ಬೆಂಗಳೂರಿನಲ್ಲಿ ಸೋರುತ್ತಿರುವ ನಲ್ಲಿ ಮತ್ತು ಶವರ್‌ಗಳನ್ನು ಉಚಿತವಾಗಿ ಸರಿಪಡಿಸುವ ಅಭಿಯಾನ

ಬೆಂಗಳೂರು: ವಿಶ್ವದಲ್ಲಿ ಪ್ರತಿವರ್ಷ ನೀರು ಸಂಪರ್ಕದಲ್ಲಿನ ಸೋರಿಕೆಯಿಂದಾಗಿ ಬಿಲಿಯನ್ ಲೀಟರ್ ಗಟ್ಟಲೆ ನೀರು ಪೋಲಾಗುತ್ತಿದೆ. ಅಧ್ಯಯನಗಳ ಪ್ರಕಾರ, ಒಂದು ಸೋರಿಕೆಯ ಸಂಪರ್ಕದಿಂದ ಪ್ರತಿ ಸೆಕೆಂಡಿಗೆ ಒಂದು ಹನಿ ನೀರು ವ್ಯರ್ಥವಾಗುವ ಮೂಲಕ ವರ್ಷಕ್ಕೆ 7,800 ಲೀಟರ್ ನಷ್ಟು ನೀರು ವ್ಯರ್ಥವಾಗುತ್ತಿದೆ!

ಈ ಸಮಸ್ಯೆಯನ್ನು ಪರಿಹರಿಸುವುದು ಅತ್ಯಂತ ಸುಲಭದ ಕೆಲಸ. ಆದರೆ, ಸಾಕಷ್ಟು ಜನರು ತಿಳುವಳಿಕೆಯ ಕೊರತೆಯಿಂದಾಗಿ ಈ ಬಗ್ಗೆ ಗಮನಹರಿಸುತ್ತಿಲ್ಲ.

ಇದೊಂದು ಎಚ್ಚರಿಕೆ ಗಂಟೆಯಾಗಿರುವ ಹಿನ್ನೆಲೆಯಲ್ಲಿ GROHE ಇಂಡಿಯಾ ನೀರಿನ ಸಂರಕ್ಷಣೆಯಲ್ಲಿ ಹೊಸ ಉಪಕ್ರಮವನ್ನು ಕೈಗೊಳ್ಳಲು ಕಾರಣವಾಗಿದೆ. ಮೈಗೇಟ್ ಸಹಯೋಗದಲ್ಲಿ ಭಾರತೀಯ ಭದ್ರತೆ ಮತ್ತು ಸಮುದಾಯ ನಿರ್ವಹಣಾ ಅಪ್ಲಿಕೇಶನ್ ಮೂಲಕ GROHE ನೀರಿನ ವ್ಯರ್ಥದ ಬಗ್ಗೆ ಜಾಗೃತಿ ಮೂಡಿಸಲು ಈ ಉಪಕ್ರಮವನ್ನು ಜಾರಿಗೊಳಿಸುತ್ತಿದೆ. ಇದರಡಿ ಬೆಂಗಳೂರಿನಾದ್ಯಂತ ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ನಲ್ಲಿಗಳು ಮತ್ತು ಶಾವರ್ ಗಳನ್ನು ಸರಿಪಡಿಸುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಸಲು ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ.

GROHE ರೋವರ್ ನೆರವಿನಿಂದ ಪ್ರದರ್ಶನ ಮತ್ತು ಡೆಮೋ ವಾಹನವನ್ನು ಸಿದ್ಧಪಡಿಸಲಾಗಿದ್ದು, ತಂತ್ರಜ್ಞರನ್ನೊಳಗೊಂಡ GROHE ತಂಡವು ಬೆಂಗಳೂರು ನಗರದಾದ್ಯಂತ ಸಂಚರಿಸಿ ಸಂಘ ಸಂಸ್ಥೆಗಳೊಂದಿಗೆ ಚರ್ಚಿಸಿ ಸೋರಿಕೆಯಾಗುತ್ತಿರುವ ನಲ್ಲಿಗಳ ದುರಸ್ತಿ ಮತ್ತು ಸೋರಿಕೆಗೆ ಕಾರಣವಾಗುವ ಪ್ಲಂಬಿಂಗ್ ಕೆಲಸಗಳನ್ನು ಉಚಿತವಾಗಿ ಮಾಡಿಕೊಡಲಿದ್ದಾರೆ.

ಈ ಅಭಿಯಾನದ ಮೂಲಕ GROHE ಅನೇಕ ಮನೆಗಳಿಗೆ ಭೇಟಿ ನೀಡಿ ಸೋರಿಕೆಯನ್ನು ತಡೆಗಟ್ಟುವ ಮೂಲಕ ವಾರ್ಷಿಕ ಮಿಲಿಯನ್ ಗಟ್ಟಲೆ ನೀರನ್ನು ಉಳಿತಾಯ ಮಾಡುವಲ್ಲಿ ನೆರವಾಗಲಿದೆ.

ಸುಸ್ಥಿರ ನೀರು ಸಂರಕ್ಷಣೆ ಮತ್ತು ಪರಿಸರ ಕಾಳಜಿಯು ಪ್ರಾಮುಖ್ಯತೆ ಮತ್ತು ಪ್ರಸ್ತುತೆಯನ್ನು ಪಡೆದುಕೊಳ್ಳುತ್ತಿದೆ. ಈ ಕಾಳಜಿ ಕೇವಲ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜನರಲ್ಲಿ ಅಂದರೆ, ಬಿಲ್ಡರ್ ಗಳು, ಗುತ್ತಿಗೆದಾರರು, ವಾಸ್ತುಶಿಲ್ಪಿಗಳು ಮತ್ತು ವಿನ್ಯಾಸಕರಲ್ಲಿ ಮಾತ್ರವಲ್ಲ. ಎಲ್ಲರಲ್ಲೂ ಇದೆ. GROHE ನಲ್ಲಿ ಸುಸ್ಥಿರತೆಯು ಒಂದು ಪ್ರಮುಖ ಸ್ತಂಭವಾಗಿದ್ದು, ಅದರ ಪ್ರಕಾರವೇ ತನ್ನ ವ್ಯಾಪಾರ ವಹಿವಾಟುಗಳನ್ನು ನಡೆಸಿಕೊಂಡು ಬರುತ್ತಿದೆ. GROHE ಜಾಗತಿಕ ಬಾತ್ ರೂಂ ಬ್ರ್ಯಾಂಡ್ ಆಗಿದ್ದು, ತನ್ನ ಬಳಕೆದಾರರ ಮನೆಗಳಿಗೆ ನೀರು ಉಳಿತಾಯ ಉತ್ಪನ್ನಗಳೊಂದಿಗೆ ಶಿಕ್ಷಣ ಮತ್ತು ಸಜ್ಜುಗೊಳಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ನಾವೆಲ್ಲರೂ ಒಟ್ಟಾಗಿ ಈ ಅಮೂಲ್ಯವಾದ ನೈಸರ್ಗಿಕ ಸಂಪನ್ಮೂಲವನ್ನು ಸಂರಕ್ಷಣೆ ಮಾಡಲು ಸಹಾಯ ಮಾಡುತ್ತೇವೆ.

To book a demo visit by the GROHE Rover, please contact: +91 8068972333,
Email: india.directsales@lixil.com

emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

9 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

9 hours ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

9 hours ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

9 hours ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

9 hours ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

9 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420