ಬಿಸಿ ಬಿಸಿ ಸುದ್ದಿ

೨೭೭ನೇ ಮಾಸಿಕ ಶರಣ ಸಂಗಮ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ

ಭಾಲಿ: ಪಟ್ಟಣದ ಚನ್ನಬಸವಾಶ್ರಮದಲ್ಲಿ ಅಮರಾವತಿ ಶಿವಯ್ಯ ಹಿರೇಮಠ ಪ್ರತಿ?ನ ಭಾಲ್ಕಿ ವತಿಯಿಂದ ನೀಡುವ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದೇವರು ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ೨೭೭ ನೇ ಮಾಸಿಕ ಶರಣಸಂಗಮ ಜರುಗಿತು.

ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದೇವರು ದಿವ್ಯಸಾನಿಧ್ಯ ವಹಿಸಿದ್ದರು. ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿ, ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ತಮಗಾಗಿ ಎನೂ ಬಯಸಲಿಲ್ಲ. ಅವರು ಮಾಡಿದ ಎಲ್ಲಾ ಸೇವಾ ಕಾರ್ಯಗಳನ್ನು ವಿಶ್ವಗುರು ಬಸವಣ್ಣನವರ ಹಾಗೂ ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರ ಶ್ರೀಪಾದಕ್ಕೆ ಸಮರ್ಪಿಸಿ ನಿರ್ಲಿಪ್ತತೆಯಿಂದ ಅವಿಶ್ರಾಂತವಾಗಿ ದುಡಿಯುತ್ತಿದ್ದಾರೆ. ಅನೇಕ ಭಕ್ತರು ಅವರ ಹೆಸರಿನ ಮೇಲೆ ಪ್ರಶಸ್ತಿ ಪುರಸ್ಕಾರಗಳು, ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು ಪ್ರಾರಂಭಿಸುವ ಅಭಿಲಾಷೆ ಹೊಂದಿದ್ದರು.

ಅದರೆ ಪೂಜ್ಯರು ಅವುಗಳಿಗೆ ಯಾವುದೇ ಆಸ್ಪದ ನೀಡದೆ ಶರಣರ ಹಾಗೂ ಪೂಜ್ಯರ ಹೆಸರಿನ ಮೇಲೆ ಅನೇಕ ಸಂಘ ಸಂಸ್ಥೆಗಳು ಪ್ರಾರಂಭಿಸುವ ಸೂಚನೆ ನೀಡಿದ್ದಾರೆ. ಆದರೆ ಡಾ. ಎಂ. ಮುಕ್ತುಂಬಿ ಅವರ ಗುರುಭಕ್ತಿಯನ್ನು ಮೆಚ್ಚಿ ಈ ಪ್ರಶಸ್ತಿ ನೀಡಲಿಕ್ಕೆ ಒಪ್ಪಿದ್ದಾರೆ. ಪ್ರಸಕ್ತ ಸಾಲಿನ ಪ್ರಶಸ್ತಿಯನ್ನು ಶರಣ ಪಂಚಾಕ್ಷರಿ ಪುಣ್ಯಶೆಟ್ಟಿಯವರಿಗೆ ನೀಡಿದ್ದು ಅಪಾರ ಸಂತೋಷ ತಂದಿದೆ. ಅವರು ನ್ಯಾಯ ನಿಷ್ಠುರಿ ಯಾವಾಗಲು ಸತ್ಯವನ್ನು ಪ್ರತಿಪಾದಿಸಿ ಅಸತ್ಯವನ್ನು ಖಂಡಿಸುವ ಸ್ವಭಾವ ಅವರದ್ದು ಎಂದು ಆಶೀರ್ವಚನ ನೀಡಿದರು.

ಬೀದರ ಜಿಲ್ಲೆಯ ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ಅವರಿಗೆ ೨೦೨೦ ನೇ ಸಾಲಿನ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಪೂಣ್ಯಶೆಟ್ಟಿಯವರು, ಇಂದು ಗುರುಭಕ್ತಿ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಡಾ. ಮುಕ್ತುಂಬಿಯವರು ತಮ್ಮ ಗುರುವಿನ ಹೆಸರಿನ ಮೇಲೆ ಪ್ರಶಸ್ತಿಯನ್ನು ನೀಡಿರುವುದು ನಿಜಕ್ಕು ಆದರ್ಶಪ್ರಾಯವಾಗಿದೆ. ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಗಡಿಭಾಗದಲ್ಲಿ ಕನ್ನಡ ಮತ್ತು ಬಸವ ಧ್ವಜವನ್ನು ಹಾರಿಸುತ್ತಿದ್ದಾರೆ.

ಪೂಜ್ಯರು ಮಾತೃಹೃದಯಿಗಳು ಆದರೆ ತತ್ವಕ್ಕೆ ಧಕ್ಕೆ ಬಂದಾಗ ಅವರು ವಜೃದಂತೆ ಕಠೋರವಾಗುತ್ತಾರೆ. ಇದಕ್ಕೆ ನಿದರ್ಶನ ಎಂದರೆ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ. ವೀರಶೈವ ಮತ್ತು ಲಿಂಗಾಯತ ಈ ಎರಡು ಭಿನ್ನವಾದಾಗಲೇ ನಮ್ಮ ಸಮಾಜದ ಅಭಿವೃಧ್ಧಿಯಾಗಲು ಸಾಧ್ಯವಿದೆ. ಎರೆಡು ಒಂದೆ ಅನ್ನುವ ಹಿಂದೆ ಬಸವತತ್ವಕ್ಕೆ ಹಿನ್ನಡೆ ಮಾಡಿಸುವ ಹುನ್ನಾರ ಇದೆ ಎಂಬುದು ಈ ಸಮಾಜ ಎಂದು ಮರೆಯಬಾರದು ಎಂದು ನುಡಿದರು.

ಬೀದರ ಜಿಲ್ಲೆ ಕನ್ನಡ ಸಾಹಿತ್ಯ ಪರಿ?ತ್ತಿನ ಅಧ್ಯಕ್ಷ ಸುರೇಶ ಚೆನಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಕನ್ನಡ ಮತ್ತು ಬಸವ ಇವು ನಮ್ಮ ಸಮಾಜದ ಎರಡು ಕಣ್ಣುಗಳಾಗಿವೆ. ಅದಕ್ಕಾಗಿ ನಾವು ಇವರನ್ನು ಮರೆಯಬಾರದು ಎಂದು ನುಡಿದರು. ಅಕ್ಷರ ದಾಸೋಹ ಯೋಜನೆ ಭಾಲ್ಕಿ ಸಹಾಯಕ ನಿರ್ದೇಶಕ ರಾಜಕುಮಾರ ಜೋಳದಾಪಕೆ ಸೇರಿ ನಿವೃತ್ತ ಶಿಕ್ಷಕರಾದ ರಾಮಲಿಂಗ ಘಾಳೆ, ಕಂಟೆಪ್ಪ ವಡ್ಡೆ, ಗೋವಿಂದ ಇಂಡಿ ಮತ್ತು ?ಡಕ್ಷರಿ ಸ್ವಾಮಿ ಅವರಿಗೆ ಸನ್ಮಾನಿಸಲಾಯಿತು.

ಬಸವಶ್ರೀ ಬಸವರಾಜ ಮಾಳಗೆ ಭಕ್ತಿದಾಸೋಹ ವಹಿಸಿಕೊಂಡಿದ್ದರು. ಡಾ. ಎಂ. ಮಕ್ತುಂಬಿ ಪ್ರಾಸ್ತಾವಿಕವಾಗಿ ಮಾತಾಡಿದರು. ರಾಜು ಜುಬರೆ ಸ್ವಾಗತಿಸಿದರು. ವೀರಣ್ಣ ಕುಂಬಾರ ನಿರೂಪಿಸಿದರು. ದೀಪಕ ಠಮಕೆ ವಂದಿಸಿದರು. ಅಕ್ಕನ ಬಳಗದವರಿಂದ ವಚನಗಾಯನ ನಡೆಯಿತು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

22 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago