ಕಲಬುರಗಿ : ಶ್ರೀಮಂತ ಇತಿಹಾಸದಿಂದ ಮೆರೆದ ಅತ್ಯಂತ ಹಿಂದುಳಿದ ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ, ಕಲಬುರಗಿಯಲ್ಲಿ ಏರ್‌ಪೋರ್ಟದಿಂದ ನಿಗದಿತ ಸಮಯದ ವಿಮಾನಗಳು ಮತ್ತು ಇನ್ನೂ ಹೆಚ್ಚಿನ ಸೌಲಭ್ಯಗಳು ಪಡೆಯುವುದು ಅವಶ್ಯವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ, ನೂತನವಾಗಿ ಕಲಬುರಗಿ ಏರ್ ಪೋರ್ಟ ಪ್ರಾಧಿಕಾರಕ್ಕೆ ನೇಮಕವಾದ ಸದಸ್ಯರು ವಿಶೇಷ ಕಾಳಜಿಪೂರ್ವಕವಾಗಿ ಸ್ಪಂಧಿಸಬೇಕೆಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ನೂತನ ಸದಸ್ಯರಿಗೆ ಕಿವಿಮಾತು ಹೇಳಿದ್ದಾರೆ.
ಕಲಬುರಗಿ ಏರ್ ಪೋರ್ಟನ ಪ್ರಾಧಿಕಾರಕ್ಕೆ ನೇಮಕವಾದ ನೂತನ ಸದಸ್ಯರಾದ ಆಕಾಶ ರಾಠೋಡ, ಗುರುರಾಜ ಭಂಡಾರಿ, ನರಸಿಮ್ ಮೆಂಡೋನ್ ಇವರಿಗೆ ಇಂದು ಹಿಂದಿ ಪ್ರಚಾರ ಸಭಾದಲ್ಲಿ ಗೌರವ ಸನ್ಮಾನಿಸಿ ಮಾತನಾಡಿದ ದಸ್ತಿಯವರು ಕಲಬುರಗಿ ವಿಮಾನ ನಿಲ್ದಾಣದಿಂದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಬೆಂಗಳೂರಿಗೆ ಹೋಗಲು ಮುಂಜಾನೆ ೭ ರಿಂದ ೮ ಗಂಟೆಗೆ ಮತ್ತು ಬೆಂಗಳೂರಿನಿಂದ ಕಲಬುರಗಿಗೆ ಬರಲು ರಾತ್ರಿ ೭ ರಿಂದ ೮ ಗಂಟೆಗೆ ವಿಮಾನಯಾನ ಸೇವೆ ಆರಂಭವಾಗಬೇಕು.
ಇದರಿಂದ ಕಲಬುರಗಿಯ ಜನರಿಗೆ ಆರ್ಥಿಕವಗಿ ಸಹಾಯವಾಗುವದಲ್ಲದೇ, ಸಮಯವೂ ಸಹ ಉಳಿತಾಯ ವಾಗುವುದು. ಅದರಂತೆ ದೇಶದ ಆಯಾ ಪ್ರತಿಷ್ಠಿತ ಸ್ಥಳಗಳಿಗೆ ಮತ್ತು ಯಾತ್ರಾ ಸ್ಥಳಗಳಿಗೆ ಹೆಚ್ಚಿನ ಹೊಸ ವಿಮಾನಗಳು ಆರಂಭಿಸುವುದರ ಜೊತೆಗೆ ಕಲಬುರಗಿ ಏರ್ಪೋರ್ಟದಿಂದ ಜನರಿಗೆ ಹೆಚ್ಚಿನ ಸೌಲಭ್ಯಗಳು ದೊರಕಿಸುವ ನಿಟ್ಟಿನಲ್ಲಿ ವಿಶೇಷ ಕ್ರಮ ಕೈಗೊಳ್ಳಲು ನೂತನ ಸದಸ್ಯರಿಗೆ ಆಗ್ರಹಿಸಿದರು.
ಸಮಿತಿಯ ಮುಖಂಡರು ಮತ್ತು ಹೆಚ್.ಕೆ.ಸಿ.ಸಿ.ಐ. ಆಡಳಿತ ಮಂಡಳಿಯ ಸದಸ್ಯರಾದ ಮನಿಷ್ ಜಾಜುರವರು ಮಾತನಾಡಿ ವಿಮಾನಯಾನ ಸೇವೆ ಆರಂಭವಾಗಿರುವುದು ನಮ್ಮ ಜನರಿಗೆ ಪ್ರವಾಸಕ್ಕೆ ಅನುಕೂಲವಾಗುವದಷ್ಟೇ ಅಲ್ಲದೇ, ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದಲ್ಲಿ ಹೂಡಿಕೆದಾರರನ್ನು ಕರೆತಂದು ದೊಡ್ಡ ದೊಡ್ಡ ಕಾರ್ಖಾನೆಗಳ ಸ್ಥಾಪನೆಯ ಉದ್ದೇಶವೂ ಸಹ ಇದರಲ್ಲಿ ಅಡಗಿರುವುದರಿಂದ ಈ ನಿಟ್ಟಿನಲ್ಲಿ ಲೋಕಸಭಾ ಸದಸ್ಯರಾದ ಉಮೇಶ ಜಾಧವ ಸೇರಿದಂತೆ ಸರಕಾರ ವಿಶೇಷ ಆಸಕ್ತಿ ವಹಿಸಿ ಇಲ್ಲಿನ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಮಾಡಿ ಕೊಡಲು ನೂತನ ಸದಸ್ಯರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕೋರಿದರು.
ಮುಖಂಡರಾದ ಭದ್ರಶೆಟ್ಟಿಯವರು ಮಾತನಾಡಿ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಗರಡಿಯಲ್ಲಿ ಬೆಳೆದ ಗುರುರಾಜ ಭಂಡಾರಿ ಮತ್ತು ಆಕಾಶ ರಾಠೋಡರವರು ಹೋರಾಟ ಮನೋಭಾವನೆಯ ವ್ಯಕ್ತಿಗಳಾಗಿದ್ದು, ಕಲಬುರಗಿಯ ಏರ್ ಪೋರ್ಟ ಕ್ಷೇತ್ರದ ವಿಶೇಷ ಅಭಿವೃದ್ಧಿಗೆ ಆಸಕ್ತಿ ವಹಿಸಲು ಆಗ್ರಹಿಸಿದರು. ಸ್ವಾಗತ ಸಲ್ಲಿಸಿ ಮಾತನಾಡಿದ ಮುಖಂಡರಾದ ಲಿಂಗರಾಜ ಸಿರಗಾಪೂರ ರವರು ಕಲ್ಯಾಣ ಕರ್ನಾಟಕ ಪ್ರದೇಶದ ಶ್ರೀಮಂತ ಇತಿಹಾಸವುಳ್ಳ ಪ್ರವಾಸಿ ತಾಣಗಳ ವ್ಯಾಪಕ ಪ್ರಚಾರ ಪ್ರಸಾರ ಮಾಡಿ ಜಗತ್ತಿನ ಮತ್ತು ದೇಶದ ಪ್ರವಾಸಿಗರು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪ್ರವಾಸ ಮಾಡುವಂತಹ ವಾತಾವರಣ ಮೂಡಿಸಲು ನೂತನ ಪ್ರಾಧಿಕಾರ ಸದಸ್ಯರು ಇಚ್ಛಾಶಕ್ತಿ ವ್ಯಕ್ತಪಡಿಸಲು ಮನವಿ ಮಾಡಿದರು.
ನೂತನವಾಗಿ ಕಲಬುರಗಿ ಏರ್ ಪೋರ್ಟ ಪ್ರಾಧಿಕಾರಕ್ಕೆ ನೇಮಕವಾದ ಸದಸ್ಯರಾದ ಆಕಾಶ ರಾಠೋಡ ಮತ್ತು ಗುರುರಾಜ ಭಂಡಾರಿಯವರು ಮಾತನಾಡಿ ತಾವು ಜನಪರ ಸಂಘರ್ಷ ಸಮಿತಿಯ ಹೋರಾಟದ ಶಾಲೆಯಲ್ಲಿ ಪರಿಣಿತರಾಗಿ ಈ ಮಟ್ಟಕ್ಕೆ ಬಂದಿರುವುದು ಮರೆಯುವಂತಿಲ್ಲ. ಅದರಂತೆ ನೂತನವಾಗಿ ಐದು ಜನ ಸದಸ್ಯರಿಗೆ ನೇಮಕ ಮಾಡಲು ಮುತುವರ್ಜಿ ವಹಿಸಿರುವ ಮತ್ತು ಕಾರಣೀಭೂತರಾದ ಲೋಕಸಭಾ ಸದಸ್ಯರಾದ ಉಮೇಶ ಜಾಧವ ಅವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು. ಹೋಟಲ್ ಕ್ಷೇತ್ರದಿಂದ ನೇಮಕವಾದ ನರಸಿಮನ್ ಮೆಂಡೋನ್ ಅವರು ಮಾತನಾಡಿ ಮುಂದಿನ ದಿನಗಳಲ್ಲಿ ತಾವು ಜನಪರ ಸಂಘರ್ಷ ಸಮಿತಿಯ ಮುಖಂಡರಾದ ಲಕ್ಷ್ಮಣ ದಸ್ತಿಯವರ ಸಲಹೆ ಸೂಚನೆಗಳನ್ನು ಪಡೆದು ಆದಷ್ಟು ಶೀಘ್ರ ಕಲಬುರಗಿ ಏರ್ ಪೋರ್ಟ ಅಭಿವೃದ್ಧಿ ಬಗ್ಗೆ ಬಗ್ಗೆ ವಿವರವಾದ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹೇಮಂತ ರಾಠೋಡ, ಶಿವಲಿಂಗಪ್ಪ ಬಂಡಕ್, ಅಶೋಕ ಗುರುಜಿ, ಸಂಧ್ಯಾರಾಜ ಸ್ಯಾಮ್ಯೂವೆಲ್, ಮುತ್ತಣ್ಣ ನಾಡಿಗೇರಿ, ಅಸ್ಲಂ ಚೌಂಗೆ, ಬಾಬುರಾವ ಗಂವ್ಹಾರ, ಶಾಂತಪ್ಪ ಕಾರಭಾಸಗಿ ಮಲ್ಲಿನಾಥ ಸಂಗಶೆಟ್ಟಿ, ಶಿವಾನಂದ ಬಿರಾದಾರ, ಶರಣಬಸಪ್ಪ ಕುರಿಕೋಟಾ, ಶಿವಶರಣಪ್ಪ, ಸಿದ್ಧುಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯದಾಗಿ ಶ್ರೀ ಕಲ್ಯಾಣ ಪಾಟೀಲರವರು ವಂದನಾರ್ಪಣೆ ಸಲ್ಲಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…