ಕಲಬುರಗಿ: ಡಿಎಮ್.ಎಸ್.ಎಸ್. ಕೇಂದ್ರ ಕಚೇರಿಯಲ್ಲಿ ದಲಿತ ಸಂಘರ್ಷ ಸಮಿತಿಯ ರೂವಾರಿ, ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ದಿ.ಪ್ರೊ.ಬಿ.ಕೃಷ್ಣಪ್ಪ ನವರ ೨೪ನೇ ಪುಣ್ಯಸ್ಮರಣೆಯ ಪ್ರಯುಕ್ತವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಡಿ.ಎಮ್.ಎಸ್.ಎಸ್ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಬಸವರಾಜ ಜವಳಿ ಅವರು ಸಲ್ಲಿಸಿದರು.
ಇದನ್ನೂ ಓದಿ: ಸಮಾನತೆಯ ಪಾಠ ಕಲಿಸಿದ ಅಣ್ಣ ಬಸವಣ್ಣ ಮಹಿಳೆಯರ ಪಾಲಿನ ದೇವರು: ಮಾಕಲ್
ನಂತರ ಮಾತನಾಡುತ್ತಾ ಪ್ರೊ.ಬಿ ಕೃಷ್ಣಪ್ಪ ಅಂದರೆ ಅದೊಂದು ಅಂಬೇಡ್ಕರ್ ಸಿದ್ದಾಂತದ ಮಾತೃಕೆ. ಕರ್ನಾಟಕದ ಕೋಟ್ಯಾಂತರ ಶೋಷಿತರ ಎದೆಯೊಳಗೆ ಮನುಷ್ಯತ್ವಕ್ಕಾಗಿ ಹೋರಾಟದ ಕಿಚ್ಚು ಹಚ್ಚಿದ ಸಂಘರ್ಷದ ಬೆಂಕಿ, ಭೀಮವಾದವೆಂಬ ಬೀಜವನ್ನು ನಾಡಿನ ದಲಿತರ ತಲೆಯೊಳಗೆ ಬಿತ್ತಿದ ಅಪ್ಪಟ ಅಂಬೇಡ್ಕರ್ ವಾದಿ. ದಲಿತ ಸಂಘರ್ಷ ಸಮಿತಿಯ ಡಿಎಸ್‌ಎಸ್ ನಿರ್ಮಾತೃ, ಅವರ ಹೋರಾಟದ ಕಾಲಗಟ್ಟದಲ್ಲಿ ಜಾತಿವಿನಾಶ, ಅಸ್ಪಶ್ಯತೆ ವಿನಾಶ, ಸರ್ವರಿಗೂ ಶಿಕ್ಷಣ ಮೌಡ್ಯ ಕಂದಾಚಾರ ವಿನಾಶ, ಭೂರಹಿತರಿಗೆ ಭೂಮಿ ಹಂಚಿಕೆ ಹೀಗೆ ಶೋಷಿತರ ಪರವಾದ ಸಾವಿರಾರು ಹೋರಾಟಗಳು ಶ್ಲಾಘನಿಯವಾಗಿವೆ.
ಇಂತಹ ಮಹಾತ್ಮರ ವಿಚಾರ ಧಾರೆಗಳು ಇಂದಿಗೂ ಎಂದಿಗೂ ಪ್ರಸ್ತುತವೆನಿಸುತ್ತವೆ. ಅವರ ಈ ವಿಚಾರ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಸಂಪೂರ್ಣವಾಗಿ ಅವರು ಶೋಷಿತರಿಗಾಗಿ ಮಾಡಿದ ತ್ಯಾಗಮಯದ ಬದುಕು ನಾವು ಎಂದಿಗೂ ಮರೆಯಲಾಗದು. ಅವರ ವಿಚಾರಧಾರೆಗಳು ಇಂದಿನ ಸಮಾಜಕ್ಕೆ ಮುಟ್ಟಿಸುವುದರ ಮೂಲಕ ಅವರನ್ನು ಸ್ಮರಿಸೋಣ ಎಂದರು.
ಇದನ್ನೂ ಓದಿ: ಅಂಬೇಡ್ಕರ ಅವರ ವಿಚಾರಧಾರೆ ಜನರಿಗೆ ಇನ್ನೂ ತಲುಪಿಲ್ಲ: ಶಾಸಕ ಪ್ರಿಯಾಂಕ್ ಖರ್ಗೆ ವಿಷಾದ.
ಈ ಸಂದರ್ಭದಲ್ಲಿ ರಾಜ್ಯಪ್ರಧಾನಕಾರ್ಯದರ್ಶಿಯಾದ ಬಸವರಾಜ ಜವಳಿ, ರಾಜ್ಯ ಸಹ ಕಾರ್ಯದರ್ಶಿಯಾದ ದಿಗಂಬರ ತ್ರಿಮೂರ್ತಿ, ಮುಖಂಡರಾದ ಶ್ರೀಮಂತ ಭಂಡಾರಿ ಕಿರಣ ಪಂಡಿತ, ಶರಣಪ್ಪ ಕಟ್ಟಿಮನಿ, ಮಹಾದೇವ ಲೆಂಗಟಿ, ವಿಜಯಕುಮಾರ, ಮಚೇಂದ್ರ, ಶಾಂತಕುಮಾರ ತಾರಫೈಲ ಅನೇಕರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…