ಬಿಸಿ ಬಿಸಿ ಸುದ್ದಿ

ಶರಣಬಸವ ವಿವಿಯ ಸಾಧನೆಯ ಮತ್ತೊಂದು ಮೈಲುಗಲ್ಲು

ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದ ತಾಂತ್ರಿಕ ವಿಭಾಗದ ಒಟ್ಟು ೭೧೪ ವಿದ್ಯಾರ್ಥಿಗಳಲ್ಲಿ ೫೭೬ ವಿದ್ಯಾರ್ಥಿಗಳು ಉನ್ನತ ಮಟ್ಟದ ವಿವಿಧ ಕಂಪೆನಿಗಳಲ್ಲಿ ಉದ್ಯೋಗ ಪಡೆದುಕೊಂಡಿರುವುದು ವಿಶ್ವವಿದ್ಯಾಲಯದ ಸಾಧನೆಯ ಮತ್ತೊಂದು ಮೈಲುಗಲ್ಲಾಗಿದೆ.

ಗುಣಾತ್ಮಕ ಶಿಕ್ಷಣಕ್ಕೆ ಹೆಸರಾದ ಶರಣಬಸವ ವಿಶ್ವವಿದ್ಯಾಲಯದ ೫೭೬ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಉತ್ಕೃಷ್ಟ ಕಂಪನಿಗಳಲ್ಲಿ ಉದ್ಯೋಗ ಪಡೆದುಕೊಳ್ಳುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ವಿಶ್ವವಿದ್ಯಾಲಯವು ಉನ್ನತ ಮತ್ತು ಅರ್ಹ ಪ್ರಾಧ್ಯಾಪಕರಿಂದ ನೀಡಲ್ಪಟ್ಟ ಉತ್ತಮ ಗುಣಮಟ್ಟದ ಶಿಕ್ಷಣದಿಂದ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಯಂತ್ರಾಂಶ ಮತ್ತು ತಂತ್ರಾಂಶ ಉದ್ಯಮದಲ್ಲಿ ಎಂಜಿನೀಯರ್ ಮತ್ತು ಎಂಬಿಎ ವಿದ್ಯಾರ್ಥಿಗಳು ಉದ್ಯೋಗ ಪಡೆದಕೊಂಡಿದ್ದಾರೆ.

ಎಂಜಿನೀಯರ್ ಮತ್ತು ಎಂಬಿಎ ವಿಭಾಗದಿಂದ ಸಂದರ್ಶನಕ್ಕೊಳಪಟ್ಟ ೭೧೪ ವಿಧ್ಯಾರ್ಥಿಗಳಲ್ಲಿ ೫೭೬ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಉದ್ಯೋಗ ಪಡೆದಿಕೊಂಡಿದ್ದಾರೆ. ೨೦೧೭-೧೮ರ ಶೈಕ್ಷಣಿಕ ಸಾಲಿನಲ್ಲಿ ಒಟ್ಟು ೩೫೦ ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ೨೦೧೮-೧೯ರಲ್ಲಿ ೫೭೬ ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ವಿಶ್ವವಿದ್ಯಾಲಯದ ದಾಖಲೆಯಾಗಿದೆ. ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಭಾಗದ ಯಾವದೇ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಈ ದಾಖಲೆ ಮಾಡಿರುವುದಿಲ್ಲ.

ವಿಶ್ವವಿದ್ಯಾಲಯದ ಕಂಪ್ಯೂಟರ ಸೈನ್ಸ್ ವಿಭಾಗದ ಶ್ರೇಯಾ.ಎಸ್ ಹಾವನೂರ್ ಅವರನ್ನು ’ವೆರಿಫೋನ್’ ಸಾಫ್ಟವೇರ್ ಕಂಪೆನಿ ವರ್ಷಕ್ಕೆ ೮ ಲಕ್ಷ ಪ್ಯಾಕೇಜ್ ನೀಡುವ ಮೂಲಕ ನೇಮಕ ಮಾಡಲಾಯಿತು. ವಿದ್ಯಾರ್ಥಿಗಳು ಪರಿಸರ ನಾಶವನ್ನು ತಡೆಗಟ್ಟಲು ಹಲವಾರು ಕ್ರಮಗಳು ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಆಟೋಮೋಬೈಲ್ಸ್ ಉದ್ಯಮದಲ್ಲಿ ವಿಶ್ವ ನಾಯಕರ ಗಮನ ಸೇಳೆಯುವ ವಿಶ್ವವಿದ್ಯಾಲಯವಾಗಿ ಹೊರಹೊಮ್ಮುತ್ತಿದೆ. ಇದು ತಂತ್ರಾಂಶ ನಿರ್ವಹಣೆಯಲ್ಲಿ ಶ್ರೇಷ್ಠತೆಯ ವಿದ್ಯಾಕೇಂದ್ರವಾಗಿದೆ.

