ಬಿಸಿ ಬಿಸಿ ಸುದ್ದಿ

50 ಶಾಲಾ-ಕಾಲೇಜುಗಳಲ್ಲಿ ಮಹಾತ್ಮಾ ಗಾಂಧೀಜಿ ವಿಚಾರ ಸಂಕೀರ್ಣ

ಬೀದರ್: ರಾಷ್ಟ್ರಪಿತಾ ಮಹಾತ್ಮಾ ಗಾಂಧೀಜಿಯವರ ೧೫೦ನೇ ಜಯಂತ್ಯುತ್ಸವ ವರ್ಷಾಚರಣೆ ನಿಮಿತ್ಯ, ಬಸವ ಸೇವಾ ಪ್ರತಿಷ್ಠಾನ ಮತ್ತು ನೀಲಮ್ಮನ ಬಳಗಗಳ ಆಶ್ರಯದಲ್ಲಿ ಬೀದರ ಜಿಲ್ಲೆಯ ೫೦ ಶಾಲಾ-ಕಾಲೇಜುಗಳಲ್ಲಿ ಗಾಂಧೀಜಿ ಕುರಿತು ವಿಚಾರ ಸಂಕೀರ್ಣಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣತಾಯಿ ಅವರು ತಿಳಿಸಿದ್ದಾರೆ.

ಆಯ್ದು ಶಾಲಾ-ಕಾಲೇಜುಗಳಲ್ಲಿ ೨ ರಿಂದ ೩ ಗಂಟೆ ಅವಧಿಯ ವಿಚಾರ ಸಂಕೀರ್ಣ ನೆರವೇರಿಸಲಾಗುವುದು. ಗಾಂಧೀಜಿಯವರ ಜೀವನ ಮತ್ತು ಸಂದೇಶಗಳನ್ನು ಮಕ್ಕಳಲ್ಲಿ ಬಿತ್ತಬೇಕು. ರಾಷ್ಟ್ರಪ್ರೇಮ ಉದ್ದಿಪನಗೊಳಿಸಬೇಕು. ದೇಶಕ್ಕಾಗಿ ಹೋರಾಡಿದವರ ಪರಿಚಯ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಈ ಅಭಿಯಾನ ಆರಂಭಿಸಲಾಗಿದೆ. ವಿಚಾರ ಸಂಕೀರ್ಣದಲ್ಲಿ ವಿಶೇಷವಾಗಿ ೫ ಅಂಶಗಳ ಕುರಿತು ಜಾಗೃತಿ ಮೂಡಿಸುವ ವಿಚಾರವಿದೆ. ಆರೋಗ್ಯ, ಶಿಕ್ಷಣ, ನೈತಿಕತೆ, ದೇಶಪ್ರೇಮ ಕುರಿತು ಗಾಂಧೀಜಿಯವರ ಚಿಂತನೆಗಳು ಹಾಗೂ ಗಾಂಧೀಜಿ ಮತ್ತು ಬಸವಣ್ಣನವರ ವಿಚಾರಗಳು ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸಗಳನ್ನು ನೀಡಲಾಗುವುದು.

ವಿಚಾರ ಸಂಕೀರ್ಣ ಆಯೋಜನೆಗಾಗಿ ೬ ತಂಡಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ತಂಡ (೧)ರಲ್ಲಿ ಸುವರ್ಣಾ ಚಿಮಕೋಡೆ (ನಾಯಕಿ), ವಿಜಯಲಕ್ಷ್ಮೀ ಪಾಟೀಲ್, ಸುಜಾತಾ ಗುಡಿ, ಉಮಾ, ಪಾರ್ವತಿ ಮತ್ತು ಭಾರತಿ, ತಂಡ(೨)ರಲ್ಲಿ ಸುಮತಿ ರುದ್ರಾ(ನಾಯಕಿ). ಸಾವಿತ್ರಿ ಮಹಾಜನ್, ವಿಜಯಲಕ್ಷ್ಮೀ ಸೊಲೆಪೇಟ್, ಸುರೇಕಾ ಮಜಗೆ, ಸಂಧ್ಯಾರಾಣಿ, ಗೀತಾ ಬಿರಾದಾರ್, ಚಿನ್ನಮ್ಮ ರಟಕಲೆ, ತಂಡ(೩) ರಲ್ಲಿ ಸುಮಾ ಭುಶೆಟ್ಟಿ(ನಾಯಕಿ), ನೀಲಾಂಬಿಕಾ ಮಠಪತಿ, ಮಲ್ಲಮ್ಮ ಪಾಟೀಲ್, ಸಂಗೀತಾ ಗಣಾಚಾರಿ, ಜೈಶ್ರೀ ಮಠಪತಿ, ಸುನಂದಾ ಶೆರಿಕಾರ್ ಮತ್ತು ಪ್ರಭಾವತಿ ಗೊರನಾಳೆ, ತಂಡ(೪)ರಲ್ಲಿ ಶಾಂತಾ ಖಂಡ್ರೆ, ಮೀರಾ ಖೇಣಿ, ವಿದ್ಯಾವತಿ ಬಿರಾದಾರ್, ಮಹಾನಂದಾ ಪಾಟೀಲ್, ವೀರೇಶ್ವರಿ ಮೂಲಗೆ, ಸಿದ್ದಮ್ಮ ಮಠಪತಿ, ತಂಡ(೫)ರಲ್ಲಿ ಪದ್ಮಿನಿ ಕಾಜಿ, ನೀಲಮ್ಮ ರೂಗನ, ನಿರ್ಮಲಾ ಮಸೂದೆ, ಶರಣಮ್ಮ ರಾಜಕುಮಾರ್, ಜಗದೇವಿ ಚಿಮಕೋಡೆ ಹಾಗೂ ತಂಡ(೬)ರಲ್ಲಿ ಕರುಣಾ ಸಲಗರ್ (ನಾಯಕಿ), ಶೋಭಾ ಔರಾದೆ, ಡಾ. ಸತ್ಯವತಿ ಮಠಪತಿ ಮತ್ತು ಶಶಿಕಲಾ ರುದ್ರವಾಡಿ ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ತಂಡಗಳು ತಲಾ ೮ ರಿಂದ ೧೦ ಶಾಲಾ/ಕಾಲೇಜುಗಳಿಗೆ ಸಂಪರ್ಕಿಸಿ ವಿಚಾರ ಸಂಕೀರ್ಣಗಳನ್ನು ನೆರವೇರಿಸಲಿದ್ದಾರೆ. ೧ ವಾರದಲ್ಲಿ ಈ ಅಭಿಯಾನ ಪೂರ್ಣಗೊಳಿಸುವ ಗುರಿ ಇದೆ. ೧೫ ರಿಂದ ೨೦ ಸಾವಿರ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಗಾಂಧೀಜಿಯವರ ಆದರ್ಶಗಳನ್ನು ತಲುಪಿಸುವ ಮೂಲಕ ಗಾಂಧೀಜಿಯವರಿಗೆ ಗೌರವ ಸಮರ್ಪಿಸಲಾಗುತ್ತಿದೆ. ಈ ವಿಚಾರ ಸಂಕೀರ್ಣಗಳಲ್ಲಿ ಭಾಗವಹಿಸುವ ಅತಿಥಿಗಳಿಗೆ ಸ್ವಾಲಂಬನೆಯ ಸಂಕೇತವಾದ ಗಾಂಧಿ ಚರಕಗಳನ್ನು ಕಾಣಿಕೆಯಾಗಿ ನೀಡಲಾಗುತ್ತಿದೆ. ಈ ಅಭಿಯಾನಕ್ಕೆ ವಿನೋಭಾಜಿಯವರ ಶಿಷ್ಯೆ ಗಾಂಧೀ ಪ್ರಶಸ್ತ್ರಿ ಪುರಸ್ಕೃತೆ ಚೆನ್ನಮ್ಮ ಹಳ್ಳಿಕೇರಿಯವರು ಸ್ಪೂರ್ತಿಯಾಗಿದ್ದಾರೆ ಎಂದು ಅಕ್ಕನವರು ಹೇಳಿದರು. ಆದ್ದರಿಂದ ಶಾಲಾ-ಕಾಲೇಜುಗಳ ಆಡಳಿತ ವರ್ಗದವರು ಇದಕ್ಕೆ ಸಹಕರಿಸಬೇಕು ಮತ್ತು ಜಿಲ್ಲೆಯ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಪ್ರಯೋಜನೆ ಪಡೆಯಬೇಕೆಂದು ಅವರು ಕರೆ ನೀಡಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

6 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

16 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

16 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

16 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago