ಬಂಜಾರಾ ಎಸ್‌ಟಿಗೆ ಸೇರಿಸಲು ಪತ್ರ: ಸ್ಪಷ್ಟೀಕರಣಕ್ಕೆ ಆಗ್ರಹ
ವಾಡಿ: ಕರ್ನಾಟಕದಲ್ಲಿ ಪಜಾ ಮೀಸಲು ಪಟ್ಟಿಯಲ್ಲಿರುವ ಲಂಬಾಣಿ ಸಮುದಾಯವನ್ನು ಎಸ್‌ಟಿ ಮೀಸಲಾತಿಗೆ ಸೇರಿಸುವಂತೆ ಕೋರಿ ಪ್ರಧಾನಿಗೆ ಪತ್ರ ಬರೆದಿರುವ ಕಲಬುರಗಿ ಸಂಸದ ಡಾ.ಉಮೇಶ ಜಾಧವ, ಕೂಡಲೇ ಸ್ಪಷ್ಟೀಕರಣ ನೀಡಬೇಕು ಎಂದು ಅಖಿಲ ಭಾರತ ಬಂಜಾರಾ ಸೇವಾ ಸಂಘದ ನಗರ ಘಟಕದ ಅಧ್ಯಕ್ಷ ಶಂಕರ ಜಾಧವ (ಸಾಹುಕಾರ) ಆಗ್ರಹಿಸಿದ್ದಾರೆ.
ಈ ಕುರಿತು ಸಂಸದ ಡಾ.ಉಮೇಶ ಜಾಧವ ಅವರಿಗೆ ಪತ್ರ ಬರೆದಿರುವ ಯುವ ಮುಖಂಡ ಶಂಕರ ಜಾಧವ, ಬಂಜಾರಾ ಸಮಾಜದ ಹಿರಿಯ ನಾಯಕನ ಈ ನಿಗೂಢ ನಡೆಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಒಟ್ಟು ೧೨ ಕೋಟಿ ಬಂಜಾರಾ ಜನಸಂಖ್ಯೆಯಿದೆ. ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯ ಮೀಸಲಾತಿಯ ಹಕ್ಕುಗಳನ್ನು ಪಡೆಯುತ್ತಿದ್ದರೆ, ರಾಜ್ಯದಲ್ಲಿ ಮಾತ್ರ ಪರಿಶಿಷ್ಟ ಜಾತಿ (ಎಸ್‌ಸಿ) ಪಟ್ಟಿಯಲ್ಲಿದ್ದು, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಪ್ರಗತಿ ಕಾಣುತ್ತಿದ್ದಾರೆ. ಉದ್ಯೋಗ ಸೌಲಭ್ಯ ಪಡೆದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಹೀಗಿರುವಾಗ ತಾವು ಬಂಜಾರಾ ಸಮುದಾಯವನ್ನು ಎಸ್‌ಟಿಗೆ ಸೇರಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಪತ್ರ ಸಲ್ಲಿಸಿ ಸಮಾಜದಲ್ಲಿ ಗೊಂದಲ ಮೂಡಿಸಿದ್ದೀರಿ. ನಿಮ್ಮ ಈ ನಡೆಯಿಂದ ಇಡೀ ಬಂಜಾರಾ ಸಮಾಜ ಘಾಸಿಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಲಂಬಾಣಿ ಸಮುದಾಯದ ಬಹುತೇಕ ಬಡ ವಿದ್ಯಾರ್ಥಿಗಳು ರಾಜ್ಯದಲ್ಲಿ ಪಜಾ ಮೀಸಲಾತಿಯಿಂದಲೇ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಸಾಮಾಜಿಕವಾಗಿ ಮುಂದೆ ಬರಲು ಮೀಸಲಾತಿ ನಮಗೆ ಶಕ್ತಿಯಾಗಿ ನಿಂತಿದೆ. ಎಸ್‌ಟಿ ಪಟ್ಟಿಗೆ ಸೇರ್ಪಡೆಯಾದರೆ ಈ ಬಡ ಕುಟುಂಬದ ಉನ್ನತ ಶಿಕ್ಷಣದ ಭವಿಷ್ಯವೇನು?. ಬಂಜಾರಾ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ನೀವೇ ಕೊಳ್ಳಿ ಇಟ್ಟಂತಾಗುತ್ತದೆ. ತಮ್ಮ ರಾಜಕೀಯ ತಂತ್ರಗಾರಿಕೆಗೆ ಇಡೀ ಸಮುದಾಯವನ್ನು ಬಲಿ ಕೊಡುವುದು ಎಷ್ಟು ಸರಿ.
ಬಂಜಾರಾ ಸಮಾಜವನ್ನು ಬೀದಿಗೆ ತಳ್ಳುವ ಉದ್ದೇಶ ಹೊಂದಿರುವುದು ಸ್ಪಷ್ಟವಾಗಿದೆ. ಪಜಾ ಮೀಸಲು ಸೌಲಭ್ಯದಿಂದಲೇ ತಾವು ಸಂಸದರಾಗಿ ಆಯ್ಕೆಯಾಗಿದ್ದೀರಿ ಎಂಬುದು ನೆನಪಿರಲಿ. ಯಾವ ಉದ್ದೇಶ ಅಥವ ಯಾವ ಲಾಭಕ್ಕಾಗಿ ಬಂಜಾರಾ ಸಮುದಾಯ ಎಸ್‌ಟಿಗೆ ಸೇರಿಸುವಂತೆ ಸರ್ಕಾರಕ್ಕೆ ತಾವು ಮನವಿ ಮಾಡಿದ್ದೀರಿ ಎಂಬುದು ಸಮಾಜದ ಜನತೆಗೆ ಸ್ಪಷ್ಟಪಡಿಸಬೇಕು. ರಾಜಕೀಯ ಲಾಭಕ್ಕೆ ಸಮಾಜ ಒಡೆಯುವ ಕೆಲಸ ಯಾರೇ ಮಾಡಿದರೂ ಬಂಜಾರಾ ಸಂಘ ಸಹಿಸುವುದಿಲ್ಲ.
ಕಲಬುರಗಿ ವಿಮಾನ ನಿಲ್ದಾಣದಲ್ಲಿದ್ದ ಸಂತ ಸೇವಾಲಾಲ್ ಮಹಾರಾಜರ ಮಂದಿರ ಮತ್ತು ಜಗದಂಭಾ ದೇವಿಯ ಮಂದಿರ ತೆರವು ಮಾಡಿದ ಯಾವ ಅಧಿಕಾರಿಯ ವಿರುದ್ಧ ಇಲ್ಲಿಯ ವರೆಗೂ ತನೆಖೆಯಾಗಲಿ ಶಿಕ್ಷೆಯಾಗಲಿ ಆಗಿಲ್ಲ. ಇರದ ಬಗ್ಗೆ ತಾವೇಕೆ ಮೌನವಾಗಿದ್ದೀರಿ? ವಿಮಾನ ನಿಲ್ದಾಣಕ್ಕೆ ಸೇವಾಲ್ ಹೆಸರಿಡುವ ಪ್ರಕ್ರೀಯೆ ನನೆಗುದಿಗೆ ಬಿದ್ದಿದೆ. ಇದನ್ನೇಕೆ ಪ್ರಶ್ನಿಸಿಲ್ಲ ತಾವು? ಈ ಕುರಿತು ತಕ್ಷಣವೇ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ನಿರ್ಲಕ್ಷ್ಯ ವಹಿಸಿದರೆ ನಿಮ್ಮ ವಿರುದ್ಧವೇ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಶಂಕರ ಜಾಧವ (ಸಾಹುಕಾರ) ಅವರು ಸಂಸದ ಜಧವ ಅವರಿಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…