ಹಿಂದುಳಿದ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಣ ತಜ್ಞರಾದ ಪರಮ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಅವರು ಏಕಾಂಗಿಯಾಗಿ ಹೊರಾಡಿ ಯಶಸ್ವಿಸಾಧಿಸಿದ್ದಾರೆ. ಅಮೇರಿಕ ಮೂಲದ ದೊಡ್ಡ ಮಟ್ಟದ ಸಾಫ್ಟವೇರ್ ಕಂಪೆನಿಗಳಾದ ಬಿಎಂಡಬ್ಲು ಮತ್ತು ಸಿಸ್ಕೊದಂತಹ ವಾಹನ ಉದ್ಯಮದಲ್ಲಿ ಶರಣಬಸವ ವಿಶ್ವವಿದ್ಯಾಲಯ ಹೆಸರು ಗುರುಗಿಸಿಕೊಂಡು ವಿಶ್ವ ನಾಯಕರ ಗಮನ ಸೇಳೆದಿರುವುದು ಶ್ಲಾಘನೀಯವಾಗಿದೆ. ನವೀನ ಬೋಧನಾ ವಿಧಾನ, ಪ್ರಸ್ತುತಕ್ಕೆ ಅಗತ್ಯಕ್ಕೆ ತಕ್ಕಂತೆ ಪಠ್ಯಕ್ರಮ ರೂಪಿಸಿರುವ ಕಾರಣದಿಂದ ವಿದ್ಯಾರ್ಥಿಗಳ ಸಹಕಾರಿಯಾಗಿದೆ.

ಉತ್ತರ ಕರ್ನಾಟಕದಲ್ಲಿಯೇ ಸೌರ ಶಕ್ತಿಯನ್ನು ಮೊದಲು ಬಳಸಿಕೊಂಡ ವಿಶ್ವವಿದ್ಯಾಲಯವಾಗಿದೆ. ಸು.೬೦೦ ಕಿ.ವ್ಯಾಟ್ ಸೌರಶಕ್ತಿ ಉತ್ಪಾದಿಸುವ ಮೂಲಕ ವಿಶ್ವವಿದ್ಯಾಲಯದ ವಿದ್ಯುತ್ ಅಗತ್ಯತೆಯನ್ನು ಪೂರೈಸುತ್ತಿದೆ. ಈ ಭಾಗದಲ್ಲಿಯೇ ಅತಿದೊಡ್ಡ ಮಳೆಕೊಯ್ಲ ರಚನೆಯ ಘಟಕ ಹೊಂದಿದ್ದು, ವಿಶ್ವವಿದ್ಯಾಲಯ ಹಸಿರುಗೊಳಿಸಲು ಮತ್ತು ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಬಳಸಲಾಗುತ್ತದೆ. ಈ ಮೂಲಕ ಪರಿಸರದ ಸಂರಕ್ಷಣೆಯಲ್ಲಿ ವಿಶ್ವವಿದ್ಯಾಲಯದ ಪಾತ್ರ ಮಹತ್ವದಾಗಿದೆ.

ಎಕ್ಸ್‌ಲೆನ್ಸ್ ಎಂಜಿನಿಯರಿಂಗ್ ಶಿಕ್ಷಣ ಕೇಂದ್ರ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅಲ್ಪಾವಧಿ ಕೋರ್ಸ ಶಿಕ್ಷಣ ಉಚಿತವಾಗಿ ನೀಡಲಾಗುತ್ತಿದೆ. ಭವಿಷ್ಯತ್ತಿನ ಎಂಜಿನಿಯರಿಂಗ್ ತರಬೇತಿ ನೀಡಲು ನೆಟ್‌ವರ್ಕಿಂಗ್ ಮತ್ತು ನಿರ್ವಹಣೆ ಜೊತೆಗೆ ಬಿಎಂಡಬ್ಲು ಇತ್ತೀಚಿನ ಎಂಜಿನ್ ಮತ್ತು ಪ್ರಸರಣ ಘಟಕಗಳನ್ನು ( ಬಿಎಂಡಬ್ಲು ಸ್ಕಿಲ್ ನೆಕ್ಸ್ಟ್ ಪ್ರೊಗ್ರಾಂ) ಸ್ಥಾಪಿಸಿದ್ದಾರೆ.

’ಪ್ರೊಪ್ರೈಟರಿ ಟ್ವಿನ್ ಪವರ್ ಟರ್ಬೊ ಇನ್-ಲೈನ್೪-ಸಿಲಿಂಡರ್ ಡಿಸೆಲ್ ಎಂಜಿನ್ ಮತ್ತು ಎಂಸು ಸೀಡ್ ಸ್ಟೆಪ್ಟ್ರಾನಿಕ್ ಸ್ವಯಂಚಾಲಿತ ಪ್ರಸ್ರಣ ಘಟಕವನ್ನು ಬಿಎಂಡಬ್ಲು ಸ್ಕಿಲ್ ನೆಕ್ಸ್ಟ್ ಕಾರ್ಯಕ್ರಮದ ತರಬೇತಿ ಉಚಿತವಾಗಿ ನೀಡಲಾಗುತ್ತದೆ.

ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವದಲ್ಲದೇ ಪ್ರಸ್ತುತ ಸಮಾಜದ ಮಾರುಕಟ್ಟೆಯ ಅಗತ್ಯತೆಯನ್ನು ಗಮನದಲ್ಲಿಟ್ಟುಕೊಂಡು ವಿಶ್ವವಿದ್ಯಾಲಯ ಹೊಸ ಹೊಸ ಕೋರ್ಸ್ ಈ ಭಾಗದ ಜನರಿಗೆ ಪರಿಚಯಿಸುತ್ತಿದೆ. ವಿದ್ಯಾರ್ಥಿಗಳ ಕೌಶಲ್ಯ ಸುಧಾರಣೆ ಅಂಶವನ್ನು ಗಮನದಲ್ಲಿಟ್ಟುಕೊಂಡು ಹೊಸ ಹೊಸ ಕೋರ್ಸ್ ಅಸ್ತಿತ್ವಗೊಳಿಸಲು ಮತ್ತು ಮರು ವಿನ್ಯಾಸಗೊಳಿಸಲು ಉತ್ಕೃಷ್ಟ ಉದ್ಯಮ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

22 seconds ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

10 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago