ಕಲಬುರಗಿ; ಭಾರತದ ಸಂವಿಧಾನದ ರಚನಾ ಸ್ವರೂಪ ಮತ್ತು ಅದರ ಉದ್ದೇಶದ ಬಗೆಗೆ ಸರಿಯಾದ ಜ್ಞಾನ ಹೊಂದಿಲ್ಲದ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರು ಕೇವಲ ತನ್ನ ಸುತ್ತ ವ್ಯಕ್ತಿ ಕೇಂದ್ರಿತವಾದ ಚರ್ಚೆಯೊಂದು ನಡೆಯಲಿ ಎಂಬ ಕಾರಣಕ್ಕೆ ಸಂವಿಧಾನವನ್ನು ಬದಲಿಸುವ ಮಾತನ್ನು ಆಡಿರುವುದು ಅವರ ಬೇಜವಾಬ್ದಾರಿ ತನದ ಸಂಕೇತವಾಗಿದೆ ಎಂದು ಕಲಬುರಗಿ ಗ್ರಾಮೀಣ ಯುವ ಕಾಂಗ್ರೆಸ್ ಸಂಯೋಜಕರಾದ ಶಿವಾನಂದ ಆರ್ ಕಿಳ್ಳಿ ಸರಡಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಬಾ ಸಾಹೇಬರು “ನನ್ನ ಸಂವಿಧಾನ ಉತ್ತಮವಾಗಿದ್ದರೂ ಸಹ ಅದು ಕೆಟ್ಟ ಜನರ ಕೈಗೆ ಸಿಕ್ಕರೆ, ಅದರ ಉದ್ದೇಶ ಫಲಿಸುವುದಿಲ್ಲ” ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ ನೋಡಿದಾಗ ಚಂದ್ರಶೇಖರ್ ರಾವ್ ಅವರು ಮೊದಲು ಸಂವಿಧಾನವನ್ನು ಅರ್ಥಮಾಡಿಕೊಂಡು ಮಾತನಾಡುವುದನ್ನು ಕಲಿಯಬೇಕು.
ಸಂವಿಧಾನವೇ ಅರ್ಥವಾಗದೇ ಸಂವಿಧಾನವನ್ನು ಬದಲಿಸುತ್ತೇವೆ ಎಂಬುದು ಮೊದಲನೇ ಮೂರ್ಖತನವಾದರೆ, ಸಂವಿಧಾನವನ್ನು ಹೊಸದಾಗಿ ಬರೆದ ಮೇಲೆ ಎಲ್ಲವೂ ಎಲ್ಲರೂ ಸರಿಯಾಗಿ ನಡೆಯುತ್ತಾರೆ ಎಂಬುದು ಇನ್ನೊಂದು ಮೂರ್ಖತನ. ಹೀಗಾಗಿ ಕೇವಲ ಒಣ ಪ್ರಚಾರಕ್ಕಾಗಿ ತಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಿರುವ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಅತಿ ಬುದ್ಧಿವಂತಿಕೆ ತೋರದೇ, ಮೊದಲು ಸಂವಿಧಾನವನ್ನು ತಿಳಿದುಕೊಳ್ಳಲಿ ಮತ್ತು ಸಂವಿಧಾನವನ್ನೇ ಅರಿಯದೇ ೫೦ ವರ್ಷ ಸಾರ್ವಜನಿಕ ಜೀವನದಲ್ಲಿದ್ದುಕೊಂಡು ಈಗ ಸಂವಿಧಾನವನ್ನು ಬದಲಿಸಬೇಕು ಎಂದು ಬೇಜವಾಬ್ದಾರಿಯಿಂದ ಮಾತನಾಡಿದ್ದಕ್ಕೆ ದೇಶದ ಜನರ ಕ್ಷಮೆಯಾಚಿಸಲಿ ಎಂದು ಕಿಳ್ಳಿ ಅವರು ಪ್ರಕಟಣೆ ಮೂಲಕ ಆಗ್ರಹಿಸಿದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…