಥಾಲಯ, ಆಧುನಿಕ ಉಪಕರಣಗಳೆಲ್ಲ ವಿವಿಯ ವರ್ಚಸ್ಸು ಹೆಚ್ಚಿಸುತ್ತವೆ ಎಂದರು.

ಪ್ರಾರಂಭದಲ್ಲಿ ಗಣಿತ ವಿಭಾಗದ ವಿದ್ಯಾರ್ಥಿನಿ ಫೋಜಿಯಾ ಘಜಲಾ ಪ್ರಾರ್ಥಿಸಿದರೆ, ಸಮೂಹ ಸಂವಹನ ಮತ್ತು ಮಾಧ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ನಮ್ರತಾ ರಾವುತ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ ಆತೀಯಾ ಸುಲ್ತಾನ್ ಕೆಬಿನ್ ವಿವಿಯ ವಿಶನ್ ಮತ್ತು ಮಿಷನ್ ಕುರಿತು ಹೇಳಿದರು. ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾದ್ಯಾಪಕ ಡಾ. ಇಕ್ಬಾಲ್ ವಿವಿಯ ಶೈಕ್ಷಣಿಕ ವಿಷಯಗಳ ವಿವರಣೆಯನ್ನು ಹೇಳಿದರು.

ಸಮೂಹ ಸಂವಹನ ಮತ್ತು ಮಾಧ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಜಾವೇದ್ ಅಕ್ತರ್ ಇವರು ಶಿಕ್ಷಕ ಸಿಬ್ಬಂದಿಯವರ ಪರಿಚಯ ಮಾಡಿದರೆ, ಡಾ ನಮ್ರತಾ ರಾವುತ್ ಶಿಕ್ಷಕೇತರ ಸಿಬ್ಬಂದಿಯ ಪರಿಚಯ ಮಾಡಿದರು. ಗಣಿತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸನಾ ಇಜಾಜ್ ವಂದಿಸಿದರು.

ಈ ಕಾರ್ಯಕ್ರಮದಲ್ಲಿ ವಿವಿಯ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ, ಹಾಗೂ ಎಲ್ಲ ವಿಭಾಗದ ಮೊದಲ ಸೆಮಿಸ್ಟರನ ವಿದ್ಯಾರ್ಥಿಗಳು ಹಾಜರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

13 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

23 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

23 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

23 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago