ಬಿಸಿ ಬಿಸಿ ಸುದ್ದಿ

ಕನ್ನಡ ಸಾಹಿತ್ಯ ಪರಿಷತ್ತಿನ ೧೦೮ ನೇ ಸಂಸ್ಥಾಪನಾ ದಿನಾಚರಣೆ

ಕಾರ್ಯಕ್ರಮಗಳಿಲ್ಲದೇ ಬಣಗುಟ್ಟುತ್ತಿದ್ದ ಕಲಬುರಗಿಯ ಕನ್ನಡ ಸಾಹಿತ್ಯ ಪರಿಷತ್ತು ಕೆಲವೇ ದಿನಗಳಲ್ಲಿ ಅರ್ಥಪೂರ್ಣ ಕನ್ನಡಪರ ಕಾರ್ಯಕ್ರಮಗಳು ನಡೆಸುವ ಮೂಲಕ ಕಳೆಗಟ್ಟಿದೆ ಎಂದು ಕನ್ನಡಿಗರು ಮನದುಂಬಿ ನುಡಿಯುವ ನುಡಿಗಳು ನಾವು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಲು ಬಲ ತುಂಬಿದೆ. – ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಅಧ್ಯಕ್ಷರು, ಜಿಲ್ಲಾ ಕಸಾಪ, ಕಲಬುರಗಿ.

ಕಲಬುರಗಿ: ಸಂಸ್ಕೃತ ದೇವ ಭಾಷೆ. ಆ ದೇವ ಸಂಸ್ಕೃತ ಭಾಷೆಯನ್ನು ಮಾತ್ರ ಅಲಿಸುತ್ತಾನೆ ಎಂಬ ಕಾಲಘಟ್ಟದಲ್ಲಿ ಅಚ್ಚ ಕನ್ನಡದಲ್ಲಿ ವಚನಗಳನ್ನು ರಚಿಸಿ, ಆ ಮೂಲಕ ದೇವರಿಗೆ ಕನ್ನಡ ಭಾಷೆ ಪರಿಚಯಿಸಿದ ಕನ್ನಡ ಅಭಿಮಾನಿಗಳು ಶರಣರಾಗಿದ್ದಾರೆ. ನಾಡಿನ ವಿವಿಧ ರಾಜ್ಯಗಳಿಂದ ಬಂದ ಶರಣರಿಗೆ ಕನ್ನಡವನ್ನು ಕಲಿಸಿ ಕನ್ನಡದಲ್ಲೇ ವಚನ ಬರೆಯಲು ಪ್ರೇರಣೆಯಾದವರು ಹನ್ನೇರಡನೆಯ ಬಸವಾದಿ ಶರಣರಾಗಿದ್ದರು ಎಂದು ಅತ್ತಿವೇರಿ ಬಸವಧಾಮದ ಪೂಜ್ಯ ಶ್ರೀ ಬಸವೇಶ್ವರಿ ಮಾತಾಜಿ ನುಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ೧೦೮ ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಸುವರ್ಣ ಸಭಾ ಭವನದಲ್ಲಿ ಏರ್ಪಡಿಸಿದ ‘ಕನ್ನಡ ಮನಸ್ಸುಗಳ ಮೇಲೆ ಕನ್ನಡ ಸಾಹಿತ್ಯ ಪರಿಷತ್ತು ಬೀರಿದ ಪ್ರಭಾವ’ ಕುರಿತ ವಿಶೇಷ ಉಪನ್ಯಾಸ ಹಾಗೂ ೧೦೮ ಛಾಯಾಚಿತ್ರಗಳ ಪ್ರದರ್ಶನ, ೧೦೮ ವಿದ್ಯಾರ್ಥಿಗಳಿಗೆ ಕನ್ನಡದ ಪುಸ್ತಕಗಳ ವಿತರಣೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾದಿಕಾರದ ಮಾಜಿ ಅಧ್ಯಕ್ಷ ಡಾ.ಎಸ್.ಜಿ.ಸಿದ್ಧರಾಮಯ್ಯ ಮಾತನಾಡಿ, ಕಲಾ ಪ್ರೇಮಿ ಹಾಗೂ ಸಾಹಿತ್ಯಪ್ರೇರಕರಾದ ನಾಲ್ವಡಿ ಕೃಷ್ಣರಾಜ ಒಡೇಯರ್ ಕನ್ನಡ ಸಾಹಿತ್ಯ ಪರಿಷತ್ತನ್ನು ಸರ್.ಎಂ.ವಿಶ್ವೇಶ್ವರಯ್ಯಾ ಹಾಗೂ ಮಿರ್ಜಾ ಇಸ್ಮಾಯಿಲ್ ಅವರ ಸಹಕಾರದೊಂದಿಗೆ ಒಂದು ಸ್ವಾಯತ್ತ ಸಂಸ್ಥೆಯಾಗಿ ಕಟ್ಟಿದ್ದಾರೆ ಎಂದು ಸ್ಮರಿಸಿದರು.

ಇದನ್ನೂ ಓದಿ: ಮಾತೃಭಾಷೆ ಅನ್ನದ ಭಾಷೆ- ಡಾ. ರಾಜಶೇಖರ ಮಾಂಗ

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ನಾಡು-ನುಡಿ, ನೆಲ-ಜಲಕ್ಕಾಗಿ ಮಿಡಿಯುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದೆ. ಕಲೆ, ಸಾಹಿತ್ಯ, ಸಾಂಸ್ಕೃತಿಕ ಶ್ರೀಮಂತಿಕೆಗಾಗಿ ಪರಿಷತ್ತು ಹಗಲಿರುಳು ಶ್ರಮಿಸುತ್ತದೆ. ಕನ್ನಡಿಗರು ಹೆಮ್ಮೆ ಪಡುವ ನಿಟ್ಟಿನಲ್ಲಿ ಕೆಲಸ ಮಾಡಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಂಕಣಬದ್ಧವಾಗಿದೆ ಎಂದರು.

ವೈದ್ಯ ಸಾಹಿತಿ ಡಾ.ಎಸ್.ಎಸ್.ಗುಬ್ಬಿ ಸಮಾರಂಭ ಉದ್ಘಾಟಿಸಿದರು. ಚಿತ್ರ ಕಲಾವಿದ ಡಾ.ಎ.ಎಸ್.ಪಾಟೀಲ, ಮಾಜಿ ಮೇಯರ್ ಚಂದ್ರಿಕಾ ಪರಮೇಶ್ವರ, ಆನಂದ ನರೋಣಾ ಮಾತನಾಡಿದರು. ಜಿಲ್ಲಾ ಕಸಾಪ ಪದಾದಿಕಾರಿಗಳಾದ ಶಿವರಾಜ ಅಂಡಗಿ, ಯಶವಂತರಾಯ ಅಷ್ಠಗಿ, ಶರಣರಾಜ ಛಪ್ಪರಬಂದಿ, ಶಕುಂತಲಾ ಪಾಟೀಲ ಜಾವಳಿ, ಸ್ನೇಹಲತಾ ಕಮಕನೂರ, ಕಲ್ಯಾಣಕುಮಾರ ಶೀಲವಂತ, ಡಾ.ಕೆ.ಗಿರಿಮಲ್ಲ, ದರ್ಮಣ್ಣ ಧನ್ನಿ, ಸಂಗಪ್ಪ ಸೇದಿಮನಿ, ರವಿಂದ್ರಕುಮಾರ ಭಂಟನಳ್ಳಿ, ಪರಮೇಶ್ವರ ಶಟಕಾರ, ನಾಗೇಂದ್ರಪ್ಪ ಮಾಡ್ಯಾಳೆ, ಶಕೀಲ್ ಅಹ್ಮದ್ ಮಿಯ್ಯಾ, ರಾಜೇಂದ್ರ ಮಾಡಬೂಳ, ಶಿವಲೀಲಾ ಪಾಟೀಲ ತೇಗಲತಿಪ್ಪಿ, ರೇಖಾ ಅಂಡಗಿ, ಗುರುಬಸಪ್ಪ ಸಜ್ಜನಶೆಟ್ಟಿ, ಸಂತೋಷ ಕುಡಳ್ಳಿ ಕಾಳಗಿ, ಪ್ರಮುಖರಾದ ಬಸವರಾಜ ಕೋನೆಕ್, ಡಾ.ಶಿವರಾಜ ಪಾಟೀಲ, ಡಾ.ಮಲ್ಲಿಕಾರ್ಜುನ ವಡ್ಡಣಕೇರಿ, ವಿಶ್ವನಾಥ ಮಂಗಲಗಿ, ಆನಂದ ಸಿದ್ದಮಣಿ,  ಹೆಚ್.ಎಸ್.ಬರಗಾಲಿ, ಸೋಮು ಕುಂಬಾರ, ಶ್ರೀಕಾಂತ ಸ್ವಾಮಿ ಭಾಲ್ಕಿ, ಸಂಜೀವಕುಮಾರ ಡೊಂಗರಗಾಂವ, ದೇವೇಂದ್ರಪ್ಪ ಗಣಮುಖಿ, ಬಸಯ್ಯಾಸ್ವಾಮಿ ಹೊದಲೂರ, ಅಂಬುಜಾ ಶಿವರಾಯನಗೌಡ, ಕವಿತಾ ದೇಗಾಂವ, ಶಿವಲೀಲಾ ತೆಗನೂರ, ಸಾನ್ವಿ ಸ್ವಾಮಿ, ಆರ್.ಹೆಚ್.ಪಾಟೀಲ, ರೇವಣಸಿದ್ಧ ಹೊಟ್ಟಿ, ಶ್ರೀನಿವಾಸ ಜಮಾದಾರಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಆನಂದ ನರೋಣಾ, ರಾಜು ಕೋಷ್ಠಿ ಹಾಗೂ ನಾರಾಯಣ ಜೋಶಿ ನೇತೃತ್ವದ ನವ ಕಲ್ಯಾಣ ಕರ್ನಾಟಕ ವಿಡಿಯೋ ಮತ್ತು ಫೋಟೋಗ್ರಾಫರ‍್ಸ ಅಸೋಸಿಯೇಷನ್ ವತಿಯಿಂದ ಈ ನೆಲದ ಪರಂಪರೆ ಬಿಂಬಿಸುವ ೧೦೮ ಛಾಯಾಚಿತ್ರಗಳ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯಿತು. ೧೦೮ ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕಗಳನ್ನು ಸಹ ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

ಇದನ್ನೂ ಓದಿ: ಸಂಸದ ಡಾ.ಉಮೇಶ ಜಾಧವ್‌ಗೆ ಗಡುವು

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

2 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

11 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

11 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

11 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago