ಅಂತರಂಗ ಸೌಂದರ್ಯ ಮತ್ತು ಬಹಿರಂಗ ಸೌಂದರ್ಯ ಸಾಧಿಸಲು ಹೇಗೆ ಸಾಧ್ಯ

ಯುವಕರು ಅದರಲ್ಲೂ ಮಹಿಳೆಯರಲ್ಲಿ ಸೌಂದರ್ಯದ ಕಾಳಜಿಯ ಬಗ್ಗೆ ಹೆಚ್ಚು ಕಾಳಜಿ ಇರುತ್ತದೆ. ಇದು ಬಾಹ್ಯ ಸೌಂದರ್ಯದ ಕಾಳಜಿ ಆಯಿತು. ಇನ್ನೂ ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಅಧ್ಯಾತ್ಮಿಕವಾಗಿ ಸದೃಢತೆ ಸಾಧಿಸಿದರೆ ಪುರುಷರು ಮತ್ತು ಮಹಿಳೆಯರು ಇನ್ನೂ ಸುಂದರವಾಗಿರಬಹುದು.

ಇಷ್ಟಾಗಿಯೂ, ಅದರಲ್ಲೂ ಮಹಿಳೆಯರಲ್ಲಿ ಸೌಂದರ್ಯ ಎನ್ನುವುದು ಈ ಎಲ್ಲ ಆಯಾಮಗಳ ಮಿಶ್ರಣವೇ ಆಗಿದೆ. ದೇಹ ಮತ್ತು ಮನಸ್ಸಿಗೆ ಹತ್ತಿರದ ನಂಟಿದ್ದು, ಸೌಂದರ್ಯ ವೃದ್ಧಿಯಲ್ಲಿ ಇವುಗಳ ಪಾತ್ರವಿದೆ. ಇವುಗಳಲ್ಲಿ ಒಂದು ಇನ್ನೊಂದರ ಮೇಲೆ ಪರಿಣಾಮ ಬೀರುತ್ತದೆ. ಬಾಹ್ಯ ಸೌಂದರ್ಯಕ್ಕೆ ಆತ್ಮ ಸೌಂದರ್ಯ, ಅಂದರೆ ಅಂತರಂಗ ಸೌಂದರ್ಯವೂ ಪೂರಕವಾಗಿದೆ. ಇದು ಹೆಚ್ಚದೇ ಬಾಹ್ಯ ಸೌಂದರ್ಯವು ಪರಿಪೂರ್ಣವಾಗಲು ಅಸಾಧ್ಯವಾಗಿದೆ.

ನಾವು ಸುತ್ತಲಿನ ಜಗತ್ತನ್ನು ಗಮನಿಸುವುದಾದರೆ, ನಮ್ಮನ್ನು ನಾವು ಅದರಲ್ಲಿ ಕಂಡುಕೊಳ್ಳಬಹುದು. ಅಲ್ಲದೇ ಪ್ರಕೃತಿಯಲ್ಲೂ ಅಸಂಖ್ಯಾತ ವರ್ಣ ಚಿತ್ತಾರಗಳನ್ನೂ ಕಾಣಬಹುದು. ನಾವು ನಿಸರ್ಗದ ಚೆಲುವಿಗೆ ಮಾರು ಹೋಗುತ್ತೇವೆ. ಏಕೆಂದರೆ ಪ್ರಕೃತಿಯಲ್ಲಿ ವಿವಿಧ ಬಣ್ಣಗಳ ಸಮನ್ವಯ ಸಾಧ್ಯವಾಗಿದ್ದು, ಆಕರ್ಷಣೆ ಸಹಜವಾಗಿಯೇ ಮೂಡುತ್ತದೆ. ಆ ಸಾಮರಸ್ಯವನ್ನು ಪ್ರಕೃತಿ ಪ್ರತಿಬಿಂಬಿಸುತ್ತದೆ.

ಮರಗಿಡಗಳನ್ನು ನೋಡಿದಾಗ ನಾವು ಅವುಗಳತ್ತ ಆಕರ್ಷಿತರಾಗುತ್ತೇವೆ. ಏಕೆಂದರೆ ಅವುಗಳಲ್ಲಿನ ವರ್ಣ ವಿನ್ಯಾಸದಲ್ಲಿ ಹೊಂದಾಣಿಕೆ ಬೆಸೆದುಕೊಂಡಿರುತ್ತದೆ. ನಾವು ಸೂರ್ಯೋದಯ ಕಂಡಾಗ ಆನಂದ ಪಡುತ್ತೇವೆ. ಏಕೆಂದರೆ ಅಲ್ಲೂ ನಾನಾ ಬಣ್ಣಗಳು, ನೆರಳುಗಳು ವ್ಯವಸ್ಥಿತವಾಗಿ ಜೋಡಣೆಯಾಗಿವೆ.

ಇದೇ ರೀತಿಯಲ್ಲಿ ಮಹಿಳೆಯರಾಗಲಿ ಅಥವಾ ಪುರುಷರಾಗಲಿ ತಮ್ಮೊಳಗೂ ಶಾಂತಿ ಮತ್ತು ನಿರಾಳ ಮನಸ್ಸು, ದೇಹ ಮತ್ತು ಆತ್ಮಗಳ ನಡುವೆ ಹೊಂದಾಣಿಕೆ ಸಾಧ್ಯವಾಗಬೇಕು. ಹೀಗಾದಾಗ ಮಾತ್ರ ನಾವು ಸೌಂದರ್ಯ ಪಡೆಯಲು ಸಾಧ್ಯ ಅನಿಸುತ್ತದೆ ನನಗೆ.

ನಿಜ ಹೇಳಬೇಕೆಂದರೆ, ಬಾಹ್ಯ ಸೌಂದರ್ಯಕ್ಕಿಂತ ಅಂತರಂಗದ ಸೌಂದರ್ಯವೇ ಮುಖ್ಯವಾಗಿದೆ. ನಾನು ಅಂತರಂಗದ ಸ್ವಚ್ಛತೆಯನ್ನು ಇಲ್ಲಿ ಒತ್ತಿ ಹೇಳುತ್ತೇನೆ. ನೀವು ಯಾವಾಗ ಅಂತರಂಗದ ಸೌಂದರ್ಯ ಯಾವುದು ಎಂಬುದನ್ನು ಅರ್ಥ ಮಾಡಿಕೊಳ್ಳುವಿರೋ ಆಗ ಬಟ್ಟೆಗಳು, ಕಾಸ್ಮೆಟಿಕ್ಸ್, ಆಭರಣಗಳು, ಸಿಂಗಾರಗಳೆಲ್ಲದರ ಪೊಳ್ಳುತನ ಅರ್ಥವಾಗುತ್ತವೆ. ಇವೆಲ್ಲವೂ ಅಗತ್ಯವಿಲ್ಲ ಎನ್ನುವುದು ಕೂಡ ಮನವರಿಕೆಯಾಗುತ್ತದೆ. ಅಂತರಂಗ ಸೌಂದರ್ಯವು ವ್ಯಕ್ತಿತ್ವ ಮತ್ತು ಬಾಹ್ಯಸೌಂದರ್ಯಕ್ಕೆ ತಳಪಾಯವಿದ್ದಂತೆ. ನಮ್ಮಗಳ ಅಭ್ಯುದಯಕ್ಕಾಗಿ ಅಂತರಂಗದ ಸೌಂದರ್ಯಾನ್ವೇಷಣೆ ನಿಜಕ್ಕೂ ಅತ್ಯಗತ್ಯವಾಗಿದೆ ಅನಿಸುತ್ತದೆ ನನಗೆ. ಇದರಿಂದ ನಮ್ಮ ಸಾಮರ್ಥ್ಯಯೂ ಹೆಚ್ಚುತ್ತದೆ.

ಅಂತರಂಗದ ಸೌಂದರ್ಯವು ನಮಗೆ ಸಮನ್ವಯ ಸಾಧಿಸಲು ನೆರವಾಗುತ್ತದೆ. ಅಂದರೆ ಒಳ ಮತ್ತು ಹೊರ ಜಗತ್ತಿನ ಜೊತೆಗೇ ಸಮತೋಲನ ಸಾಧಿಸಲು ಇದು ಪೂರಕವಾಗುತ್ತದೆ. ನಾವು ನಮ್ಮ ಅಂತರಾತ್ಮವನ್ನು ಕಂಡುಕೊಳ್ಳುವುದಕ್ಕೆ ಮೊದಲು ನಮ್ಮೊಳಗಿನ ಮೌನವನ್ನು ಅರ್ಥ ಮಾಡಿಕೊಳ್ಳಿಬೇಕು. ದುರದೃಷ್ಟವೆಂದರೆ ನಾವು ಮನಸ್ಸಿನ ಮೇಲಿನ ಹತೋಟಿಯನ್ನು ಕಳೆದುಕೊಂಡಿದ್ದೇವೆ. ಭಯ, ಕೀಳರಿಮೆ, ಈರ್ಷ್ಯೆಗಳಿಗೇ ನಮ್ಮನ್ನು ಆಳಲು ಅವಕಾಶ ಕೊಟ್ಟಿದ್ದೇವೆ. ಅವೆಲ್ಲವೂ ನಮ್ಮ ಮೇಲೆ ಸವಾರಿ ಮಾಡುತ್ತಿವೆ. ಅಲ್ಲದೇ ಹಳೆಯ ನೆನಪುಗಳು, ಭವಿಷ್ಯದ ಭಯಗಳು ನಮ್ಮನ್ನು ದುರ್ಬಲರನ್ನಾಗಿ ಮಡಲು ಆಸ್ಪದ ನೀಡಿದ್ದೇವೆ. ಇದೆಲ್ಲವನ್ನೂ ತಪ್ಪಿಸಬೇಕು.

ಆಗಲೇ ನಾವು ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿ ಸಾಧಿಸಲು ಸಾಧ್ಯವಲ್ಲೇ, ಅಲ್ಲದೇ ಬುದ್ಧ, ಬಸವ, ಅಲ್ಲಮ ಎಲ್ಲರೂ ಹೇಳಿರುದು ಇದನ್ನೇ ಅಲ್ಲವೇ..!

# ಕೆ.ಶಿವು.ಲಕ್ಕಣ್ಣವರ
emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

5 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

8 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

8 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

8 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

8 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

8 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420