ಬಿಸಿ ಬಿಸಿ ಸುದ್ದಿ

ಭಾಲ್ಕಿ ಸಂಸ್ಥಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ

ಭಾಲ್ಕಿ: ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡಲಾಯಿತು.

ಸಮಾರಂಭದ ಸಾನಿಧ್ಯವನ್ನು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹಾಗೂ ಗುರುಬಸವ ಪಟ್ಟದ್ದೇವರು ವಹಿಸಿದ್ದರು. ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ನಮ್ಮ ದೇಶ ಕಂಡ ಅಪರೂಪದ ಮಹಾನ್ ವಿದ್ವಾಂಸರು. ಅವರು ಶೋಷಿತ, ವಂಚಿತ, ಕೆಳವರ್ಗ ಸಮುದಾಯಗಳ ಅಭಿವೃದ್ಧಿಗಾಗಿ ನಿರಂತರವಾಗಿ ಹೋರಾಡಿದ ಮಹಾನಾಯಕರು. ಸ್ವತಃ ಅನೇಕ ನೋವುಗಳನ್ನು ಅನುಭವಿಸಿ ಈ ದೇಶದ ಸಂವಿಧಾನ ಬರೆದಿರುವ ಮಹಾನ್ ಪ್ರಜ್ಞಾವಂತರು. ಶೋಷಿತ ಸಮಾಜವನ್ನು ಶಿಕ್ಷಣದ ಪ್ರವಾಹದಲ್ಲಿ ಬಂದರೆ ಮಾತ್ರ ಅವರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವೆಂದು ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು.

ಇದನ್ನೂ ಓದಿ: ಕಸಾಪದಿಂದ ‘ಭಾರತ ಬೆಳಗಿದ ಬಾಬಾಸಾಹೇಬ’ ವಿಶೇಷ ಕಾರ್ಯಕ್ರಮ

ಮೂಗನಾಯಕ ಹಾಗೂ ಬಹಿಷ್ಕೃತ ಭಾರತ ಎಂಬ ನಿಯತಕಾಲಿಕೆಯನ್ನು ಪ್ರಾರಂಭಿಸಿ ಶೋಷಿತರ ದುಃಖ ವೇದನೆಗಳ ಧ್ವನಿಯಾದರು. ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲಿ ಅವರು ದೇಶ ವಿದೇಶಗಳಲ್ಲಿ ಶಿಕ್ಷಣ ಪಡೆದು ಅನೇಕ ಪದವಿಗಳನ್ನು ಸಂಪಾದಿಸಿದವರು. ಬಹತೇಕವಾಗಿ ಆ ಕಾಲದಲ್ಲಿ ಅವರಷ್ಟು ಪದವಿಗಳು ಯಾರು ಸಂಪಾದನೆ ಮಾಡಿರುವುದಿಲ್ಲ. ಅನೇಕ ಮೌಲಿಕ ಗ್ರಂಥಗಳನ್ನು ಬರೆಯುವ ಮೂಲಕ ಈ ದೇಶದ ಸಾಂಸ್ಕೃತಿಕ ಇತಿಹಾಸವನ್ನು ತಳಸಮುದಾಯದ ಅರಿವಿಗೆ ತಂದರು. ಹಿಂದು ಮಹಿಳೆಯರ ಸಂರಕ್ಷಣೆಗಾಗಿ ಅವರು ರೂಪಿಸಿದ ಹಿಂದು ಕೋಡ್ ಬಿಲ್ ಸಂಸತ್ತಿನಲ್ಲಿ ಮಂಡಿಸಿದರು. ಅದಕ್ಕೆ ಅನೇಕ ಸಂಸದರು ವಿರೋಧಿಸಿದರು.

ಹಿಂದು ಕೋಡ್ ಬಿಲ್ ಸಂಸತ್ತಿನಲ್ಲಿ ಪಾಸ ಆಗಲಿಲ್ಲ. ಆ ಕಾರಣಕ್ಕಾಗಿ ಅವರು ತಮ್ಮ ಕಾನೂನು ಸಚಿವ ಪದವಿಗೆ ರಾಜಿನಾಮೆ ನೀಡಿದರು. ಅವರು ಒಂದು ತತ್ವ ಸಿದ್ಧಾಂತವನ್ನು ಜೀವನುದ್ದಕ್ಕೂ ಪಾಲಿಸಿಕೊಂಡು ಬಂದಿರುವ ಮಹಾನಮೇಧಾವಿ. ಅವರ ತತ್ವಾದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಈ ದೇಶ ಸಮೃದ್ಧಗೊಳಿಸಬೇಕು ಎಂದು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಇದನ್ನೂ ಓದಿ: ಮರತೂರ ಮೌನೇಶ್ವರ ಜಾತ್ರಾ ಮಹೋತ್ಸವ 15 & 16ರಂದು

ಸಮಾರಂಭದಲ್ಲಿ ಓಂಕಾರ ಮೊರೆ, ಸಂಜುಕುಮಾರ ಭಾವಿಕಟ್ಟಿ, ಶಾಂತಯ್ಯ ಸ್ವಾಮಿ, ಮುಂತಾದವರು ಉಪಸ್ಥಿತರಿದ್ದರು. ಗುರುಪ್ರಸಾದ ಶಾಲೆಯ ಶಿಕ್ಷಕ ಸಿಬ್ಬಂದಿಯವರು ಭಾಗಿಯಾಗಿದ್ದರು. ಅಶೋಕ ನಗರದಿಂದ ಹೊರಟಿರುವ ಮೆರವಣಿಗೆಯಲ್ಲಿ ಪೂಜ್ಯರು ಭಾಗಿಯಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದಸರು. ಮೆರವಣಿಗೆಯಲ್ಲಿ ಭಾಗಿಯಾದ ಎಲ್ಲರಿಗೂ ಶ್ರೀಮಠದಿಂದ ಮಜ್ಜಿಗೆ ಕೊಡಲಾಯಿತು.

ಇದನ್ನೂ ಓದಿ: ದೇವಾಪುರ ಹಿರೇಹಳ್ಳದ ಬಳಿ ಬೈಕ್ ಗುದ್ದಿ ಮಹಿಳೆ ಸಾವು

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

11 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

21 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

21 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

21 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago