ಬಿಸಿ ಬಿಸಿ ಸುದ್ದಿ

ಫ್ಲಿಪ್ ಕಾರ್ಟ್ ಮಾರ್ಕೆಟ್ ಪ್ಲೇಸ್ ನಿಂದ ಕಾರ್ಯತಂತ್ರದ ನೀತಿ ಜಾರಿ

  • ಭಾರತದಲ್ಲಿ ಮಾರಾಟಗಾರ ಪರಿಸರ ವ್ಯವಸ್ಥೆ ಸುಧಾರಣೆ

ಬೆಂಗಳೂರು: ಭಾರತದ ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಉದ್ಯಮ –ಮೊದಲ ಮಾರುಕಟ್ಟೆ ನೀತಿ ಬದಲಾವಣೆಗಳನ್ನು ಹಾಗೂ ಮಾರಾಟಗಾರರ ಪಾಲುದಾರರ ಬೆಳವಣಿಗೆ, ಮಾರಾಟಗಾರ ಪಾಲುದಾರರ ಸಬಲೀಕರಣ, ಬೆಳವಣಿಗೆ, ಸಮೃದ್ಧಿಗೆ ಕೊಡುಗೆ ನೀಡುವ ಸಮಗ್ರ ಇ-ಕಾಮರ್ಸ್ ಪರಿಸರ ವ್ಯವಸ್ಥೆಯನ್ನು ನಿರ್ಮಾಣ ಮಾಡಲು ಹೊಸ ಸಾಮರ್ಥ್ಯಗಳನ್ನು ಘೋಷಣೆ ಮಾಡಿದೆ.

ಎಂಎಸ್ಎಂಇಗಳು ಮತ್ತು ಸಣ್ಣ ವ್ಯಾಪಾರಗಳು ತಮ್ಮ ಗ್ರಾಹಕರ ನೆಲೆಯನ್ನು ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಇ-ಕಾಮರ್ಸ್ ನ ಶಕ್ತಿಯನ್ನು ನಿಯಂತ್ರಣಕ್ಕೆ ತರಲು ಸಹಾಯ ಮಾಡುವ ಫ್ಲಿಪ್ ಕಾರ್ಟ್ ನ ಬದ್ಧತೆಯನ್ನು ಈ ಪ್ರಯತ್ನಗಳು ನಿರ್ಮಿಸುತ್ತದೆ. ಉತ್ತಮ ದರ್ಜೆಯ ಪರಿಹಾರಗಳಲ್ಲಿ ಪ್ರವೇಶವನ್ನು ಪಡೆದುಕೊಳ್ಳುವುದಲ್ಲದೇ, ಅವರ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಫ್ಲಿಪ್ ಕಾರ್ಟ್ ಪ್ಲಾಟ್ ಫಾರ್ಮ್ ನಲ್ಲಿ ವ್ಯಾಪಾರ ಮಾಡುವ ಸರಳ ವಿಧಾನವನ್ನು ಗಮನಾರ್ಹವಾಗಿ ಸುಧಾರಿಸುವ ಮೂಲಕ ಮುಂದಿನ ಹಂತದ ಬೆಳವಣಿಗೆಯನ್ನು ಪ್ರವೇಶಿಸಲು ಮಾರಾಟಗಾರರ ಹೆಚ್ಚುತ್ತಿರುವ ಅಗತ್ಯಗಳನ್ನು ಪರಿಹರಿಸುವ ನಿಟ್ಟಿನಲ್ಲಿ “ಫ್ಲಿಪ್ ಕಾರ್ಟ್ ಎಡ್ಜ್’’ ಅಡಿಯಲ್ಲಿ ನವೀನ ನೀತಿ ಬದಲಾವಣೆಗಳನ್ನು ಪರಿಚಯಿಸಲಾಗಿದೆ.

ಇದನ್ನೂ ಓದಿ: ಮೊರಾರ್ಜಿ ದೇಸಾಯಿ ವಸತಿ ಶಾಲೆ: 6ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ನೀತಿ ಬದಲಾವಣೆಗಳು ಮತ್ತು ಸಾಮರ್ಥ್ಯಗಳ ವಿಭಾಗವು ಉದ್ಯಮದಲ್ಲಿ ವೇಗದ ಪಾವತಿಯ ಸೆಟಲ್ಮೆಂಟ್ ಆವೃತ್ತಿಯ ಉತ್ತಮ-ದರ್ಜೆಯ ಪಾವತಿ ನೀತಿಯನ್ನು ಒಳಗೊಂಡಿದೆ. ಅದೇ ರೀತಿ ತಡೆ ರಹಿತವಾಗಿ 10 ನಿಮಿಷದಲ್ಲಿ ಆನ್ –ಬೋರ್ಡಿಂಗ್ ವ್ಯವಸ್ಥೆ, ಜಾಹೀರಾತು ಖರ್ಚುಗಳ ಮೇಲೆ ಖಾತರಿಪಡಿಸಿದ ROI, ಉತ್ತಮ ಮಾರಾಟಗಾರರಿಗೆ ಅತ್ಯಂತ ಕಡಿಮೆ ರಿಟರ್ನ್ ವೆಚ್ಚ, ಪ್ರಯಾಣ ಸಂಬಂಧಿತರ ಅಗತ್ಯಗಳಿಗೆ ಕ್ಲಿಯರ್ ಟ್ರಿಪ್ ಅನ್ನು ಏಕೀಕರಣಗೊಳಿಸಲಾಗಿದೆ.

ಫ್ಲಿಪ್ ಕಾರ್ಟ್ ನ ಮಾರ್ಕೆಟ್ ಪ್ಲೇಸ್ ನ ಹಿರಿಯ ನಿರ್ದೇಶಕ ಮತ್ತು ಮುಖ್ಯಸ್ಥ ಜಗಜೀತ್ ಹರೋಡೆ ಅವರು ಮಾತನಾಡಿ, “ಒಂದು ಪ್ರಜಾಸತ್ತಾತ್ಮಕ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ನಲ್ಲಿ ನಮ್ಮ ಎಲ್ಲಾ ಮಾರಾಟಗಾರ ಪಾಲುದಾರರು ತಮ್ಮ ವ್ಯಾಪಾರವನ್ನು ವೃದ್ಧಿಸಿಕೊಳ್ಳಬಹುದು ಮತ್ತು ಬೆಳೆಯುತ್ತಿರುವ ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿರಬಹುದಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದನ್ನು ನಾವು ಬಯಸುತ್ತೇವೆ.

ಇದನ್ನೂ ಓದಿ: ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ನೆರವೇರಿದ ಗುಲಬರ್ಗಾ ವಿಶ್ವವಿದ್ಯಾಲಯದ 39, 40ನೇ ಘಟಿಕೋತ್ಸವ

ನಾವು ಉದ್ಯಮ-ಮೊದಲ ನಾವೀನ್ಯತೆಗಳೊಂದಿಗೆ ಭಾರತದಲ್ಲಿ ಇ-ಕಾಮರ್ಸ್ ಮಾರುಕಟ್ಟೆ ವಿಭಾಗವನ್ನು ಆವಿಷ್ಕರಿಸುವುದನ್ನು ಹಾಗೂ ಬೆಳೆಸುವುದನ್ನು ಮುಂದುವರಿಸುತ್ತೇವೆ. ಅಲ್ಲದೇ, ಬಲವಾದ, ಸುಸ್ಥಿರ ಬೆಳವಣಿಗೆಯತ್ತ ಅವರ ಪ್ರಯಾಣದಲ್ಲಿ ಎಂಎಸ್ಎಂಇಗಳು ಹಾಗೂ ಮಾರಾಟಗಾರರ ಪಾಲುದಾರರನ್ನು ಸಜ್ಜುಗೊಳಿಸುತ್ತೇವೆ. ನಮ್ಮ ಉದ್ಯಮ-ಮೊದಲ ನೀತಿ ಬದಲಾವಣೆಗಳು ಹಾಗೂ ಹೊಸ ತಂತ್ರಜ್ಞಾನದ ಸಾಮರ್ಥ್ಯಗಳು ಭಾರತದಲ್ಲಿನ ಇ-ಕಾಮರ್ಸ್ ಬೆಳವಣಿಗೆಯ ಬಗ್ಗೆ ಪ್ರಚಾರ ಮಾಡುವ ಸಂದರ್ಭದಲ್ಲಿ ಮಾರಾಟಗಾರರು ಹಾಗೂ ಗ್ರಾಹಕರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿವೆ. ನಮ್ಮ ಹೊಸ ನೀತಿಗಳು ಮತ್ತು ಸಾಮರ್ಥ್ಯಗಳ ಮೂಲಕ ಪಾವತಿಗಳಿಂದ ಆನ್ ಬೋರ್ಡಿಂಗ್ ನಿಂದ ಕ್ಯಾಟಲಾಗ್ ಗೆ ಮಾರಾಟಗಾರರು ಎದುರಿಸುತ್ತಿರುವ ಕೆಲವು ಉದ್ಯಮದ ಮಿತಿಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಾವು ಬದ್ಧರಾಗಿದ್ದೇವೆ ಮತ್ತು ಕಾರ್ಯಪ್ರವೃತ್ತರಾಗಿದ್ದೇವೆ’’ ಎಂದರು.

ಫ್ಲಿಪ್ ಕಾರ್ಟ್ ಮಾರ್ಕೆಟ್ ಪ್ಲೇಸ್ ನಲ್ಲಿ ಹಾಲಿ ಮತ್ತು ಹೊಸ ಮಾರಾಟಗಾರರಿಗೆ ನೀತಿ ಬದಲಾವಣೆಗಳು ಮತ್ತು ಸಾಮರ್ಥ್ಯಗಳ ವಿವರಗಳು:
ತಡೆರಹಿತವಾಗಿ 10 ನಿಮಿಷದಲ್ಲಿ ಆನ್ ಬೋರ್ಡಿಂಗ್ – ತಮ್ಮ ಇ-ಕಾಮರ್ಸ್ ಪ್ರಯಾಣವನ್ನು ಆರಂಭಿಸುವ ಸಂದರ್ಭದಲ್ಲಿ ಎದುರಾಗುವ ಅಡೆತಡೆಗಳನ್ನು ನಿವಾರಿಸಿ ಹಾದಿಯನ್ನು ಸರಳಗೊಳಿಸುವುದರ ಮೇಲೆ ಈ ಉದ್ಯಮ-ಮೊದಲ ಸಾಮರ್ಥ್ಯವು ಕೇಂದ್ರೀಕರಿಸಿದೆ. ಈ ಸಂಘರ್ಷವಿಲ್ಲದ ಆನ್ ಬೋರ್ಡಿಂಗ್ ಪ್ರಕ್ರಿಯೆಯು ಯಾವುದೇ ತೊಂದರೆಗಳಿಲ್ಲದೇ ವ್ಯವಹಾರಗಳನ್ನು ಪ್ರಾರಂಭ ಮಾಡಲು ಮಾರಾಟಗಾರರಿಗೆ ಅವಕಾಶ ನೀಡುತ್ತದೆ.

ಇದನ್ನೂ ಓದಿ: ಜಿಲ್ಲಾ ಜಮಾತ ಉಲ್ ಖುರೇಷಿ ಮೋಮಿನಪೂರ ಪದಾಧಿಕಾರಿಗಳ ಆಯ್ಕೆ

ಪಟ್ಟಿ ಮತ್ತು ಕೆಟಲಾಗ್ ಮಾಡುವುದು ಸುಲಭ: ಉದ್ಯಮ-ಮೊದಲ ಎಐ ಆಧಾರಿತ ಸ್ವಯಂಚಾಲಿತ ಪರಿಹಾರವನ್ನು ನೀಡುವ ಸುಲಭ ಸುಲಭವಾದ ಉತ್ಪನ್ನ ಪಟ್ಟಿ/ಕ್ಯಾಟಲಾಗ್ ಗೆ ಪರಿಹಾರವನ್ನು ಒದಗಿಸಿದೆ. ಇದು ಮಾರಾಟಗಾರರಿಗೆ ಸುಲಭವಾಗುವಂತೆ ಯಾವುದೇ ಉತ್ಪನ್ನದ ಚಿತ್ರವನ್ನು ಫ್ಲಿಪ್ ಕಾರ್ಟ್-ಸ್ಟ್ಯಾಂಡರ್ಡ್ ಗುಣಮಟ್ಟಕ್ಕೆ ಪರಿವರ್ತಿಸುತ್ತದೆ.

ಅತ್ಯುತ್ತಮ ದರ್ಜೆಯ ಪಾವತಿ/ರಿಟರ್ನ್ ನೀತಿಗಳು- ಫ್ಲಿಪ್ ಕಾರ್ಟ್ ಮಾರಾಟಗಾರರ ಹೊಣೆಗಾರಿಕೆಗಳನ್ನು ಸುಲಭಗೊಳಿಸುತ್ತದೆ ಮತ್ತು ಈ ಉದ್ಯಮದ ಅತ್ಯುತ್ತಮ ಪಾವತಿ ನೀತಿಯೊಂದಿಗೆ ಅವರ ದುಡಿಯುವ ಬಂಡವಾಳವನ್ನು ಮುಕ್ತಗೊಳಿಸುತ್ತದೆ. ಫ್ಲಿಪ್ ಕಾರ್ಟ್ ಈಗ ಮಾರಾಟಗಾರರ ಪಾವತಿಗಳನ್ನು ಡಿಸ್ಪ್ಯಾಚ್ ನಿಂದ 7-10 ದಿನಗಳಲ್ಲಿ ಪ್ರಕ್ರಿಯೆಗೊಳಿಸುತ್ತದೆ. ಇದು ವೇಗವಾಗಿ ಮತ್ತು ಈ ಮೂಲಕ ಹೆಚ್ಚು ನಿರೀಕ್ಷಿಸಬಹುದಾದ ಪಾವತಿ ಸೆಟ್ಲ್ ಮೆಂಟ್ ಫ್ಲಾಟ್ ಫಾರ್ಮ್ ಆಗಿದೆ.

ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಜಾನಪದ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

ಮಾರಾಟಗಾರರಿಗೆ ಜಾಹೀರಾತುಗಳ ಮೇಲೆ ಖಾತರಿಪಡಿಸಿದ ಆರ್ ಒಐ ವಿತರಣೆ: ಗ್ರಾಹಕರಿಗೆ ಸೇವೆ ಸಲ್ಲಿಸುವ ಸಾಮರ್ಥ್ಯದ ಆಧಾರದ ಮೇಲೆ ಹೊಸ ಮಾರಾಟಗಾರರಿಗೆ ಬೆಳವಣಿಗೆಯನ್ನು ಖಾತರಿಪಡಿಸುವ ಮಾರುಕಟ್ಟೆಯಲ್ಲಿ ಮೊದಲಿಗರಾಗಿ ಫ್ಲಿಪ್ ಕಾರ್ಟ್ ಉದ್ಯಮ ಮಾನದಂಡಗಳನ್ನು ರಚಿಸುತ್ತಿದೆ. ಜಾಹೀರಾತು ಖರ್ಚುಗಳ ಮೇಲಿನ ಖಾತರಿಯ ಆರ್ ಒಐ ಮಾರಾಟಗಾರರ ಗೋಚರತೆಯನ್ನು ಹೆಚ್ಚಳ ಮಾಡುತ್ತದೆ ಹಾಗೂ ಅವರ ವ್ಯವಹಾರಗಳನ್ನು ಮಾಪನ ಮಾಡಲು ಸುಲಭವಾಗುತ್ತದೆ.

ಕ್ಲಿಯರ್ ಟ್ರಿಪ್ ಏಕೀಕರಣದೊಂದಿಗೆ ಮಾರಾಟಗಾರರಿಗೆ ಸಂಯೋಜಿತ ಗುಂಪು ಪ್ರಯಾಣ ಪ್ರಯೋಜನಗಳು- ಕ್ಲಿಯರ್ ಟ್ರಿಪ್ ಏಕೀಕರಣದೊಂದಿಗೆ ಏಕ ಗವಾಕ್ಷಿ ಡ್ಯಾಶ್ ಬೋರ್ಡ್ ಮಾರಾಟಗಾರರಿಗೆ ಅವರ ಪ್ರಯಾಣದ ಅಗತ್ಯತೆಗಳಿಗಾಗಿ ವಿಶೇಷ ಡೀಲ್ ಗಳನ್ನು ನೀಡುವ ಮೂಲಕ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

ಮಾರಾಟಗಾರರಿಗೆ ಹೊಚ್ಚ ಹೊಸ iOS ಆ್ಯಪ್- ಈಗ, ಮಾರಾಟಗಾರರು ಫ್ಲಿಪ್ ಕಾರ್ಟ್ ಮಾರಾಟಗಾರರ ಹಬ್ ಅಪ್ಲಿಕೇಶನ್ ಮೂಲಕ ತಮ್ಮ ಮೊಬೈಲ್ ಅನ್ನು ಬಳಸಿಕೊಂಡು ತಮ್ಮ ವ್ಯವಹಾರಗಳ ಎಲ್ಲಾ ಅಂಶಗಳನ್ನು ನಿರ್ವಹಿಸಬಹುದು. ಇದು ಪ್ರಸ್ತುತ ಅತ್ಯುತ್ತಮ ರೇಟ್ ಮಾಡಲಾದ ಬಿ2ಬಿ ಅಪ್ಲಿಕೇಶನ್ ಗಳಲ್ಲಿ ಒಂದಾಗಿದೆ. ಫ್ಲಿಪ್ ಕಾರ್ಟ್ ನ ಹೊಸ iOS ಅಪ್ಲಿಕೇಶನ್ ನಲ್ಲಿಯೇ ಸುಲಭವಾದ ಪಟ್ಟಿಯನ್ನು ಮತ್ತು ಎಐ ಆಧಾರಿತ ಕ್ಯಾಟಲಾಗ್ ಅನ್ನು ಅನುಮತಿಸುತ್ತದೆ.

ಉದ್ಯಮ-ಮೊದಲ ಮಾರುಕಟ್ಟೆ ನೀತಿ ಬದಲಾವಣೆಗಳು ಮತ್ತು ಹೊಸ ಸಾಮರ್ಥ್ಯಗಳು ಈ ವರ್ಷ ತನ್ನ ಪ್ಲಾಟ್ ಫಾರ್ಮ್ ನಲ್ಲಿ ಹೆಚ್ಚು ಮಾರಾಟಗಾರ ಉದ್ಯಮಿಗಳನ್ನು ಸಕ್ರಿಯಗೊಳಿಸಲು ಮತ್ತು ಸಶಕ್ತಗೊಳಿಸಲು ಫ್ಲಿಪ್ ಕಾರ್ಟ್ ನ ಪ್ರಯತ್ನಗಳನ್ನು ಬಲಪಡಿಸುತ್ತದೆ. ಕಂಪನಿಯು ಸಮರ್ಥನೀಯ ಹಾಗೂ ಅಂತರ್ಗತ ವೇದಿಕೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಶಾಸಕನ ಪತ್ನಿಯಾಗಿ ಬಡತನದಲ್ಲೇ ಬದುಕಿದ ಏಕೈಕ ಜೀವ ಶಾಂತವೇರಿ ಗೋಪಾಲಗೌಡರ ಪತ್ನಿ ಸೋನಕ್ಕ

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

13 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

23 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

23 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

23 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago