ವಾಡಿ: ಮಾನವ ಕುಲವನ್ನು ತಲ್ಲಣಿಸುವಂತೆ ಮಾಡಿದ ಮಹಾಮಾರಿ ಕೊರೊನಾ ಸೊಂಕಿನಿಂದ ರಕ್ಷಣೆ ಪಡೆಯಲು ಲಸಿಕೆಯೊಂದೇ ಶ್ರೀರಕ್ಷೆಯಾಗಿದ್ದು, ನಿರ್ಲಕ್ಷ್ಯ ತೋರದೆ ಲಸಿಕೆ ಪಡೆಯಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಡಾ.ಚಿದಾನಂದ ಸ್ವಾಮಿ ಹೇಳಿದರು.
ಪಟ್ಟಣದ ಪುರಸಭೆಯ ಪೌರಕಾರ್ಮಿಕರಿಗೆ ಶುಕ್ರವಾರ ಬೂಸ್ಟರ್ ಡೋಜ್ ವಿತರಣಾ ಕಾರ್ಯಕ್ರಮ ಉದ್ಘಾಟಿಸುವ ಮೂಲಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೋವಿಡ್ ಸಾಂಕ್ರಾಮಿಕ ಸೋಂಕಾಗಿದ್ದು ಇದು ಈಗಾಗಲೇ ಹಲವರ ಪ್ರಾಣ ಬಲಿ ಪಡೆದುಕೊಂಡಿದೆ.
ಆದರೆ ಕೊರೊನಾ ಮೂರನೇ ಅಲೆ ಹರಡುವ ವೇಳೆಗೆ ಅಸಂಖ್ಯಾತ ಜನರು ಲಸಿಕೆಗಳನ್ನು ಪಡೆದುಕೊಂಡಿದ್ದರ ಪರಿಣಾಮವಾಗಿ ಈ ಸೋಂಕು ಜೀವಹಾನಿ ಮಾಡಿಲ್ಲ. ಜ್ವರ, ಕೆಮ್ಮು, ಸೀತ ಕಾಣಿಸಿಕೊಂಡು ಪಾಜಿಟೀವ್ ವರದಿ ಬಂದರೂ ಹೋಂ ಐಸೋಲೇಷನ್ ಚಿಕಿತ್ಸೆ ಮೂಲಕವೇ ಅದು ಗುಣಮುಖವಾಗಿದೆ. ಸರಕಾರದ ಆದೇಶದಂತೆ ಜನರು ಲಸಿಕೆ ಸ್ವೀಕರಿಸಿದ್ದರಿಂದ ಆಸ್ಪತ್ರೆಗಳಲ್ಲಿ ಬೆಡ್ ಕೊರತೆಯುಂಟಾಗಿಲ್ಲ. ಆಕ್ಸಿಜನ್ ಅಳವಡಿಸುವ ಸಂದರ್ಭ ಯಾವ ರೋಗಿಗೂ ಬಂದಿಲ್ಲ. ಕೋವಿಶೀಲ್ಡ್ ಲಸಿಕೆಯ ಎರಡೂ ಡೋಜ್ ಮುಗಿದ ಒಂಬತ್ತು ತಿಂಗಳ ನಂತರ ಈ ಬೂಸ್ಟರ್ ಡೋಜ್ ನೀಡಲಾಗುತ್ತಿದೆ. ಇದರಿಂದ ಆರೋಗ್ಯ ಮತ್ತಷ್ಟು ಉತ್ತಮಗೊಳ್ಳಲಿದೆ ಎಂದು ವಿವರಿಸಿದರು.
ಪುರಸಭೆಯ ಹಿರಿಯ ಆರೋಗ್ಯ ನೈರ್ಮಲ್ಯ ನಿರೀಕ್ಷಕಿ ಲತಾಮಣಿ ಮಾತನಾಡಿ, ಬೂಸ್ಟರ್ ಲಸಿಕೆ ಕೊರೊನಾ ಫ್ರಂಟ್ ವಾರಿಯರ್ಸ್‌ಗಳಿಗೆ ನೀಡುವಂತೆ ಸರಕಾರ ಆದೇಶ ನೀಡಿದೆ. ಕೋವಿಡ್ ತಡೆಗಟ್ಟುವಲ್ಲಿ ಸಾರ್ವಜನಿಕರ ಜೀವ ಕಾಪಾಡುವಲ್ಲಿ ಶ್ರಮಿಸಿದ ಪುರಸಭೆಯ ಪೌರಕಾರ್ಮಿಕರು ಮತ್ತು ಸಿಬ್ಬಂದಿಗಳಿಗೆ ಬೂಸ್ಟರ್ ಡೋಜ್ ನೀಡಲಾಗುತ್ತಿದೆ. ಕೋವಿಡ್ ತಡೆಗಟ್ಟಲು ಲಸಿಕೆ ಜೀವಸಂಜೀವಿನಿಯಾಗಿದೆ. ಈ ಮಹಾಮಾರಿ ವಿರುದ್ಧ ಹೋರಾಡಲು ಪ್ರತಿಯೊಬ್ಬರೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸ್ಯಾನಿಟೈಸರ್ ಬಳಕೆ ಮಾತ್ರ ನಿಲ್ಲಬಾರದು. ಕೆಮ್ಮು, ನೆಗಡಿ, ಜ್ವರ ಕಣಿಸಿಕೊಂಡರೆ ಭಯಬೀಯತಾಗದೆ ಪರೀಕ್ಷೆಗೋಳಗಾಗಬೇಕು. ಮನೆಯಲ್ಲೇ ಚಿಕಿತ್ಸೆ ಪಡೆvಯುವ ಅವಕಾಶ ಇರುವುದರಿಂದ ಬೇಗ ಗುಣಮುಖರಾಗಬಹುದು ಎಂದರು.
ಕಿರಿಯ ಆರೋಗ್ಯ ನೈರ್ಮಲ್ಯ ನಿರೀಕ್ಷಕ ಬಸವರಾಜ ಪೂಜಾರಿ, ಆರೋಗ್ಯ ಸಿಬ್ಬಂದಿ ರಾಧಿಕಾ, ಕಂದಾಯ ಅಧಿಕಾರಿ ಎ.ಪಂಕಜಾ, ವ್ಯವಸ್ತಾಪಕ ಮಲ್ಲಿಕಾರ್ಜುನ ಹಾರಕೂಡ, ಜೆಇ ಅಶೋಕ ಪುಟ್‌ಪಾಕ್, ಲೆಕ್ಕಾಧಿಕಾರಿ ಕೆ.ವೀರೂಪಾಕ್ಷಿ, ಈಶ್ವರ ಅಂಬೇಕರ, ಶ್ರೀಮಂತ ಧುಮ್ಮನಸೂರ, ವಿಠ್ಠಲ ಸಿಂಗ್, ಮಲ್ಲಿಕಾರ್ಜುನ ಯಳಸಂಗಿ, ಪುರಸಭೆ ಸದಸ್ಯ ರಾಜೇಶ ಅಗರವಾಲ, ಮಹ್ಮದ್ ಅಶ್ರಫ್ ಖಾನ್, ಮಲ್ಲಯ್ಯ ಗುತ್ತೇದಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…