ಬಿಸಿ ಬಿಸಿ ಸುದ್ದಿ

ಶಹಾಬಾದನಲ್ಲಿ ಜಿಲ್ಲಾ ಸಮ್ಮೇಳನ ಮಾಡಲು ಸಹಕಾರ ನೀಡಲು ಸಿದ್ಧ-ಮತ್ತಿಮಡು

ಕಸಾಪ ಹಿರಿಯ ಅಜೀವ ಸದಸ್ಯರಾದ ನಾಗಪ್ಪ ಬೆಳಮಗಿ, ಶಿವರಾಜ ಪಾರಾ,ಅನೀಲಕುಮಾರ ಇಂಗಿನಶೆಟ್ಟಿ, ಡಾ.ನೀಲಮ್ಮ ಕತ್ನಳ್ಳಿ, ಹೆಚ್.ಬಿ.ತೀರ್ಥೆ,ಸುಭಾಷ ಪಂಚಾಳ, ಸುರೇಶ ಮೆಂಗನ, ಡಾ.ಶಂಕರ ಸೋಮ್ಯಾಜಿ, ಬಸವರಾಜ ನಂಧಿಧ್ವಜ, ಶಿವರಾಜ ಇಂಗಿನಶೆಟ್ಟಿ, ಸಂಗಯ್ಯಸ್ವಾಮಿ ಇತರರನ್ನು ಗೌರ ಸನ್ಮಾನ ಮಾಡಲಾಯಿತು.

ಶಹಾಬಾದ: ಮುಂಬರುವ ದಿನಗಳಲ್ಲಿ ಶಹಾಬಾದ ನಗರದಲ್ಲಿ ಕಸಾಪ ಜಿಲ್ಲಾ ಸಮ್ಮೇಳನ ಮಾಡಲು ಕ್ರಮಕೈಗೊಂಡರೆ, ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲು ನಾನು ಸದಾ ಸಿದ್ಧ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ಅವರು ಮಂಗಳವಾರ ಕಸಾಪ ವತಿಯಿಮದ ನಗರದ ಸಹರಾ ಸಭಾಂಗಣದಲ್ಲಿ ಕಸಾಪ ಕಾರ್ಯ ಚಟುವಟಿಕೆಗಳ ಉದ್ಘಾಟನೆ ಹಾಗೂ ಸರ್ವ ಸದಸ್ಯರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಈಗಾಗಲೇ ಕಮಲಾಪೂರದಲ್ಲಿ ಜಿಲ್ಲಾ ಸಮ್ಮೇಳನ ಕೈಗೊಂಡು ಯಶಸ್ವಿಯಾಗಿದ್ದೆವೆ.ಬಹಳ ಅವಸರದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಎಲ್ಲಾ ಸಿದ್ಧತೆಗಳನ್ನು ಮಾಡಿದ್ದೆವೆ.ಎಲ್ಲರೂ ಖುಷಿ ಪಟ್ಟು ಹೋಗಿದ್ದಾರೆ.ಆದರೆ ಸ್ವಲ್ಪ ಅಸ್ತವ್ಯಸ್ಥವಾಗಿದೆ.ಅಲ್ಲದೇ ಅವರಿಗೆ ಕರೆದಿಲ್ಲ.ಇವರಿಗೆ ಕರೆದಿಲ್ಲ ಎಂಬ ಮಾತುಗಳು ಕೇಳಿಬಂದವು.ಆದರೆ ಶಹಾಬಾದನಲ್ಲಿ ಕೈಗೊಳ್ಳುವ ಸಮ್ಮೇಳನದಲ್ಲಿ ಎಲ್ಲರನ್ನೂ ಆಹ್ವನಿಸುವ ಮೂಲಕ ಕನ್ನಡದ ಕಂಪನ್ನು ಸೂಸುವ ಕೆಲಸ ಮಾಡೋನ ಎಂದರು.ಅಲ್ಲದೇ ಕಸಾಪ ಸದಸ್ಯರು 5 ವರ್ಷ ಅಧಿಕಾರ ನೀಡಿದ್ದಾರೆ.ತಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ವಿಜಯಕುಮಾರ ತೇಗಲತಿಪ್ಪಿ ಅವರಿಗೆ ಹೇಳಿದರು.

ಇದನ್ನೂ ಓದಿ: ಇಬ್ಬರು ಬೈಕ್ ಕಳ್ಳರ ಬಂಧನ

ಕಸಾಪ ಜಿಲ್ಲಾಧ್ಯಕ್ಷನಾಗಿ ಎಲ್ಲಾ ಕಸಾಪ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ 5 ವರ್ಷದ ಅವಧಿಯಲ್ಲಿ ಹೊಸ ಹೊಸ ಆಲೋಚನೆಗಳೊಂದಿಗೆ ರಚನಾತ್ಮಕ ಕೆಲಸಗಳನ್ನು ಮಾಡುವ ಮೂಲಕ ಕನ್ನಡಪರವಾದ ವಾತಾವರಣವನ್ನು ಸೃಷ್ಠಿಸಲಾಗುವುದು.ಅಲ್ಲದೇ ಬೆಂಗಳೂರಿನವರು ಈ ಕಡೆ ನೋಡುವತ್ತ ಕನ್ನಡ ಸಾಂಸ್ಕøತಿಕ ಪರಿಸರ ನಿರ್ಮಾಣ ಮಾಡಲಾಗುವುದು. ತಾಲೂಕಿನ ಹೊನಗುಂಟಾ ಗ್ರಾಮದ ಐತಿಹಾಸಿಕ ಕುರಿತ ಒಂದು ದಿನದ ಸಮ್ಮೇಳನವನ್ನು ಆಯೋಜಿಸಲಾಗುವುದು ಎಂದರಲ್ಲದೇ, ನಗರದ ಕನ್ನಡ ಭವನದ ನಿರ್ಮಾಣಕ್ಕೆ ವಿಶೇಷ ಅನುದಾನ ನೀಡುವ ಮೂಲಕ ಅನುಕೂಲ ಕಲ್ಪಿಸಬೇಕೆಂದು ಶಾಸಕರಿಗೆ ಮನವಿ ಮಾಡಿದರು.

ತಹಸೀಲ್ದಾರ ಸುರೇಶ ವರ್ಮಾ ಮಾತನಾಡಿ, ಕನ್ನಡಕ್ಕೆ ತನ್ನದೇ ಆದ ಎರಡು ಸಾವಿರ ವರ್ಷಗಳ ಇತಿಹಾಸವಿದೆ.ಕನ್ನಡ ಅತ್ಯಂತ ಸರಳ ಭಾಷೆಯಾಗಿದ್ದು, ಕನ್ನಡಿಗರು ಅಷ್ಟೇ ಸರಳವಾಗಿದ್ದಾರೆ.ಬಸವಾದಿ ಶರಣರು ನೀಡಿದ ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿದೆ.ಕನ್ನಡ ಸಾಹಿತ್ಯವನ್ನು ಬೆಳೆಸಬೇಕಾದ ನಾವುಗಳು ಓದುವುದನ್ನು ನಿಲ್ಲಿಸಿದ್ದೆವೆ.ಪುಸ್ತಕಗಳು ನಮ್ಮಿಂದ ದೂರವಾಗುತ್ತಿದೆ.ಕವಿಗಳಿಗೆ ವೇದಿಕೆಯಿಲ್ಲದಂತಾಗಿದೆ.ವಿಚಾರಗಳ ವಿನಿಮಯವಾಗುತ್ತಿಲ್ಲ.ಆದ್ದರಿಂದ ಕನ್ನಡಪರ ಮನಸ್ಸುಗಳು ಒಂದಾಗಿ ಕನ್ನಡ ಕಟ್ಟುವ ಕೆಲಸಕ್ಕೆ ಮುಂದಾಗಬೇಕಿದೆ.ಅಲ್ಲದೇ ಕವಿಗಳಿಗೆ, ಯುವಕರಿಗೆ, ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಸಾಪ ಹೆಚ್ಚು ಕೆಲಸ ಮಾಡಬೇಕಿದೆ.ಮುಂಬರುವ ದಿನಗಳಲ್ಲಿ ಶಹಾಬಾದ ಉತ್ಸವ ಮಾಡುವ ಮೂಲಕ ಕನ್ನಡದ ಸುಗಂಧವನ್ನು ಎಲ್ಲೆಡೆ ಪಸರಿಸೋಣ ಎಂದರು.

ಇದನ್ನೂ ಓದಿ: ಪಿಎಸ್‍ಐ ಅಕ್ರಮ ತನಿಖೆಗೆ ಶರಣಪ್ರಕಾಸ ಒತ್ತಾಯ

ಕಸಾಪ ನಿಕಟಪೂರ್ವ ಅಧ್ಯಕ್ಷ ಮೃತ್ಯೂಂಜಯ್ ಹಿರೇಮಠ,ಕಸಾಪ ತಾಲೂಕಾ ಅಧ್ಯಕ್ಷ ಶರಣಬಸಪ್ಪ ಕೋಬಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಾಹಿತಿ ಡಾ.ನೀಲಮ್ಮ ಕತ್ನಳ್ಳಿ, ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ತಾಪಂ ಇಓ ಬಸಲಿಂಗಪ್ಪ ಡಿಗ್ಗಿ, ಡಿವಾಯ್‍ಎಸ್‍ಪಿ ಉಮೇಶ ಚಿಕ್ಕಮಠ, ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪೂರಕರ್, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಜೆಡಿಎಸ್ ಅಧ್ಯಕ್ಷ ರಾಜಮಹ್ಮದ್ ರಾಜಾ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಯಶ್ವಂತ ಅಷ್ಟಗಿ, ಕಸಾಪ ಜಿಲ್ಲಾ ಕೋಶಾಧ್ಯಕ್ಷ ಡಾ.ಶರಣರಾಜ ಚಪ್ಪರಬಂಡಿ,ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗ ಬಾಳಿ ಇತರರು ವೇದಿಕೆ ಮೇಲಿದ್ದರು.

ರಾಜು ಕೋಬಾಳ, ಯಶೋಧಾ ಮುಸ್ಕಿ ಹಾಗೂ ದಶರಥ ಕೋಟನೂರ್ ಪ್ರಾರ್ಥಿಸಿದರು, ಬಸವರಾಜ ಮದ್ರಿಕಿ ನಿರೂಪಿಸಿದರು, ಶರಣು ವಸ್ತ್ರದ್ ಸ್ವಾಗತಿಸಿದರು, ಮಲ್ಲಿಕಾರ್ಜುನ ಇಟಗಿ ವಂದಿಸಿದರು.

ಇದನ್ನೂ ಓದಿ: ಏ.೨೧, ೨೨ ಸಿಎಂ ನೇತೃತ್ವದ ತಂಡ ಕಲಬುರಗಿಗೆ ಆಗಮನ

ಭೀಮುಗೌಡ ಖೇಣಿ,ವಿಜಯಕುಮಾರ ಮುಟ್ಟತ್ತಿ, ಪ್ರಕಾಶ ಪಾಟೀಲ, ಶಿವಪುತ್ರ ಕರಣಿಕ್,ಪೂಜಾರಿ ಮೇತ್ರೆ, ರವಿ ನರೋಣಿ,ಮರಲಿಂಗ ಕಮರಡಗಿ,ವಿಶ್ವರಾಧ್ಯ ಬೀರಾಳ, ಸೋಮಶೇಖರ ನಂದಿಧ್ವಜ,ಡಿ.ಸಿ.ಹೊಸಮನಿ, ವಿಜಯಕುಮಾರ ಕಂಠಿಕರ್ ಸೇರಿದಂತೆ ಅನೇಕರು ಇದ್ದರು.

ಇದನ್ನೂ ಓದಿ: ಹದಿನಾಲ್ಕು ಪದವಿ ಪಡೆದ ಬಾಬಾ ಸಾಹೇಬ್ ವಿಶ್ವರತ್ನ: ವಿಠ್ಠಲ್ ವಗ್ಗನ್

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

4 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

4 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

6 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

6 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

6 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

7 hours ago