ನನ್ನನ್ನಿಷ್ಟು ನಂಬಬೇಡ
ನಂಬಿಕೆಗೆ ಅರ್ಹನಲ್ಲ ನಾ
ನಾನೊಂದು ಮಧೋನ್ಮತ್ತ ಆನೆ
ಹಾಗೇ ಬಾಲ ಅಲ್ಲಾಡಿಸಿ ಕುಂಯುಗುಡುವ
ನಿಯತ್ತಿನ ನಾಯಿ ಕೂಡ.
ಪ್ರೀತಿ — ಸ್ನೇಹ — ವಿಶ್ವಾಸಗಳ
ಅಪರಾವತಾರದ ಛಿನ್ನೆಯೂ ಕೂಡ,
ಎಂದೆಣಿಸಿಕೊಂಡರೆ ನೀ,
ಕ್ಷಣಾರ್ಧದಲ್ಲಿ ಎಲ್ಲವನ್ನೂ
ಭಗ್ನಗೊಳಿಸಿಬಿಡಬಲ್ಲ
ನನ್ನೊಳಗಿನ ರಾಕ್ಷಸನನ್ನು ಕಂಡು ನೀ
ನಿಂತ ನೆಲದಲ್ಲೇ ಹೂತು ಹೋಗಬಹುದು.
ಆದರೂ
ಹಸಿದವನ ಹೊಟ್ಟೆ ಕಂಡು
ಕನಕರಿಸಿ, ನನ್ನ ಹೊಟ್ಟೆ
ಬಗಿದುಕೊಂಡು ಹಸಿದವನ ಹೊಟ್ಟೆಗೆ
‘ಅನ್ನ ಸಮರ್ಪಿಸ’ಬಲ್ಲ ಅತೀ’ಮಾನುಷ’ನೂ ಸರಿ ನಾ ಹೌದು.
ಅರೇ ಕ್ಷಣವೂ ಹಿಡಿಯಲಿಕ್ಕಿಲ್ಲ,
ಆಳೆತ್ತರಕ್ಕೆ ಎತ್ತಿ, ನೆಲಕ್ಕೊಗೆದು
ಚಿಂದಿ ಮಾಡಿಬಿಡಬಲ್ಲ ‘ಅತೀ – ಅಮಾನುಷ’ನೂ
ಹೌದು ನಾ.
ಒಟ್ಟಾರೆ ನಾನು ನಿಖರವಾಗಿ ಇದನ್ನೇ
ಕೊಡುತ್ತೇನೆಂದು ಹೇಳಲಾರೆ ನಾ,
ಅಮೃತ ಅರ್ಪಿಸಿದಾಕ್ಷಣವೇ
ವಿಷ ಕಕ್ಕಬಲ್ಲ ಕಾರ್ಕೂಟಕ ವಿಷಜಂತೂ ಕೂಡ ನಾ!
ಏಕೆ ಗೊತ್ತೇ ನಾನು ಧ್ವಂಧ್ವ
ಹಾಗಾಗಿ ಎಚ್ಚರದಿಂದಿರು ನೀ,
ನನಗೆ ‘ಅಪರಿಮಿತ ಮುಖವಾಡ’ಗಳಿವೆ.!!
‘ಏಕೆ ಗೊತ್ತೇ ನಾನು ಧ್ವಂಧ್ವ’.!!
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…