ಅಂಕಣ ಬರಹ

ವಿವಿಧ ಸಾಧಕರಿಗೆ ಕಲ್ಯಾಣ ರತ್ನ ಪ್ರಶಸ್ತಿ ಪ್ರದಾನ

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ಮನ್ ಡಾ. ದಾಕ್ಷಾಯಿಣಿ ಅವ್ವ (ಶಿಕ್ಷಣ ಕ್ಷೇತ್ರ), ಮಾಜಿ ಸಚಿವ ಎಸ್. ಕೆ. ಕಾಂತಾ (ಹೋರಾಟಗಾರರು), ತಹಸೀಲ್ದಾರ್ ಪ್ರಕಾಶ ಕುದರಿ, ಮಹಾನಗರ ಪಾಲಿಕೆಯ ಉಪ ಆಯುಕ್ತ ಪ್ರಕಾಶ ರಜಪುತ (ಸೇವಾ ಕ್ಷೇತ್ರ), ಬಸವಕಲ್ಯಾಣ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ರಾಜಕುಮಾರ ಸಿರಗಾಪುರ (ಕೃಷಿ ಕ್ಷೇತ್ರ) ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅದೇ ರೀತಿ ಪತ್ರಕರ್ತ ಹಣಮಂತರಾವ ಬೈರಾಮಡಗಿ (ಪತ್ರಿಕಾ ಕ್ಷೇತ್ರ), ಪಿಎಸ್‌ಐ ಯೂನುಸ್ ಮಿಯಾ ಅಟ್ಟೂರ (ಪೊಲೀಸ್ ಇಲಾಖೆ), ಅವಧೂತಪ್ಪ ಪೂಜಾರಿ (ಜನಪದ ಕ್ಷೇತ್ರ), ಎಚ್. ಬಿ. ಪಾಟೀಲ್ (ಸಮಾಜ ಸೇವೆ), ಅಂಬಾರಾಯ ಪಟ್ಟಣಕರ್(ಸಹಕಾರ ಕ್ಷೇತ್ರ) ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಕಲಬುರಗಿ: ಜಾತಿವಾದಿ ಜನಗಳು ರಾಜಕೀಯಕ್ಕೆ ಬಂದರೆ ಸಮ ಸಮಾಜ ನಿರ್ಮಿಸುವುದು ಅಸಾಧ್ಯ ವಾಗಲಿದೆ ಎಂದು ಮಾಜಿ ಸಚಿವ ಎಸ್. ಕೆ. ಕಾಂತಾ ವಿಷಾದಿಸಿದರು.

ಇದನ್ನೂ ಓದಿ: ಹಿಂದೂ ಕಾರ್ಯಕರ್ತೆ ದಿವ್ಯ ಹಾಗರಗಿ ಮನೆ ಮೇಲೆ ಸಿಐಡಿ ದಾಳಿ

ನಗರದ ಕಲಾ ಮಂಡಳದಲ್ಲಿ ಸಿದ್ಧಗಂಗಾ ಮಠದ ಪೂಜ್ಯ ಡಾ. ಶಿವಕುಮಾರ ಸ್ವಾಮೀಜಿ ಗಳ ಜನ್ಮದಿನದ ಪ್ರಯುಕ್ತ ಕನ್ನಡ ಜಾನಪದ ಪರಿಷತ್ ಸಂಸ್ಥಾಪನ ಸಂಭ್ರಮ, ವಿವಿಧ ಕ್ಷೇತ್ರದ ಸಾಧಕರಿಗೆ ಕಲ್ಯಾಣ ರತ್ನ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಮನುಷ್ಯ ಜಾತಿ ಒಂದೇ, ಇಲ್ಲಿ ಎಲ್ಲರೂ ಸರಿಸಮಾನರು. ಯಾರು ಮೇಲು, ಕೀಳಲ್ಲ. ಇನ್ನು ಜಾತ್ಯತೀತ ತತ್ವ ಜಾತಿಯತೆಗೆ ಮಾರ್ಪಡುತ್ತಿದ್ದು, ಸಮಾಜದಲ್ಲಿ ಸಮಾನತೆ ಬರಬೇಕು. ಸಮಾಜವಾದ ತತ್ವ ಬೇರೂರಬೇಕು. ಬಡವ, ಶ್ರೀಮಂತ, ಧರ್ಮ, ಮತ, ಪಂಥ ಎಂಬ ಒಡೆದಾಳುವ ಭಾವನೆ ದೂರವಾದಾಗ ಮಾತ್ರ ಸಮ ಸಮಾಜ ನಿರ್ಮಾಣವಾಗಲಿದೆ ಎಂದರು.

ದೇಶದಲ್ಲಿ ಶೇ. ೭೫ ೪೮ ಕೋಟಿ ಜನ ಅಸಂಘಟಿತ ಕಾರ್ಮಿಕರಿದ್ದು, ಇನ್ನು ದುಡಿಲಾರದವರು ಶ್ರೀಮಂತರಾದರೆ, ದುಡಿಯುವರು ಬಡವರಾಗುತ್ತಿರುವುದು ದುರಂತವೇ ಸರಿ. ಅಲ್ಲದೆ ಅನ್ನ ಹಾಕುವವರಿಗೆ ಅನ್ನವಿಲ್ಲ, ದುಡಿಯುವ ಕೈಗಳಿಗೆ ಕೆಲಸವಿಲ್ಲ ದುರ್ಗುಮ ಸ್ಥಿತಿ ಎದುರಾಗಿದೆ ಎಂದು ತೀವ್ರ ಕಳವಳವ್ಯಕ್ತಪಡಿಸಿದರು.

ಇದನ್ನೂ ಓದಿ: ಗಲಭೆಗಳಿಗೆ ಬಿಜೆಪಿ ಸರಕಾರ ಕುಮ್ಮಕ್ಕು ನೀಡುತ್ತಿದೆ: ಖಂಡ್ರೆ ಕಿಡಿ

ಶ್ರೀನಿವಾಸ ಸರಡಗಿಯ ಡಾ. ರೇವಣಸಿದ್ಧ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ರಾಜ್ಯ ವಕೀಲರ ಪರಿಷತ್ತಿನ ರಾಜ್ಯಾಧ್ಯಕ್ಷ ಕಾಶಿನಾಥ ಮೋತಕಪಳ್ಳಿ ಹಾಗೂ ಕೆಎಸ್‌ಆರ್‌ಪಿ ಕಮಾಂಡಂಟ್ ಬಸವರಾಜ ಜಿಳ್ಳಿ ಮಾತನಾಡಿದರು. ಕಜಾಪ ಉತ್ತರ ವಲಯ ಅಧ್ಯಕ್ಷ ಹಣಮಂತರಾಯ ಅಟ್ಟೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ, ಕಜಾಪ ಜಿಲ್ಲಾಧ್ಯಕ್ಷ ಎಂ. ಬಿ. ನಿಂಗಪ್ಪ ಮತ್ತಿತರರಿದ್ದರು.
ಕಜಾಪ ದಕ್ಷಿಣ ವಲಯ ಅಧ್ಯಕ್ಷ ಸಿದ್ದಲಿಂಗಪ್ಪ ಎನ್.ಬಾಗಲಕೋಟ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿಕುಮಾರ ಶಹಾಪುರಕರ ನಿರೂಪಿಸಿದರು. ಮಲಕಾರಿ ಪೂಜಾರಿ ಪ್ರಾರ್ಥಿಸಿದರು. ಜ್ಯೊತಿ ತೋಳೆ ಸ್ವಾಗತಿಸಿದರು. ಮಲ್ಲಿನಾಥ ಕುಮಸಿ ವಂದಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ಸೂರ್ಯಕಾಂತ ಪಾಟೀಲ್, ಪ್ರಮುಖರಾದ ಸಿದ್ದಲಿಂಗ ಕಣ್ಣಿ, ಸಿದ್ಧರಾಮ ತಳವಾರ, ರಘುನಂದನ್ ಕುಲಕರ್ಣಿ, ಉಮೇಶ್ ಬಿರಾಜದಾರ ಮತ್ತಿತರರಿದ್ದರು.

ಇದನ್ನೂ ಓದಿ: ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಸಿಎಂ ಇಬ್ರಾಹಿಂ ಅಧಿಕಾರ ಸ್ವೀಕಾರ | JDS State President

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

16 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

19 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

1 day ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 day ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

2 days ago