ಬಿಸಿ ಬಿಸಿ ಸುದ್ದಿ

ಫಲಿಸದ ತಹಶೀಲ್ದಾರ-ಪಿಎಸ್ಐ ಸಂಧಾನ: ಭಕ್ತರ ಮೇಲೆ ಲಘು ಲಾಠಿ ಪ್ರಹಾರ

ಕಲಬುರಗಿ: ಮಹಾಮಾರಿ ಸಾಂಕ್ರಾಮಿಕ ರೋಗ ಕೊರೊನಾ ಸೋಂಕಿನ ರೂಪಾಂತರಿ ವೈರಸ್ ಹೆಚ್ಚಾಗುತ್ತಿರುವ ಕಾರಣಕ್ಕೆ ಮಾರ್ಗಸೂಚಿಗಳನ್ವಯ ರದ್ದಾಗಿದ್ದ ನಾಲವಾರ ಶ್ರೀಕೋರಿಸಿದ್ಧೇಶ್ವರ ರಥೋತ್ಸವ ಬುಧವಾರ ತಾಲೂಕು ಆಡಳಿತದ ಆದೇಶವನ್ನು ಧಿಕ್ಕರಿಸಿ ಸಾಗಿತು. ಪೊಲೀಸರ ಸರ್ಪಗಾವಲು ಬೇಧಿಸಿ ರಥ ಎಳೆದ ಭಕ್ತರು, ಜಯಘೋಷಗಳನ್ನು ಮೊಳಗಿಸಿ ಕಾನೂನಿನ ಬೇಲಿ ಜಿಗಿದರು.

ಜಾತ್ರೆಗೂ ಮುಂಚೆ ವಾಡಿ ನಾಲವಾರ ಮಠದಲ್ಲಿ ಪೀಠಾಧಿಪತಿ ಡಾ.ಸಿದ್ಧ ತೋಟೇಂದ್ರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಶಾಂತಿ ಸಭೆ ನಡೆಸಿ ಜಾತ್ರೆ, ತನಾರತಿ, ರಥೋತ್ಸವ ಸಂಪೂರ್ಣ ರದ್ದು ಎಂದು ಘೋಷಿಸಿದ್ದ ಪೊಲೀಸರು ಹಾಗೂ ತಹಶೀಲ್ದಾರರ ಸಮ್ಮುಖದಲ್ಲೇ ಬುಧವಾರ ಲಕ್ಷಾಂತರ ಭಕ್ತರ ಸಾಕ್ಷಿಯಾಗಿ ಅದ್ಧೂರಿ ರಥೋತ್ಸವ ನಡೆಯಿತು. ಸಾಂಪ್ರದಾಯಿಕ ಆಚರಣೆಗಾಗಿ ತಾಲೂಕು ಆಡಳಿತ ಕೇವಲ ಹತ್ತು ಅಡಿ ರಥ ಎಳೆಯಲು ಅವಕಾಶ ನೀಡಿತ್ತು.

ಆದರೆ ಭಕ್ತರು ಮಾತು ಕೇಳಲಿಲ್ಲ. ತಹಶೀಲ್ದಾರ ಉಮಾಕಾಂತ ಹಳ್ಳೆ, ಸಿಪಿಐ ಪ್ರಕಾಶ ಯಾತನೂರ ಹಾಗೂ ಪಿಎಸ್ಐ ಮಹಾಂತೇಶ ಪಾಟೀಲ ಅವರು ರಥವನ್ನು ಏರಿ ಸ್ವಾಮೀಜಿಯ ಮನವೊಲಿಸುವ ಪ್ರಯತ್ನ ಮಾಡಿದರು. ರಥ ಎಳೆಯದಂತೆ ಮನವಿ ಮಾಡಿದರು. ಅದಾಗ್ಯೂ ಪ್ರತಿವರ್ಷದಂತೆ ರಥ ನಿಗದಿತ ಸ್ಥಳಕ್ಕೆ ತಲುಪುವ ಮೂಲಕ ಕೋವಿಡ್ ನಿಯಮ ಉಲ್ಲಂಘಿಸಿದ ಪ್ರಸಂಗ ನಡೆಯಿತು. ಸಾಗುತ್ತಿದ್ದ ತೇರನ್ನು ನೋಡುತ್ತ ಪೊಲೀಸರು ಮೂಕ ಪ್ರೇಕ್ಷರಂತೆ ನಿಂತರು. ಭಕ್ತರು ಬಾರೆ ಹಣ್ಣು ಎಸೆದು ಭಕ್ತಿಯ ಹರಕೆ ತೀರಿಸಿದರು.

ಹತ್ತು ಮಂದಿ ಮುಖಂಡರ ವಿರುದ್ಧ ಪ್ರಕರಣ ದಾಖಲು: ರಥೋತ್ಸವ ರದ್ಧುಪಡಿಸಿ ಕೋವಿಡ್ ಮಾರ್ಗಸೂಚಿ ಪಾಲಿಸುವುದಾಗಿ ಶಾಂತಿ ಸಭೆಯಲ್ಲಿ ಭರವಸೆ ನೀಡಿದ್ದ ನಾಲವಾರ ಮಠದ ಜಾತ್ರಾ ಸಮಿತಿಯ ಹತ್ತು ಜನ ಮುಖಂಡರ ವಿರುದ್ಧ ವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಾರತಿ, ರಥೋತ್ಸವ ಹಾಗೂ ಜಾತ್ರೆಗೆ ಅವಕಾಶ ಇರುವುದಿಲ್ಲ ಎಂದು ಪ್ರಕಟಣೆ ಹೊರಡಿಸಿದ್ದ ತಾಲೂಕು ಆಡಳಿತವೇ ನೆರೆದಿದ್ದ ಜನಸ್ತೋಮ ಕಂಡು ಬೆರಗಾಯಿತು. ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ತಹಶೀಲ್ದಾರರ ಆದೇಶದ ಮೇರೆಗೆ ಪೊಲೀಸರು ನಾಲವಾರ ಮಠದ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಲಾಠಿ ಪ್ರಹಾರ-ಕಾಲ್ತುಳಿತ: ರಥೋತ್ಸವ ವೇಳೆ ಮಠದ ಮುಖಂಡರು, ಪೂಜಾರಿಗಳೊಂದಿಗೆ ಪೊಲೀಸರು ವಾಗ್ವಾದ ನಡೆಸಿದ ಪ್ರಸಂಗ ನಡೆಯಿತು. ಅಧಿಕಾರಿಗಳ ಕಟ್ಟೆಚ್ಚರ ಧಿಕ್ಕರಿಸಿ ಭಕ್ತರು ರಥ ಎಳೆಯುತ್ತಿದ್ದಾಗ ಏಕಾಏಕಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಪರಿಣಾಮ ಯುವಕರು ಓಡಲು ಶುರುಮಾಡಿದ್ದರಿಂದ ಮಕ್ಕಳೊಂದಿಗೆ ಜಾತ್ರೆಗೆ ಬಂದಿದ್ದ ಅನೇಕ ಜನ ಮಹಿಳೆಯರು ಕಾಲ್ತುಳಿತಕ್ಕೊಳಗಾಗಿ ಗಾಯಗೊಂಡರು. ಎದೋಬಿದ್ದೋ ಓಡಿದ ಜನರು ಉಸಿರುಗಟ್ಟುವ ಪರಸ್ಥಿತಿ ಅನುಭವಿಸಿದರು.

ಇಷ್ಟು ಜನರು ಸೇರಲು ಬಿಟ್ಟು ಈಗ ಲಾಠಿ ಬೀಸುವುದು ಸರಿನಾ ಎಂದು ಭಕ್ತರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೋವಿಡ್ ನಿಯಮಗಳ ನಡುವೆಯೂ ತಾಲೂಕು ಆಡಳಿತದ ಆದೇಶಕ್ಕೆ ತಿಲಾಂಜಲಿಯಿಟ್ಟ ನಾಲವಾರ ಮಠದ ಜಾತ್ರಾ ಸಮಿತಿ, ಸಡಗರದ ಜಾತ್ರೆ ನಡೆಸಿಯೇ ತೀರುವ ಮೂಲಕ ಕಾನೂನುಗಳಿಗೆ ಸವಾಲು ಹಾಕಿದ್ದು ಸಾರ್ವಜನಿಕ ಚರ್ಚೆಗೆ ಕಾರಣವಾಯಿತು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

2 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

12 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

12 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

12 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago