ಬಿಸಿ ಬಿಸಿ ಸುದ್ದಿ

ಗುರುಪಾದವ್ವ ಎಂಬ ‘ದೇವದಾಸಿ ಮತ್ತು ಬೆತ್ತಲೆ ಸೇವೆ’

  • ಕೆ.ಶಿವು.ಲಕ್ಕಣ್ಣವರ

ಹೀಗೊಬ್ಬ ಗುರುಪಾದವ್ವ ಎಂಬುವವಳು ನೂರೆಂಟು ದೇವರ ಪೂಜೆ ಮಾಡುವ ಬಲು ನಾಜೂಕಾದ ದೇವರನ್ನು ಹೊತ್ತ ಹೆಣ್ಣಮಗಳಂತೆ. ಅದಕ್ಕಾಗಿ ಅವಳಿಗೆ ಬಲು ಬಹು ದೇವರ ಪೂಜೆ ಮಾಡುವ ಜನರು ಅವಳಿಗೆ ಬಹಳ ಮರ್ಯಾದೆ ಮತ್ತು ಮಾನ ಹಾಗೂ ಅತೀಗೌರವ ಕೊಡುತ್ತಾರೆ ಊರು — ಕೇರಿಯ ಜನರು. ಹಸಿದವರ ಹೊಟ್ಟೆಗೆ ತುಸು ಅನ್ನ ಕೊಡದವರೂ, ಆ ಗುರುಪಾದವ್ವನಿಗೆ ಬಹಳ ಗೌರವ ಕೊಡುತ್ತಾರೆ.

ಅವಳ ನೂರೆಂಟು ದೇವರ ಹರಕೆ ಮತ್ತು ನಾಮಸ್ಮರಣೆಗೆ ಮರಳಾದವರು, ಆ ಗುರುಪಾದವ್ವಳಿಗೆ ಬಹಳ ಅಂದರೆ ಅತಿಯಾದ ಗೌರವ ಕೊಡುತ್ತಾರೆ. ಅವಳು ಅದೇನೋ ದೇವರನ್ನು ಹೊತ್ತಿದ್ದಾಳಂತೆ. ಆ ಕಾರಣಕ್ಕೆ ಗುರುಪಾದವ್ವನಿಗೆ ಬಹಳ ಅಂದರೆ ಎಲ್ಲಿಲ್ಲದ ಪ್ರಾಮುಖ್ಯತೆ ಕೊಟ್ಟು ಅವಳೇ ದೇವರೆಂಬತೆ ಕುಣಿದಾಡುತ್ತಾರೆ ನಾಜೂಕಾದ ಜನರು. ಆ ಗುರುಪಾದವ್ವ ನೂರೆಂಟು ದೇವರುಗಳ, ಸಾವಿರಾರು ನಾಮಸ್ಮರಣೆಗೆ ಮತ್ತು ಅವಳ ನಯ, ನಾಜೂಕಿನ ಮಾತುಗಳಿಗೆ ಮರಳಾದ ಜನರು ಅವಳನ್ನು ಹೊತ್ತು ತಿರುಗುವಂತೆ ಅವಳಿಗೆ ಅತೀಗೌರವ ಕೊಡುವುದಕ್ಕೆ ನನಗೇನೂ ಬೇಜಾರಿಲ್ಲ.

