ಹುಬ್ಬಳ್ಳಿ: ಕೇಂದ್ರ ಸರ್ಕಾರ ಪ್ರಸಕ್ತ ವರ್ಷ ಬಜೆಟ್‌ನಲ್ಲಿ ಕರ್ನಾಟಕ, ಆಂಧ್ರ, ಗೋವಾ ವ್ಯಾಪ್ತಿಯ ‘ನೈರುತ್ಯ ರೈಲ್ವೆ ವಲಯ’ಕ್ಕೆ ಯಾವುದೇ ಹೊಸ ಯೋಜನೆಗಳನ್ನು ಘೋಷಣೆ ಮಾಡದಿದ್ದರೂ ಒಟ್ಟು .6900 ಕೋಟಿ ಅನುದಾನ ಮೀಸಲಿಟ್ಟಿದೆ.
ಆದರಲ್ಲಿ ಕರ್ನಾಟಕದಲ್ಲಿ ಈಗಾಗಲೇ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳಿಗೆ ನಿಗದಿಪಡಿಸಿರುವ ಅನುದಾನವೇ .6000 ಕೋಟಿ! ನೈರುತ್ಯರೈಲ್ವೆ ಇತಿಹಾಸದಲ್ಲೇ ಇಷ್ಟುದೊಡ್ಡ ಪ್ರಮಾಣದಲ್ಲಿ ಅನುದಾನ ದೊರಕಿರುವುದು ಇದೇ ಮೊದಲಾಗಿದ್ದು ರಾಜ್ಯದ ಪಾಲಿಗೂ ಬಂಪರ್ ಅನುದಾನ ದೊರೆತಂತಾಗಿದೆ.
ಈ ವಲಯಕ್ಕೆ ಕಳೆದ ಸಲಕ್ಕಿಂತ .2000 ಕೋಟಿ ಅಂದರೆ ಶೇ.40ರಷ್ಟುಹೆಚ್ಚುವರಿ ಹಂಚಿಕೆ ಮಾಡಿದಂತಾಗಿದೆ. ವಿದ್ಯುದ್ದೀಕರಣ, ದ್ವಿಪಥ ಕಾಮಗಾರಿಗಳನ್ನು ಪೂರ್ಣಗೊಳಿಸಲು ಹಾಗೂ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಿದಂತಾಗಿದೆ. ಈ .6900 ಕೋಟಿ ವೆಚ್ಚದಲ್ಲಿ ವಲಯದ ಕರ್ನಾಟಕದ ವ್ಯಾಪ್ತಿಯಲ್ಲೇ ರಾಜ್ಯ ಸರ್ಕಾರದ .780 ಕೋಟಿ ಸೇರಿದಂತೆ .6000 ಕೋಟಿ ಖರ್ಚು ಮಾಡಲಿದೆ. ಇನ್ನುಳಿದ .900 ಕೋಟಿ ವಲಯದ ವ್ಯಾಪ್ತಿಗೆ ಬರಲಿರುವ ಆಂಧ್ರ ಮತ್ತು ಗೋವಾದಲ್ಲಿ ವಿನಿಯೋಗಿಸಲಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿವರ ನೀಡಿದ ವಲಯದ ಮಹಾಪ್ರಬಂಧಕ ಸಂಜೀವ ಕಿಶೋರ್, ನೈರುತ್ಯ ರೈಲ್ವೆ ವಲಯದ ಇತಿಹಾಸದಲ್ಲೇ ಇಷ್ಟುಪ್ರಮಾಣದ ಹಣ ಮೀಸಲಿಟ್ಟಿರುವುದು ಇದೇ ಮೊದಲು ಎಂದು ಸಂತಸ ವ್ಯಕ್ತಪಡಿಸಿದರು.
ಹೊಸ ಮಾರ್ಗ ನಿರ್ಮಾಣಕ್ಕೆ .323 ಕೋಟಿ, ಜೋಡಿ ಮಾರ್ಗ ನಿರ್ಮಾಣಕ್ಕೆ .1455 ಕೋಟಿ, ವಿದ್ಯುದೀಕರಣಕ್ಕಾಗಿ .611 ಕೋಟಿ ಮೀಸಲಿಡಲಾಗಿದೆ. ರೈಲು ಟ್ರ್ಯಾಕ್ ಸುರಕ್ಷತೆæಗೆ ಈ ಬಜೆಟ್‌ನಲ್ಲಿ ಒತ್ತು ನೀಡಲಾಗಿದ್ದು, ಹಳಿ ನವೀಕರಣದ ಕಾಮಗಾರಿಗೆ .625 ಕೋಟಿ, ರೈಲ್ವೆ ಮೇಲ್ಸೇತುವೆ ಹಾಗೂ ಕೆಳಸೇತುವೆಗಾಗಿ .254.46 ಕೋಟಿ ಮೀಸಲಿಡಲಾಗಿದೆ. ಇದು ಕಳೆದ ಸಲಕ್ಕಿಂತ ಶೇ.30 ಮತ್ತು ಶೇ.46ರಷ್ಟುಹೆಚ್ಚುವರಿ ಹಣವಾಗಿದೆ. ಮಂಜೂರಾದ ಹೊಸ ಯೋಜನೆಗಳ ಟ್ರ್ಯಾಕ್ ನವೀಕರಣ, ಬ್ರಿಡ್ಜ್, ಸುರಂಗ ಮಾರ್ಗ ಕಾಮಗಾರಿ ಹಾಗೂ ಮೂಲ ಸೌಕರ್ಯ ಕಲ್ಪಿಸಲು .1276 ಕೋಟಿ ಮೀಸಲಿಟ್ಟಿದೆ. ಕಳೆದ ಸಲ ಇಂತಹ ಹೊಸ ಕಾಮಗಾರಿಗಳಿಗೆ .679 ಕೋಟಿ ಮೀಸಲಿಡಲಾಗಿತ್ತು. ಈ ಸಲ ಶೇ.87.9ರಷ್ಟುಹೆಚ್ಚುವರಿ ಅನುದಾನ ಸಿಕ್ಕಿದೆ. ನೈರುತ್ಯ ರೈಲ್ವೆ ವಲಯವು ಮೂಲ ಸೌಕರ್ಯ ಹಾಗೂ ಸುರಕ್ಷತಾ ಯೋಜನೆಗಳಿಗೆ .6,226 ಕೋಟಿ ಬಂಡವಾಳ ಖರ್ಚು ಮಾಡಲು ಉದ್ದೇಶಿಸಿದ್ದು, ಇದು ಕಳೆದ ಸಾಲಿಗೆ ಹೋಲಿಕೆ ಮಾಡಿದರೆ ಶೇ.35ರಷ್ಟುಹೆಚ್ಚಳವಾಗಿದೆ.
2 ವರ್ಷದ ಹಿಂದೆ ಘೋಷಣೆಯಾದ ಧಾರವಾಡ-ಕಿತ್ತೂರು-ಬೆಳಗಾವಿ ಮಾರ್ಗಕ್ಕೂ ಆದ್ಯತೆ ನೀಡಲಾಗಿದ್ದು .20 ಕೋಟಿ ನೀಡಲಾಗಿದೆ. ಈಗಾಗಲೇ ಈ ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದ್ದು, ರಾಜ್ಯ ಸರ್ಕಾರ ಭೂಸ್ವಾಧೀನಕ್ಕೆ ಕ್ರಮ ಕೈಗೊಂಡಿದೆ. ಒಟ್ಟು 335 ಹೆಕ್ಟೇರ್ ಪ್ರದೇಶ ಭೂಸ್ವಾಧೀನ ಮಾಡಿಕೊಳ್ಳಬೇಕಿದೆ. .927 ಕೋಟಿ ಈ ಮಾರ್ಗದ ವೆಚ್ಚ. ಅದರಲ್ಲೀಗ .20 ಕೋಟಿ ನೀಡಿದ್ದು, ಕೆಲಸ ಪ್ರಾರಂಭವಾಗುತ್ತಿದ್ದಂತೆ ಅಗತ್ಯ ಹಣಕಾಸನ್ನು ಒದಗಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ರೈಲು ಮಾರ್ಗ ನಿರ್ಮಾಣವಾದರೆ ಧಾರವಾಡ ಬೆಳಗಾವಿ ಮಧ್ಯೆ ಪ್ರಯಾಣದ ಅವಧಿ 1 ಗಂಟೆಗೂ ಅಧಿಕ ಸಮಯ ಉಳಿತಾಯವಾಗಲಿದೆ. ಆರ್ಥಿಕ ಚಟುವಟಿಕೆಗಳಿಗೆ ಈ ಮಾರ್ಗ ಪೂರಕವಾಗಲಿದೆ ಎಂದು ವಿವರಿಸಿದರು.
ಇನ್ನೂ ಗದಗ-ವಾಡಿ ರೈಲು ಮಾರ್ಗಕ್ಕೆ .187 ಕೋಟಿ ಮೀಸಲಿಡಲಾಗಿದೆ. ಇದಲ್ಲದೇ, ಶಿವಮೊಗ್ಗ-ಶಿಕಾರಿಪುರ-ರಾಣಿಬೆನ್ನೂರು, ತುಮಕೂರು-ಚಿತ್ರದುರ್ಗ-ದಾವಣಗೆರೆ, ಬಾಗಲಕೋಟೆ-ಕುಡಚಿ ಈ ಮೂರು ರೈಲು ಮಾರ್ಗಗಳ ನಿರ್ಮಾಣಕ್ಕೆ ತಲಾ .50 ಕೋಟಿ ಅಂದರೆ .150 ಕೋಟಿ ಅನುದಾನ ಬಜೆಟ್‌ನಲ್ಲಿ ಲಭಿಸಿದೆ. ಗದಗ-ವಾಡಿ ಹಾಗೂ ಬಾಗಲಕೋಟೆ-ಕುಡಚಿ ಮಾರ್ಗಗಳು ಪೂರ್ಣಗೊಂಡರೆ ಉತ್ತರ ಕರ್ನಾಟಕದಲ್ಲಿ ರೈಲು ಸಂಪರ್ಕ ಇನ್ನಷ್ಟುಸದೃಢವಾಗಲಿದೆ. ರೈತರು, ವ್ಯಾಪಾರಸ್ಥರಿಗೆ, ಸರಕು ಸರಂಜಾಮು ಸಾಗಾಣಿಕೆಗೆ ಅನುಕೂಲ ಕಲ್ಪಿಸಲಿದೆ ಎಂದರು.
ರಾಯದುರ್ಗಾ- ಕಲ್ಯಾಣದುರ್ಗ ಮಾರ್ಗವಾಗಿ ತುಮಕೂರು ರೈಲು ಮಾರ್ಗಕ್ಕೆ .100 ಕೋಟಿ ಮೀಸಲಿಡಲಾಗಿದೆ. ಗದಗ- ಕೂಡಗಿ- ಹೂಟಗಿ ಜೋಡಿ ಮಾರ್ಗಕ್ಕೆ .200 ಕೋಟಿ, ಹುಬ್ಬಳ್ಳಿ- ಚಿಕ್ಕಜಾಜೂರು ದ್ವಿಪಥೀಕರಣಕ್ಕೆ .210 ಕೋಟಿ ಮೀಸಲಿಡಲಾಗಿದೆ.
ದ್ವಿಪಥೀಕರಣ:
ಯಶವಂತಪುರ-ಚೆನ್ನಸಂದ್ರ .115 ಕೋಟಿ, ಯಶವಂತಪುರ-ಪೆನುಕೊಂಡ .54 ಕೋಟಿ, ಪೆನುಕೊಂಡ-ಧರ್ಮಾವರಂ .60 ಕೋಟಿ, ಬೈಯಪ್ಪನಹಳ್ಳಿ-ಹೊಸೂರು .140 ಕೋಟಿ, ಅರಸೀಕೆರೆ-ತುಮಕೂರು .51.8 ಕೋಟಿಯನ್ನೂ ದ್ವಿಪಥೀಕರಣಕ್ಕಾಗಿ ಮೀಸಲಿಡಲಾಗಿದೆ ಎಂದರು.
ಬೆಂಗಳೂರು ಸರ್ಬಬನ್‌ಗೆ .450 ಕೋಟಿ ಮೀಸಲು:
18 ಸಾವಿರ ಕೋಟಿ ವೆಚ್ಚದ ಬೆಂಗಳೂರು ಸಬ್‌ಅರ್ಬನ್ ರೈಲು ಯೋಜನೆಗೆ 2022- 23ನೇ ಸಾಲಿನಲ್ಲಿ .450 ಕೋಟಿ ಮೀಸಲಿಟ್ಟಿದೆ. ಇದು ಕಳೆದ ಸಲಕ್ಕಿಂತ ಶೇ.50ರಷ್ಟುಹೆಚ್ಚುವರಿ ಅನುದಾನವಾಗಿದೆ. ಇನ್ನೂ ಬೆಂಗಳೂರು-ವೈಟ್‌ಫೀಲ್ಡ್ ಚತುಷ್ಪಥ ತ್ವರಿತಗೊಳಿಸಲು .100 ಕೋಟಿ ಕಾಯ್ದಿರಿಸಲಾಗಿದೆ. ಈ ಯೋಜನೆ ಸ್ಯಾಚುರೇಟೆಡ್ ವಿಭಾಗವನ್ನು ಕಡಿಮೆ ಮಾಡಲಿದೆ. ಅಲ್ಲದೇ ಹೆಚ್ಚಿನ ಪ್ರಯಾಣಿಕ ರೈಲುಗಳನ್ನು ಓಡಿಸಲು ರೈಲ್ವೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಸಂಜೀವ ಕಿಶೋರ ತಿಳಿಸಿದರು.
ತಾಳಗುಪ್ಪ- ಹುಬ್ಬಳ್ಳಿ ಸಮೀಕ್ಷೆ:
ತಾಳಗುಪ್ಪ- ಹುಬ್ಬಳ್ಳಿ ಮಧ್ಯೆ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಸಮೀಕ್ಷೆ ಪ್ರಗತಿಯಲ್ಲಿದೆ. ಕಳೆದ ವರ್ಷವೇ ಘೋಷಿಸಲಾದ ಯೋಜನೆಯಿದು. ತಾಳಗುಪ್ಪ, ಸಿದ್ದಾಪುರ, ಶಿರಸಿ, ಮುಂಡಗೋಡ, ತಡಸ ಮಾರ್ಗವಾಗಿ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗವಿದು. ಇನ್ನೂ ಮೂರು ತಿಂಗಳಲ್ಲಿ ಸಮೀಕ್ಷೆ ವರದಿ ಬರಲಿದೆ. ಬಳಿಕ ರೈಲ್ವೆ ಮಂಡಳಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಇನ್ನೂ ತಾಳಗುಪ್ಪ-ಹೊನ್ನಾವರ ಮಧ್ಯೆಯೂ ರೈಲ್ವೆ ಇಲಾಖೆಯಿಂದ ಸಮೀಕ್ಷೆ ಮುಗಿದಿದೆ. ರೈಲ್ವೆ ಮಂಡಳಿ ಪರಿಶೀಲನೆ ನಡೆಸಬೇಕಿದೆ ಎಂದು ಇದೇ ವೇಳೆ ತಿಳಿಸಿದರು.
ವಂದೇ ಭಾರತ ರೈಲು:
ಈ ಸಲ ಬಜೆಟ್‌ನಲ್ಲಿ 400 ವಂದೇ ಭಾರತ ರೈಲುಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ರೈಲುಗಳನ್ನು 3 ವರ್ಷದಲ್ಲಿ ನೀಡುವುದಾಗಿ ಘೋಷಿಸಲಾಗಿದೆ. ನೈಋುತ್ಯ ರೈಲ್ವೆಗೂ ಕೆಲ ವಂದೇ ಭಾರತ ರೈಲುಗಳು ಬರುವ ನಿರೀಕ್ಷೆ ಇದೆ. ಧಾರವಾಡ-ಬೆಂಗಳೂರು ಮಧ್ಯೆ ವಂದೇ ಭಾರತ ರೈಲು ಪ್ರಾರಂಭಿಸುವಂತೆ ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರೈಲ್ವೆ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ ಎಂದು ಹೇಳಿದರು.
ಡಿಸೆಂಬರ್ ಅಂತ್ಯಕ್ಕೆ ಪೂರ್ಣ: ಹುಬ್ಬಳ್ಳಿ- ಬೆಂಗಳೂರು ಜೋಡಿ ಮಾರ್ಗ ಕಾಮಗಾರಿ ಭರದಿಂದ ಸಾಗಿದ್ದು, ಹಾವೇರಿಯಿಂದ ಸಂಶಿವರೆಗಿನ 50 ಕಿಮೀ ಸೇರಿದಂತೆ ಮೂರು ಕಡೆ ಜೋಡಿ ಮಾರ್ಗ ನಿರ್ಮಾಣ ಕಾರ್ಯ ಬಾಕಿ ಉಳಿದಿದೆ. ಸಂಶಿವರೆಗಿನ ಮಾರ್ಗವನ್ನು ಮಾಚ್ರ್ ವೇಳೆಗೆ ಪೂರ್ಣಗೊಳಿಸಲಾಗುವುದು. ಉಳಿದ ಮಾರ್ಗಗಳನ್ನು 2022ರ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಇದರಿಂದ ಪ್ರಯಾಣದ ಅವಧಿ ಕಡಿಮೆಯಾಗಲಿದೆ. ಬೆಂಗಳೂರು-ಹುಬ್ಬಳ್ಳಿ ಮಧ್ಯೆ ವಿದ್ಯುದ್ದೀಕರಣ ಕೆಲಸವೂ 2023ರಲ್ಲಿ ಪೂರ್ಣಗೊಳಿಸುವ ಗುರಿಯನ್ನು ವಲಯ ಇಟ್ಟುಕೊಂಡಿದೆ ಎಂದು ಸಂಜೀವ ಕಿಶೋರ ತಿಳಿಸಿದರು.
*ರಾಯದುರ್ಗ-ತುಮಕೂರು ವಾಯಾ ಕಲ್ಯಾಣದುರ್ಗ : .100 ಕೋಟಿ
*ಗದಗ-ವಾಡಿ: .187 ಕೋಟಿ
* ಬಾಗಲಕೋಟ-ಕುಡಚಿ : .50 ಕೋಟಿ
* ತುಮಕೂರು-ಚಿತ್ರದುರ್ಗ-ದಾವಣಗೆರೆ : .50 ಕೋಟಿ
* ಶಿವಮೊಗ್ಗ- ಶಿಕಾರಿಪುರ- ರಾಣಿಬೆನ್ನೂರು .50 ಕೋಟಿ
ದ್ವಿಪಥೀಕರಣ ಅನುದಾನ:
*ಯಶವಂತಪುರ-ಚನ್ನಸಂದ್ರ: .115 ಕೋಟಿ
* ಭೈಯಪ್ಪನಹಳ್ಳಿ- ಹೊಸೂರು: .140 ಕೋಟಿ
* ಹುಟಗಿ- ಕೂಡಗಿ- ಗದಗ: .200 ಕೋಟಿ
* ಯಲಹಂಕ- ಪೆನುಕೊಂಡ: .54 ಕೋಟಿ
* ಹುಬ್ಬಳ್ಳಿ- ಚಿಕ್ಕಜಾಜೂರ: .200 ಕೋಟಿ
* ಅರಸಿಕೆರೆ- ತುಮಕೂರು: .51 ಕೋಟಿ
* ಪೆನುಕೊಂಡ-ಧರ್ಮಾವರಂ: .60 ಕೋಟಿ
* ಬೆಂಗಳೂರು ವೈಟ್‌ಫಿಲ್ಡ್‌ನಲ್ಲಿ ರೈಲು ಮಾರ್ಗ ವಿಸ್ತರಣೆ(ಚತುಷ್ಪಥ ಲೈನ್)ಗೆ .100 ಕೋಟಿ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…