ಬಿಸಿ ಬಿಸಿ ಸುದ್ದಿ

ಗೋಲ್ಡನ್ ಕೇವ್ ಬುದ್ಧ ವಿಹಾರ:ಡಿವೈಎಸ್ಪಿ ಡಾ:ದೇವರಾಜಗೆ ಸನ್ಮಾನ

ಕಲಬುರಗಿ: ಗೋಲ್ಡನ್ ಕೇವ್ ಬುದ್ದ ವಿಹಾರದಲ್ಲಿ  ಹುಣ್ಣಿಮೆ ದಿನದಂದು ಬೌದ್ಧ ಅನುಯಾಯಿಗಳ ಕುಟುಂಬಗಳಿಂದ ತ್ರಿಸರಣ ಪಂಚಶೀಲ ಪಠಣ ಪೂಜಾ ಕಾರ್ಯಾಕ್ರಮವನ್ನು ಬುದ್ದ ವಿಹಾರದಲ್ಲಿ ಏರ್ಪಡಿಸಲಾಗಿತ್ತು.ಬೌದ್ಧ ಅನುಯಾಯಿಗಳು ಮತ್ತು ಡಾ:ಬಾಬಾ ಸಾಬೇಬ್ ಅಂಬೇಡ್ಕರ್ ರವರ ಅನುಯಾಯಿಗಳು, ಬೌದ್ಧ ಉಪಾಸಕರು, ಹಾಗೂ ಉಪಾಸಿಕಾ ರವರು ಮಕ್ಕಳೋಂದಿಗೆ ಹೂ, ಹಣ್ಣು ಮೇಣದ ಬತ್ತಿಯೊಂದಿಗೆ ಬಾಗವಹಿಸಿ ಬುದ್ದರ ಮೂರ್ತಿಗೆ ಪುಷ್ಫಾರ್ಚಣೆ ಮಾಡಿ ಮೇಣದ ಬತ್ತಿ ಹಚ್ಚಿ ಪ್ರಾರ್ಥಿಸಿದರು.

ಗೌತಮಿ ಮತ್ತು ಮೇಘಾ ಪಂಚಶೀಲ ಪಠಿಸಿದರು ಇದೆ ಕಾರ್ಯಾಕ್ರಮದಲ್ಲಿ ಸುರಪೂರ ಪೋಲೀಸ್ ಉಪವಿಭಾಗದ ಡಿ,ವಾಯ್,ಎಸ್,ಪಿ ಡಾ:ದೇವರಾಜ ಬಿ ಅವರಿಗೆ ಮುಖ್ಯಮಂತ್ರಿಗಳ ಪದಕ ಲಭಿಸಿದ ಹಿನ್ನೆಲೆಯಲ್ಲಿ ಟ್ರಸ್ಟವತಿಯಿಂದ ಸನ್ಮಾನಿಸಿ ನೆನಪಿನ ಕಾಣಿಕೆ ಕೊಡಲಾಯಿತು.ಹಾಗೂ ಪಿ,ಐ ಸುನಿಲ್ ಕುಮಾರ ಮೂಲಿಮನಿಯವರನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ: ಹಿಂದೂ ಕಾರ್ಯಕರ್ತೆ ದಿವ್ಯ ಹಾಗರಗಿ ಮನೆ ಮೇಲೆ ಸಿಐಡಿ ದಾಳಿ

ಸನ್ಮಾನಗೊಂಡ ಡಿ,ವಾಯ್,ಎಸ್,ಪಿ ಡಾ:ದೇವರಾಜ ನಾಯಕ ಮಾತನಾಡಿ, ಪ್ರಾಶಾಂತವಾಗಿರುವ ಸ್ಥಳದಲ್ಲಿ ಬುದ್ದ ವಿಹಾರ ಇರುವದು ಅರ್ಥಪೂರ್ಣವಾದುದ್ದು ಇದರ ರಕ್ಷಣೆ ಇಲಾಖೆ ವತಿಯಿಂದ ಮಾಡಲಾಗುವದು ಮತ್ತು ಸಮಾಜದಲ್ಲಿ ಸರ್ವರು ಶಾಂತಿಯಿಂದ ಇರಲು ಇದು ಪ್ರೇರೆಣೆ ನಿಮ್ಮಲ್ಲರ ಪರಿಶ್ರಮ ವ್ಯರ್ತವಾಗದು ಅದಕ್ಕೆ ತಾಜಾ ನಿದರ್ಶನ ಇಲ್ಲಿ ಮಹಿಳೆಯರು ಮತ್ತು ಮಕ್ಕಳೊಂದಿಗೆ ಸೇರಿರುವ ಬೌದ್ಧ ಕುಟುಂಬದವರ ಆಸಕ್ತಿ ಸಾಕ್ಷಿಯಾಗಿದೆ ಎಂದರು.

ಪ್ರಾಸ್ತಾವಿಕವಾಗಿ ರಾಹುಲ್ ಹುಲಿಮನಿ ಯವರು ಮಾತನಾಡಿದರು,ನಂತರ ಕಾರ್ಯಕ್ರಮದ ದಾಸೋಹಿಗಳಾಗಿದ್ದ ನಾಗಣ್ಣ ಕಲ್ಲದೇವನಹಳ್ಳಿ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಮುಖಂಡರಾದ  ವೆಂಕಟೇಶ ಹೊಸಮನಿ,ನಾಗಣ್ಣ ಕಲ್ಲದೆವನಹಳ್ಳಿ, ಭಿಮರಾಯ ಸಿಂದಗೇರಿ, ಮಾಳಪ್ಪ ಕಿರದಳ್ಳಿ,  ವೆಂಕಟೆಶ ಸುರಪೂರಕರ್, ಗುರುಪಾದಪ್ಪ ವಕೀಲರು,ಸಿದ್ರಾಮ್ ಹಾಲಬಾವಿ,ಶಿವಶಂಕರ ಹೊಸಮನಿ, ಮಲ್ಲಪ್ಪ ತಳವರಗೇರಾ, ಗೋಪಾಲ್ ವಜ್ಜಲ್, ಶಿವಣ್ಣ ಸಾಸಗೇರಾ,ಶೇಖರ ಚಂದಲಾಪುರ,ರಾಜು ಬಡಿಗೇರ್, ಹಣಮಂತ ತೇಲ್ಕರ್,  ಶರಣು ಚಂದಲಾಪೂರ್, ಹಣಮಂತ ರತ್ತಾಳ, ಯಲ್ಲಪ್ಪ ರತ್ತಾಳ, ಶರಣು ಕೃಷ್ನಾಪೂರ್, ಉಪಾಸಿಕರಾದ ಭೀಮಂಬಾಯಿ ಕಲ್ಲದೆವನಹಳ್ಳಿ, ಮಂಜುಳಾ ಸುರಪೂರ್,ಬಸಮ್ಮ ಹುಲಿಮನಿ, ಶಿಲ್ಪಾ ಹುಲಿಮನಿ,ಭಾರತಿ ಸಿಂದಗೆರಿ, ಶಿವಮೊಗ್ಗೆಮ್ಮ, ಹೊಸಮನಿ,ಸುನಿತಾ ಕಿರದಳ್ಳಿ, ಯಲ್ಲಮ್ಮ ತೇಲಕರ್, ರೇಣುಕಾ ಅರಕೇರಿ, ಖುತ್ಬಜಾ, ಇತರೇ ಮಹಿಳೆಯರು ಮಕ್ಕಳು ಬಾಗವಹಿಸಿದ್ದರು.

ಇದನ್ನೂ ಓದಿ: ಗಲಭೆಗಳಿಗೆ ಬಿಜೆಪಿ ಸರಕಾರ ಕುಮ್ಮಕ್ಕು ನೀಡುತ್ತಿದೆ: ಖಂಡ್ರೆ ಕಿಡಿ

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

16 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

18 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

1 day ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 day ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

2 days ago