ಕಲಬುರಗಿ: ತರಕಾರಿಗಳು, ತಟ್ಟೆಯ ಊಟ, ಖಡಕ್ ರೋಟಿ, ಸೇಂಗಾಹಿಂಡಿ, ಕಡಲೆಕಾಯಿ, ಜೂಸು ,ಐಸ್ಕ್ರೀಮು, ಚಕ್ಜುಲಿ ಕೋಡಬೇಳೆ, ಅವಲಕ್ಕಿ, ಉಳ್ಳಾಗಡ್ಡಿ, ಚಾಟ್ ಬಂಡಾರ, ನಾನಾ ನಮೂನೆಯ ತಿಂಡಿ ತನಿಸುಗಳ ಜತೆಗೆ ಹಣ್ಣು ಹಂಪಲುಗಳು, ಉತ್ತಮ ಸಾಹಿತ್ಯ ಪುಸ್ತಕಗಳು. ಇವೆಲ್ಲವನ್ನೂ ವ್ಯವಸ್ಥಿತವಾಗಿ ಮಾರಾಟ ಮಾಡಿದವರು ಮಕ್ಕಳೇ ಎಂಬುದೇ ವಿಶೇಷ.
ಕಲಬುರಗಿ ರಂಗಾಯಣ ಆಯೋಜಿಸಿರುವ ಚಿಣ್ಣರ ಮೇಳದ ಅಂಗವಾಗಿ ಸೋಮವಾರ ಬೇಸಿಗೆ ಶಿಬಿರದ ಮಕ್ಕಳು ರೂಪಿಸಿದ ಮಕ್ಕಳ ಸಂತೆಯಲ್ಲಿ ಕಂಡು ಬಂದ ದೃಶ್ಯಗಳಿವು.
ಸಾಯಿಗಣೇಶನ ಪಾನಿಪುರಿ, ಪ್ರಾಚೀನ್ ಮೋದಿಯ ಚಾಟ್ ಭಂಡಾರ, ಶ್ರಾವ್ಯಾಳ ಕಡಗಂಚಿ ಶಾಪ್, ಅರ್ನಾರ, ಪವಿತ್, ಸಾಯಿಪ್ರಸಾದ, ಗಾಯತ್ರಿ, ಪ್ರಣವ ಸತ್ಯಂಪೇಟೆ, ಪ್ರಣವ ಪಟ್ಟಣಕರ, ಪ್ರತೀಕ ಪಟ್ಟಣಕರ, ಇಂಚರ ಮತ್ತು ಇತರ ಮಕ್ಕಳೆಲ್ಲರೂ ವೈವಿಧ್ಯಮಯ ಪದಾರ್ಥಗಳನ್ನು ಮಾರಾಟ ಮಾಡುವ ಬಗೆಯನ್ನು ತಿಳಿದುಕೊಂಡರು.
ಈ ಸಂದರ್ಭದಲ್ಲಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಆಡಳಿತಾಧಿಕಾರಿ ಜಗದೀಶ್ವರಿ ನಾಸಿ, ಶಿಬಿರ ನಿರ್ದೇಶಕ ಡಾ.ಸಂದೀಪ ಬಿ., ಸಂಪನ್ಮೂಲ ವ್ಯಕ್ತಿಗಳಾಗಿ ರಂಗಾಯಣ ಕಲಾವಿದರಾದ ಜಗದೀಶ್ ಪಾಟೀಲ್, ಉಮೇಶ ಪಾಟೀಲ, ನಾಗೇಶ ಕುಂದಾಪೂರ, ಶ್ತೀನಿವಾಸ ದೋರನಹಳ್ಳಿ, ಭಾಗ್ಯಾ ಪಾಳಾ, ಅಕ್ಷತಾ ಕುಲಕರ್ಣಿ, ರಾಜಕುಮಾರ, ರಾಜು ಉಪ್ಪಾರ ಹಾಗೂ ಮೈಮ್ ಮುರುಗೇಂದ್ರ, ಇತರರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…