ಚಿತ್ತಾಪುರ: ಪತ್ರಿಕೆ ಮತ್ತು ಸಾಹಿತ್ಯದ ನಡುವೆ ಅವಿನಾಭಾವ ಸಂಬಂಧವಿದ್ದು, ಸಾಹಿತ್ಯವೇ ಪತ್ರಿಕೆಗಳ ಹಿರಿಯಣ್ಣ ಎಂದು ಪತ್ರಕರ್ತ ಸಾಹಿತಿ ಶಿವರಂಜನ್ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ಇಲ್ಲಿನ ಶಂಕರಲೀಲಾ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪಟ್ಟಣದ ಆರ್.ಕೆ. ಕಾಂತಾ ಸರ್ಕಾರಿ ಪದವಿ ಕಾಲೇಜಿನಲ್ಲಿ ಇಂದು ಬೆಳಗ್ಗೆ ಪತ್ರಕರ್ತ ಹಾಗೂ ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ ಅವರ 48ನೇ ಹುಟ್ಟು ಹಬ್ಬದ ನಿಮಿತ್ತ ‘ಪತ್ರಿಕೆ ಮತ್ತು ಸಾಹಿತ್ಯ’ ವಿಷಯ ಕುರಿತು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಮತ್ತು ಪತ್ರಕರ್ತ ರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಪತ್ರಿಕೆ ಮತ್ತು ಸಾಹಿತ್ಯದ ಓದಿನಿಂದ ಮನುಷ್ಯನ ಮನಸ್ಸು ಮಹಾ ಮನವಾಗುತ್ತದೆ ಎಂದರು.
ಪ್ರಕೃತಿ ಸಹಜ ನೆಲೆಯಾದರೆ ಸಂಸ್ಕೃತಿ ಪ್ರಕೃತಿಯ ಸುಧಾರಿಸಿದ ರೂಪ. ಸಾಹಿತ್ಯದ ಓದು ವ್ಯಕ್ತಿಯ ಮನಸ್ಸು, ಭಾವ ಮತ್ತು ಬದುಕಿಗೆ ಸಂಸ್ಕಾರ ನೀಡುತ್ತದೆ ಎಂದು ಹೇಳಿದರು. ಪತ್ರಕರ್ತ ರಾದವರು, ಸಾಹಿತಿಗಳಾದವರು ಸಾಮಾಜಿಕ ಹೊಣೆಗಾರಿಕೆ, ಸತ್ಯ, ನೈತಿಕತೆ ಪ್ರದರ್ಶಿಸುವ ಜವಾಬ್ದಾರಿ ಇದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪತ್ರಕರ್ತ ರಮೇಶ ಭಟ್ ಮಾತನಾಡಿ, ಪತ್ರಿಕೆ ಮತ್ತು ಸಾಹಿತ್ಯ ಓದುವುದನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಪಂ ಕಾರ್ಯಕ್ರಮ ನಿರ್ವಾಹಕ ಪ್ರಭಾರ ಅಧಿಕಾರಿ ಡಾ. ಬಿ.ಎಸ್. ಡಿಗ್ಗಿ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಹ ಪ್ರಾಧ್ಯಾಪಕ ಎ.ಜಿ. ಖಾನ್ ಮಾತನಾಡಿ, ಆಧುನಿಕ ಸಮಾಜದ ನಾಲ್ಕನೆ ಕಣ್ಣು ಪತ್ರಿಕಾರಂಗ ಮತ್ತು ಸಾಂಸ್ಕೃತಿಕ ಲೋಕದ ಅನಭಿಷಕ್ತ ದೊರೆ ಸಾಹಿತಿಯಾದವರಿಂದ ಸಮಾಜ ಸುಧಾರಣೆ ಕಂಡಿದೆ ಎಂದರು. ಪತ್ರಕರ್ತರಾದ ಮಲ್ಲಿಕಾರ್ಜುನ ಮಾಡಬೂಳಕರ, ಬಸವರಾಜ ಕೊಲ್ಲೂರ, ಪ್ರಶಾಂತ ಪಾಟೀಲ, ಜಗದೇವ ಕುಂಬಾರ, ಆನಂದರೆಡ್ಡಿ, ಸಂತೋಷ ಕಟ್ಟಿಮನಿ, ಸಾಹಿತಿಗಳಾದ ಲಿಂಗಾರೆಡ್ಡಿ ಶೇರಿ, ಚಂದ್ರಶೇಖರ ಅವರನ್ನು ಸನ್ಮಾನಿಸಲಾಯಿತು.
ನಾಗಯ್ಯಸ್ವಾಮಿ ಅಲ್ಲೂರ ತಾವು ಬೆಳೆದು ಬಂದ ಪರಿಯನ್ನು ವಿವರಿಸಿದರು.
ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು. ಲಿಂಗಣ್ಣ ಮಲ್ಕನ್ ಪ್ರಾಸ್ತಾವಿಕ ಮಾತನಾಡಿದರು.ಪ್ರೊ. ಅನಿಲಕುಮಾರ ಸ್ವಾಗತಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…