ಬಿಸಿ ಬಿಸಿ ಸುದ್ದಿ

ಬಾಷ್ ಇಂಡಿಯಾಗೆ ಶತಮಾನದ ಸಂಭ್ರಮ

ಬಾಷ್ ಭಾರತದಲ್ಲಿ 1922 ರಲ್ಲಿ ಕೋಲ್ಕತ್ತಾದಲ್ಲಿ ತನ್ನ ಮೊದಲ ಮಾರಾಟ ಏಜೆನ್ಸಿಯನ್ನು ಆರಂಭಿಸಿತು. ಇದರೊಂದಿಗೆ ಆರಂಭವಾದ ಬಾಷ್ ಪ್ರಯಾಣದಿಂದ ಇದೀಗ 18 ಉತ್ಪಾದನಾ ಘಟಕಗಳು ಮತ್ತು 7 ಅಭಿವೃದ್ಧಿ ಹಾಗೂ ಅಪ್ಲಿಕೇಷನ್ ಸೆಂಟರ್ ಗಳ ಸ್ಥಾಪನೆ, 31,500 ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

“ಅತ್ಯುತ್ತಮ ಜರ್ಮನ್ ಎಂಜಿನಿಯರಿಂಗ್ ಮತ್ತು ಭಾರತೀಯ ಉದ್ಯಮಶೀಲತೆ ಸಹಭಾಗಿತ್ವದಲ್ಲಿ ಎಲ್ಲಾ ವಲಯಗಳಲ್ಲಿ ನಾವೀನ್ಯ ಉತ್ಪನ್ನಗಳ ಅಭಿವೃದ್ಧಿ ಮಾಡುತ್ತಿರುವ ಬಾಷ್’’- ಡಾ.ಸ್ಟೀಫನ್ ಹಾರ್ಟಂಗ್, ಆಡಳಿತ ಮಂಡಳಿ ಅಧ್ಯಕ್ಷರು.

  • ಮುಂದಿನ ಐದು ವರ್ಷಗಳಲ್ಲಿ ಆಧುನಿಕ ಆಟೋಮೋಟಿವ್ ತಂತ್ರಜ್ಞಾನಗಳ ಸ್ಥಳೀಯವಾಗಿ ಅಭಿವೃದ್ಧಿಪಡಿಸಲು 1000 ಕೋಟಿ ರೂಪಾಯಿಗಳ ಹೂಡಿಕೆ ಮಾಡಲಿರುವ ಬಾಷ್
  •  ಬಾಷ್ ನಿಂದ ತನ್ನ ಮೊಬಿಲಿಟಿ ಮಾರ್ಕೆಟ್ ಪ್ಲೇಸ್ ಒಂದೇ ವೇದಿಕೆಯಡಿ ಮೊಬಿಲಿಟಿ ಸಂಬಂಧಿತ ಸ್ವತ್ತುಗಳ ಪೂರೈಕೆ
  • ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಐಗಳು) ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ಸಕ್ರಿಯ ಪಾಲುದಾರಿಕೆಗಳ ಮೂಲಕ 2030 ರ ವೇಳೆಗೆ ಭಾರತದಲ್ಲಿ 100 ದಶಲಕ್ಷಕ್ಕೂ ಅಧಿಕ ಯುವಜನರಿಗೆ ಉದ್ಯೋಗಾವಕಾಶವನ್ನು ಸುಧಾರಣೆ ಮಾಡುವ ಸಂಕಲ್ಪ

ಬೆಂಗಳೂರು: ಮೊಬಿಲಿಟಿ ಸಲೂಶನ್ಸ್, ಕೈಗಾರಿಕಾ ತಂತ್ರಜ್ಞಾನ, ಗ್ರಾಹಕ ಉತ್ಪನ್ನಗಳು ಮತ್ತು ಇಂಧನ ಹಾಗೂ ಕಟ್ಟಡ ತಂತ್ರಜ್ಞಾನ ಕ್ಷೇತ್ರಗಳಿಗೆ ತಂತ್ರಜ್ಞಾನ ಮತ್ತು ಸೇವೆಗಳನ್ನು ಪೂರೈಸುತ್ತಿರುವ ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವ ಬಾಷ್ ಇಂಡಿಯಾಗೆ ಈಗ ಶತಮಾನದ ಸಂಭ್ರಮ. ಇದರ ಅತ್ಯಾಧುನಿಕ ಕಸ್ಟಮೈಸ್ ಮಾಡಲಾದ ಉತ್ಪನ್ನಗಳು ಮತ್ತು ಪರಿಹಾರಗಳೊಂದಿಗೆ ಭಾರತದ ಮೊಬಿಲಿಟಿ ಮತ್ತು ಮೊಬಿಲಿಟಿ ಆಚೆಗಿನ ಲ್ಯಾಂಡ್ ಸ್ಕೇಪ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಮುಂಚೂಣಿಯಲ್ಲಿದೆ.

ಭಾರತದ ಕೃಷಿ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಈ ಕ್ಷೇತ್ರವನ್ನು ಯಾಂತ್ರೀಕರಣಗೊಳಿಸಲು ಸಹಾಯ ಮಾಡುವುದರಿಂದ ದೇಶದ ತಂತ್ರಜ್ಞಾನ ಉದ್ಯಮದ ಅಭಿವೃದ್ಧಿಯನ್ನು ಉತ್ತಮ ಮಟ್ಟಕ್ಕೆ ತರುವವರೆಗೆ, ಅದು ಹಸಿರು ಕ್ರಾಂತಿ, ಸಾಫ್ಟ್ ವೇರ್ ಕ್ರಾಂತಿ, ಉದಾರೀಕರಣ ಅಥವಾ ಮೊಬಿಲಿಟಿ ಕ್ರಾಂತಿಯಾಗಿರಬಹುದು ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಬಾಷ್ ಇಂಡಿಯಾ ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.

ರಾಬರ್ಟ್ ಬಾಷ್ ಜಿಎಂಬಿಎಚ್ ಆಡಳಿತ ಮಂಡಳಿ ಅಧ್ಯಕ್ಷ ಡಾ.ಸ್ಟೀಫನ್ ಹಾರ್ಟಂಗ್ ಅವರು ಮಾತನಾಡಿ, “ನಮ್ಮ ಬಾಷ್ ಕಂಪನಿಯು ಅತ್ಯುತ್ತಮ ಜರ್ಮನ್ ಎಂಜಿನಿಯರಿಂಗ್ ಮತ್ತು ಭಾರತೀಯ ಉದ್ಯಮಶೀಲತೆ ಸಹಭಾಗಿತ್ವದಲ್ಲಿ ಎಲ್ಲಾ ವಲಯಗಳಲ್ಲಿ ನಾವೀನ್ಯ ಉತ್ಪನ್ನಗಳ ಅಭಿವೃದ್ಧಿ ಮಾಡುತ್ತಿದೆ’’ ಎಂದು ತಿಳಿಸಿದ್ದಾರೆ.

“ಕಾರ್ಯದಕ್ಷತೆ ಮತ್ತು ಗ್ರಾಹಕರ ವಿಶ್ವಾಸದಲ್ಲಿ ಯಾವುದೇ ರಾಜೀ ಮಾಡಿಕೊಳ್ಳದೇ ಈ ಮೈಲಿಗಲ್ಲನ್ನು ತಲುಪಿರುವುದಕ್ಕೆ ನಾನು ಬಾಷ್ ಇಂಡಿಯಾದ ಆಡಳಿತ ಮಂಡಳಿ ಮತ್ತು ಸಹವರ್ತಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ’’ ಎಂದು ಹೇಳಿದ್ದಾರೆ.

ಭಾರತದಲ್ಲಿ ಬಾಷ್ ಸಮೂಹದ ಅಧ್ಯಕ್ಷ ಮತ್ತು ಬಾಷ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಸೌಮಿತ್ರ ಭಟ್ಟಾಚಾರ್ಯ ಅವರು ಮಾತನಾಡಿ, “ಭಾರತದಲ್ಲಿ ಬಾಷ್ ನ 100 ವರ್ಷಗಳ ಪ್ರಯಾಣವು ನಮ್ಮ ಸಹವರ್ತಿಗಳ ಉತ್ಸಾಹ, ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ. ಇದರಲ್ಲಿ ಅವರು ವಹಿಸಿರುವ ಪ್ರಮುಖ ಪಾತ್ರಕ್ಕಾಗಿ ನಮ್ಮ ಸಹವರ್ತಿಗಳಿಗೆ ಪ್ರಾಮಾಣಿಕವಾದ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ’’ ಎಂದು ತಿಳಿಸಿದ್ದಾರೆ.

“ಬಾಷ್ ಇಂಡಿಯಾ ತನ್ನ ಬೇರುಮಟ್ಟದಲ್ಲಿ ಗಟ್ಟಿಯಾಗಿ ಉಳಿಯುತ್ತದೆ ಮತ್ತು ದೊಡ್ಡ ದೊಡ್ಡ ಉತ್ಪನ್ನಗಳು ಮತ್ತು ಸೇವೆಗಳ ಮುಂದಿನ ಅಲೆಯನ್ನು ವಿಕಸನಗೊಳಿಸಲಿದೆ, ಆವಿಷ್ಕರಿಸಲಿದೆ ಮತ್ತು ಮತ್ತಷ್ಟು ಪ್ರೇರಣೆ ನೀಡಲಿದೆ. ಡಿಜಿಟಲ್, ಸುಸ್ಥಿರ, ದಕ್ಷ, ಸ್ವಾವಲಂಬಿ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಭಾರತಕ್ಕಾಗಿ ನಾವು ಈ ದೃಷ್ಟಿಯನ್ನು ಮುಂದುವರಿಸಲಿದ್ದೇವೆ’’ ಎಂದರು.

ಬಾಷ್ 1922 ರಲ್ಲಿ ತನ್ನ ಮೊದಲ ಮಾರಾಟ ಏಜೆನ್ಸಿಯನ್ನು ಕೋಲ್ಕತ್ತಾದಲ್ಲಿ ಆರಂಭಿಸಿತು. ಇದರೊಂದಿಗೆ ಹೀಗೆ ಬೆಳೆಯುತ್ತಾ ಬಂದಿರುವ ಸಂಸ್ಥೆಯು ಪ್ರಸ್ತುತ 18 ಉತ್ಪಾದನಾ ಘಟಕಗಳು ಹಾಗೂ 7 ಅಭಿವೃದ್ಧಿ ಹಾಗೂ ಅಪ್ಲಿಕೇಶನ್ ಕೇಂದ್ರಗಳನ್ನು ಹೊಂದಿದ್ದು, ಸುಮಾರು 31,500 ಸಹವರ್ತಿಗಳನ್ನು ನೇಮಕ ಮಾಡಿಕೊಂಡಿದೆ.

ಉತ್ಕೃಷ್ಠತೆಯ ಪರಂಪರೆಯನ್ನು ಮೈಗೂಡಿಸಿಕೊಂಡಿರುವ ಬಾಷ್ ತನ್ನ ಶತಮಾನದ ಸುದೀರ್ಘ ಪ್ರಯಾಣವು ಮುಂದುವರಿದಿದ್ದು, ಹೊಸ ಹೊಸ ವ್ಯಾಪಾರ ವಲಯಗಳತ್ತ ಹೆಜ್ಜೆ ಇಟ್ಟು ಮುಂದೆ ಸಾಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಬಾಷ್ ಇಂಡಿಯಾವು ಸುಧಾರಿತ ವಾಹನ ತಂತ್ರಜ್ಞಾನಗಳ ಸ್ಥಳೀಕರಣದಲ್ಲಿ ಅಂದರೆ, ಲೋಕಲೈಸೇಶನ್ ಗೆ 1000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹೂಡಿಕೆ ಮಾಡುವ ಯೋಜನೆಗಳನ್ನು ರೂಪಿಸಿದೆ. ಈ ಮೂಲಕ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಆತ್ಮನಿರ್ಭರ್ ಭಾರತವನ್ನು ಬೆಂಬಲಿಸುತ್ತದೆ.

ಭಾರತದಲ್ಲಿ ಮೊಬಿಲಿಟಿಯನ್ನು ರೂಪಿಸುವುದು
ಆರ್ಥಿಕ ಮತ್ತು ಸಮರ್ಥನೀಯವಾದ, ಸುರಕ್ಷಿತ ಮತ್ತು ಅನುಕೂಲಕರ ಹಾಗೂ ಭವಿಷ್ಯದಲ್ಲಿ ಉತ್ತೇಜಕವಾಗಿರುವ ಮೊಬಿಲಿಟಿಯ ಅನುಭವಕ್ಕಾಗಿ ಬಾಷ್ ಯಾವಾಗಲೂ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸಿದೆ. ಕಾನೂನು ಮತ್ತು ಬಳಕೆದಾರರ ಅನುಭವದಲ್ಲಿ ಬದಲಾಗುತ್ತಿರುವ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಹೊಸ ಪ್ಲಾಟ್ ಫಾರ್ಮ್ ಗಳ ಮೂಲಕ ಇದನ್ನು ಸಾಧಿಸಲಾಗುತ್ತಿದೆ.

ಬಾಷ್ ತನ್ನ ಆಟೋಮೋಟಿವ್ ಜ್ಞಾನ, ವ್ಯಾಪಕ-ಶ್ರೇಣಿಯ ಎಲೆಕ್ಟ್ರಾನಿಕ್ಸ್ ಮತ್ತು ಮೊಬಿಲಿಟಿಯ ಸಾಫ್ಟ್ ವೇರ್ ಪ್ರಾಬಲ್ಯದ ಭವಿಷ್ಯದಲ್ಲಿ ಪ್ರಮುಖ ಸ್ಥಾನದತ್ತ ಮತ್ತಷ್ಟು ಕಾರ್ಯತಂತ್ರದ ಹೆಜ್ಜೆಗಳನ್ನು ಇಡುತ್ತಿದೆ. ಸಾಫ್ಟ್ ವೇರ್ ಪರಿಣತಿ, ಮೊಬಿಲಿಟಿ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಅಭಿವೃದ್ಧಿಯಲ್ಲಿ ಬಿಜಿಎಸ್ ಡಬ್ಲ್ಯೂ 20000+ ಇಂಜಿನಿಯರ್ ಗಳನ್ನು ಹೊಂದಿದ್ದು, ಇದು ಜರ್ಮನಿಯ ಹೊರಗೆ ಸ್ಥಾಪಿಸಲಾಗಿರುವ ಅತಿ ದೊಡ್ಡ ಆರ್ & ಡಿ ಕೇಂದ್ರವಾಗಿದೆ.

ಪವರ್ ಟ್ರೇನ್ ವ್ಯವಹಾರದಲ್ಲಿ ಬಾಷ್ ಮುಂಚೂಣಿಯಲ್ಲಿರುವ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಪವರ್ ಟ್ರೇನ್, ಗ್ಯಾಸೋಲಿನ್, ಡೀಸೆಲ್ ಅಥವಾ ವಿದ್ಯುದ್ದೀಕರಣಕ್ಕೆ ಸಂಬಂಧಿಸಿದಂತೆ ತಂತ್ರಜ್ಞಾನ-ತಟಸ್ಥ ವಿಧಾನವನ್ನು ನಾವು ಕಂಡುಕೊಂಡಿದ್ದೇವೆ. ಮೊಬಿಲಿಟಿಯಲ್ಲಿ ನಿರಂತರವಾಗಿ ಬದಲಾಗುತ್ತಿರುವ ಅಗತ್ಯತೆಗಳನ್ನು ಪರಿಗಣಿಸಿ ಬಾಷ್ ಮೊಬಿಲಿಟಿಯನ್ನು ಹೆಚ್ಚು ಸಮರ್ಥನೀಯವಾಗಿಸಲು ಒಂದಕ್ಕಿಂತ ಹೆಚ್ಚು ಪವರ್ ಟ್ರೇನ್ ತಂತ್ರಜ್ಞಾನವನ್ನು ಒದಗಿಸುತ್ತದೆ.

ಬಾಷ್ ಎಲೆಕ್ಟ್ರಿಕ್ ಪವರ್ ಟ್ರೇನ್ ಪರಿಹಾರಗಳಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ. 2030 ರ ವೇಳೆಗೆ ಭಾರತದಲ್ಲಿ ಪ್ರತಿ ಮೂರು ವಾಹನಗಳಲ್ಲಿ ಒಂದು ವಿದ್ಯುತ್ ಚಾಲಿತ ವಾಹನವಾಗಿರುತ್ತದೆ ಎಂದು ಬಾಷ್ ಅಂದಾಜು ಮಾಡಿದೆ. ಇದೇ ವೇಳೆ, ಬಳಕೆಯ ಸಂದರ್ಭದಲ್ಲಿ ಗ್ರಾಹಕರ ಕಾರ್ಯತಂತ್ರವನ್ನು ಅವಲಂಬಿಸಿ ಇಂಟರ್ನಲ್ ಕಂಬಷನ್ ಇಂಜಿನ್ (ಐಸಿಇ) ಸಹ ಸೌಮ್ಯ ಮತ್ತು ಬಲವಾದ ಮಿಶ್ರತಳಿಗಳೊಂದಿಗೆ ವಿದ್ಯುದ್ದೀಕರಣಗೊಳ್ಳುತ್ತಿದೆ. ವಿಶೇಷವಾಗಿ ವಾಣಿಜ್ಯ ವಾಹನಗಳು ಮತ್ತು ಆಫ್-ಹೈವೇ ವಿಭಾಗಗಳಲ್ಲಿ ಐಸಿಇ ಪವರ್ ಟ್ರೇನ್ ಮಿಶ್ರಣದ ಪ್ರಮುಖ ಭಾಗವಾಗಿ ಉಳಿದಿದೆ.

2025 ರ ವೇಳೆಗೆ ಅಪಘಾತಗಳ ಸಂಖ್ಯೆಗಳಲ್ಲಿ 50% ರಷ್ಟು ಕಡಿಮೆ ಮಾಡುವ ಸರ್ಕಾರದ ದೃಷ್ಟಿಗೆ ಬಾಷ್ ಬೆಂಬಲವಾಗಿ ನಿಂತಿದೆ. ಭಾರತ- ನಿರ್ದಿಷ್ಟವಾದ ಐಡೆಂಟಿಫಿಕೇಶನ್ ಟೆಕ್ನಾಲಜಿ, ಮೋಟಾರ್ ಸೈಕಲ್ ಸುರಕ್ಷತೆ, ರೈಡರ್ ನೆರವು ಮತ್ತು ಬ್ರೇಕಿಂಗ್ ಹಾಗೂ ಪ್ರಯಾಣಿಕರ ಸುರಕ್ಷತೆಯೊಂದಿಗೆ ಪ್ರಯಾಣಿಕರ ಹಾಗೂ ವಾಣಿಜ್ಯ ವಾಹನ ಚಾಲಕರಿಗೆ ಸಹಾಯಕ ಮತ್ತು ಸ್ವಯಂಚಾಲಿತ ಮೊಬಿಲಿಟಿಯ ಶ್ರೇಣಿಯಲ್ಲಿ ಪರಿಣತಿಯನ್ನು ಹೊಂದಿದೆ.

ಇದಕ್ಕಾಗಿ ಬಾಷ್ ಇಂಡಿಯಾ ಕಳೆದ 10 ವರ್ಷಗಳಲ್ಲಿ 380 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದೆ ಮತ್ತು ಮುಂದಿನ 5 ವರ್ಷಗಳಲ್ಲಿ ಸುರಕ್ಷತಾ ಡೊಮೇನ್ ನಲ್ಲಿ 238 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವ ಯೋಜನೆಯನ್ನು ರೂಪಿಸಿದೆ.

ಎಲ್ಲಾ ನಾಲ್ಕು ವರ್ಗಗಳಲ್ಲಿ ಬಲವರ್ಧನೆ
ಒಂದು AIoT ಕಂಪನಿಯಾಗಿರುವ ಬಾಷ್ ಇಂಡಿಯಾ ಭವಿಷ್ಯಕ್ಕಾಗಿ ಸ್ಮಾರ್ಟ್ ಅಭಿವೃದ್ಧಿ, ಸುರಕ್ಷತೆ, ಸಮರ್ಥತೆ ಮತ್ತು ಸುಸ್ಥಿರವಾದ ಸ್ಮಾರ್ಟ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಎಐ, ಐಒಟಿ, ಆಟೋಮೇಶನ್ ಮತ್ತು ಡಿಜಿಟಲೀಕರಣವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುತ್ತಿದೆ.

ಸಂಬಂಧಿತ ಪವರ್ ಟೂಲ್ಸ್, ಗೃಹೋಪಕರಣ ಉತ್ಪನ್ನಗಳು ಮತ್ತು ಹೀಟಿಂಗ್ ಸಿಸ್ಟಂಗಳ ಮಾರಾಟದಲ್ಲಿ ಒಂದು ವರ್ಷದೊಳಗೆ 50% ಬೆಳವಣಿಗೆ ಕಂಡುಬಂದಿದೆ. ಜಾಗತಿಕ ಮಟ್ಟದಲ್ಲಿ 2020 ರಲ್ಲಿದ್ದ ನಾಲ್ಕು ಮಿಲಿಯನ್ ಯುನಿಟ್ ಗಳ ಬದಲು 2021 ರಲ್ಲಿ 6 ಮಿಲಿಯನ್ ಯುನಿಟ್ ಗಳು ಮಾರಾಟವಾಗಿವೆ.

ಬಾಷ್ ಸೆಂಟರ್ ಫಾರ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಬಿಸಿಎಐ) ನೊಂದಿಗೆ ಕಂಪನಿಯು ಎಐ ಕ್ಷೇತ್ರದಲ್ಲಿ ಶಕ್ತಿಯುತವಾದ ಯುನಿಟ್ ಅನ್ನು ಆರಂಭಿಸಿದ್ದು, ಇದು ಈಗಾಗಲೇ 300 ಮಿಲಿಯನ್ ಯುರೋದಷ್ಟು ಆದಾಯ ತಂದಿದೆ.

ಬಾಷ್ ಭಾರತದಲ್ಲಿ ದೊಡ್ಡ ಮೊತ್ತದ ಹೂಡಿಕೆ ಮಾಡುವುದನ್ನು ಮುಂದುವರಿಸಲಿದ್ದು, ತನ್ನ ನಿವ್ವಳ ಮಾರಾಟಗಳಿಂದ ಬರುವ ಆದಾಯದಲ್ಲಿ 7% ರಷ್ಟು ಹಣವನ್ನು ವಿಸ್ತರಣೆಗೆ ಹೂಡಿಕೆ ಮಾಡಲಿದೆ.

ಜರ್ಮನಿಯಿಂದ ಹೊರಗಿರುವ ಭಾರತದಲ್ಲಿನ ಸುಸ್ಥಿರವಾದ ಮತ್ತು ಅತ್ಯುತ್ತಮವಾದ ಆರ್ & ಡಿ ತಂಡವು ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿ ನೆರವಾಗುತ್ತಿದೆ. ಬಾಷ್ ನ ಮೊಬಿಲಿಟಿ ಬಿಯಾಂಡ್ ವ್ಯವಹಾರವು ಸ್ಥಳೀಯ, ಕೈಗೆಟುಕುವ ಮತ್ತು ಭಾರತದ ನಿರ್ದಿಷ್ಟ ಆವಿಷ್ಕಾರಗಳನ್ನು ರೂಪಿಸಲು ಉತ್ಪಾದನೆ, ಉತ್ಪನ್ನ ಮತ್ತು ಸೇವಾಗುಣಮಟ್ಟದ ಅತ್ಯುನ್ನತವಾದ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದೆ.

ಬಾಷ್ ಸುಧಾರಿತ ತಂತ್ರಜ್ಞಾನದ ಮೂಲಕ ಜೀವನ ಗುಣಮಟ್ಟವನ್ನು ಸುಧಾರಣೆ ಮಾಡಲು ಬದ್ಧವಾಗಿದೆ. ಕಳೆದ 26 ವರ್ಷಗಳಲ್ಲಿ “ಆಧುನಿಕ ಭಾರತ’’ ನಿರ್ಮಾಣಕ್ಕೆ ನೆರವು ನೀಡುತ್ತಾ ಬಂದಿರುವ ಬಾಷ್ ಪವರ್ ಟೂಲ್ಸ್ ಕ್ಷೇತ್ರದಲ್ಲಿ ತನ್ನ ಸ್ಥಳೀಕರಣದ ಪಾಲನ್ನು 2025 ರ ವೇಳೆಗೆ 10% ಕ್ಕಿಂತ ಹೆಚ್ಚು ಮಾಡಿಕೊಳ್ಳುವ ಗುರಿಯನ್ನು ಹೊಂದಿದೆ.

ಇದಲ್ಲದೇ, ಬಿಎಸ್ಎಚ್ ಚೆನ್ನೈನಲ್ಲಿರುವ ತನ್ನ ಹೊಸ ಘಟಕದಲ್ಲಿ 2025 ರ ವೇಳೆಗೆ ರೆಫ್ರಿಜರೇಟರ್ ಗಳನ್ನು ಉತ್ಪಾದನೆ ಮಾಡುವ ಯೋಜನೆಯನ್ನು ರೂಪಿಸಿದೆ. ಈ ಮೂಲಕ ಸ್ಥಳೀಕರಣ ಪ್ರಮಾಣವನ್ನು 75% ಕ್ಕೆ ಹೆಚ್ಚಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ.

ಬಾಷ್ ರೆಕ್ಸ್ ರೋತ್ ಎಲ್ಲಾ ಟಚ್ ಪಾಯಿಂಟ್ ಗಳಲ್ಲಿ ತಡೆರಹಿತವಾದ ಡಿಜಿಟಲ್ ಅನುಭವವನ್ನು ನೀಡುವ ನಿಟ್ಟಿನಲ್ಲಿ ಸ್ಮಾರ್ಟ್, ಇನ್ನೋವೇಟಿ ಮತ್ತು ಇಂಧನ ಕ್ಷಮತೆಯ ಉತ್ಪನ್ನಗಳು ಮತ್ತು ಪರಿಹಾರಗಳನ್ನು ನೀಡುವುದನ್ನು ಮುಂದುವರಿಸಲಿದೆ.

ಬಾಷ್ ಆಟೋಮೋಟಿವ್ ಆಫ್ಟರ್ ಮಾರ್ಕೆಟ್ ಒಂದು ಅತ್ಯುತ್ಕೃಷ್ಠವಾದ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಇದು ಇಎಸ್ಐ ಡಯಾಗ್ನಾಸಿಸ್ ಮತ್ತು ನಿಖರವಾದ ವರ್ಕ್ ಶಾಪ್ ಕಾರ್ಯಾಚರಣೆಗಳ ಒಳನೋಟಗಳನ್ನು ನೀಡಲಿದೆ. ಇದಲ್ಲದೇ, ಬಾಷ್ ಇಂಡಿಯಾ ಬಿಲ್ಡಿಂಗ್ ಇಂಟಲಿಜೆಂಟ್, ಸೆಕ್ಯೂರ್ ಮತ್ತು ಭವಿಷ್ಯಕ್ಕೆ ಸಿದ್ಧಗೊಳಿಸುತ್ತಿದೆ ಹಾಗೂ 2030 ರ ವೇಳೆಗೆ ಸ್ಥಳೀಯ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರುವ ಮೂಲಕ ಸ್ಥಳೀಕರಣ ಕಾರ್ಯಕ್ರಮವನ್ನು 40% ರಷ್ಟು ಸಾಧಿಸುವ ಗುರಿಯನ್ನು ಹಾಕಿಕೊಂಡಿದೆ.

ಮೊಬಿಲಿಟಿ ಮಾರ್ಕೆಟ್ ಪ್ಲೇಸ್- ಎಲ್ಲಾ ಮೊಬಿಲಿಟಿ ಸಲೂಶನ್ ಗಳಿಗೆ ಒನ್ ಸ್ಟಾಪ್ ಆನ್ ಲೈನ್ ಪ್ಲಾಟ್ ಫಾರ್ಮ್
ಎಲ್ಲಾ ಮೊಬಿಲಿಟಿ ಅಂದರೆ ಚಲನಶೀಲತೆ ಸಂಬಂಧಿತ ಅಸೆಟ್ ಗಳಿಗೆ ಒನ್ ಸ್ಟಾಪ್ ಶಾಪ್ ಮೊಬಿಲಿಟಿ ಮಾರ್ಕೆಟ್ ಪ್ಲೇಸ್ ಆಗುವ ಗುರಿಯನ್ನು ಬಾಷ್ ಹೊಂದಿದೆ. ಇದರೊಂದಿಗೆ ಡಿಜಿಟಲ್ ಮಾರುಕಟ್ಟೆಯನ್ನು ಇನ್ನಷ್ಟು ಸದೃಢಗೊಳಿಸಲು ಹೆಜ್ಜೆ ಇಟ್ಟಿದೆ. ನಾವೀನ್ಯತೆ ಮತ್ತು ವಹಿವಾಟಿನ ವೇದಿಕೆಯಾಗಿ, ಇದು ಪರಿಸರ ವ್ಯವಸ್ಥೆಯಾದ್ಯಂತ ಬಳಕೆ ಮತ್ತು ದಕ್ಷತೆಯ ಅಂಶಗಳನ್ನು ಸುಧಾರಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಹೀಗೆ ಮೊಬಿಲಿಟಿ ಡೊಮೇನ್ ನಲ್ಲಿ ಬಾಷ್ ನ ಪರಿಣತಿಯಿಂದ ನಡೆಸಲ್ಪಡುವ ಮೊಬಿಲಿಟಿ ಪರಿಹಾರಗಳ ಮೇಲೆ ಕೇಂದ್ರೀಕರಿಸಿದ ಡಿಜಿಟಲ್ ಅಸೆಟ್ ಗಳೊಂದಿಗೆ ತಟಸ್ಥ ಪ್ಲಾಟ್ ಫಾರ್ಮ್ ಆಗಲಿದೆ.

ರಸ್ತೆ, ಹವಾಮಾನ ಡೇಟಾ, ಟೆಲಿಮ್ಯಾಟಿಕ್ಸ್, ನ್ಯಾವಿಗೇಷನ್, ಪಾಯಿಂಟ್ ಆಫ್ ಆಟೋಮೋಟಿವ್ ಲೈಫ್ ಸೈಕಲ್ ನಲ್ಲಿ ವ್ಯಾಪಕವಾದ ಶ್ರೇಣಿಯ ಸೇವೆಗಳನ್ನು ಒಳಗೊಂಡಿರುವ ಎಪಿಐಗಳಿಂದ ಡಿಜಿಟಲ್ ಅಸೆಟ್ ಗಳ ಪೋರ್ಟ್ ಫೋಲಿಯೋವನ್ನು ಎಂಡ್-ಟು-ಎಂಡ್ ಪರಿಹಾರಗಳು, ಸೇವೆಗಳು ಮತ್ತು ಹಾರ್ಡ್ ವೇರ್ ಗೆ ವಿಸ್ತರಣೆ ಮಾಡುವ ಗುರಿಯನ್ನು ಈ ಪ್ಲಾಟ್ ಫಾರ್ಮ್ ಹೊಂದಿದೆ(ಪಾರ್ಕಿಂಗ್, ಇವಿ ಇನ್ಫ್ರಾ, ಇತ್ಯಾದಿ).

ಮೊಬಿಲಿಟಿ ಕ್ಲೌಡ್ ಪ್ಲಾಟ್ ಫಾರ್ಮ್- ನಿಮ್ಮ ಕ್ಲೌಡ್ ರೂಪಾಂತರವನ್ನು ಸರಳೀಕರಣಗೊಳಿಸುವುದು
ಡಿಜಿಟಲ್ ಯುಗವು ವಿಕಸನಗೊಳ್ಳುತ್ತಿದೆ. ಇದು ತಾಂತ್ರಿಕ ಮತ್ತು ಕಾರ್ಯಾಚರಣೆಯ ಸವಾಲಗಳೊಂದಿಗೆ ಆಗುತ್ತಿದ್ದು, ಹೆಚ್ಚು ಸೂಕ್ತವಾದ ತಂತ್ರಜ್ಞಾನದ ಸ್ಟ್ಯಾಕ್ ಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಹಿಡಿದು ನಿರಂತರವಾಗಿ ಬದಲಾವಣೆ ಕಾಣುತ್ತಿರುವ ನಿಯಂತ್ರಕ ಅಗತ್ಯತೆಗಳಿಗೆ ಹೊಂದಿಕೊಳ್ಳುವವರೆಗೆ ಮುಂದುವರಿಯುತ್ತದೆ. ಮೊಬಿಲಿಟಿ ಡೊಮೇನ್ ನಲ್ಲಿ ಡಿಜಿಟಲ್ ಉತ್ಪನ್ನದ ನಾವೀನ್ಯತೆಯಲ್ಲಿ ಎದುರಾಗುತ್ತಿರುವ ಸವಾಲುಗಳನ್ನು ಎದುರಿಸುವ ಉದ್ದೇಶದಿಂದ ಬಾಷ್ ಮೊಬಿಲಿಟಿ ಕ್ಲೌಡ್ ಪ್ಲಾಟ್ ಫಾರ್ಮ್ (ಎಂಸಿಪಿ) ಅನ್ನು ರಚನೆ ಮಾಡಲಾಗಿದೆ.

ಸುಧಾರಿತ ಸಂಪರ್ಕಿತ ಮೊಬಿಲಿಟಿ ಪರಿಹಾರಗಳಿಗಾಗಿ ಐಒಟಿ- ಸಕ್ರಿಯಗೊಳಿಸಿದ ಡಿಜಿಟಲ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ, ಕಾರ್ಯಗತಗೊಳಿಸುವುದು ಮತ್ತು ಸ್ಕೇಲಿಂಗ್ ಮಾಡಲು ಲಾಂಚ್ ಪ್ಯಾಡ್ ಅನ್ನು ಅಭಿವೃದ್ಧಿಪಡಿಸಿದೆ. ನಮ್ಮ ಗ್ರಾಹಕರಿಗೆ ಅವರ ಪ್ರಮುಖ ಉತ್ಪನ್ನ ವೈಶಿಷ್ಟ್ಯತೆಗಳ ಮೇಲೆ ಕೇಂದ್ರೀಕರಿಸುವಂತೆ ಮಾಡಲು ಈ ಮೊಬಿಲಿಟಿ ಕ್ಲೌಡ್ ಪ್ಲಾಟ್ ಫಾರ್ಮ್ ಸಹಾಯ ಮಾಡುತ್ತದೆ.

ಅವುಗಳ ಜೀವಿತಾವಧಿಯ ಉತ್ಪನ್ನದ ವೆಚ್ಚವನ್ನು 25% ರಷ್ಟು ಉತ್ತಮಗೊಳಿಸುತ್ತದೆ ಹಾಗೂ ಮಾರುಕಟ್ಟೆಯ ಸಮಯವನ್ನು ಮೂರು ಪಟ್ಟು ಸುಧಾರಣೆ ಮಾಡಲು ನೆರವಾಗುತ್ತದೆ. ಇದಲ್ಲದೇ, ಸಂಪೂರ್ಣ ನಮ್ಯತೆ ಮತ್ತು ಲಾಕ್-ಇನ್ ಇಲ್ಲದೇ ನವ ಪೀಳಿಗೆಯ ಮೊಬಿಲಿಟಿ ಸ್ಟಾರ್ಟಪ್ ಗಳು, ಎಸ್ಎಂಇಗಳು ಹಾಗೂ ಕಾರ್ಪೊರೇಟ್ ಗಳಿಗೆ ತಮ್ಮ ವ್ಯವಹಾರವನ್ನು ಮಾಪನ ಮಾಡಿಕೊಳ್ಳಲು ಸಹಾಯ ಮಾಡುವ ನಿಟ್ಟಿನಲ್ಲಿ ಬಾಷ್ ಈ ಮೊಬಿಲಿಟಿ ಕ್ಲೌಡ್ ಪ್ಲಾಟ್ ಫಾರ್ಮ್ ಅನ್ನು ಅಭಿವೃದ್ಧಿಪಡಿಸಿದೆ.

ಉಪಕ್ರಮಗಳು ಮತ್ತು ಸ್ವಾಧೀನದಿಂದ ಭವಿಷ್ಯಕ್ಕಾಗಿ ಸೂಕ್ತ
2020 ರಿಂದ ವಿಶ್ವದಾದ್ಯಂತ ಇರುವ ತನ್ನ 400 ಕ್ಕೂ ಹೆಚ್ಚು ಸ್ಥಳಗಳ ಘಟಕಗಳಲ್ಲಿ ಬಾಷ್ ಗ್ರೂಪ್ ಹವಾಮಾನ ತಟಸ್ಥತೆಯನ್ನು ಅನುಷ್ಠಾನಕ್ಕೆ ತಂದಿದೆ.

ಇದಲ್ಲದೇ, ಬಾಷ್ ಹವಾಮಾನ ಕ್ರಿಯೆಯನ್ನು ರೂಪಿಸಲು ಬಯಸುತ್ತದೆ ಹಾಗೂ ವ್ಯವಸ್ಥಿತವಾಗಿ ಅಪ್ ಸ್ಟ್ರೀಂ ಮಾಡಲು ಹಾಗೂ ಡೌನ್ ಸ್ಟ್ರೀಂ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಇದು 2030 ರ ವೇಳೆಗೆ 15% ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಇಂಡಸ್ಟ್ರಿ 4.0 ಗೆ ತ್ವರಿತವಾಗಿ ಪರಿವರ್ತನೆ ಮಾಡುವ ಮೂಲಕ ಮತ್ತು ಅದರ ಸ್ಥಳೀಯ ಸಾಮರ್ಥ್ಯಗಳನ್ನು ಹೆಚ್ಚಿಸುವುದರ ಮೂಲಕ ಬಾಷ್ ಭಾರತದಲ್ಲಿ ಮುಂದಿನ ನೂರು ವರ್ಷಗಳ ಯೋಜನೆಯನ್ನು ರೂಪಿಸಿದೆ.

ಕಂಪನಿಯ ಭವಿಷ್ಯದ ಕಾರ್ಯತಂತ್ರದ ಭಾಗವಾಗಿ ಯುವಜನರ ಜೀವನವನ್ನು ಸುಧಾರಿಸುವುದು ಮತ್ತು ಆತ್ಮನಿರ್ಭರ್ ಭಾರತ್ ಉಪಕ್ರಮ, ಬಾಷ್ ಅನ್ನು ಬೆಂಬಲಿಸುವುದು 2030 ರ ವೇಳೆಗೆ ಭಾರತದಲ್ಲಿ 100 ಮಿಲಿಯನ್ ಗಿಂತಲೂ ಹೆಚ್ಚು ಯುವಜನರ ಉದ್ಯೋಗಾವಕಾಶವನ್ನು ಕೈಗಾರಿಕಾ ತರಬೇತಿ ಸಂಸ್ಥೆಗಳೊಂದಿಗೆ (ಐಟಿಐಗಳು) ಸಕ್ರಿಯ ಪಾಲುದಾರಿಕೆ ಮತ್ತು ಸರ್ಕಾರದ ಮಧ್ಯಸ್ಥಿಕೆಗಳ ಮೂಲಕ ಹೆಚ್ಚಿಸಲಿದೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

1 hour ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

11 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

11 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

11 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago