ಕಲಬುರಗಿ: ಸಾಂಚಿನಗರ (ನ್ಯೂ ಘಾಟಗೆ ಲೇಔಟ್) ದಲ್ಲಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ ೧೩೧ನೇಯ ಜಯಂತಿ ಉತ್ಸವವನ್ನುಅದ್ದೂರಿಯಾಗಿ ಆಚರಿಸಲಾಯಿತು.
ಮುಖ್ಯಭಾಷಣಕಾರರಾಗಿ ಆಗಮಿಸಿದ್ದ ಉಪಾಸಕ, ಖ್ಯಾತ ಅಂಬೇಡ್ಕರವಾದಿಗಳಾದಹ. ರಾ.ಮಹೀಶರವರು ಸಂವಿಧಾನದ ಮುಂದಿರುವ ಸವಾಲುಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಸಂವಿಧಾನದ ಫಲಸವಿದಿರುವ ಎಲ್ಲಾ ಭಾರತೀಯರು ಅದರ ಋಣತೀರಿಸುವಸಮಯ ಈಗ ಬಂದಿದೆ. ಅದಕ್ಕಾಗಿ ಬಹಳ ಎಚ್ಚರಿಕೆಯಿಂದ ಮುಂದಿನ ತಲೆಮಾರಿನ ಭವಿಷ್ಯ ನಿರ್ಮಾಣ ಮಾಡಬೇಕಾಗಿದೆ. ಬಾಬಾಸಾಹೇಬರ ಹೋರಾಟದ ಫಲವಾಗಿ ಸಿಕ್ಕ ಓಟಿನ ಮಹತ್ವ ಇಂದಾದರೂ ತಿಳಿಯಬೇಕಾಗಿದೆ.
ಇದನ್ನೂ ಓದಿ: ಕೃಷಿ ವಿಜ್ಞಾನ ಕೇಂದ್ರ ಕಲಬುರಗಿಯಲ್ಲಿ ರೈತ ಸಮ್ಮೇಳನ
ನಾವು ಮರಳಿ ನಮ್ಮಗೂಡಿಗೆ ಸೇರಬೇಕಿದೆ (ಬೌದ್ಧರಾಗಬೇಕಾಗಿದೆ). ಯಾವುದೇ ರೀತಿಯ ದುಷ್ಟವ್ಯಸನಗಳಿಗೆ ಬಲಿಯಾಗದೆ, ನಿಜವಾದ ಅಂಬೇಡ್ಕರ್ ಅನುಯಾಯಿಗಳಾಗಬೇಕಿದೆ. ಯಾವುದಕ್ಕೂ ಹೆದರದೆ ಸತ್ಯವನ್ನು ಧೈರ್ಯದಿಂದ ಮಾತನಾಡಬೇಕಾಗಿದೆ. ಯಾವುದೇ ಮೀಸಲು ಕ್ಷೇತ್ರದಿಂದ ಚುನಾಯಿತರಾದ ಶಾಸಕರು, ಸಂಸದರು ಮನುವಾದಿ ಪಕ್ಷಗಳ ಸಾಕುನಾಯಿಗಳಾಗದೆ, ದಮನಿತರ, ಶೋಶಿತರ ಹಕ್ಕುಗಳ ಕಾವಲು ನಾಯಿಗಳಾಗಬೇಕಾಗಿದೆ. ನೌಕರಸ್ಥರು ತಮ್ಮ ಮನೆಯ ಅನಿಯಮಿತ ಆಸೆಗಳಿಗೆ ಬಲಿಯಾಗದೆ ಸಮಾಜದಏಳಿಗೆಗಾಗಿ ಶ್ರಮಿಸಬೇಕಾಗಿದೆ.
ವಿದ್ಯಾರ್ಥಿಗಳು ಇರ್ರೆಸ್ಪಾನ್ಸಿಬಲ್ ಈಡಿಯಟ್ಗಳಾಗದೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ನಾವು ಯಾರಿಗೂ ಕಡಿಮೆ ಇಲ್ಲ ಎಂದು ತೊರಿಸಬೇಕಾಗಿದೆ. ಮಹಿಳೆಯರೂ ಕೂಡ ಮೂಢನಂಬಿಕೆಗಳಿಂದ ಹೊರಬಂದು ಸಮಾಜದ ಮುನ್ನೆಲೆಗೆ ಬರಬೇಕಾಗಿದೆ. ಹೀಗೆ ಹಲವಾರು ಮಹತ್ವದ ವಿಚಾರಗಳನ್ನು ಮಂಡಿಸಿದರು. ಹಾಗೂ ಯುವ ಹೋರಾಟಗಾರ್ತಿ ನಜ್ಮನಜೀರ್, ಅವರುಮಾತನಾಡಿ, ಡಾ.ಬಾಬಾಸಾಹೇಬರು ಕೇವಲ ಒಂದು ಸಮುದಾಯದ ನಾಯಕರಲ್ಲ, ಅವರು ವಿಶ್ವನಾಯಕರು. ನಮ್ಮೆಲ್ಲರ ಉಳಿವಿಗೆ ಮತ್ತು ಈ ದೇಶದ ಉಳಿವಿಗೆ ಅಂಬೇಡ್ಕರರ ಚಿಂತನೆ ಸರ್ವಕಾಲಿಕ ಸತ್ಯ ಎಂದು ತಮ್ಮ ಅನಿಸಿಕೆ ವ್ಯೆಕ್ತಪಡಿಸಿದರು.
ಇದನ್ನೂ ಓದಿ: ದತ್ತಾತ್ರೇಯ ಪಾಟೀಲ ರೇವೂರ ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳಿಗೆ ಸಾಮಾಗ್ರಿ ವಿತರಣೆ
ಬಹಿರಂಗ ಸಭೆಯ ಸಾನಿಧ್ಯವನ್ನು ಮಾತೆ ಪ್ರಭುಶ್ರೀತಾಯಿಯವರು ವಹಿಸಿಕೊಂಡಿದರು, ಕಾರ್ಯಕ್ರಮದ ಉದ್ಘಾಟಕರಾಗಿ, ನೀಲಗಂಗಾ ಬಬಲಾದಕೆ.ಎ.ಎಸ್ ಅಧಿಕಾರಿಗಳು ಹಾಗು ಅಧ್ಯಕ್ಷತೆಯನ್ನು ಬಡಾವಣೆಯ ಯುವ ಮುಖಂಡರಾದ, ಸಿದ್ಧಾರ್ಥ ಪಾರಾ ವಹಿಸಿದರು. ಬಡಾವಣೆಯ ಮುಖಂಡರುಗಳಾದ ಡಾ.ಐ.ಎಸ್.ವಿದ್ಯಾಸಾಗರ ಸರ್, ರಮೇಶ್ ಪಟ್ಟೆದಾರ ಸರ್, ಡಾ. ಜಗದೀಶ್ ಕಟ್ಟಿಮನಿ ಸರ್, ಬಕ್ಕಪ್ಪ ಚಂದಾಪೂರಕರ್ ಸರ್, ಬಿ.ಸಿ.ವಾಲಿ ಸರ್, ಮಲ್ಲಿಕಾರ್ಜುನ ಮದಾನಿ ಸರ್ ಅವರುಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಚಿದಾನಂದ ಕುಡ್ಡನ್ ಸರ್ ಕಾರ್ಯಕ್ರಮ ನಿರೂಪಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…