ಬಿಸಿ ಬಿಸಿ ಸುದ್ದಿ

ವಚನ ವಸಂತದ ಕೊನೆಯ ಕೋಗಿಲೆ ಜೇವರ್ಗಿಯ ಷಣ್ಮುಖ ಶಿವಯೋಗಿಗಳು

ಕನ್ನಡ ಸಾರಸತ್ವ ಲೋಕದಲ್ಲಿ ಶರಣರ ವಚನಗಳು ದಿದೇಪ್ಯಮಾನವಾಗಿ ಬೆಳಗುವ ಜೀವನ ಸೂತ್ರಗಳು. ಅವುಗಳು ನಮ್ಮ ಬದುಕಿಗೆ ಬೆಳಕು ನೀಡಿವೆ. ಜಾತಿಸೂತಕ, ಮತಮೌಢ್ಯ, ಮೇಲು-ಕೀಳು, ಬಡವ-ಬಲ್ಲಿದ, ಜಾಣ-ದಡ್ಡ, ಸ್ತ್ರೀ-ಪುರುಷ ಈ ಮುಂತಾದ ಭೇದ-ಭಾವ ತೊಡೆದು ಹಾಕಿದ ಬಸವಣ್ಣ ಈ ಲೋಕಸೂರ್ಯ. ಇಂತಹ ಲೋಕಸೂರ್ಯನ ಬೆಳಕಲ್ಲಿ ಮಿಂದೆದ್ದ ಎಲ್ಲ ಶರಣ ಸಮೂಹ ಸಮ ಸಮಾಜದ ಕನಸು ಕಂಡಿದ್ದರು.

ವಚನ ಪರಂಪರೆಯ ಕೊನೆಯ ಕೊಂಡಿ ಜೇವರ್ಗಿಯ ಷಣ್ಮುಖ ಶಿವಯೋಗಿಗಳು. ಇವರನ್ನು ವಚನ ವಸಂತದ ಕೊನೆಯ ಕೋಗಿಲೆ ಎಂದು ಹೇಳಲಾಗುತ್ತದೆ. ಭಕ್ತ ಸಮುದಾಯದ ಷಣ್ಮುಖ ಶಿವಯೋಗಿಗಳು ಶಿವಯೋಗಪೀಠದ ಒಡೆಯರಾದುದು ಆಶ್ಚರ್ಯವೇ ಸೈ!. ತಮ್ಮ ಗುರು “ಅಖಂಡೇಶ್ವರ”ರ ಹೆಸರನ್ನು ವಚನಾಂಕಿತವನ್ನಾಗಿ ಬಳಸಿ ೭೧೭ ವಚನಗಳನ್ನು ಬರೆದಿದ್ದಾರೆ. ಅಷ್ಟಾವರಣ, ಷಟಸ್ಥಲ, ಪಂಚಾಚಾರ ಬೇರೆ ಅಲ್ಲ. ಬಸವಣ್ಣನ ಚಿತ್ಗರ್ಭದಲ್ಲಿ ನೆಲೆಸಿಕೊಂಡು ಬಸವಾಕ್ಷರ ಪಠಿಸಿದರೆ ಅಸಾಧ್ಯವೂ ಸಾಧ್ಯವಾಗುತ್ತದೆ. ಬಸವ, ಬಸವ, ಬಸವ ಎಂದರೆ ಭವ ಗೆಲ್ಲಬಹುದು ಎಂದು ಬಸವಣ್ಣನವರನ್ನು ಬಹುವಾಗಿ ಸ್ಮರಿಸುತ್ತಾರೆ. ಇನ್ನೂ ಮುಂದೆ ಹೋಗಿ ಬಸವಣ್ಣ ಕಾಮಧೇನು, ಕಲ್ಪವೃಕ್ಷ, ಸಂಜೀವಿನಿ ಗಿಡಮೂಲಿಕೆ ಎಂದೆಲ್ಲ ಬಣ್ಣಿಸುತ್ತಾರೆ.

ಅಗ್ನಿಯ ಸಂಗದಿಂದ ಕಾನನ ಕೆಟ್ಟಂತೆ
ಜ್ಯೋತಿಯ ಸಂಗದಿಂದ ಕತ್ತಲೆ ಕೆಟ್ಟಂತೆ
ಪರುಷದ ಸಂಗದಿಂದ ಕಬ್ಬಿಣ ಕೆಟ್ಟಂತೆ
ಲಿಂಗಾನುಭವಿಗಳ ಸಂಗದಿಂದ
ಎನ್ನ ಹುಟ್ಟು ಹೊಂದುಗಳು
ನಷ್ಟವಾಗಿ ಕೆಟ್ಟು ಹೋಗಿ, ಹೋದವು
ನೋಡಾ ಅಖಂಡೇಶ್ವರ

ಬೆಂಕಿಯಿಂದ ಒಣಗಿದ ಕಟ್ಟಿಗೆ-ಕಾನನ ಸುಟ್ಟು ಹೋಗುತ್ತದೆ. ಕತ್ತಲೆಯ ಗವಿಯಲ್ಲಿ ಒಂದು ಕ್ಷಣ ದೀಪ ಹಚ್ಚಿದರೆ ಬಹುದಿನಗಳಿಂದ ಆವರಿಸಿದ ಕತ್ತಲೆ ಮಾಯವಾಗಿ ಬೆಳಕು ಮೂಡುತ್ತದೆ. ಪರುಷದಿಂದ ಕಬ್ಬಿಣ ಬಂಗಾರವಾಗುತ್ತದೆ. ಶರಣನಿಗೆ ಜನನ ಮರಣಗಳಿಲ್ಲ. ಅಂಗಕ್ಕೆ ಆಚಾರ, ಶರಣರ ನುಡಿಗಡಣ, ಆತ್ಮಕ್ಕೆ ಶರಣರ ಸಂಗವೆ ಚೆಲುವು. ಶರಣರ ಸಂಗವು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಸಂಗದಲ್ಲಿ ಎರಡುಂಟು. ಒಂದು ಬಿಟ್ಟು, ಇನ್ನೊಂದನ್ನು ಹಿಡಿಯಬೇಕು. ಶರಣರ ಅನುಭಾವದ ಕೆಂಡದಲ್ಲಿ ಜಿಗಿದರೆ ಮನುಷ್ಯ ಮೊದಲಿನಂತೆ ಸ್ವಚ್ಛನಾಗುತ್ತಾನೆ. ಬಸವಣ್ಣನ ಕಲ್ಯಾಣ ರಾಜ್ಯದಲ್ಲಿ ಮಿಂದೇಳುವುದೆ ಮಹದಾನಂದ.

ಶರಣರ ಜೀವನವೆ ದರ್ಶನವಾಗಿತ್ತು. ಶರಣರ ಜೀವನ ದರ್ಶನದಿಂದ ಬಾಳು ಬಂಗಾರವಾಗುತ್ತದೆ. ವಚನ ಸಾಹಿತ್ಯದ ಓದಿನಿಂದ ಜೀವನದಲ್ಲಿ ಸಾಕಷ್ಟು ಪರಿಣಾಮ ಉಂಟು ಮಾಡುತ್ತದೆ. ಹೀಗಾಗಿ ನಮ್ಮ ನಡೆ ವಚನ ಸಾಹಿತ್ಯದೆಡೆಗೆ ಎನ್ನುವಂತಿರಬೇಕು. ಅಂದಾಗ ಮಾತ್ರ ಕಲ್ಯಾಣ ರಾಜ್ಯ ಸ್ಥಾಪನೆಯಾಗಬಲ್ಲುವುದು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

7 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

7 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

7 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

23 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago