ಕಲಬುರಗಿ: ಪಿಎಸ್ ಐ ನೇಮಕಾತಿ ವಿಚಾರದಲ್ಲಿ ಹಾಗೂ ಆ ನಂತರದ ಹಗರಣದ ತನಿಖೆಯಲ್ಲಿಯೂ ಹಲವಾರು ಲೋಪದೋಷಗಳಿವೆ. ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿಲ್ಲ. ಇದೂವರೆಗೆ ಅರೆಸ್ಟ್ ಮಾಡಿದರವರ ವಿವರಗಳನ್ನು ಸಾರ್ವಜನಿಕರಿಗೆ ತಿಳಿಸಲಿ. ಇಡೀ ಪ್ರಕರಣದಲ್ಲಿ ಡಿಆರ್ ಪಾಟೀಲ್ ಹಾಗೂ ದಿವ್ಯಾ ಹಾಗರಗಿಯವರ ಪಾತ್ರ ಏನು ? ಎನ್ನುವುದನ್ನು ಬಹಿರಂಗಗೊಳಿಸಲಿ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.
ಕಲಬುರಗಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಪಿಎಸ್ ಐ ಅಕ್ರಮ ನೇಮಕಾತಿ ಹಗರಣದಲ್ಲಿ ಬಂಧಿಸಲ್ಪಟ್ಟ ಆರೋಪಿಗಳ ಸಂಖ್ಯೆ ಎಷ್ಟು ಎನ್ನುವುದು ಬಹಿರಂಗಗೊಳಿಲ್ಲ. ಇವರಲ್ಲಿ ಖಾಸಗಿ ಹಾಗೂ ಈಗಾಗಲೇ ಇಲಾಖೆಯಲ್ಲಿ ಇರುವ ಅಧಿಕಾರಿಗಳು ಎಷ್ಟು ಎನ್ನುವ ಮಾಹಿತಿ ಇಲ್ಲ. ಇದೂವರೆಗೆ ಎಷ್ಟು ಜನರಿಗೆ ಎಷ್ಟು ನೋಟಿಸು ಜಾರಿಮಾಡಲಾಗಿದೆ ಎನ್ನುವ ಮಾಹಿತಿ ಇಲ್ಲ. ತಮಗೆ ಅನಕೂಲವಾಗುವಷ್ಟು ಮಾತ್ರ ಮಾಹಿತಿ ಸೋರಿಕೆ ಮಾಡಿ ಸರ್ಕಾರವನ್ನು ಉಳಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
10.03.2022 ರಂದು ವಿಧಾನಪರಿಷತ್ ನಲ್ಲಿ ಮೇಲ್ಮನೆ ಸದಸ್ಯ ರವಿ ಅವರು ಪ್ರಶ್ನೆ ಕೇಳಿ ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆಯಾ ? ಎಂದು ಕೇಳಿದ್ದಕ್ಕೆ ಐದು ದೂರುಗಳು ಬಂದಿದೆ. ಸದರಿ ದೂರುಗಳ ಕುರಿತು ಹಿರಿಯ ಪರಿಶೀಲನೆ ನಡೆಸಿ ಆಯ್ಕೆಯಾದವರು ಅವರ ಅರ್ಹತೆ ಮೇರೆಗೆ ಅಂಕ ಪಡೆದಿವೆ ಹಾಗಾಗಿ ದೂರುಗಳನ್ನು ತಿರಸ್ಕಾರ ಮಾಡಲಾಗಿದೆ ಎಂದು ಗೃಹ ಸಚಿವರು ಸದನದಲ್ಲಿ ಹೇಳುತ್ತಾರೆ.
ಆದರೆ ತನಿಖೆಯಲ್ಲಿ ಲೋಪ ಕಂಡುಬಂದಿದ್ದು ಮಾತ್ರವಲ್ಲ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. 12 ಅಧಿಕಾರಿಗಳು ಅಮಾನತ್ತಾಗಿದ್ದಾರೆ ಅಷ್ಟೇ ಸಂಖ್ಯೆಯ ಅಧಿಕಾರಿಗಳು ಅರೆಸ್ಟ್ ಆಗಿದ್ದಾರೆ. ಐವರ. ದೂರನ್ನು ಆಧರಿಸಿ ಹಿರಿಯ ಅಧಿಕಾರಿಗಳು ಕೈಗೊಂಡ ತನಿಖಾ ವರದಿ ಇನ್ನೂ ಯಾಕೆ ಬಹಿರಂಗಗೊಳಿಸಿಲ್ಲ ? ಅದನ್ನು ಸಿಐಡಿಗೆ ಯಾಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದಾರೆ.
545 ಅಭ್ಯರ್ಥಿಗಳ ಪಟ್ಟಿ ವೆಬ್ ಸೈಟ್ ನಲ್ಲಿ ಮಾಹಿತಿ ಇಲ್ಲ. ನಾಲ್ಕು ಐದು ವರ್ಷಗಳ ಹಿಂದಿನ ಡಾಟಾ ವೆಬ್ ಸೈಟ್‌ನಿಂದ ಡಿಲೀಟ್ ಮಾಡಲಾಗಿದೆ.ಜನವರಿಯಲ್ಲಿ ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ.
ಈ ಮೊದಲು ಪಿಸಿ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು ಕಲಬುರಗಿ ಹಾಗೂ ಬೆಳಗಾವಿಯಿಂದ ಹಲವರನ್ನು ಬಂಧಿಸಲಾಗಿದೆ. ಆಗ ಸಿಕ್ಕಿ ಬಿದ್ದವರಲ್ಲಿ ಹಲವರು ಪಿಎಸ್ ಐ ಹಗರಣದಲ್ಲಿಯೂ ಸಿಕ್ಕಿಬಿದ್ದಿದ್ದಾರೆ. ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು ತನಿಖೆ ವರದಿ ಎಲ್ಲಿದೆ ? ಎರಡು ಹಗರಣದಲ್ಲಿ ರಾಜಾರೋಷವಾಗಿ ಭಾಗಿಯಾಗಿದವರಿಗೆ ಸರ್ಕಾರ ತನ್ನ ಬೆಂಬಲಕ್ಕಿದೆ ಎಂದು ಮನವರಿಕೆಯಾಗಿದೆ ಎಂದು ದೂರಿದರು.
545 ಪಿಎಸ್ ಐ ಅಕ್ರಮಕ್ಕೆ ಸಂಬಂಧಿಸಿದದಂತೆ ಬಂಧಿತರಲ್ಲಿ ಎಷ್ಟು ಜನ ಇಲಾಖೆಯ ಸಿಬ್ಬಂದಿ ಇದ್ದಾರೆ ಎನ್ನುವುದನ್ನ ಗೊತ್ತಿಲ್ಲ. ಆದರೂ ಇತ್ತೀಚಿಗೆ ಸರ್ಕಾರ ಬ್ಯೂಟೂಥ್ ಹಗರಣದಲ್ಲಿ ಎಲ್ಲರನ್ನೂ ಸೆರೆ ಹಿಡಿಯಲಾಗಿದೆ ಎಂದು ಸ್ಟೇಟ್ ಮೆಂಟ್ ನೀಡಿದ್ದಾರೆ. ದಿವ್ಯಾಹಾಗರಗಿ ಹಾಗೂ ಆರ್ ಡಿ ಪಾಟೀಲ ಅವರಂತ ಸಣ್ಣವರನ್ನೇ ಬಂಧಿಸಿ ದೊಡ್ಡದಾಗಿ ಸಾಧಿಸಿದವರಂತೆ ಸರ್ಕಾರ ಬಿಂಬಿಸಿಕೊಳ್ಳುತ್ತಿದ್ದಾರೆ. ಇವರನ್ನೇ ಕಿಂಗ್ ಪಿನ್‌ಗಳು ಎನ್ನುತ್ತಿದ್ದಾರೆ ನಾನು ಇದನ್ನು ಒಪ್ಪುವುದಿಲ್ಲ ಕಿಂಗ್ ಪಿನ್ ಗಳು ಬೆಂಗಳೂರಲ್ಲಿ ಇದ್ದಾರೆ.
ಅವರು ಸರ್ಕಾರದ ಒಳಗೂ ಇರಬಹುದು. ಹಣ ವರ್ಗಾವಣೆಯಾದ ಹಿನ್ನೆಲೆ ಹಾಗೂ ತಲುಪಿದ ಜಾಗದ ಬಗ್ಗೆ ಮಾಹಿತಿ ಕಲೆಹಾಕಬೇಕು. ಶಾಂತಾಬಾಯಿ ಎಲ್ಲಿದ್ದಾರೆ? ದಿವ್ಯಾ ಹಾಗರಗಿ ಅವರನ್ನ ಅರೆಸ್ಟ್ ಮಾಡಲು 18 ದಿನಗಳಾಗಿದ್ದವು. ಈಗ ಶಾಂತಿಬಾಯಿಯನ್ನ ಅರೆಸ್ಟ್ ಮಾಡಲು ಎಷ್ಟು ದಿನ ಬೇಕು? ನನಗೆ ನೋಟಿಸು ನೀಡುವಲ್ಲಿ ಆಸಕ್ತಿತೋರಿಸುವ ಸರ್ಕಾರ ಪ್ರಮುಖ ಆರೋಪಿಗಳ ಬಂಧನಕ್ಕೆ ಯಾಕೆ ತೋರಿಸುತ್ತಿಲ್ಲ.
ಹಗರಣದಲ್ಲಿ ಪ್ರಿಯಾಂಕ್ ಖರ್ಗೆ ಅವರ ಸುತ್ತಮುತ್ತಲಿನವರು ಇದ್ದಾರೆ ಎಂದು ಗೃಹ ಸಚಿವರು ಹೇಳಿರುವ ಬಗ್ಗೆ ಕೇಳಿದಾಗ ಉತ್ತರಿಸಿದ ಖರ್ಗೆ ಅವರು ” ಗೃಹ ಸಚಿವರಿಗೆ ಮಾಹಿತಿ ಕೊರತೆ ಇದೆ” ಎಂದುತ್ತರಿಸಿದರು. ನಾವು ಭಾಗಿಯಾಗಿರುವ ಬಗ್ಗೆ ಸರ್ಕಾರಕ್ಕೆ ಎಲ್ಲಾ ಮಾಹಿತಿ ಇದ್ದರೆ ನಮ್ಮನ್ನೇ ಬಂಧಿಸಲಿ. ಗೃಹ ಸಚಿವರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ನಾನು ಹೇಳಲಾರೆ. ಆದರೆ ಯಾರನ್ನೋ ರಕ್ಷಿಸಲು ಹೋಗಿ ಅವರು ಹರಕೆಯ ಕುರಿಯಾಗುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
ಮಾಜಿ ಎಂ ಎಲ್ ಸಿ ಅಲ್ಲಮಪ್ರಭು ಪಾಟೀಲ, ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಯೂಥ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ ಹೊನಗುಂಟಿ, ರಾಜೀವ್ ಜಾನೆ, ಪ್ರವೀಣ್ ಹರವಾಳ, ಡಾ ಕಿರಣ್ ದೇಶಮುಖ್ ಸೇರಿದಂತೆ ಹಲವರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…