ಆದರೆ ಅವಳ ಮುಂಜಾನೆಯ ತಾಸುಗಟ್ಟಲೇ ಊರಿನ ಜನಕ್ಕೆ ಕೇಳುವಂತೆ ಉದೋ… ಉದೋ… ಎಂದು ಸಾವಿರೆಂಟು ದೇವರುಗಳ ಗುಣಗಾನ, ಅದೂ ಕಿವಿಗಡುಚ್ಚಿಕುವಂತೆ ದೇವರನ್ನು ಸ್ಮರಣೆ ಇದೆಯೆಲ್ಲ, ಅದಕ್ಕೇ ನನಗೆ ಬೇಜಾರು. ಇರಲಿ ಅವಳ ಪಾಡಿಗೆ, ಅವಳೇನೋ ಮಾಡಿಕೊಳ್ಳಲಿ ಎಂದು ನಾನೂ ಸುಮ್ಮನೇ ಇದ್ದೆ. ಆದರೆ ಗುರುಪಾದವ್ವಳು ನನ್ನ ಹೆಂಡತಿ ಲೀಲಾವತಿಯನ್ನೂ ಮರಳು ಮಾಡಿ, ಅವಳ ತಲೆಗೆಡಿಸಿ ಅವಳನ್ನೂ ತನ್ನಂತೆ ಮಾಡಲು ಪ್ರಯತ್ನಿಸಿದಳು.

ಇರಲಿ ದೇವರ ಹೆಸರಿನಲ್ಲಿ ಏನಾದರೂ ಮಾಡಿಕೊಳ್ಳಲಿ ಎಂದು ನಾನೂ ಸುಮ್ಮನೇ ಇದ್ದೆ. ಆದರೆ ‘ಬಾರತಹುಣ್ಣಿಮೆ’ಗೆ ನನ್ನ ಹೆಂಡತಿಗೆ ‘ ‘ಬೇನಉಟುಗಿ’ ಅಂದರೆ ಬೇನಿನ ತಪ್ಪಲಿಂದ ಮೈಮುಚ್ವಿಕೊಳ್ಳಬೇಕಂತೆ, ಹಾಗೆಯೇ ಬೇನಿನ ಉಟಿಗಿಯುಟ್ಟು ದೇವರ ನಾಮಸ್ಮರಣೆಗೆ ಹೋಗಬೇಕಂತೆ. ಹೀಗೆಂದು ಹೇಳಲು‌ ಶುರುಹಚ್ಚಿದಳು‌ ಗುರುಪಾದವ್ವ.

ನನ್ನ ಇನ್ನೊಬ್ಬ ಅಕ್ಕ ಹಾಲವ್ವ ಅಂತ ಇದ್ದಾಳೆ, ಆದರೆ ಅವಳು ಈ ಗುರುಪಾದವ್ವಳಂತೆ ಕಿವಿಗಡಚ್ಚುಕ್ಕುವಂತೆ ಮತ್ತು ಊರಿಗೇ ಕೇಳುವಂತೆ ದೇವರ ಗುಣಗಾನ ಮಾಡುವವಳಲ್ಲ. ಆ ಹಾಲಕ್ಕ ಮಾತ್ರ ಮನಸ್ಸಿನಲ್ಲೇ ದೇವರನ್ನು ನೆನಯುವವಳು ಮತ್ತು ಪೂಜೆ ಮಾಡುವವಳು. ಅಲ್ಲದೇ ಇವಳಂತೆ ಸಾವಿರಾರು ದೇವರನ್ನು ನೆನವುವಳು ಅಲ್ಲ. ‘ಒಬ್ಬನೇ ದೇವ ನಾಮ ಹಲವು’ ಎಂದು ದೇವರ ಗುಣಗಾನ ಮಾಡುವವಳು. ಇರಲಿ ಈಗ ವಿಷಯಕ್ಕೆ ಬರುತ್ತೇನೆ.

ಈ ಗುರುಪಾದವ್ವಳು ಹತ್ತಾರು ವರ್ಷಗಳಿಂದ ನನ್ನೂರಿಗೆ ಬಂದಿರಲಿಲ್ಲ. ಅದಕ್ಕೆ ಬೇರೆಯೇ ಕಾರಣವಿದೆ. ಅದೇನೇ ಇರಲಿ. ಆದರೆ ಗುರುಪಾದವ್ವಳು ನನ್ನದೊಂದು ಸಮಸ್ಯೆ ಬಗೆಹರಿಸಲು ಬಂದಿದ್ದಳು. ಆ ಸಮಸ್ಯೆ ಏನೆಂಬುದು ಬೇರೇ ವಿಷಯ.

ಇರಲಿ. ಈಗ ನಿಜವಾದ ವಿಷಯಕ್ಕೆ ಬರುತ್ತೇನೆ. ಆ ದೇವರ ಮಹಾಪುರುಸಳಾದ ಗುರುಪಾದವ್ವನಿಗೆ ನಾನು ಆಕೆ ನನ್ನ ಮನೆಗೆ ಬರುವ ಮೊದಲೇ ಒಂದು ಮಾತು ಹೇಳಿದ್ದನ್ನು. ನೀನು ನೂರೆಂಟು ದೇವರುಗಳನ್ನು ಪೂಜೆ ಮಾಡಿಕೋ, ಅದು ನಿನ್ನ ವಯಕ್ತಿಕ ವಿಷಯ, ನಿನ್ನೂರಲ್ಲಿ ಮಾಡುತ್ತಿರುವಂತೆ ಸಾವಿರಾರು ದೇವರ ನಾಮಸ್ಮರಣೆಗೂ ನನ್ನ ಅಡ್ಡಿ ಆತಂಕವಿಲ್ಲ. ಆ ನಾಮಸ್ಮರಣೆ ಮನೆಯವರೆಲ್ಲರಿಗೂ ಆತಂಕ ಉಂಟಾಗುವಂತೆ ಆಗಬಾರದು ಎಂದು.

ಆದರೆ ಆ ಗುರುಪಾದವ್ವ ಸಾವಿರಾರು ದೇವರುಗಳನ್ನು ನೆನಯುವ ವಿಷಯಕ್ಕೆ ಸಂಬಂಧಿಸಿದಂತೆ ಮನೆಯವರೆಲ್ಲರ ನಿದ್ದೆಗೆಡಸಲಾರಾಂಬಿಸಿದಳು. ನನ್ನ ಹೆಂಡತಿ ಲೀಲಾವತಿಯ ತಲೆ ಕೆಡಸಿ ಈ ವರ್ಷದ ‘ಭಾರತಹುಣ್ಣಿಮೆ’ಗೆ ‘ಬೇನಿನಯುಟಗಿ’ (ಅಂದರೆ ಪೂರ್ಣ ಬೆತ್ತಲಾಗಿ ಬರೀ ಬೇವಿನ ಸೊಪ್ಪನ್ನು ಮೈತುಂಬ ಉಟ್ಟು ದೇವರ ಪೂಜೆ ಮಾಡುವುದು,) ನನಗೆ ಎಲ್ಲಿಲ್ಲಿದ ಸಿಟ್ಟು ಬಂದಿತು. ಅದೂ ನಾನು ಬುದ್ಧ, ಬಸವಣ್ಣ, ಅಂಬೇಡ್ಕರರ ಆರಾದಕನಾರುವವನ ನನ್ನ ತಲೆ ಕೆಟ್ಟಿತು.

ಹಾಗಾಗಿ ಬಹಳ ನನಗೂ ಮತ್ತು ಗುರುಪಾದವ್ವಳಿಗೂ ತಾಕಲಾಟವಾಯಿತು. ಅದು ನನಗೆ ಸರಿಬರಲಿಲ್ಲ, ಅದಕ್ಕಾಗಿಯೇ ನಾನು ಗುರುಪಾದವ್ವಳಿಗೆ ಹೇಳಿದೆ, ಅಯ್ಯೋ ಮಾರಾಯ್ತಿ ನಿನ್ನ ಊರಲ್ಲಿ ಬೇಕಾದನ್ನೂ ಮಾಡಿಕೋ. ಆದರೆ ನನ್ನ ಊರಲ್ಲಿ, ಅದೂ ನನ್ನ ಮನೆಯಲ್ಲಿ ಈ ತರಹ ಡಾಂಬಿಕ ಆಚರಣೆ ಆಗಕೂಡದೆಂದು.

ಅದಕ್ಕಾಗಿಯೇ ಅವಳು ಬಹಳ ಕತೆಕಟ್ಟಿದಳು. ಅವಳನ್ನು ನಾ ಮನೆಯಿಂದ ಓಡಿಸುತ್ತಿನೆಂದೂ, ಅಲ್ಲದೇ ಕಪೋಲಕಲ್ಪಿತ ವಿಚಾರವಾಗಿ ಜನರನ್ನು ಹೀಯಾಳಿಸುತ್ತೇನೆಂದೂ ‌‌ನನ್ನ ಓಣಿಯ ಜನರು ಮತ್ತು ಊರಿನ ಜನರು ನನ್ನನ್ನೇ ಬೈಯುವಂತೆ ಮತ್ತು ನನಗೇ ಹಿಡಿಶಾಪ ಹಾಕಿ, ನನ್ನ ಜೊತೆಗೇ ಜಗಳಕ್ಕೆ ಬಂದರು. ಅಲ್ಲದೇ ನನ್ನ ಓಣಿಯ ಜನರಿಗೆಲ್ಲ ನಾನು ಕೆಟ್ಟವನಂತೆ ಕಂಡಿತು.

ಆ :ಬಸವಣ್ಣನನ್ನು ಅಟ್ಟಿಸಿಕೊಂಡು ಹೋಗಿ ಹೊಡೆ’ಯುವಂತೆ ಮಾಡಿದಳು ಮಾರಾಯ್ತಿ ಗುರುಪಾದವ್ವ. ಇದೂ ಅಲ್ಲದೇ ‘ ‘ಓಣಿಯ ಆ ಕಲ್ಪನವ್ವಳೆಂಬುವವಳು ಮತ್ತು ನಾಗ್ಯಾ ಎಂಬುವವನು ನನ್ನ ಜೊತೆಗೆ ಜಗಳಕ್ಕೆ ಬಿದ್ದರು. ನನ್ನನ್ನು ಹೊಡೆಯಲು ಬಂದರು. ಇವರಿಗೆ ಸರಿಯಾದ ಪಾಠ ಕಲಿಸಬೇಕೆಂದು‌ ನಾನೂ ನನ್ನ ಪರಿಚಯಸ್ತ ಹಾಗೂ ಸಲುಗೆಯಿಂದಿರುವ ಪೊಲೀಸ್ ಅಧಿಕಾರಿಗಳಿಗೆ ಹೇಳಿ‌ ಇಟ್ಟಿದ್ದೇನು. ಆ ‌ಪೊಲೀಸ್ ಅಧಿಕಾರಿಗಳೂ‌ ಶಿವು ನಿಮ್ಮ ವಿಷಯಕ್ಕೆ ಬಂದರೆ ಒಂದು ಫೋನ್ ಮಾಡಿರಿ. ನಾವು ಅವರನ್ನು ಸರಿಯಾಗಿ ಬೆಂಡೆತ್ತುತ್ತೇವೆ ಎಂದರು.

ಇರಲಿ ಎಂದು ನಾನು ಸುಮ್ಮನೇ ಆದೆ. ಇದಕ್ಕೆ ಏನೆನ್ನುತ್ತೀರೀ..! ‘ಬೀದಿಯಲ್ಲಿ ಹೋಗುವ ದೆವ್ವವನ್ನು ಮನೆಹೊಕ್ಕು ಹೋಗು’ ಎನ್ನುವಂತೆ ಆಯಿತು ನನ್ನ ಪಾಡು.‌‌ ಇರಲಿ ನಿಕ ಈಗ ವಿಷಯಕ್ಕೆ ಬರುತ್ತೇನೆ.

ಆಗ ಈ‌‌ ಕೆಳಗಿನಿ ವಿಷಯ ನೆನಪಿಗೆ ಬಂದಿತು.ಉತ್ತಮ ಕಾಂಬಳೆ ಮರಾಠಿಯಲ್ಲಿ ಬರೆದ ’ದೇವದಾಸಿ ಮತ್ತು ಬೆತ್ತಲೆ ಸೇವೆ’ ಎಲ್ಲರೂ ಓದಬೇಕಾದ ಕೃತಿಯಾಗಿದೆ. ದೇವದಾಸಿ ಪದ್ದತಿ ಅಥವಾ ಬೆತ್ತಲೆ ಸೇವೆಯಂತಹ ಅನಿಷ್ಟ ಆಚರಣೆಗಳು  ಕೇವಲ ಮಹಾರಾಷ್ಟ್ರಕ್ಕೆ ಸೀಮಿತವಾಗಿಲ್ಲ. ದೇಶದ ಉದ್ದಗಲಕ್ಕೂ ಹರಡಿಕೊಂಡಿವೆ. ಹೆಸರು ಅಥವಾ ಸ್ವರೂಪ ಬೇರೆಯದಾದರೂ ಅಮಾನೀಯ ಆಚರಣೆಗಳು ಅವು.

2013 ಫೆಬ್ರುವರಿ 26 ರಂದು ಬಂದ ವರದಿಯೊಂದನ್ನು ಗಮನಿಸಿ –“ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದಲ್ಲಿ “ಭಾರತ ಹುಣ್ಣಿಮೆ’ (ಮುತ್ತೈದೆ ಹುಣ್ಣಿಮೆ)ಯಂದು ಮಾಜಿ ದೇವದಾಸಿಯರು ತಮ್ಮ ಅನಿಷ್ಟ ಪದ್ಧತಿ ನವೀಕರಣಗೊಳಿಸಿಕೊಂಡರು. ‘ಮುತ್ತೈದೆ ಹುಣ್ಣಿಮೆ ಎಂದೇ ಕರೆಯಲಾಗುವ ಈ ದಿನ ಉಚ್ಚಂಗಿದುರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ.

ರಾಜ್ಯದ ವಿವಿಧೆಡೆಯ ಸಾವಿರಾರು ಮಾಜಿ ದೇವದಾಸಿಯರು ಆಗಮಿಸುತ್ತಾರೆ. ಕೈಯಲ್ಲಿನ ಹಸಿರು ಬಳೆ, ಕೊರಳಲ್ಲಿನ ಬಿಳಿ ಮತ್ತು ಕೆಂಪು ಮುತ್ತಿನ ಸರ, ಪಡ್ಡಗೆ (ದೇವರ ಸಾಮಾನುಳ್ಳ ಸಣ್ಣ ಪುಟ್ಟಿ)ಯನ್ನು ಮತ್ತೆ ಹೊಸದಾಗಿ ಧರಿಸುವ ಮೂಲಕ ದೇವದಾಸಿ ಪದ್ಧತಿ ನವೀಕರಣಗೊಳಿಸಿಕೊಳ್ಳುವ ಧಾರ್ಮಿಕ ಆಚರಣೆ ಕೈಗೊಳ್ಳುತ್ತಾರೆ.

“ಮನೆಯಲ್ಲಿ ಬಡತನ, ಹೇಗೋ 7, 8ನೇ ತರಗತಿ ತನಕ ಓದಿದೆವು. ಅಷ್ಠಾರಲ್ಲಾಗಲೇ ತಲೆಯಲ್ಲಿ ‘ಜಡೆ’ ಕಾಣಿಸಿಕೊಂಡಿತು. ಹಾಗಾಗಿ, ಗ್ರಾಮದ ಮುಖಂಡರು, ಮನೆಯ ಹಿರಿಯರು ಇದು ದೇವಿಯ ಪ್ರತೀಕ ಎಂದು ನಂಬಿ, ನಮಗೆ ‘ಮುತ್ತು’ ಕಟ್ಟಿಸಿದರು. ಈಗ ಈ ಪದ್ದತಿಯಿಂದ ಹೊರಬರಲಾರದಷ್ಟು ಅದರಲ್ಲಿ ಬೆರೆತಿದ್ದೇವೆ ಅನ್ನುವ ಜನರು ನಮಗೆ ಯಾರೂ ಕೂಲಿ ಕೊಡೋದಿಲ್ಲ. ಯುವಕರಿಂದ ಹಿಡಿದು ಮುದುಕರ ತನಕ ಎಲ್ಲರೂ ಆಸೆಯಿಂದಲೇ ನಮ್ಮತ್ತ ಕಣ್ಣು ಹಾಯಿಸುತ್ತಾರೆ. ನಾವು ಕೆಳ ಜಾತಿಯವರು.

ಮೇಲ್ವರ್ಗದ ಮಹಿಳೆಯರಿಗೆ ಇಲ್ಲದ ಈ ಪದ್ದತಿಗೆ ನಮಗೇಕೆ ಎಂದು ಎಷ್ಟೋ ಸಲ ಅನಿಸಿದೆ. ನಮಗೂ ಅವರಂತೆ ಮದುವೆಯಾಗಿ ಗಂಡ-ಮಕ್ಕಳ ಜೊತೆಯಲ್ಲಿ ಇದ್ದು ಸಂಸಾರ ಮಾಡಬೇಕು ಎಂಬ ಆಸೆಯಾಗುತ್ತೆ. ಆದರೆ, ಸಮಾಜ ನಮ್ಮನ್ನು ವೇಶೈಯಯರಂತೆ ಕಾಣುತ್ತದೆ.

ಮರ್ಯಾದೆಯಿಂದ ಬದುಕಲೂ ಆಗದೇ, ಕೂಲಿ ಮಾಡಲೂ ಆಗದೇ, ತುತ್ತು ಅನ್ನಕ್ಕಾಗಿ ಈ ನೋವು ಅನುಭವಿಸುತ್ತಿದ್ದೇವೆ’ ಎಂದು ನೊಂದು ನುಡಿಯುತ್ತಾರೆ” ಆ ಜನರು.

ಈ ಘಟನೆಯೇ ಪುಸ್ತಕದ ಮಹತ್ವವನ್ನು ಹೇಳುತ್ತದೆ. ಸಮಾಜ ಸುಧಾರಣೆಯಾದರೂ, ಆಧುನಿಕಗೊಂಡರೂ, ಹೊಸ ಹೊಸ ಆವಿಷ್ಕಾರಗಳು ನಡೆದರೂ, ಇಂತಹ ಕೆಟ್ಟ ಆಚರಣೆಗಳು ಸಮಾಜವನ್ನು ಕಾಡುವುದೇಕೆ ಎಂದು ಕೃತಿ ಪ್ರಶ್ನಿಸುತ್ತದೆ. ಸಮಸ್ಯೆಗೆ ಪರಿಹಾರವನ್ನೂ ಸೂಚಿಸಲು ಯತ್ನಿಸುತ್ತದೆ..! ಹೀಗೆಯೇ ಹಲವು ವಿಚಾರಗಳು ನನ್ನ ತಲೆಕೆಡಸಿದವು.

ಈ ಗುರುಪಾದವ್ವಳಂತೆ ಸಾವಿರಾರು ದೇವರುಗಳ ಪೂಜಿಸುವ ಜನರಿರೂವ ವರೆಗೂ ಈ‌ ಅನಿಷ್ಟ ಪದ್ಧತಿಗಳು ಮತ್ತು ಪರಿಣಾಮಗಳು ಮಾಯವಾಗುವುದಿಲ್ಲ..!

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

4 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

14 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

14 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

14 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago