ಕಲಬುರಗಿ: ಮಹಾನಗರ ಪಾಲಿಕೆ ಅಡಿಯಲ್ಲಿ ನಡೆಯುತ್ತಿರುವ ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆಯ ೨೦೧೯-೨೦ ರಿಂದ ೨೦೨೩-೨೪ ರ ವರೆಗಿನ ಅನುದಾನದ ಕ್ರಿಯಾ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಎಲೆಕ್ಟಿಕಲ್ ಆಟೋ ಖರೀದಿ ಹಾಗೂ ಕಿರಾಣಿ ಅಂಗಡಿ ಇನ್ನಿತರ ಉದ್ಯೋಗಗಳಿಗೆ ನೀಡುತ್ತಿರುವ ಲೋನಗಳಲ್ಲಿ ಅವ್ಯವಹಾರ ಮಾಡುತ್ತಿರುವ ೨೪/೧೦ ಇಲಾಖೆಯ ಅಧಿಕಾರಿಗಳಾದ ವಿಠಲ ಹಾದಿಮನಿ ಇವರನ್ನು ಕೂಡಲೇ ವರ್ಗಾವಣೆ ಮಾಡಿ ಒಬ್ಬ ಒಳ್ಳೆಯ ನಿಷ್ಠಾವಂತ ಅಧಿಕಾರಿಯನ್ನು ನಿಯೋಜಿಸಬೇಕೆಂದು ಜೈ ಕನ್ನಡಿಗರ ಸೇನೆ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮಹಾನಗರ ಪಾಲಿಕೆ ಕಲಬುರಗಿ ಅಡಿಯಲ್ಲಿ ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆಯ ೨೦೧೯-೨೦ ರಿಂದ ೨೦೨೩-೨೪ ರ ವರೆಗಿನ ಅನುದಾನದ ಕ್ರಿಯಾ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಎಲೆಕ್ಟಿಕಲ್ ಆಟೋ ಖರೀದಿ ಹಾಗೂ ಕಿರಾಣಿ ಅಂಗಡಿ ಇನ್ನಿತರ ಉದ್ಯೋಗಗಳಿಗೆ ನೀಡುತ್ತಿರುವ ಲೋನಗಳಲ್ಲಿ ಅವ್ಯವಹಾರ ೨೪/೧೦ ಇಲಾಖೆಯ ಅಧಿಕಾರಿಗಳಾದ ವಿಠಲ ಹಾದಿಮನಿಯವರು ತಮ್ಮಗೆ ಬೇಕಾದ ಕೆಲ ಫಲಾನುಭವಿಗಳಿಗೆ ಸರಿಯಾದ ಅರ್ಜಿಗಳನ್ನು ಬ್ಯಾಂಕಿಗೆ ಕಳುಹಿಸಿ ಇನ್ನೂಳಿದ ಫಲಾನುಭವಿಗಳ ಬ್ಯಾಂಕ್ ಶಾಖೆಗೆ ಅರ್ಜಿಗಳನ್ನು ಕಳುಹಿಸುವುದು ಬಿಟ್ಟು ಬೇರೆ ಬೇರೆ ಶಾಖೆಗಳಿಗೆ ಅರ್ಜಿಗಳನ್ನು ಕಳುಹಿಸಿ ಬಡ ಫಲಾನುಭವಿಗಳಿಗೆ ಲೋನಗಳ ಆಗದಂತೆ ಮಾಡುತ್ತಿದ್ದಾರೆ ಒಂದು ಬ್ಯಾಂಕಿಗೆ ಸುಮಾರು ೧೩ ಫಲಾನುಭವಿಗಳ ಪಟ್ಟಿಗಳನ್ನು ಕಳುಹಿಸಿ ಅದರಲ್ಲಿ ತಮಗೆ ಬೇಕಾದ ೨-೩ ಫಲಾನುಭವಿಗಳ ಅರ್ಜಿಗಳನ್ನು ಸರಿಯಾಗಿ ಕಳುಹಿಸಿ ಉಳಿದ ಫಲಾನುಭವಿಗಳ ಅರ್ಜಿಗಳನ್ನು ಸರಿಯಾಗಿ ಕಳುಹಿಸದೆ ಬಡ ಫಲಾನುಭವಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ.
ಮತ್ತು ತಮಗೆ ಬೇಕಾದ ಫಲಾನುಭವಿಗಳ ಹತ್ತಿರ ಲಂಚದ ರೂಪದಲ್ಲಿ ಹಣವನ್ನು ಲೂಟಿ ಮಾಡಿ ಸರಕಾರಕ್ಕೆ ಮತ್ತು ಬಡ ಫಲಾನುಭವಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಮತ್ತು ಈ ಹಿಂದೆಯ ಕೂಡಾ ಇವರ ಅವ್ಯವಹಾರ ಬಯಲಿಗೆ ಬಂದು ಮಹಾನಗರ ಪಾಲಿಕೆಯಿಂದ ಬೇರೆ ಕಡೆ ವರ್ಗಾವಣೆಯಾಗಿರುತ್ತಾರೆ, ಆದರೂ ಮತ್ತೆ ಕೆಲವು ದಿನಗಳ ನಂತರ ಇದೇ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಲಂಚಕೋರ ಭ್ರಷ್ಟ ಅಧಿಕಾರಿಗಳು ಇರುವುದರಿಂದ ನಿಜವಾದ ಬಡ ಫಲಾನುಭವಿಗಳಿಗೆ ಸರಕಾರದಿಂದ ಯಾವುದೇ ಅನುದಾನವಾಗಲಿ ಲೋನಗಳಾಗಲಿ ಸಿಗುತ್ತಿಲ್ಲ.
ಆದ್ದರಿಂದ ದಯಾಳುಗಳಾದ ತಾವುಗಳು ಮಹಾನಗರ ಪಾಲಿಕೆ ಕಲಬುರಗಿ ಕಛೇರಿಯಲ್ಲಿ ಇರುವಂತಹ ಈ ಅಧಿಕಾರಿಯನ್ನು ಕರೆಯಿಸಿ ಇವರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕೆಂದು ಎಂದು ಜೈ ಕನ್ನಡಿಗರ ಸೇನೆ ಘಟಕದ ಸಂಸ್ಥಾಪಕ ಅಧ್ಯಕ್ಷ ದತ್ತು ಹೆಚ್, ಭಾಸಗಿ ಅವರು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಜಗನ್ನಾಥ ಸೂರ್ಯವಂಶಿ, ರಾಮಾ ಪೂಜಾರಿ, ಊಶನ್, ವಿಠಲ ಪೂಜಾರಿ, ಆಕಾಶ ಚವ್ಹಾಣ, ಶರಣು ಕಡಗಂಚಿ, ಸೂರಜ ಕುಂಬಾರ, ಕವಿರಾಜ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…