ಬಿಸಿ ಬಿಸಿ ಸುದ್ದಿ

ಬೆಂಗಳೂರಿನ ‘ಕೊಳದ ಮಠದ ಸ್ವಾಮಿ’ ಶಾಂತವೀರ ಸ್ವಾಮೀಜಿ ಅಗಲಿಕೆ

  • # ಕೆ.ಶಿವು.ಲಕ್ಕಣ್ಣವರ

ಈಗ 8-9 ತಿಂಗಳ ಹಿಂದೆಯೇ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಬಂದಾಗ ‘ಕೊಳದ ಮಠ’ದ ಶಾಂತವೀರ ಸ್ವಾಮೀಜಿಯವರ ಹೆಸರು ಮುನ್ನೆಲೆಗೆ ಬಂದಿತ್ತು. ವಿವಿಧ ಸ್ವಾಮೀಜಿಗಳೊಂದಿಗೆ ಸೇರಿ ಸುದ್ದಿಗೋಷ್ಠಿ ನಡೆಸಿದ್ದ ‘ಕೊಳದ ಮರದ ಸ್ವಾಮಿ’ಯವರು ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಸಬಾರದು ಎಂದು ಆಗ್ರಹಿಸಿದ್ದರು.

ಬೆಂಗಳೂರಿನ ಅಂತಹ ‘ಕೊಳದ ಮಠದ ಸ್ವಾಮಿ’ ಶಾಂತವೀರ ಸ್ವಾಮೀಜಿ ಇಂದು ಹೃದಯಾಘಾತದಿಂದ ತೀರಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಸ್ವಾಮೀಜಿ ನಿಧನದ ಬಗೆಗೆ ಅವರ ಅಣ್ಣನ ಮಗ ಹರ್ಷ ಎಂಬವರು ಮಾಹಿತಿ ನೀಡಿದ್ದಾರೆ. ಸ್ವಾಮೀಜಿ ನಿನ್ನೆ ಆರಾಮಾಗಿಯೇ ಇದ್ದರು. ಮಹಾಲಕ್ಷ್ಮೀ ಲೇಔಟ್​​ನಲ್ಲಿ ನಡೆದ ಒಂದು ಕಾರ್ಯಕ್ರಮಕ್ಕೂ ಹೋಗಿದ್ದರು. ಯಾವುದೇ ರೀತಿಯ ಅನಾರೋಗ್ಯ ಸಮಸ್ಯೆಯೂ ಕಾಣಿಸಿಕೊಂಡಿರಲಿಲ್ಲ, ಆದರೂ ಸ್ವಾಮೀಜಿ ಇಂದು ತೀರಿದ್ದು ಅನೇಕಾನೇಕ ವಿಚಾರ ಮತ್ತು ಅನುಮಾನಗಳಿಗೆ ಕಾರಣವಾಗಿದೆ.

ಎಂದಿನಂತೆ ಹಾಗೆಯೇ ಇಂದು ಬೆಳಗ್ಗೆ ನಾನು ಮಠಕ್ಕೆ ಬಂದು ನೋಡಿದಾಗ ಅವರು ನಿಧನರಾಗಿದ್ದರು ಕೊಳದ ಮಠದ ಸ್ವಾಮಿ ಎಂದೂ ಸ್ವಾಮಿಜಿಯ ಅಣ್ಣನ ಮಗ ಹರ್ಷಾ ಹೇಳುತ್ತಾರೆ. ಆಗ ಮುಂದೆ ಆಸ್ಪತ್ರೆಗೆ  ಕರೆದುಕೊಂಡು ಹೋಗಲಾಯಿತು. ಸ್ವಾಮೀಜಿ ನಿಧನರಾಗಿದ್ದನ್ನು ವೈದ್ಯರು ದೃಢಪಡಿಸಿದರು. ಯಾವಾಗ..? ಎಷ್ಟೊತ್ತಿಗೆ ಪ್ರಾಣ ಹೋಗಿದೆ ಎಂಬುದು ಮಾತ್ರ ಗೊತ್ತಾಗಲಿಲ್ಲ. ಬೆಳಗಿನ ಜಾವವೇ ಪ್ರಾಣ ಹೋಗಿರಬಹುದು ಎಂದೂ ವೈದ್ಯರು ತಿಳಿಸಿದ್ದಾರೆ.

ಈಗ 8-9 ತಿಂಗಳ ಹಿಂದೆಯೇ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಬಂದಾಗ ‘ಕೊಳದ ಮಠ’ದ ಶಾಂತವೀರ ಸ್ವಾಮೀಜಿಯವರ ಹೆಸರು ಮುನ್ನೆಲೆಗೆ ಬಂದಿತ್ತು.  ವಿವಿಧ ಸ್ವಾಮೀಜಿಗಳೊಂದಿಗೆ ಸೇರಿ ಸುದ್ದಿಗೋಷ್ಠಿ ನಡೆಸಿದ್ದ ‘ಕೊಳದ ಮಠದ ಸ್ವಾಮಿ’, ಯಡಿಯೂರಪ್ಪ ಅವರ ಬದಲಾವಣೆ ವಿಚಾರ ಕುರಿತು ಊಹಾಪೋಹ ಕೇಳಿ ಬಂದಿತ್ತು ಆಗ.

ರಾಜಕೀಯ ಅನ್ನೋದು ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ವೀರಶೈವ ಲಿಂಗಾಯತ ಜನಾಂಗದವರು ಐವತ್ತಕ್ಕೂ ಹೆಚ್ಚು ಜನ ಸ್ಥಾನದಲ್ಲಿದ್ದಾರೆ. ಸಮುದಾಯವನ್ನು ಕಡೆಗಣಿಸುವ ಕೆಲಸ ಆಗಬಾರದು ಎಂದಿದ್ದರು ‘ಕೊಳದ ಮಠದ ಸ್ವಾಮಿ’ ಶಾಂತವೀರ ಸ್ವಾಮಿ. ನಮ್ಮ ಸಾಧು ಸಂತರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುತ್ತೇವೆ. ಕರ್ನಾಟಕದ ವತಿಯಿಂದ ಸುಮಾರು ಮೂನ್ನೂರರಿಂದ ನಾನೂರು ಸಾಧು ಸಂತರನ್ನು ಸೇರಿಸಿ ಮೋದಿಯನ್ನು ಭೇಟಿ ಮಾಡುತ್ತೇವೆ ಎಂದೂ ‘ಕೊಳದ ಮಠದ ಸ್ವಾಮಿ’ ಡಾ.ಶಾಂತವೀರ ಮಹಾಸ್ವಾಮಿ ಹೇಳಿದ್ದರು ಆಗ.

ಹಾಗೇ ಕಳೆದ ವರ್ಷವಷ್ಟೇ ಬಿಜೆಪಿ ಎಸ್​ಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಮತಾಂತರದ ಆರೋಪ ಹೊರೆಸಿ ‘ಕೊಳದ ಮಠದ ಸ್ವಾಮಿ’ ಡಾ.ಶಾಂತವೀರ ಸ್ವಾಮಿ ಸುದ್ದಿಯಾಗಿದ್ದರು. ನಾರಾಯಣಸ್ವಾಮಿಯವರು ತಮ್ಮ ಊರಿನಲ್ಲಿ ಚರ್ಚ್​ ನಿರ್ಮಿಸಿದ್ದಾರೆ. ಜನರನ್ನು ರಹಸ್ಯವಾಗಿ ಮತಾಂತರ ಮಾಡುತ್ತಿದ್ದಾರೆ. ಹೀಗೆಯೇ ಮತಾಂತರ ಆದವರೆಲ್ಲ ಮರಳಿ ತಮ್ಮ ಧರ್ಮಕ್ಕೆ ಬರಬೇಕು ಎಂದು ಹೇಳಿದ್ದರು. ಅಷ್ಟೇ ಅಲ್ಲ, ಇದೇ ವಿಚಾರವನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿಯ ಇತರ ನಾಯಕರಿಗೂ ಪತ್ರವನ್ನೂ ಬರೆದಿದ್ದನ್ನು ನೆನಪಿಸಿಕೊಳ್ಳಬಹುದು.

ಬಹಳ ದಿನಗಳ ಹಿಂದೆಯೇ ಈ ‘ಕೊಳದ ಮಠದ ಸ್ವಾಮಿ’ ಶಾಂತವೀರ ಸ್ವಾಮೀಜಿಯು ಬಹಳಷ್ಟು ‘ಪ್ರಗತಿಪರ’ ಲೇಖಕರ ವಿರೋಧವನ್ನೂ ಕಟ್ಟಿಕೊಂಡಿದ್ದರು. ಅದು ಆ ‘ಪ್ರಗತಿಪರ ಲೇಖಕ’ ಅನಂತ ಮೂರ್ತಿಯವರ ವಿರುದ್ಧ ಏನೋ ಭಾರೀ ಅನಾಹುತಕಾರಿ ಹೇಳಿಕೆ ಕೊಟ್ಟಿದ್ದರು. ಆಗ ಈ ‘ಕೊಳದ ಮಠದ ಸ್ವಾಮಿ’ ಶಾಂತವೀರ ಸ್ವಾಮೀಜಿ ವಿರುದ್ಧ ‘ಪ್ರಗತಿಪರ ಲೇಖಕ’ರೆಲ್ಲ ತಿರುಗಿಬಿದ್ದಿದ್ದರು. ಒಟ್ಟಾರೆ ಈಗ ‘ಕೊಳದ ಮಠದ ಸ್ವಾಮಿ’ ಶಾಂತವೀರ ಸ್ವಾಮಿ ಅಸ್ತಂಗತರಾಗಿದ್ದಾರೆ..! ಆ ಸ್ವಾಮಿಯ ಅಗಲಿಕೆಯಿಂದ ಅನೇಕಾನೇಕ ‘ಭಕ್ತಸಮೂಹ’ ಭಾರೀ ದುಖದಲ್ಲಿ ಮುಳಿಗಿದೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

57 mins ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

59 mins ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 hour ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

18 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

20 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago