ಸುರಪುರ: ರಾಯಚೂರು ನ್ಯಾಯಾಲಯದಲ್ಲಿ ಗಣರಾಜ್ಯೋತ್ಸವ ಆಚರಣೆ ವೇಳೆ ಸಂವಿಧಾನ ಶಿಲ್ಪಿ ಡಾ:ಬಾಬಾ ಸಾಹೇಬ್ ಅಂಬೇಡ್ಕರರ ಭಾವಚಿತ್ರ ತೆಗೆಯಿಸಿದ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರ ಮೇಲೆ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿ.ಜಿ ಸಾಗರ ಬಣ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ದೇವಾಪುರ ಕ್ರಾಸ್‌ಲ್ಲಿ ಸಂಘಟನೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ,ಡಾ:ಬಾಬಾ ಸಾಹೇಬ್ ಅಂಬೇಡ್ಕರರನ್ನು ಜಗತ್ತು ಮಹಾನ್ ವ್ಯಕ್ತಿ ಎಂದು ಗೌರವಿಸುತ್ತದೆ.ಅಲ್ಲದೆ ಈ ದೇಶಕ್ಕೆ ಸಂವಿಧಾನವನ್ನು ಬರೆದುಕೊಡುವ ಮೂಲಕ ದೇಶದ ಜನರಿಗೆ ವ್ಯವಸ್ಥಿತ ಬದುಕಿಗೆ ಮಾರ್ಗದರ್ಶನ ನೀಡಿದ್ದಾರೆ.
ಅಲ್ಲದೆ ಮಲ್ಲಿಕಾರ್ಜುನಗೌಡ ಅವರು ನ್ಯಾಯಾಧೀಶರಾಗಿರುವುದು ಅವರು ಬರೆದುಕೊಟ್ಟ ಸಂವಿಧಾನದಡಿಯಲ್ಲಿ.ಅಂತಹ ಬಾಬಾ ಸಾಹೇಬರ ಭಾವಚಿತ್ರವನ್ನು ತೆಗೆಯಿಸುವ ಮೂಲಕ ಅಂಬೇಡ್ಕರರಿಗೆ ಅಪಮಾನಿಸಿದ್ದಾರೆ,ಅಲ್ಲದೆ ಜಾತಿ ನಿಂದನೆಯನ್ನು ಮಾಡಿದಂತಾಗಿದೆ ಆದ್ದರಿಂದ ನ್ಯಾಯಾಧೀಶರ ಮೇಲೆ ಜಾತಿ ನಿಂದನೆ ಹಾಗು ದೇಶದ್ರೋಹದ ಕೇಸು ದಾಖಲಿಸಿ ಇವರನ್ನು ನ್ಯಾಯಾಧೀಶರ ಸ್ಥಾನದಿಂದ ವಜಾಗೊಳಿಸಿ ದೇಶದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ ಮಾತನಾಡಿ,ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ತಾವೊಬ್ಬ ನ್ಯಾಯಾಧೀಶರಾಗಿ ಡಾ:ಬಾಬಾ ಸಾಹೇಬರು ಬರೆದ ಸಂವಿಧಾನದಿಂದಲೇ ತಾವು ನ್ಯಾಯಾಧೀಶರಾಗಿ ಅವರ ಭಾವಚಿತ್ರವನ್ನೆ ತೆಗೆಯಿಸುವ ಮೂಲಕ ಇಡೀ ಭಾರತೀಯರಿಗೆ ಅವಮಾನಿಸಿದ್ದಾರೆ.ಆದ್ದರಿಂದ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕು ಇಲ್ಲವಾದಲ್ಲಿ ಸಂಘಟನೆಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ನಡೆದ ಪ್ರತಿಭಟನೆಯಲ್ಲಿ ರಸ್ತೆ ತಡೆ ನಡೆಸಿದ್ದರಿಂದ ಸುಮಾರು ಒಂದು ಗಂಟೆಗಳ ಕಾಲ ವಾಹನ ಸವಾರರು ಪರದಾಡುವಂತಾಯಿತು.ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಕಂದಾಯ ಅಧಿಕಾರಿಗಳ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ ವೀರಭದ್ರಪ್ಪ ತಳವಾರಗೇರಾ,ತಿಪ್ಪಣ್ಣ ಶೆಳ್ಳಗಿ,ಚನ್ನಬಸಪ್ಪ ತಳವಾರ,ಬಸವರಾಜ ಜಾನಕರ,ರಮೇಶ ಕವಲಿ,ಎಮ್.ಪಟೇಲ್,ಶೇಖರ ಮಂಗಳೂರು,ಖಾಜಾ ಅಜ್ಮೀರ್,ಬಾಲರಾಜ,ಮರಿಲಿಂಗ ಗುಡಿಮನಿ,ಮಾನಪ್ಪ ಶೆಳ್ಳಗಿ,ವೆಂಕಟೇಶ ದೇವಾಪುರ,ಹಸನಪ್ಪ ದೇವಾಪುರ,ಮೌನೇಶ ತಳವಾರ,ಪಾರಪ್ಪ ತಳವಾರ,ಮಲ್ಲೇಶಿ ಜಿಗ್ನೇಶ್,ಸಂತೋಷ ಗುಂಡಳ್ಳಿ,ದೇವಪ್ಪ ಕಾಡಮಗೇರಾ,ಭೀಮಾಶಂಕರ ಗುಂಡಳ್ಳಿ,ಅಯ್ಯಪ್ಪ ಕಾಡಮಗೇರಾ,ಭೀಮಣ್ಣ ತೆಳಗಿನಮನಿ,ಪರಶುರಾಮ ಹುಣಸಿಹೊಳೆ ಸೇರಿ ಅನೇಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…