ಬಿಸಿ ಬಿಸಿ ಸುದ್ದಿ

‘ಒಡನಾಡಿ ಸೇವಾ ಸಂಸ್ಥೆ’, (ಮೈಸೂರು): ನಿಸ್ವಾರ್ಥ ಸಾಮಾಜಿಕ ಕಾರ್ಯ

  • ಕೆ.ಶಿವು.ಲಕ್ಕಣ್ಣವರ

‘ಒಡನಾಡಿ ಸೇವಾ ಸಂಸ್ಥೆ’ ಈ ಸಂಸ್ಥೆಯು ( ಒಡನಾಡಿ ಸೇವಾ ಟ್ರಸ್ಟ್ ) ಯು ಮೈಸೂರು ಮೂಲದ ಸಾಮಾಜಿಕ, ಸರ್ಕಾರೇತರ ಸಂಸ್ಥೆಯಾಗಿದ್ದುಯಾಗಿದೆ. ‘ಕಳ್ಳಸಾಗಣೆ’ ಮತ್ತು ‘ಲೈಂಗಿಕ ಶೋಷಣೆ’ಗೆ ಒಳಗಾದ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯನ್ನು ಈ ಸಂಸ್ಥೆಯು ಮಾಡುತ್ತಾ ಬಂದಿದೆ ಮತ್ತು ಮಾಡುತ್ತಲೇ ಇರುತ್ತದೆ. ಪುನರ್ವಸತಿ, ಮರುಸಂಘಟನೆ ಮತ್ತು ಸಬಲೀಕರಣಕ್ಕಾಗಿಯೇ ಕಾರ್ಯ ನಿರ್ವಹಿಸುತ್ತಿದೆ ಈ ಸಂಸ್ಥೆಯು.

ಈ ಸಂಸ್ಥೆಯನ್ನು 1984 ರಲ್ಲಿ ಕೆ.ವಿ.ಸ್ಟಾನ್ಲಿ ಮತ್ತು ಎಂ.ಎಲ್.ಪರಶುರಾಮ್ ಸ್ಥಾಪಿಸಿದರು. ಅಲ್ಲದೇ ಮತ್ತು 1993 ರಲ್ಲಿ ಅಧಿಕೃತವಾಗಿ ನೋಂದಾಯಿಸಿಕೊಂಡರು. ಅವರ ರಕ್ಷಣಾ ಕಾರ್ಯಾಚರಣೆಗಳು ‘ದಕ್ಷಿಣ ಭಾರತ’ವನ್ನೇಲ್ಲಾ ಒಳಗೊಂಡಿದೆ. ಪುನರ್ವಸತಿ ಕೇಂದ್ರವನ್ನು ಕರ್ನಾಟಕದ ಮೈಸೂರಿನಲ್ಲಿ ಸ್ಥಾಪಿಸಿದ್ದಾರೆ ಕೆ‌.ವಿ.ಸ್ಟ್ಯಾನ್ಲಿ ಮತ್ತು ಎಂ.ಎಲ್.ಪರಶುರಾಮ್ ಅವರು.

ಸ್ಟಾನ್ಲಿ ಮತ್ತು ಪರಶುರಾಮ ಅವರು ಜನಪ್ರಿಯವಾಗಿ ಎಲ್ಲರಿಗೂ ತಿಳಿದಿರುವಂತೆ, ಸರ್ಕಾರಿ ಅಧಿಕಾರಿಗಳು ಮತ್ತು ಸಂಪೂರ್ಣ ಸಾಕ್ಷರತಾ ಯೋಜನೆಯ ಜಿಲ್ಲಾ ಸಂಯೋಜಕರೂ ಆಗಿದ್ದವರು. ಅವರು ಒಂದು ಸಾರಿ ಮೈಸೂರು ಜಿಲ್ಲೆಯ ಗ್ರಾಮಸ್ಥರೊಂದಿಗೆ ಸಂವಾದ ನಡೆಸುವಾಗ, ಲೈಂಗಿಕ ಕಾರ್ಯಕರ್ತೆಯರಾದ ಕಾರಣ ನಿರ್ಲಕ್ಷಿಸಲ್ಪಟ್ಟ ಮತ್ತು ದೂರವಿಡಲ್ಪಟ್ಟ ಮಹಿಳೆಯರನ್ನು ಕಂಡರು. ಇದರಿಂದ ಕೆಲಸ ಬಿಟ್ಟು ‘ಒಡನಾಡಿ ಸೇವಾ ಸಂಸ್ಥೆ’ಯನ್ನು ಆರಂಭಿಸಿದರು.

ಹಾಗಾದರೆ ಅವರ ಕಾರ್ಯ ಚಟುವಟಿಕೆಗಳು ಏನು. ಒಮ್ಮೆ ನೋಡೋಣವೇ..! # ಅವರ ಕಾರ್ಯ ಚಟುವಟಿಕೆಗಳು ಏನು ಎಂದು ಚುಟುಕಾಗಿ ಒಮ್ಮೆ ನೋಡೋಣ – ಅದರ ಸ್ಥಾಪನೆಯ ನಂತರ, ಒಡನಾಡಿ ಸೇವಾ ಸಮಸ್ಥೆಯು ಹತ್ತಾರು ರಕ್ಷಣಾ ಕಾರ್ಯಾಚರಣೆಗಳನ್ನು ಆಯೋಜಿಸಿದೆ ಮತ್ತು ಕೈಗೊಂಡಿದೆ. ಇದು ಲೈಂಗಿಕ ಕಾರ್ಯಕರ್ತರ ಸಕ್ರಿಯ ಒಳಗೊಳ್ಳುವಿಕೆಯಿಂದ ಪ್ರೇರೇಪಿಸಲ್ಪಟ್ಟಿದೆ. ಕರ್ನಾಟಕ ರಾಜ್ಯ ಮತ್ತು ಸುತ್ತಮುತ್ತಲಿನ 400 ಕ್ಕೂ ಹೆಚ್ಚು ಹುಡುಗಿಯರನ್ನು ರಕ್ಷಿಸಲಾಗಿದೆ ಮತ್ತು ಈ ದಟ್ಟಣೆಯ ದುಷ್ಕರ್ಮಿಗಳನ್ನು ಕಾನೂನು ಕ್ರಮಕ್ಕೆ ತರಲಾಗಿದೆ. ಟ್ರಸ್ಟ್ ಪ್ರಸ್ತುತವಾಗಿ 75 ರಕ್ಷಿಸಲ್ಪಟ್ಟ ಮಕ್ಕಳನ್ನು ಹೊಂದಿದೆ, ಲೈಂಗಿಕ-ವ್ಯಾಪಾರದ ಹಿಡಿತದಿಂದ ಅವರನ್ನು ರಕ್ಷಿಸುವ ಉದ್ದೇಶದಿಂದ. ಒಂದು ಕಾಲದಲ್ಲಿ ವ್ಯಾಪಾರದ ಭಾಗವಾಗಿದ್ದ (22 ಕ್ಕಿಂತ ಹೆಚ್ಚು) ಮಹಿಳೆಯರನ್ನೂ ಹೊಂದುವಲ್ಲಿ ಅವರು ಯಶಸ್ವಿಯಾಗಿದ್ದಾರೆ, ಮತ್ತು ಮದುವೆಯಾಗಿ ನೆಲೆಸಿದ್ದಾರೆ.

‘ಆಶಾ ಫಾರ್ ಎಜುಕೇಶನ್’ ‘ಸಪೋರ್ಟ್ ಎ ಚೈಲ್ಡ್’ ಎಂಬ ಶೀರ್ಷಿಕೆಯ ಕಾರ್ಯಕ್ರಮವನ್ನು ನಡೆಸುತ್ತದೆ ಈ ಒಡನಾಡಿ ಸಂಸ್ಥೆಯು. ಅಲ್ಲಿ ದಾನಿಗಳು ಮಗುವನ್ನು ಬೆಂಬಲಿಸಲು ಆಯ್ಕೆ ಮಾಡುತ್ತಾರೆ, ಮತ್ತು ಆ ಮಗುವಿನ ಪ್ರಗತಿಯನ್ನು ಟ್ರ್ಯಾಕ್ ಮಾಡುತ್ತಾರೆ ಮತ್ತು ಪತ್ರಗಳ ಮೂಲಕ ಸಂವಹನವನ್ನೂ ನಡೆಸುತ್ತಾರೆ. ಈ ಕಾರ್ಯಕ್ರಮಕ್ಕೆ ಒಡನಾಡಿ ಮಕ್ಕಳಿಗೆ ಸಾಕಷ್ಟು ಬೆಂಬಲ ಸಿಕ್ಕಿದೆ. ಒಕ್ಕಲಿಗರ ಸಹಭಾಗಿತ್ವದಲ್ಲಿ ಅದು ಮುಂದುವರಿದಿದೆ. ಸೋಮವಾರಪೇಟೆಯ ಸಂದೀಪನಿ ವಿದ್ಯಾಪೀಠದ ಜೊತೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಸಾಮಾಜಿಕ ಜಾಗೃತಿಯನ್ನು ಉತ್ತೇಜಿಸುವಲ್ಲಿ ಟ್ರಸ್ಟ್ ಭಾಗವಹಿಸಿದೆ ಕೂಡ..!

ಇದಿಷ್ಟು ‘ಒಡನಾಡಿ ಸಂಸ್ಥೆ’, ಮೈಸೂರು.ನ ಸಂಕ್ಷಿಪ್ತ ಪರಿಚಯಯು. # ಒಂದು ನಿನ್ನೆ ಮೊನ್ನೆಯ ಒಂದು ಉದಾಹರಣೆಯನ್ನು ನೋಡೋಣವೀಗ..! — ಆ ಉದಾಹರಣೆ ಹೀಗಿದೆ ನೋಡಿ. ಇದು ನಿನ್ನೆ ಮೊನ್ನೆಯ ಉದಾಹರಣೆ ಅಷ್ಟೇಯೂ…# ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿಯೂ..! ಟಾಯ್ಲೆಟ್‌ನಲ್ಲಿ ನಡೆಸುತ್ತಿದ್ದರು ಈ ದಂಧೆಯನ್ನೂ.!!  ಹೊಳಲ್ಕೆರೆಯ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ.

ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯಿಂದ ದಾಳಿ. ಪ್ರಜ್ವಲ್‌ ಲಾಡ್ಜ್ ನ ಟಾಯ್ಲೆಟ್ ರೂಮ್‌ನಲ್ಲಿ ಅಡಗುತಾಣ ಮಾಡಿಕೊಂಡು ದಂಧೆ. * ಗ್ರಾಮೀಣ ಭಾಗದ ರೈತರ ಟಾರ್ಗೆಟ್ ಮಾಡಿ ವೇಶ್ಯಾವಾಟಿಕೆ‌ ದಂಧೆ ಆರೋಪ ಹೊರ ರಾಜ್ಯದ ಯುವತಿಯರನ್ನು ಬಳಸಿಕೊಂಡು ಹೈಟೆಕ್ ವೆಶ್ಯಾವಾಟಿಕೆ ನಡೆಸುತ್ತಿದ್ದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಹಿಂಭಾಗದ ಲಾಡ್ಜ್ ಮೇಲೆ ‘ಮೈಸೂರು ಒಡನಾಡಿ ಸೇವಾ ಸಂಸ್ಥೆ’ಯೊಂದಿಗೆ ಪೊಲೀಸರ ಸಹಕಾರದೊಂದಿಗೆ ದಾಳಿ ನಡಿಸಿ ಮೂವರು ಪುರುಷರು, ಓರ್ವ ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಆ ಯುವತಿಯರನ್ನು ರಕ್ಷಿಸಿದ್ದಾರೆ ಕೂಡ.

ಮೈಸೂರು ‘ಒಡನಾಡಿ ಸಂಸ್ಥೆ’ ಖಚಿತ ಮಾಹಿತಿ ಪಡೆದು ಚಿತ್ರದುರ್ಗ ಡಿಸಿಐಬಿ ಇನ್ಸ್ಪೆಕ್ಟರ್ ಕಿರಣ್ ಕುಮಾರ್ ನೇತೃತ್ವದಲ್ಲಿ ಮಧ್ಯಾಹ್ನ ‘ಪ್ರಜ್ವಲ್ ಲಾಡ್ಜ್’ ಮೇಲೆ ದಾಳಿ ನಡೆಸಿದೆ. ಈ ವೇಳೆಯೇ ಲಾಡ್ಜ್ ಮ್ಯಾನೇಜರ್ ಹಗ್ಗದ ಸಹಾಯದಿಂದ ಜಿಗಿದು ಓಡಿ ಹೋಗಲು ಯತ್ನಿಸಿದಾಗ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಲಾಡ್ಜ್ ಒಳಗೆ ಹೋಗಿ ಪರಿಶೀಲನೆ ನಡೆಸಿದಾಗ ಲಾಡ್ಜ್ನ ಟಾಯ್ಲೆಟ್ ರೂಮಿನಲ್ಲಿ ಹೊರ ನೋಟಕ್ಕೆ ಗೋಡೆಯಂತೆ ಕಾಣಿಸುವ, ಗೋಡೆಯ ಒಳಗೆ ಅಡಗುತಾಣ ನಿರ್ಮಿಸಿಕೊಂಡು ಈ ದಂಧೆ ನಡೆಸುತ್ತಿರುವುದು ಗೊತ್ತಾಗಿದೆ.

ಯೋಜಿತ ರೀತಿಯಲ್ಲಿ ಈ ದಂಧೆ ನಡೆಯುತ್ತಿದ್ದು, ಲಾಡ್ಜ್ ಹೊರಗಡೆ ಒಬ್ಬ ಹಾಗೂ ಮೊದಲ ಮಹಡಿಯ ರಿಸಪ್ಷನಿಸ್ಟ್ ಜಾಗದಲ್ಲಿ ಮೂವರನ್ನು ಕಣ್ಗಾವಲಿಗೆ ಇಟ್ಟುಕೊಳ್ಳಲಾಗಿತ್ತು. ಪೊಲೀಸರು ಬರುವುದು ಗೊತ್ತಾದ ಕೂಡಲೇ ರಿಸಪ್ಷನಿಸ್ಟ್ ಕಾಲ ಕೆಳಗೆ ಇದ್ದ ಸ್ವಿಚ್ ಒತ್ತಿದ, ತಕ್ಷಣ ಅದು ಮೂರನೇ ಮಹಡಿಯಲ್ಲಿ ದೇವರ ನಾಮದೊಂದಿಗೆ ರಿಂಗ್ ಆಯಿತು. ಕೂಡಲೇ ಯುವತಿಯರು ಟಾಯ್ಲೆಟ್ ರೂಮ್ ಒಳಗೆ ಹೋಗಿ ಟೈಲ್ಸ್ ಮೂಲಕ ಮಾಡಲ್ಪಟ್ಟ ಬಾಗಿಲನ್ನು ತೆಗೆದು ಅವಿತುಕೊಳ್ಳುತ್ತಿದ್ದದ್ದು ಗೊತ್ತಾಗಿದೆ. ಎಲ್ಲಾ ಪರಿಶೀಲನೆ ನಡೆಸಿದ ಬಳಿಕ ನಾಲ್ವರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಯಿತು. ಕಾರ್ಯಾಚರಣೆಯಲ್ಲಿ ‘ಮೈಸೂರು ಒಡನಾಡಿ ಸೇವಾ ಸಂಸ್ಥೆ’ಯ ರಕ್ಷಣಾ ತಂಡದಲ್ಲಿ ಪ್ರದೀಪ್, ಸುಜನ, ಶಶಾಂಕ್, ಸುಮಾ ಹಾಗೂ ಮಹಾಲಕ್ಷ್ಮಿ ಇದ್ದರು…!

# ಗ್ರಾಮೀಣ ಭಾಗದಲ್ಲಿ ವೇಶ್ಯವಾಟಿಕೆ ನಡೆಸೋದಕ್ಕೆ‌ ಕಾರಣ ರೈತರೇ ಇವರ ಟಾರ್ಗೆಟ್ ಉಸಿರಾಡುವುದಕ್ಕೂ ಅವಕಾಶವಿಲ್ಲದ ಅಡಗುದಾಣ ನಿರ್ಮಿಸಿಕೊಂಡು ವೆಶ್ಯಾವಾಟಿಕೆ ಮಾಡಲಾಗುತ್ತಿತ್ತು. ಇಂತಹ ಕೃತ್ಯಗಳನ್ನು ನಗರ ಪ್ರದೇಶಗಳ ಕೆಲವು ಲಾಡ್ಜ್ಗಳಲ್ಲಿ ಕಂಡುಬಂದಿವೆ. ಆದರೆ ಇದು ಗ್ರಾಮಾಂತರ ಪ್ರದೇಶಕ್ಕೂ ವ್ಯಾಪಿಸಿರುವುದು ನಿಜಕ್ಕೂ ಆತಂಕಕಾರಿಯಾಗಿದೆ. ಇಲ್ಲಿಯ ರೈತರನ್ನೇ ಟಾರ್ಗೆಟ್ ಮಾಡಿಕೊಂಡು ಈ ದಂಧೆ ನಡೆಸುತ್ತಿರುವುದು ಗೊತ್ತಾಗಿದೆ.

ಇದರಿಂದ ಸಮಾಜ ಆರ್ಥಿಕ, ಸಾಂಸ್ಕೃತಿ ಹಾಗೂ ಸಾಮಾಜಿಕವಾಗಿ ದುಸ್ಥಿತಿ ತಲುಪಲಿದೆ. ಇದನ್ನು ಸಾಧ್ಯವಾದಷ್ಟು ತಡೆ ಹಿಡಿಯಬೇಕು ಎಂಬ ಉದ್ದೇಶದಿಂದ ಖಚಿತ ಮಾಹಿತಿ ಪಡೆದು, ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಸಹಕಾರದೊಂದಿಗೇ ಈ ಕಾರ್ಯಾಚರಣೆ ನಡೆಸಿದ್ದೇವೆ. ಲಾಡ್ಜ್ಗಳಲ್ಲಿ ಅಡಗು ತಾಣಗಳನ್ನು ನಿರ್ಮಿಸುವುದಕ್ಕೆ ಅವಕಾಶವಿಲ್ಲ. ಅಂತಹ ಲಾಡ್ಜ್ಗಳನ್ನು ಗುರುತಿಸಿ ಶಾಶ್ವತವಾಗಿ ಮುಚ್ಚಬೇಕು ಎಂದೂ ‘ಮಾನವ ಹಕ್ಕುಗಳ ಆಯೋಗ’ ಆದೇಶ ಮಾಡಿದೆ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಅಂತಹ ಲಾಡ್ಜ್ ಗಳನ್ನು ಗುರುತಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ ಎಂದೂ ‘ಒಡನಾಡಿ ಸಂಸ್ಥೆ’ ನಿರ್ದೇಶಕರಾದ ಸ್ಟಾನ್ಲಿ ಒತ್ತಾಯಿಸಿದ್ದಾರೆ..!

ಇದು ಒಂದು ಉದಾಹರಣೆ ಮಾತ್ರ. ಇಂತಹ ಅದೆಷ್ಟೋ ಅಬಲೆಯರ ರಕ್ಷಣೆ ಮಾಡಿದೆ ‘ಮೈಸೂರು ಒಡನಾಡಿ ಸಂಸ್ಥೆ’ಯು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

8 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

8 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

8 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago