ಶಹಾಬಾದ:ನಗರಸಭೆಯ ಸಭಾಂಗಣದಲ್ಲಿ ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಲಾದ ಸಾಮನ್ಯ ಸಭೆಯಲ್ಲಿ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಮಲ್ಲಿಕಾರ್ಜುನ ವಾಲಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆ ಪ್ರಾರಂಭವಾಗುತ್ತಿದ್ದಂತೆ ನಗರಸಭೆಯ ಸದಸ್ಯ ರವಿ ರಾಠೋಡ ಹಿಂದಿನ ಸಭೆಯ ನಡುವಳಿಕೆಯನ್ನು ಓದಲು ತಿಳಿಸಿದರು.ತದ ನಂತರ ಜುಲೈ-೨೦೨೧ ರಿಂದ ಡಿಸೆಂಬರ್ -೨೦೨೧ ವರೆಗಿನ ಜಮಾ-ಖರ್ಚಿಗೆ ಸರ್ವಾನುಮತದಿಂದ ಅನುಮೋದನೆ ನೀಡಲಾಯಿತು.
ನಗರಸಭೆಯ ಸದಸ್ಯರಾದ ಡಾ.ಅಹ್ಮದ್ ಪಟೇಲ್,ರವಿ ರಾಠೋಡ, ಸೂರ್ಯಕಾಂತ ಕೋಬಾಳ ಮಾತನಾಡಿ, ನಗರಸದ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಸಾರ್ವಜನಿಕರಿಗೆ ಹೊರೆಯಾಗದಂತೆ ಹಳೆ ನಗರಸಭೆಯ ಕಟ್ಟಡದ ಮಳಿಗೆಗಳ ಬಾಡಿಗೆದಾರರಿಂದ ಬೇಬಾಕಿ ಬಾಡಿಗೆಯನ್ನು ವಸೂಲಾತಿಯಾಗಬೇಕೆಂದು ಹೇಳಿದರು.
ಈಗಾಗಲೇ ಮಳಿಗೆಗೆಳ ಬಾಡಿಗೆ ಪರಿಷ್ಕರಣೆ ಮಾಡಿ, ದರ ನಿಗದಿ ಮಾಡಲಾಗುವುದು.ಅಲ್ಲದೇ ಬಾಡಿಗೆದಾರರ ಬೇಬಾಕಿ ತೆಗೆದುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ತರಕಾರಿ ಮಾರುಕಟ್ಟೆಯ ಹಿಂದಿರುವ ನಗರಸಭೆಯ ಕಟ್ಟಡಗಳನ್ನು ಪರಿಶೀಲನೆ ಮಾಡಿ ದುರಸ್ತಿ ಮಾಡಲು ಕೈಗೊಳ್ಳಲಾಗುವುದೆಂದು ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ತಿಳಿಸಿದರು.
ನಗರಸಭೆಯ ಸದಸ್ಯ ಶರಣು ವಸ್ತ್ರದ್ ಮಾತನಾಡಿ, ನಗರವನ್ನು ಅಭಿವೃದ್ಧಿಪಡಿಸಲು ಯೋಜನಾಬದ್ಧವಾಗಿ ಕಾಮಗಾರಿ ಕೈಗೊಳ್ಳಿ. ಅದನ್ನು ಬಿಟ್ಟು ಅವೈಜ್ಞಾನಿಕ ಕ್ರಮ ಜರುಗಿಸಬೇಡಿ.ನಗರದ ರಸ್ತೆಯ ಮೇಲೆ ಕುಡಿಯುವ ನೀರಿನ ಗುಮ್ಮಿ ನಿರ್ಮಾಣ ಮಾಡಿರುವುದೇ ಸಾಕ್ಷಿ. ಅವೈಜ್ಞಾನಿಕ ಫೂಟಪಾತ್ ನಿರ್ಮಾಣ ಮಾಡಲಾಗಿದೆ.ಅದನ್ನು ಸರಿಪಡಿಸಿ.ಅಲ್ಲದೇ ನಗರಕ್ಕೆ ಒಂದು ರಂಗ ಮಂದಿರ ನಿರ್ಮಾಣ ಮಾಡಿ ಎಂದು ಹೇಳಿದರು. ನಗರದಲ್ಲಿ ಮೂತ್ರಾಲಯ ನಿರ್ಮಿಸಲು ಒತ್ತಾಯಿಸಿದರು.
ಅಲ್ಲದೇ ಬೃಹತ್ ಆಕಾರದ ಅಂಬೇಡ್ಕರ್ ಮೂರ್ತಿ ಹಾಗೂ ಬಾಬು ಜಗಜೀವನರಾಮ ಮೂರ್ತಿಗೆ ಹಣ ಕಾಯ್ದಿರಿಸಲು ನಿರ್ಣಯಿಸಲಾಯಿತು.ಸಿದ್ಧರಾಮೇಶ್ವರ, ಸೇವಾಲಾಲ, ಅಂಬಿಗರ ಚೌಡಯ್ಯ, ಶಿವಾಜಿ, ವಾಲ್ಮೀಕಿ ಮೂರ್ತಿಗಳಿಗೆ ಸುಮಾರು ೧೦ ಲಕ್ಷ ರೂ. ಅನುಮೋದನೆ ನೀಡಲಾಯಿತು. ನಗರಸಭೆಯ ಸದಸ್ಯ ರಜನಿಕಾಂತ ಕಂಬಾನೂರ ಮಾತನಾಡಿ, ನನ್ನ ವಾರ್ಡನಲ್ಲಿ ನೀರಿನ ಸಮಸ್ಯೆ, ರಸ್ತೆ ಹಾಗೂ ಚರಂಡಿ ಸಮಸ್ಯೆಯಿದೆ ಎಂದು ಹಲವಾರು ಬಾರಿ ತಿಳಿಸಿದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಕೂಡಲೇ ಕಾಮಗಾರಿ ಕೈಗೊಳ್ಳು ಗುತ್ತಿಗೆದಾರನಿಗೆ ತಿಳಿಸಿ ಎಂದರು.
ಸದಸ್ಯ ಶ್ರವಣಕುಮಾರ ಮಾತನಾಡಿ, ಖಾತಾ ತೆಗೆದುಕೊಳ್ಳಲು ಸತಾಯಿಸುತ್ತಿದ್ದಾರೆ ಎಂದು ದೂರಿದರು. ಅರ್ಜಿ ಸಲ್ಲಿಸದೇ ಖಾತಾ ನೀಡಲು ಸಾಧ್ಯವಿಲ್ಲ. ಖಾತಾ ನೀಡಲು ಯಾರು ಸತಾಯಿಸುತ್ತಿದ್ದಾರೆ ಎಂದು ಹೆಸರು ಹೇಳಿ ಎಂದು ಕಂದಾಯ ಅಧಿಕಾರಿ ಸುನೀಲಕುಮಾರ ವೀರಶೆಟ್ಟಿ ಕೇಳಿದರು. ನನ್ನ ಮಗನಿಗೆ ಕಳಿಸಿದ್ದೆ.ಅದನ್ನು ಕೇಳಿಕೊಂಡು ತಿಳಿಸುತ್ತೆನೆ ಎಂದರು. ಅಲ್ಲದೇ ಹಿಂದಿನ ಸಭೆಯ ನಡುವಳಿಕೆಯ ಪ್ರಕಾರ ಮುಟೇಷನ್ ತೆರಿಗೆಯನ್ನು ಶೇ ೮ರಿಂದ ಶೇ ೫ ಕ್ಕೆ ಇಳಿಸಲು ಸರ್ವ ಸದಸ್ಯರಿಂದ ಅಂಗೀಕಾರ ತೆಗೆದುಕೊಳ್ಳಲಾಯಿತು.
ನಗರಸಭೆಯ ಪೌರಾಯುಕ್ತರು ಮಾತನಾಡಿ, ಸರ್ವ ಸದಸ್ಯರು ತಮ್ಮ ವಾರ್ಡಗಳಲ್ಲಿ ಕುಡಿಯುವ ನೀರು, ಚರಂಡಿ, ಬೀದಿ ದೀಪ ಇತರ ಕಾಮಗಾರಿಗಳ ಪಟ್ಟಿಯನ್ನು ನೀಡಲಾಗಿದ್ದು, ಅದರಲ್ಲಿ ಯಾರಾದರೂ ನೀಡದಿದ್ದರೇ ಬೇಗನೆ ನೀಡಿದರೆ ಅದನ್ನು ಪರಿಗಣಿಸಲಾಗುವುದು.ಕೆಕೆಆರ್‌ಡಿಬಿ ಅಥವಾ ನಗರೋತ್ಥಾನ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗುವುದೆಂದು ಹೇಳಿದರು. ಅಲ್ಲದೇ ಪಠಾಣ ಗಲ್ಲಿಯ ಮೆಹಬೂಬ ಮನೆಯ ಹತ್ತಿರ ಚರಂಡಿ ಹಾಗೂ ಹಳೆಶಹಾಬದ ಶಂಕಲಿಂಗ ಗುಡಿಯ ಶಾಲೆಗ ಕಂಪೌಂಡ ಗೋಡೆ ನಿರ್ಮಿಸಲು ಒತ್ತಾಯಿಸಿದರು.
ನಂತರ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಮಲ್ಲಿಕಾರ್ಜುನ ವಾಲಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನಗರಸಭೆಯ ಉಪಾಧ್ಯಕ್ಷೆ ಸಲೀಮಾಬೇಗಂ, ನಗರಸಭೆಯ ಸದಸ್ಯ ಅವಿನಾಶ ಕಂಬಾನೂರ, ಶರಣು ವಸ್ತ್ರದ್, ನಾಗರಾಜ ಕರಣಿಕ್,ಸಾಬೇರಾಬೇಗಂ,ಪಾರ್ವತಿ ಪವಾರ,ಭಾಗಿರಥಿ ಗುನ್ನಾಪೂರ, ರವಿ ಮೇಸ್ತ್ರಿ, ಸುಧಾ ಅನೀಲ,ತಿಮ್ಮಾಬಾಯಿ ಕುಸಾಳೆ,ಇನಾಯತಖಾನ ಜಮಾದಾರ,ತಿಪ್ಪಣ್ಣ ನಾಟೇಕಾರ,ಮಹ್ಮದ್, ಮಜದ್,ಶ್ವೇತಾ ನಾಟೇಕಾರ,ರಾಣಿ ರಾಜು ಪವಾರ,ಶಿವಾಜಿ ಜೆಟ್ಟೆಪಾ, ದತ್ತಾ ಫಂಡ,ಮಂಜುನಾಥ ದೊಡ್ಡಮನಿ, ಎಇಇ ಶರಣು ಪೂಜಾರಿ, ವ್ಯವಸ್ಥಾಪಕ ಶರಣಗೌಡ ಪಾಟೀಲ, ಆರೋಗ್ಯ ನಿರೀಕ್ಷರಾದ ಶಿವರಾಜಕುಮಾರ, ರಾಜೇಶ, ಶರಣು, ರಘುನಾಥ ನರಸಾಳೆ ಸೇರಿದಂತೆ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…