ಬಿಸಿ ಬಿಸಿ ಸುದ್ದಿ

ಸುರಪುರ: ತಾಲೂಕು ಆಡಳಿತ ಡಾ:ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಣೆ

ಸುರಪುರ: ತಾಲೂಕು ಆಡಳಿತದಿಂದ ನಗರದ ತಹಸೀಲ್ ಕಚೇರಿ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೧೩೧ನೇ ಜಯಂತಿ ಆಚರಿಸಲಾಯಿತು.ನಗರಸಭೆ ಅಧ್ಯಕ್ಷರಾದ ಸುಜಾತಾ ವೇಣುಗೋಪಾಲ ಜೇವರ್ಗಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದ ಉಪನ್ಯಾಸಕ ನಿಜಲಿಂಗ ದೊಡ್ಮನಿ ಸೊನ್ನ ಹಾಗೂ ಸಿದ್ದಣ್ಣ ಪರಮೇಶ್ವರ ಮಸರಕಲ್ ಅವರು ಮಾತನಾಡಿ, ಬಾಬಾ ಸಾಹೇಬ ಡಾ.ಅಂಬೇಡ್ಕರ್ ಅವರು ಮಹಿಳೆಯರಿಗೆ ಸಿಗಬೇಕಾದ ಸ್ವಾಭಿಮಾನದ ಬದುಕು ಮತ್ತು ಹಕ್ಕುಗಳನ್ನು ಕೊಡಿಸಲು ಶ್ರಮಿಸಿದರು. ಡಾ.ಅಂಬೇಡ್ಕರ್ ಅವರು ಈ ದೇಶದ ಎಲ್ಲ ವರ್ಗದ ಜನರಿಗೆ ಅಧಿಕಾರವನ್ನು ಹಂಚಿಕೊಟ್ಟಿದ್ದಾರೆ.

ಇದನ್ನೂ ಓದಿ: ನಾನು ಮಣ್ಣಿಗೆ ಹೋಗುವುದರೊಳಗೆ ಜೆಡಿಎಸ್‌ʼನಿಂದ ದಲಿತ ಸಿಎಂ ಮಾಡುವೆ: ಕುಮಾರಸ್ವಾಮಿ ಘೋಷಣೆ

ಆಯಾ ವರ್ಗದ ಜನಸಂಖ್ಯೆಗನುಗುಣವಾಗಿ ಸೌಲಭ್ಯ ನೀಡಿದ್ದಾರೆ. ದೇಶದ ಬಗ್ಗೆ ಮುಂದಾಲೋಚನೆ ಹೊಂದಿದ್ದ ಬಾಬಾ ಸಾಹೇಬರು ಹಲವು ಯೋಜನೆಗಳನ್ನು ದೇಶದ ಜನರಿಗೆ ನೀಡಿದ್ದಾರೆ. ಡಾ.ಅಂಬೇಡ್ಕರ್ ಅವರು ಸಾಯುವ ಕೊನೆಗಳಿಗೆಯಲ್ಲಿಯೂ ಸಹ ಈ ದೇಶದ ಜನರ ಬದುಕಿನ ಬಗ್ಗೆ ಚಿಂತಿಸಿದ್ದಾರೆ. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವುದರ ಮೂಲಕ ಬಹುಜನರು ಆರ್ಥಿಕವಾಗಿ ಸ್ವಾವಲಂಭನೆಯಾಗಬೇಕು.

ದೇಶದ ಇತಿಹಾಸವನ್ನು ತಮ್ಮ ಅಪಾರ ಜ್ಞಾನದ ಮೂಲಕ ಬದಲಿಸಿ ಸರ್ವರಿಗೂ ಸಮಪಾಲು ನೀಡಿದ್ದಾರೆ. ಬಾಬಾ ಸಾಹೇಬರಿಗೆ ಈ ದೇಶ ನೋವು ಕೊಟ್ಟರೂ ದೇಶದ ಜನರಿಗೆ ಅಮೃತವನ್ನು ನೀಡಿದ್ದಾರೆ. ಮಹಿಳೆಯರಿಗೆ ವಿಶೇ?ವಾಗಿ ಹಲವಾರು ಸೌಲಭ್ಯವನ್ನು ನೀಡುವುದರ ಮೂಲಕ ಅವರು ಸಹ ಸ್ವಾವಲಂಬಿಗಳು ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: BSP ಕಚೇರಿಯಲ್ಲಿ ಅಂಬೇಡ್ಕರ್ 131ನೇ ಜಯಂತಿ ಆಚರಣೆ

ಇತಿಹಾಸ ಮರೆತವರು ಇತಿಹಾಸ ಸ್ರಷ್ಟಿಸಲಾರರು ಎಂದು ಡಾ.ಅಂಬೇಡ್ಕರ್ ಅವರು ಹೇಳಿದ್ದಾರೆ. ನಾವುಗಳು ನಮ್ಮ ನೈಜ ಇತಿಹಾಸವನ್ನು ಅರಿಯುವ ಅವಶ್ಯಕತೆ ಇದೆ. ಸಮಾನತೆಯನ್ನು ಸಾರುವ ಬೌದ್ಧ ಧಮ್ಮವನ್ನು ಅನುಸರಿಸುವುದರ ಮೂಲಕ ದೇಶದ ಬಹುಜನರು ಬದಲಾಗಬೇಕು. ಜಗತ್ತಿನ ಯಾವುದೇ ಶಕ್ತಿ ಶೋಷಿತರನ್ನು ಆರ್ಥಿಕವಾಗಿ ಬಲಿ?ರನ್ನಾಗಿ ಮಾಡುವುದಿಲ್ಲ. ಕ?ಪಟ್ಟು ದುಡಿದಿರುವ ಹಣವನ್ನು ಕೂಡಿಟ್ಟು ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡಿ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಿವೈಎಸ್ಪಿ ಡಾ:ದೇವರಾಜ ಬಿ, ತಹಶೀಲ್ದಾರ ಸುಬ್ಬಣ್ಣ ಜಮಖಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವೇದಿಕೆ ಮೇಲೆ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಕಾಶ ಸಜ್ಜನ?ಟಿಹೆಚ್‌ಓ ಡಾ:ಆರ್.ವಿ ನಾಯಕ,ಸಮಾಜ ಕಲ್ಯಾಣ ಇಲಾಖೆ ಎಡಿ ಸತ್ಯನಾರಾಯಣ ದರಬಾರಿ,ತಾ.ಪಂ ಇಒ ರವಿಚಂದ್ರರಡ್ಡಿ ಇದ್ದರು.ಶಿಕ್ಷಕ ಹಣಮಂತ್ರಾಯ ಪೂಜಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಇದನ್ನೂ ಓದಿ: ಫ್ಲಿಪ್ ಕಾರ್ಟ್ ಸಮರರ್ಥ್ ನ `ಕ್ರಾಫ್ಟೆಡ್ ಬೈ ಇಂಡಿಯಾ’ದ 2 ನೇ ಆವೃತ್ತಿಯ ಮಾರಾಟ ಮೇಳ

emedialine

Recent Posts

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

10 hours ago

ಬಡವರಿಗೆ ಹಣ್ಣು-ಹಂಪಲು ವಿತರಣೆ

ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ  ಜೈ ಕನ್ನಡಿಗರ…

10 hours ago

ಕಾರಾಗೃಹದ ಬಂದಿಗಳಿಗೆ ಮನಃ ಪರಿವರ್ತನೆಗೊಳ್ಳುವ ಚಲನ ಚಿತ್ರ ಸ್ಕ್ರೀನ್

ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…

10 hours ago

ಕನ್ನಡ ದೀಪೋತ್ಸವ: ವಿಜಯೀಭವ ಕೃತಿ ಜನಾರ್ಪಣೆ 24 ರಂದು

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮೂರು ವರ್ಷಗಳು ಪೂರೈಸಿರುವ…

10 hours ago

ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದಿಂದ ವಿಭಾಗಿಯ ಮಟ್ಟಕ್ಕೆ ಆಯ್ಕೆ

ಕಲಬುರಗಿ: ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣ, ಶಿಕ್ಷಣವೆಂದರೆ ಕೇವಲ ಆನಲೈನ ಮಾಹಿತಿಯಲ್ಲ, ಪುಸ್ತಕದ ಜ್ಞಾನವೂ ಅಲ್ಲ, ವಿದ್ಯಾರ್ಥಿನಿಯರ ಬೌದ್ಧಿಕ, ಮಾನಸಿಕ,…

11 hours ago

ಅಭಿವೃದ್ಧಿ ಪರ ಚಿಂತನೆಯಳ್ಳ ಪ್ರಬುದ್ದ ರಾಜಕಾರಣಿ ಪ್ರಿಯಾಂಕ್ ಖರ್ಗೆ

ಶಹಾಬಾದ: ನಗರದ ಶಿವಯೋಗಿಸ್ವಾಮಿ ಪ್ರೌಢಶಾಲೆಯಲ್ಲಿ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಜನ್ಮ…

11 hours ago