ದಿ. ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಗರಡಿಯಲ್ಲಿ ಬೆಳೆದು ಅರಸುರವರ ಆದರ್ಶ, ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಂಡ ಯುವ ವಕೀಲಾರಾಗಿದ್ದ ಅಡಗುರು ಹೆಚ್.ವಿಶ್ವನಾಥ್ 1978 ರಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕೆ.ಆರ್.ನಗರದ ಕ್ಷೇತ್ರದಿಂದ ಮೊಟ್ಟ ಮೊದಲ ಬಾರಿಗೆ ವಿಧಾನ ಸಭೆ ಪ್ರವೇಶಿಸಿದರು ಕಳೆದ 45 ವರ್ಷಗಳಿಂದಲು ಸಕ್ರಿಯ ರಾಜಕಾರಣದಲ್ಲಿರುವ ಹೆಚ್.ವಿ.ವಿಧಾನಸಭೆ, ಲೋಕಸಭೆ ಸುತ್ತಿ ಬಂದು ಪ್ರಸ್ತುತ ರಾಜ್ಯ ಬಿ.ಜೆ.ಪಿ.ಪಕ್ಷದಲ್ಲಿ ಸಾಹಿತ್ಯ ಕ್ಷೇತ್ರದಿಂದ ನಾಮನಿರ್ದೇಶನಗೊಂಡು ಹಾಲಿ ವಿಧಾನ ಪರಿಷತ್ ಸದಸ್ಯರಾಗಿದ್ದರೆ.
ರಾಜ್ಯ ಬಿ.ಜೆ.ಪಿ.ಪಕ್ಷದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ವೈ ಬಿಟ್ಟರೆ ಹಿರಿಯ ಮುತ್ಸದ್ಧಿ ರಾಜಕಾರಿಣಿ ಹೆಚ್.ವಿಶ್ವನಾಥ್ ಮಾತ್ರ, ಹಳ್ಳಿಹಕ್ಕಿ ಈಗತಾನೆ ತಮ್ಮ 75 ನೆ ವರ್ಷದ ಸಂಭ್ರಮ ಪೂರೈಸಿದ ಅವರು ಈಗಲೂ ಕೂಡ ರಾಜಕೀಯ ಪಿತಾಮಹಾ ಹಾಗೂ ಪೈಲ್ವಾನನಂತೆ ಜಗಮಗಿಸುತ್ತಿದ್ದಾರೆ,ಹೀಗಾಗಿ ಇವರನ್ನು ಕರ್ನಾಟಕ ರಾಜ್ಯ ಕಾರಣದ ಚಾಣಾಕ್ಷ ಎಂದರು ತಪ್ಪಾಗಲಾರದು ಇದಕ್ಕೆ ಸಾಕ್ಷಿ ಇಂದಿನ ರಾಜ್ಯ ಬಿ.ಜೆ.ಪಿ. ಸರ್ಕಾರ ಆದರೂ ಕೂಡಬಿ.ಜೆ.ಪಿ.ಸರ್ಕಾರ ರಚನೆಯ ರೂವಾರಿ ಹೆಚ್.ವಿಶ್ವನಾಥ್ ರವರಿಗೆ ಇಂದಿಗೂ ಮಂತ್ರಿಗಿರಿ ಲಭಿಸಿಲ್ಲ ,ಕಾರಣಗಳು ಪಕ್ಷಾಂತರ ಖಾಯ್ದೆ ಅಡಿ ಶಾಸಕತ್ವದಿಂದ ಅನರ್ಹ ಗೊಂಡಿದ್ದು ಹಾಗೂ ಕೋರ್ಟ್ ತೀರ್ಪು 2023 ರ ವರೆಗೂ ಮಂತ್ರಿಗಿರಿ ನೀಡುವಂತಿಲ್ಲ ಎಂಬ ಸಬೂಬುಗಳು ಅಡ್ಡಗಟ್ಟಿವೆ , ಹಾಗಾದರೆ ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರಜೆಗಳಿಂದ,ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವುದೇ ನಮ್ಮ ಭಾರತದ ಸಂವಿಧಾನದ ಸೂತ್ರ, ಜೊತೆಗೆ ಕಾರ್ಯಾಂಗ,ನ್ಯಾಯಾಂಗ ಹಾಗೂ ಶಾಸಕಾಂಗ ಇವು ನಮ್ಮ ದೇಶದ ಬುನಾದಿ ಹಾಗೂ ಅಡಿಪಾಯ.
ನಾಳೆ ಕಡಕೋಳ ನೆಲದ ನೆನಪುಗಳು ಕೃತಿ ಲೋಕಾರ್ಪಣೆ
ಒಬ್ಬ ಒಳ್ಳೆಯ ರಾಜಕಾರಿಣಿಯಾಗಲು ಇರುವ ಕನಿಷ್ಠ ಮಾನದಂಡಗಳೆಂದರೆ ಆತ ಭಾರತೀಯ ಮೂಲದ ಪ್ರಜೆಯಾಗಿರಬೇಕು,ಯಾವುದೇ ರೀತಿಯ ಅಪರಾದದ ಹಿನ್ನಲೆ ಇರಬಾರದು,ಬುದ್ಧಿಮಾಂದ್ಯ ನಾಗಿರಬಾರದು ಎಲ್ಲದಕ್ಕಿಂತ ಹೆಚ್ಚಾಗಿ ದೇಶದ್ರೋಹಿಯಾಗಿರಬಾರದು. ಪ್ರಸ್ತುತ ರಾಜ್ಯ ಸರ್ಕಾರದ ಅಧಿಕಾರದಲ್ಲಿರುವ ಎಷ್ಟೋ ಮಂತ್ರಿಗಳು ಯಾವುದೇ ಅಪರಾಧ, ಅಕ್ರಮ ಆಸ್ತಿ ಪಾಸ್ತಿ ಹಗರಣ, ಲಂಚ ,ಕಮಿಷನ್,ಉದ್ಯೋಗ ಮಾರಾಟ ,ಅಕ್ರಮ ಗಣಿಗಾರಿಕೆ ಈ ರೀತಿಯ ಪ್ರಕ್ರಿಯೆಯಲ್ಲಿ ತೊಡಗಿಲ್ಲವೇ ? ಇದಕ್ಕೆಲ್ಲ ಕಾನೂನಿನಲ್ಲಿ ಅವಕಾಶವಿದೆಯೇ ?
ಹೆಚ್.ವಿಶ್ವನಾಥ್ ರವರು 1989 ರಲ್ಲಿ ಶ್ರೀ ಎಂ.ವೀರಪ್ಪ ಮೊಯ್ಲಿ ರವರ ಸಂಪುಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಂತರ ಅರಣ್ಯ ಖಾತೆ ಸಚಿವರಾಗಿದ್ದರು,1999 ರಲ್ಲಿ ಎಸ್.ಎಂ.ಕೃಷ್ಣ ರವರ ಸಂಪುಟದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮತ್ತು ಸಹಕಾರ ಸಚಿವರಾಗಿದ್ದರೂ, ಶಿಕ್ಷಣ ಸಚಿವರಾಗಿ ಶಾಲೆಗಳಲ್ಲಿ ಮಧ್ಯಾಹ್ನ ದ ಬಿಸಿಯೂಟ ಯೋಜನೆ ಜಾರಿ ಮಾಡಿದ ಅನ್ನ ದಾಸೋಹಿ,ಶಿಕ್ಷಣ ವ್ಯವಸ್ಥೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಸಿ.ಈ.ಟಿ.ಯೋಜನೆ,ನಮ್ಮ ಊರು-ನಮ್ಮ ಶಾಲೆ,ಸಮುದಾಯದತ್ತ ಶಾಲೆ ಯೋಜನೆ ನೀಡಿದ ಅಕ್ಷರ ದಾಸೋಹಿ.
ಎಸ್ಸಿ-ಎಸ್ಟಿ ಮೀಸಲು: ಹೋರಾಟಕ್ಕೆ ವೇದಿಕೆ ಸಿದ್ಧ – ಭೀಮರಾವ ದೊರೆ
ಸಹಕಾರ ಸಚಿವರಾಗಿದ್ದಾಗ ಯಶಸ್ವಿನಿ ಯೋಜನೆ ಜಾರಿ ಮಾಡಿದವರು ಇದೆ ಹೆಚ್.ವಿಷನಾಥ್.ಇಂತಹ ಹಲವಾರು ಶಾಶ್ವತ ಜನಪರ ಯೋಜನೆಗಳನ್ನು ತಮ್ಮ ಅಧಿಕಾರಾವಧಿಯಲ್ಲಿ ನೀಡಿದ ಹಳ್ಳಿಹಕ್ಕಿ. ಸದಾ ಸಮಾಜದ ಒಳಿತಿಗಾಗಿ ಚಿಂತಿಸುವ ಮುತ್ಸದ್ದಿ ಹೆಚ್.ವಿಶ್ವನಾಥ್ ರವರಿಗೆ ಈ ಬಾರಿಯ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡಿ ಮೈಸೂರು ಜಿಲ್ಲೆಯ ಉಸ್ತುವಾರಿ ಮಾಡುವುದರ ಮೂಲಕ ರಾಜ್ಯ ಬಿ.ಜೆ.ಪಿ.ಸರ್ಕಾರ ಹೆಚ್.ವಿಶ್ವನಾಥ್ ಗೆ ಕೃತಜ್ಞತೆ ಸಲ್ಲಿಸಲು ಇದೊಂದು ಸುವರ್ಣ ಅವಕಾಶ ಎಂದು ಭಾವಿಸುತ್ತೇನೆ.
– ಜಾಕೀರ್ ಹುಸೇನ್, ಅಧ್ಯಕ್ಷರು, ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ,ಮೈಸೂರು
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…