ಕಲಬುರಗಿ: ಯುಗಮಾನೋತ್ಸವ ಜಿಲ್ಲಾ ಸಮಿತಿ ವತಿಯಿಂದ ಏ.೨೨ ರಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತೋತ್ಸವ ಹಾಗೂ ರಾಜ್ಯ ಸರಕಾರಕ್ಕೆ ಅಭಿನಂದನಾ ಸಮಾರಂಭ ಬೆಳಿಗ್ಗೆ ೮:೦೦ ಗಂಟೆಗೆ ಚೌಕ್ ಪೊಲೀಸ್ ಠಾಣೆಯಿಂದ ಕಳಸ ಕುಂಭ ವೀರಗಾಸೆ ಕುಂಭಮೇಳ ಡೊಳ್ಳು ಭಜನೆ ಎಲ್ಲಾ ತರಹದ ತಂಡಗಳೊಂದಿಗೆ ವಿವಿಧ ವಾದ್ಯಗಳ ಜೊತೆಗೆ ನಗರದ ಸಾರ್ವಜನಿಕ ಉದ್ಯಾನ ವರೆಗೆ ಜರಗಲಿದೆ ಎಂದು ಜಿಲ್ಲಾ ಜಯಂತೋತ್ಸವ ಸಮಿತಿಯ ಮಾಧ್ಯಮ ವಕ್ತಾರರಾದ ಶ್ರೀ ಸಂಪತ್ ಜೆ ಹಿರೇಮಠ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಚೈತ್ರ ಗೌರಿ ಹುಣ್ಣಿಮೆ ನಿಮಿತ್ತ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ
ಈ ಕಾರ್ಯಕ್ರಮಕ್ಕೆ ದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ೯ ಅಡಿ ಎತ್ತರದ ಭವ್ಯ ಮೂರ್ತಿ ಮೆರವಣಿಗೆಗೆ ಶ್ರೀ ೧೦೦೮ ಜಗದ್ಗುರು ಡಾ. ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯರ ಭಗವತ್ ಪಾದಂಗಳ ಶ್ರೀ ಪೀಠ ಬಾಳೆಹೊನ್ನೂರು, ಶ್ರೀ ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದ ೯ನೇ ಪೀಠಾಧಿಪತಿಗಳಾದ ಚಿ. ದೊಡ್ಡಪ್ಪ ಅಪ್ಪ, ಮರಮಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜ್ ನಿರಗುಡಿ ಇವರುಗಳ ಅಮೃತ ಹಸ್ತದಿಂದ ಚಾಲನೆ ನೀಡುವರು.
ಮಧ್ಯಾಹ್ನ ೧೨:೦೦ ಗಂಟೆಗೆ ಸಾರ್ವಜನಿಕ ಉದ್ಯಾನವನದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಮತ್ತು ಸರ್ಕಾರದ ಎಲ್ಲಾ ಸಚಿವರಿಗೂ ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಿತಿಯಿಂದ ಸನ್ಮಾನ ಸಮಾರಂಭದ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ಅವರು ಅಧ್ಯಕ್ಷತೆ ವಹಿಸುವರು. ಹಾಗೂ ರಾಜಕಾರಿಣಿ ಮುಖಂಡರು, ಸಮಿತಿಯ ಕಾರ್ಯಕರ್ತರು, ನಾಗರಿಕರು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲಗೋಳಬೇಕೆಂದು ಜಿಲ್ಲಾ ಜಯಂತೋತ್ಸವ ಸಮಿತಿಯ ಮಾಧ್ಯಮ ವಕ್ತಾರರಾದ ಸಂಪತ್ ಜೆ ಹಿರೇಮಠ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ತಾಲೂಕುಗಳ ಅಭಿವೃದ್ಧಿಗೆ ಒತ್ತಾಯಿಸಿ ಚನ್ನವೀರ ಗೌರೆ ಸಿಎಂಗೆ ಮನವಿ
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…