ಬೆಂಗಳೂರು: ಯುವ ಇಂಜಿನಿಯರ್, ಸಾಮಾಜಿಕ ಕಾರ್ಯಕರ್ತ ಮತ್ತು ಈಗ ಲೇಖಕರಾಗಿರುವ ಪ್ರಣಯ್ ಪಾಟೀಲ್ ಅವರು ತಮ್ಮ ಪ್ರಥಮ ಕೃತಿ ’ಬಗಂಡಿ ವಿಂಟರ್ಸ್ ಇನ್ ಯುರೋಪ್’ ಪುಸ್ತಕವನ್ನು ಬಿಡುಗಡೆ ಮಾಡಿದರು. ಈ ಬಿಡುಗಡೆ ಕಾರ್ಯಕ್ರಮವನ್ನು ಖ್ಯಾತ ಪತ್ರಕರ್ತ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಾಜದೀಪ್ ಸರ್‌ದೇಸಾಯಿ ಮತ್ತು ಅಂಕಣಕಾರ ಮತ್ತು ಯೋಗಕ್ಷೇಮ ಉದ್ಯಮಶೀಲರಾದ ಪೂಜಾ ಬೇಡಿ ಉದ್ಘಾಟಿಸಿದರು.
ಪ್ರೀತಿ, ಪ್ರಣಯದ ಹಿನ್ನೆಲೆಯಲ್ಲಿ ವಿ?ದ, ಮಾನಸಿಕ ಆರೋಗ್ಯ ಮತ್ತು ವಿಮೋಚನೆಯ ಬಲವಾದ ತಿರಳುಗಳನ್ನು ಬಗಂಡಿ ವಿಂಟರ್ಸ್ ಹೊಂದಿದೆ. ಪುಸ್ತಕವು ಬದುಕಿನಲ್ಲಿ ಹೆಸರು, ಖ್ಯಾತಿ ಎಲ್ಲವನ್ನು ಹೊಂದಿರುವ ರಾಕ್‌ಸ್ಟಾರ್ ಜೇಸ್ ಟ್ಯಾನರ್ ಅವರ ಕಥೆಯನ್ನು ಒಳಗೊಂಡಿದೆ. ಈತನನ್ನು ದುರ್ವ್ಯಸನ ಹೇಗೆ ಅಪರಾಧದ ಆಳಕ್ಕೆ ಕೊಂಡೊಯ್ಯುತ್ತದೆ ಮತ್ತು ಅವನ ಖ್ಯಾತಿಯ ಜೀವನವನ್ನು ವಿ?ದದ ಮೋಡಗಳು ಮರೆಮಾಡುದನ್ನು ಇಲ್ಲಿ ವಿವರಿಸಲಾಗಿದೆ.
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಆಳವಾದ ಪ್ರಯತ್ನ ಈ ಕೃತಿಯಾಗಿದೆ. ನಾವೆಲ್ಲರೂ ತಪ್ಪುಗಳನ್ನು ಮಾಡುತ್ತೇವೆ ಆದರೆ ಅನೇಕರಿಗೆ ಪರಿಸ್ಥಿತಿಗಳನ್ನು ಸರಿಪಡಿಸಿಕೊಳ್ಳಲು ಎರಡನೇ ಅವಕಾಶ ಸಿಗುವುದಿಲ್ಲ. ಹೊಸ ಆರಂಭವೊಂದು ಜೀವನವನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ಇದು ತೋರಿಸುತ್ತದೆ. ಪುಸ್ತಕದಲ್ಲಿ, ಅವರ ಸಹೋದರಿ ಪರ್ಲ್ ಅವರ ಪ್ರೀತಿ ಮತ್ತು ಬೆಂಬಲದೊಂದಿಗೆ, ಜೇಸ್ ಟ್ಯಾನೆರ್ ಅವರ ಆತ್ಮಕ್ಕೆ ಶಾಂತಿಯನ್ನು ಹೊಂದಲು ಪುನರ್ವಸತಿ ಕೇಂದ್ರ ಸೇರುತ್ತಾರೆ.
ಈ ಕೃತಿ ಬರೆಯುವ ಚಿಂತನೆ ಕುರಿತು ಪ್ರಣಯ್ ಪಾಟೀಲ್ ಮಾತನಾಡಿ, ನನಗೆ ಬಹಳ ಅಸಹಾಯಕತೆಯ ಅನುಭವ ಕಾಡುತ್ತಿದ್ದರಿಂದ ನಾನು ಮೊದಲ ಲಾಕ್‌ಡೌನ್ ಸಮಯದಲ್ಲಿ ಈ ಪುಸ್ತಕವನ್ನು ಬರೆಯಲು ಪ್ರಾರಂಭಿಸಿದೆ. ನನಗೆ ತಿಳಿದಿರುವ ಜನರು, ನಾನು ಪ್ರೀತಿಸಿದ ಆದರೆ ನಿರ್ಲಕ್ಷಿಸಿದ ಜನರು, ವೈರಸ್‌ಗೆ ಬಲಿಯಾಗುತ್ತಿದ್ದರು. ಕೋವಿಡ್‌ಗೆ ಬಲಿಯಾಗದ ಅನೇಕರು ದಿನಕ್ಕೆ ಊಟ ಸಂಪಾದಿಸಲು ಹೆಣಗಾಡುತ್ತಿದ್ದರು. ನಾನು ಆಹಾರ, ಔ?ಧಗಳು ಇತ್ಯಾದಿಗಳನ್ನು ಕೊಡುಗೆ ನೀಡುವ ಮೂಲಕ ಸಹಾಯ ಮಾಡಲು ಪ್ರಯತ್ನಿಸಿದೆ. ಆದರೆ ಅದು ಸಾಕಾಗುವುದಿಲ್ಲ ಎಂದು ನಾನು ಭಾವಿಸಿದೆ. ಆಗ ನಾನು ಪುಸ್ತಕವನ್ನು ಬರೆಯಲು ನಿರ್ಧರಿಸಿದೆ ಮತ್ತು ಯುರೋಪಿನ ಬಗಂಡಿ ವಿಂಟರ್ಸ್‌ನಿಂದ ಲಾಭವನ್ನು ದಾನವಾಗಿ ನೀಡುವ ಪ್ರತಿಜ್ಞೆ ಮಾಡಿದೆ. ನನ್ನ ಪುಸ್ತಕದ ಭಾ? ತುಂಬಾ ಸರಳವಾಗಿದೆಯಲ್ಲದೇ ಕಥೆಯ ಜನರು ತಮ್ಮನ್ನು ತಾವು ಗುರುತಿಸಿಕೊಳ್ಳುವಂತಹ ಸಾಪೇಕ್ಷತೆ ಹೊಂದಿದೆ. ಇದು ಎಲ್ಲ ಭಾವನೆಗಳನ್ನು ಸಂಪೂರ್ಣವಾಗಿ ಅನುಭವಿಸುವ ಜನರಿಗಾಗಿದೆ. ಈ ಪುಸ್ತಕವು ದುರ್ವ್ಯಸನ, ಅಪರಾಧ, ನಿಂದನೆ ಮತ್ತು ಪ್ರೀತಿಯನ್ನು ತಿಳಿದಿರುವ ಪ್ರತಿಯೊಬ್ಬರಿಗಾಗಿ ಇರುವ ಕೃತಿ ಇದಾಗಿದೆ ಎಂದರು.
ಸಮಾರಂಭದ ಗೌರವ ಅತಿಥಿಯಾಗಿದ್ದ, ಖ್ಯಾತ ಪತ್ರಕರ್ತ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಾಜದೀಪ್ ಸರ್‌ದೇಸಾಯಿ ಮಾತನಾಡಿ, ವೈಯಕ್ತಿಕ ಪ್ರಯಾಣಗಳನ್ನು ಉತ್ತಮವಾಗಿ ಬರೆದ ಪುಸ್ತಕವು ಹೇಗೆ ಜೀವಂತವಾಗಿಸುತ್ತದೆ ಎಂಬುದನ್ನು ಬಗಂಡಿ ವಿಂಟರ್ಸ್ ಇನ್ ಯುರೋಪ್” ಮೂಲಕ ಪ್ರಣಯ್ ಪಾಟೀಲ್ ಅವರ ಮಾನವ ಸಂಬಂಧಗಳ ಆವಿಷ್ಕಾರವು ಹೊರಗೆಡವುತ್ತದೆ.
ಅಂಕಣಕಾರರು ಮತ್ತು ಯೋಗಕ್ಷೇಮ ಕ್ಷೇತ್ರದ ಉದ್ಯಮಶೀಲರಾದ ಪೂಜಾ ಬೇಡಿ ಅವರು ಮಾತನಾಡಿ, ನಾನು ಎರಡನೇ ಅವಕಾಶಗಳು, ಬಿಟ್ಟುಬಿಡುವುದು ಮತ್ತು ಕ್ಷಮಿಸುಸುವುದರ ಬಗ್ಗೆ ದೃಢವಾದ ನಂಬಿಕೆಯುಳ್ಳವಳಾಗಿದ್ದೇನೆ. ಈ ಪುಸ್ತಕವು ನಮ್ಮ ಮಾರ್ಗಗಳಲ್ಲಿ ನಾವು ನಡೆಸುತ್ತಿರುವ ಪ್ರಯಾಣವಾಗಿದೆ. ನಮಗೆಲ್ಲರಿಗೂ ಕೆಟ್ಟದು ಸಂಭವಿಸುತ್ತದೆ. ಆದರೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ನಮ್ಮನ್ನು ಮತ್ತು ನಮ್ಮ ಜೀವನ ಪ್ರಯಾಣವನ್ನು ವ್ಯಾಖ್ಯಾನಿಸುತ್ತದೆ ಎಂದರು.
ಪ್ರಣಯ್ ಪಾಟೀಲ್ ಅವರ ಬಗಂಡಿ ವಿಂಟರ್ಸ್ ಇನ್ ಯುರೋಪ್ ಕೃತಿಯು ಅಮೆಜಾನ್‌ನಲ್ಲಿ ಮತ್ತು ಭಾರತದ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ. ಪುಸ್ತಕದ ಮಾರಾಟದಿಂದ ಬರುವ ಲಾಭದ ಶೇ. ೧೦೦ ಮೊತ್ತ ಮೂಲೆಗುಂಪಾದ ಸಮುದಾಯಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಸಹಾಯ ಮಾಡುವ ಸಹಾಯಾರ್ಥ ಸಂಸ್ಥೆಗಳಿಗೆ ಹೋಗುತ್ತದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…