ಕಲಬುರಗಿ:ಮಕ್ಕಳಿಗೆ ಕ್ಷಯರೋಗ (ಟಿಬಿ) ಲಕ್ಷಣಗಳು ಇರುವ ಯಾವುದೇ ವ್ಯಕ್ತಿ ಕಂಡು ಬಂದರೆ ಅವರಿಗೆ ಕ್ಷಯರೋಗ ಪರೀಕ್ಷೆಗೆ ಒಳಪಡಿಸುವಂತೆ ತಿಳಿಸಬೇಕು ಗುಣಮುಖವಾಗುವಂತಹ ರೋಗವಾಗಿದೆ ಇದರ ಬಗ್ಗೆ ಭಯ ಪಡದೆ ಕ್ಷಯ ಖಚಿತವಾಗಿರುವ ರೋಗಿಯು ಸರಿಯಾದ ರೀತಿಯಲ್ಲಿ ಚಿಕಿತ್ಸೆಯನ್ನು ಪಡೆದು ಗುಣಮುಖವಾದಗ ಕ್ಷಯರೋಗ ಮುಕ್ತ ಕರ್ನಾಟಕ ಮಾಡಲು ಸಾಧ್ಯವಿದೆ ಕ್ಷಯ ರೋಗ ಮುಕ್ತ ಕರ್ನಾಟಕಕ್ಕೆ ಗ್ರಾಮದ ಜನರು ಕೈ ಜೋಡಿಸಬೇಕೆಂದು ಜಿಲ್ಲಾ ಡಿ ಆರ್ ಟಿಬಿ ಡಾಟ್ಸ್ ಪ್ಲಾಸ್ ಮೇಲ್ವಿಚಾರಕ ಸುರೇಶ ದೊಡ್ಡಮನಿ ಕರೆ ಕೊಟ್ಟರು.
ಅವರು ಜೇವರ್ಗಿ ಪಟ್ಟಣದ ಸರ್ಕಾರಿ ಪಿ ಯು ಮಹಾವಿದ್ಯಾಲಯದ ಪ್ರಾಂಗಣದಲ್ಲಿ . ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ಕಲಬುರಗಿ, ತಾಲ್ಲೂಕು ಆರೋಗ್ಯ ಇಲಾಖೆ ಜೇವರ್ಗಿ ಇವರ. ಸಂಯೋಗದಲ್ಲಿ ಹಮ್ಮಿಕೊಂಡ. ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದಡಿ ಟಿಬಿ ಸೋಲಿಸಿ ಕರ್ನಾಟಕ ಗೆಲ್ಲಿಸಿ ಅರಿವು ಕಾರ್ಯಕ್ರಮ ಅಭಿಯಾನ ಕಾರ್ಯಕ್ರಮದಲ್ಲಿ ಕ್ಷಯರೋಗ ನಿರ್ಮೂಲನೆ ಮಾಡಲು ಪ್ರತಿ ಒಬ್ಬ ವಿದ್ಯಾರ್ಥಿಗಳಲ್ಲಿ ಹಾಗೆ ಸಾಮಾನ್ಯ ಪ್ರಜೆಗಳು ಕೈ ಜೋಡಿಸುವುದರ ಜೊತೆಗೆ ನಿಮ್ಮ ಬಡಾವಣೆಯ ಜನರಿಗೆ ಕ್ಷಯರೋಗ ಲಕ್ಷಣಗಳ ಅರಿವು ಮಾಹಿತಿ ನೀಡಬೇಕು ಅಂದಾಗ ಮಾತ್ರ ರೋಗ ತಡೆಯಲು ಸಾಧ್ಯವೆಂದರು ಅವರು ಸರ್ಕಾರ ಕೈಗೊಂಡಿರುವ ಮಹತ್ವದ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಹೆಚ್ಚು ಟಿಬಿ ಲಕ್ಷಣ ಕಂಡುಬರುತ್ತಿದೆ ಇದರಿಂದ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಟಿಬಿ ಸೋಲಿಸಿ ಕರ್ನಾಟಕ ಗೆಲ್ಲಿಸಿ 2025 ರ ಒಳಗೆ ಎಂಬ ಘೋಷವಾಕ್ಯದಂತೆ ವಿದ್ಯಾರ್ಥಿಗಳು ಕ್ಷಯರೋಗ ನಿರ್ಮೂಲನಗೆ ಪಣ ತೊಡಬೇಕೆಂದರು.
ನಂತರ ಹಿರಿಯ ಟಿಬಿ ಚಿಕಿತ್ಸಾ ಮೇಲ್ವಿಚಾರಕ ಮೊಹಮ್ಮದ್ ಮಹ್ಜರೊದಿನ್ , ಅವರು ಮಾತನಾಡುತ್ತ ಪ್ರತಿ ಒಬ್ಬರು ತಮ್ಮ ಆರೋಗ್ಯದ ಕಡೆ ಲಕ್ಷವಹಿಸಬೇಕು, ಹಾಗೆ ಕ್ಷಯರೋಗ ಲಕ್ಷಣ ಬಂದರು ಹೇದರ ಬೇಕಿಲ್ಲ ಈ ಕ್ಷಯರೋಗ ಗುಣಪಡಿಸಲು ಸಾಧ್ಯ, ಹಾಗೆ ಗ್ರಾಮದ ಜನರಿಗೆ ಮಾಹಿತಿ ನೀಡುವುದು ಬಹಳ ಮುಖ್ಯವಾಗಿದೆ ಅದರಿಂದ ಶಾಲಾ-ಕಾಲೇಜಿನಲ್ಲಿ ಕ್ಷಯರೋಗದ ಬಗ್ಗೆ ಅರಿವು ಮೂಡಿಸುತ್ತಿದೆವೆ ಹಾಗೆ ಕ್ಷಯರೋಗ ಗಾಳಿ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುವಂತ ರೋಗವಾಗಿದ್ದು ಪ್ರತಿ ಒಬ್ಬರು ಎಚ್ಚರವಹಿಸಬೇಕು ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳಬೇಕು ಕ್ಷಯರೋಗ ಪರೀಕ್ಷೆ ಮತ್ತು ಚಿಕಿತ್ಸೆ ಸಂಪೂರ್ಣವಾಗಿ ಉಚಿತ ಇರುತ್ತದೆ. ಮತ್ತು ಆರು ತಿಂಗಳ ಚಿಕಿತ್ಸೆಯ ಸಂಧರ್ಭದಲ್ಲಿ ರೋಗಿಗಳಿಗೆ ನಿಕ್ಷಯ ಪೋಷಣಾ ಅಡಿಯಲ್ಲಿ ಪೌಷ್ಟಿಕ ಆಹಾರ ಸಂಬಂದ ಮಾಸಿಕ 500 ರೂ, ಗಳನ್ನು ಕೊಡಲಾಗುತ್ತದೆ ಇದರ ಉಪಯೋಗ ಪ್ರತಿ ರೋಗಿಯು ಪಡೆದುಕೊಳ್ಳತ್ತಿದ್ದರೆ, ಅದರೆ ಇದರ ಅರಿವು ಇನ್ನೂಜನರಿಗೆ ಮುಟ್ಟಬೇಕಿದೆ ಎಂದು ತಿಳಿಸಿದರು. ನಂತರ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ,ಪ್ರಥಮ ,ದ್ವೀತಿಯ, ತೃತೀಯ ಬಹುಮಾನ ನೀಡಲಾಯಿತು.
ಪ್ರಮುಖರಾದ ಕಾಲೇಜಿನ ಪ್ರಾಂಶುಪಾಲರಾದ ಶಿವಶರಣಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರೋ ಗೋವಿಂದ ರಾವ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಂಬಾರಾಯ, ಐಸಿ ಟಿಸಿ ಸಮಾಲೋಚಕಿ ಮಹಾದೇವಿ. ವೇದಿಕೆ ಮೇಲೆ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಗೆ ಬಿತ್ತಿ ಪತ್ರ ನೀಡುವುದರ ಮೂಲಕ ಜಾಗೃತಿ ಮಂಡಿಸಲಾಯಿತು ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಪ್ರೋ ಗೋವಿಂದರಾವ್ ನಿರೂಪಿಸಿದರು, ಅಂಬಾರಾಯ ವಂದಿಸಿದ್ದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ಇತರರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…