ಕಲಬುರಗಿ: ಸಮಾಜ ಸುಧಾರಕ, ಕೋಟಿ ಕೋಟಿ ಭಾರತೀಯರ ಮನದಲ್ಲಿ ಸಂಘ ಶಕ್ತಿಯ ಮೂಲಕ ರಾಷ್ಟ್ರೀಯ ಚಿಂತನೆಗಳನ್ನು ಬಿತ್ತಿ ಬೌದ್ಧಿಕ ಮತ್ತು ಸಾಂಸ್ಕೃತಿಕ ದಾರಿದ್ರ್ಯ ತನದಿಂದ ದೇಶದ ಯುವ ಶಕ್ತಿಯನ್ನು ಪಾರು ಮಾಡಿದ ಕೇಶವ ಬಲರಾಮ್ ಹೆಡ್ಗೆವಾರ್ ಅವರ ಪಠ್ಯವನ್ನು ವಿರೋಧಿಸುತ್ತಿರುವವರು ಗುಲಾಮಿ ಮನಸ್ಥಿತಿಯವರು.ಹೆಡ್ಗೆವಾರ್ ಪಠ್ಯವನ್ನು ವಿರೋಧಿಸಲ್ಲೆಂದೇ ವಿರೋಧಿಸುತ್ತಿರುವ ಕೆಲವರು ಹೆಡ್ಗೆವಾರ್ ಅವರ ಪೂರ್ವಾಪರ ತಿಳಿದುಕೊಳ್ಳುವುದು ಒಳ್ಳೆಯದು.ಎಟಲಿಸ್ಟ್ ಈ ಪಠ್ಯ ಓದಿಯಾದರೂ ಹೆಡ್ಗೆವಾರ್ ಅವರನ್ನು ಅರಿತುಕೊಳ್ಳುವ ಕೆಲಸ ಅಂಥವರು ಮಾಡಬೇಕು ಎಂದು BJP ಯುವಮೋರ್ಚಾ ನಿಕಟಪೂರ್ವ ರಾಜ್ಯ ಉಪಾಧ್ಯಕ್ಷ ಭೀಮಾಶಂಕರ ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಾಂಗ್ರೆಸ್ ತಾವು ಅಧಿಕಾರದಲ್ಲಿದ್ದಾಗ ದೇಶ ವಿಭಜನೆ ಮಾಡಿದ ನೆಹರು ಅವರ ಪಠ್ಯ ಭೋಧಿಸಲಿಲ್ವಾ? ಅವರ ಜಯಂತಿಯನ್ನು ಮಕ್ಕಳ ಜಯಂತಿ ಎಂದು ಆಚರಿಸಿ ಮುಗ್ದ ಮಕ್ಕಳ ಮನಸ್ಸಿನಲ್ಲಿ ದೇಶ ವಿಭಜಕನನ್ನು ಚಾಚಾ ಮಾಡಿ ಮೆರೆಸಲಿಲ್ವಾ?ನೆಹರು ಏನು ಕರ್ನಾಟಕದ ಆಸ್ತಿಯಾಗಿದ್ದರಾ?ಮಹಮ್ಮದ್ ಘಜನಿ,ಗೋರಿ,ದಾಳಿಕೋರ ಇಲ್ತಮುಷ್,ನೀಚ ಔರಂಗಜೇಬ,ಮತಾಂಧ ಬಾಬರ್ ನ ಇತಿಹಾಸಗಳನ್ನು ಅಧಿಕಾರಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್ ಓದಿಸುತ್ತ ಬಂದಿದೆಯಲ್ಲ ಇವರೇನು ಭವ್ಯ ಭಾರತದ ನಿರ್ಮಾತೃಗಳೆ? ಹೇಡಿ ದಾಳಿಕೋರನ್ನು ಶ್ರೇಷ್ಠರೆಂದು ಬಿಂಬಿಸುವ ಸಂಸ್ಕೃತಿ ಇರುವುದು ಕಾಂಗ್ರೆಸ್ ನಲ್ಲಿ ಮಾತ್ರ ಎಂದು ಟೀಕಿಸಿದ್ದಾರೆ.
ಇಷ್ಟು ದಿನ ಭವ್ಯ ಭಾರತದ ಇತಿಹಾಸವನ್ನು ಬೆಳಗಿದ ಮಹನಿಯರ ಇತಿಹಾಸ ಕಾಂಗ್ರೆಸ್ ಮುಚ್ಚಿ ಹಾಕಿತ್ತು. ಅದನ್ನು ಬೆಳಕಿಗೆ ತಂದು ಬೆಳಗಿಸುವ ಕೆಲಸ ಬಿಜೆಪಿ ಮಾಡುವ ಸಂಕಲ್ಪ ತೊಟ್ಟಿದೆ .ಯಾರೊಪ್ಪಲಿ ಬಿಡಲಿ ನಮ್ಮ ಇತಿಹಾಸದ ಯಜಮಾನಿಕೆ ನಾವೇ ಮಾಡುತ್ತೇವೆ. ಅಧಿಕಾರ ದಾಹಕ್ಕೆ ದೇಶ ವಿಭಜಿಸಿದ ನೆಹರು ಅವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುವ ಬದಲು,ಕೋಟಿ ಕೋಟಿ ಭಾರತೀಯ ಮಕ್ಕಳ ಮನದಲ್ಲಿ ಸ್ವಯಂ ಸೇವಕ ಸಂಘದ ಮೂಲಕ ರಾಷ್ಟ್ರೀಯ ಚಿಂತನೆಗಳನ್ನು ಬಿತ್ತಿ ಅವರನ್ನು ಬೌದ್ಧಿಕ ಶ್ರೀಮಂತರನ್ನಾಗಿಸಿದ ಡಾಕ್ಟರ್ ಹೆಡ್ಗೆವಾರ್ ಅವರ ಜನ್ಮದಿನವನ್ನು ಮಕ್ಕಳ ದಿನವೆಂದು ಆಚರಿಸುವಂತೆ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಹೆಡ್ಗೆವಾರ್ ಪಠ್ಯ ಇಂದಿನ ಯುವ ಪೀಳಿಗೆ ಓದವ ಅಗತ್ಯತೆ ತುಂಬಾ ಇದೆ.ಶ್ರೇಷ್ಠ ಚಿಂತನೆಗಳು,ಉದಾತ ಧ್ಯೇಯಗಳು,ಮೌಲ್ಯಯುತ ಸಂಸ್ಕಾರ ಸಿಕ್ಕ ಮಗು ಶ್ರೇಷ್ಠ ದೇಶ ಭಕ್ತ ತರುಣನಾಗುತ್ತಾನೆ.ಇಂಥಹ ಆದರ್ಶಗಳು ಹೆಡ್ಗೆವಾರ್ ಪಠ್ಯದಲ್ಲಿ ಅಡಕವಾಗಿವೆ.ಗುಲಾಮಿ ಮನಸ್ಥಿತಿ ವಿರೋಧಕ್ಕೆ ಸರಕಾರ ಮಣಿಯದೆ ಹೆಡ್ಗೆವಾರ್ ಪಠ್ಯ ಬೋಧಿಸುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…